ಆಕಾಶ ಎಷ್ಟು ದೊಡ್ಡದು ನೋಡಿ..ಇಲ್ಲಿಗೆ ಹೋಗಲು 73,000 ವರ್ಷ ಬೇಕು..ಆಕಾಶದ ರಹಸ್ಯ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಮ್ಮ ಜೀವಿತಾವಧಿಯಲ್ಲಿ ನಾವು ಇತರ ನಕ್ಷತ್ರಗಳಿಗೆ ಪ್ರಯಾಣಿಸಬಹುದೇ…….?

ಈ ಬ್ರಹ್ಮಾಂಡ ಎಷ್ಟು ದೊಡ್ಡದಿದೆ ಎಂದು ನಾವು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ಒಂದು ಸ್ಕೇಲ್ ಪ್ರಕಾರ ನೋಡಿದರೆ ಮೊದಲು ನಮ್ಮ ಭೂಮಿ ನಂತರ ಸೋಲಾರ್ ಸಿಸ್ಟಮ್ ನಂತರ ಇತರೆ ಸ್ಟಾರ್ಸ್ ಮತ್ತು ಗ್ಯಾಲಕ್ಸಿ ಆನಂತರ ನಮ್ಮ ನೈಬರ್ ಗ್ಯಾಲಕ್ಸಿಸ್, ಲೋಕಲ್ ಗ್ರೂಪ್, ಸ್ಟಾರ್ ಕ್ಲಸ್ಟರ್ ಇನ್ನು ಮುಂತಾದವು.

ನಾವು ಊಹೆ ಮಾಡಿದ ಈ ಬ್ರಹ್ಮಾಂಡವನ್ನು ಅಬ್ಸರ್ವೇಬಲ್ ಯೂನಿ ವರ್ಸ್ ಎಂದು ಕರೆಯುತ್ತಾರೆ. ಇದು ಕೇವಲ ನಮ್ಮ ಊಹೆ ಮಾತ್ರ. ಇದಕ್ಕಿಂತ ಕೋಟ್ಯಾಂತರ ಪಟ್ಟು ದೊಡ್ಡದು ಈ ನಮ್ಮ ಬ್ರಹ್ಮಾಂಡ. ಇವುಗಳಲ್ಲಿ ನಾವು ಎಕ್ಸ್ಪ್ಲೋರ್ ಮಾಡಿದ್ದು ನಮ್ಮ ಭೂಮಿ ಮತ್ತು ಸೋಲಾರ್ ಸಿಸ್ಟಮ್ ಅನ್ನು ಮಾತ್ರ. ಹಾಗಂತ ಸೋಲಾರ್ ಸಿಸ್ಟಮ್ ನ ಎಲ್ಲಾ ಪ್ರದೇಶಗಳನ್ನು ಎಕ್ಸ್ಪ್ಲೋರ್ ಮಾಡಲಿಲ್ಲ.

ಈಗ ನಮ್ಮ ಟೆಕ್ನಾಲಜಿ ಇಷ್ಟು ಅಡ್ವಾನ್ಸ್ ಆಗಿ ಇದ್ದರೂ ಕನಿಷ್ಠಪಕ್ಷ ನಮ್ಮ ಹತ್ತಿರದಲ್ಲಿರುವಂತಹ ಒಂದು ನಕ್ಷತ್ರವನ್ನು ಸಹ ಎಕ್ಸ್ಪ್ಲೋರ್ ಮಾಡಲಿಲ್ಲ ಎಂದರೆ ನಾವು ಈ ಯುನಿವರ್ಸ್ ಎಕ್ಸ್ಪ್ಲೋನೇಷನ್ ಅನ್ನು ಇನ್ನು ಪ್ರಾರಂಭ ಮಾಡಿಲ್ಲ ಎಂದರ್ಥ. ಇದನ್ನು ಎಕ್ಸ್ಪ್ಲೋರ್ ಮಾಡಿದರೆ ಇತರೆ ಸ್ಟಾರ್ ಸಿಸ್ಟಮ್ ಅಲ್ಲಿ ವಾತಾವರಣಗಳು ಹೇಗೆ ಇರುತ್ತದೆ, ಎಕ್ಸೊ ಪ್ಲಾನೆಟ್ ಗಳಲ್ಲಿ ಜೀವ ಇದೆಯಾ

ಒಂದು ವೇಳೆ ಇದ್ದರೆ ಅವರ ಸಿವಿಲೈಜೇಷನ್ ಯಾವ ರೀತಿ ಇದೆ ಇಂತಹ ತುಂಬಾ ವಿಷಯಗಳು ಸ್ಪಷ್ಟವಾಗಿ ತಿಳಿಯುತ್ತದೆ. ಈ ಸ್ಟಾರ್ ಎಕ್ಸ್ಪ್ಲೋರೇಷನ್ ಅಲ್ಲಿ ಮೊದಲು ನಮ್ಮ ಸೋಲಾರ್ ಸಿಸ್ಟಮ್ ಗೆ ಹತ್ತಿರದಲ್ಲಿರುವ ಸ್ಟಾರ್ ಅನ್ನು ಎಕ್ಸ್ಪ್ಲೋರ್ ಮಾಡಬೇಕು. ಅದು ಪ್ರಾಕ್ಸಿಮ ಸೆಂಟೋರಿ ಸ್ಟಾರ್ ಇದು ಭೂಮಿಗೆ 4.2 ಲೈಟಿಯರ್ಸ್ ದೂರದಲ್ಲಿ ಇದೆ. ಈ ಸ್ಟಾರ್ ಅನ್ನು ಎಕ್ಸ್ಪ್ಲೋರ್ ಮಾಡುವುದರಲ್ಲಿ ಇರುವ ಅಡ್ವಾಂಟೇಜ್ ಏನು ಎಂದರೆ.

ಈ ಸ್ಟಾರ್ ಸುತ್ತ ಪ್ರಾಕ್ಸಿಮ ಸೆಂಟೋರಿ ಬಿ ಎಂಬ ಪ್ಲಾನೆಟ್ ಅಬಿಟೇಬಲ್ ಜೂಮ್ ನಲ್ಲಿ ಸುತ್ತುತ್ತಿದೆ. ಈ ಪ್ಲಾನೆಟ್ ರೇಡಿಯಸ್ ಮತ್ತು ಮಾಸ್ ನಮ್ಮ ಭೂಮಿಗೆ ಸಮಾನವಾಗಿ ಇರುತ್ತದೆ. ಈ ಪ್ಲಾನೆಟ್ ನಲ್ಲಿ ಜೀವ ಇರುವಂತಹ ಅವಕಾಶ ಕೂಡ ತುಂಬಾ ಜಾಸ್ತಿ ಇದೆ. ಆದರೆ ಈಗ ಇರುವ ಟೆಕ್ನಾಲಜಿಯಿಂದ

ಒಂದು ಸ್ಪೇಸ್ ಕ್ರಾಫ್ಟ್ ಅನ್ನು ಪ್ರಾಕ್ಸಿಮ ಸೆಂಟೋರಿ ಸ್ಟಾರ್ ಹತ್ತಿರ ಕಳಿಸಿದರು ಅದು ನಮ್ಮ ಜೀವನಾವಧಿಯಲ್ಲಿಯೂ ಕೂಡ ಅಲ್ಲಿಗೆ ಸೇರಿಕೊಳ್ಳುವುದಿಲ್ಲ. ಇಲ್ಲಿಯವರೆಗೂ ಅತಿ ದೂರ ಪ್ರಯಾಣಿಸಿದಂತಹ ಮ್ಯಾನ್ ಮೇಡ್ ಆಬ್ಜೆಕ್ಟ್ ವೈಜರ್ ವನ್ ಈಗ ಇದು ನಮ್ಮ ಭೂಮಿ ಯಿಂದ 160 ಆಸ್ಟೋರೋಮಿಕಲ್ ಯೂನಿಟ್ ದೂರದಲ್ಲಿ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *