ಆದಿಪುರುಷ್ ಇಷ್ಟೊಂದು ಟ್ರೋಲ್ ಆಗೋದಕ್ಕೆ ಕಾರಣ ಇಲ್ಲಿದೆ ನೋಡಿ.. ಬಿಗ್ಗೆಸ್ಟ್ ಮಿಸ್ಟೆಕ್ ಗಳು ಇಲ್ಲಿವೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಆದಿಪುರುಷ ಇಷ್ಟೊಂದು ಟ್ರೋಲ್ ಆಗೋಕೆ ಕಾರಣ ಇಲ್ಲಿದೆ ನೋಡಿ ಬಿಗ್ಗೆಸ್ಟ್ ಮಿಸ್ಟೇಕ್ ಗಳು ಇಲ್ಲಿವೆ ನೋಡಿ…….||

ಹೇಳಿ ಕೇಳಿ ಇದು ಪ್ಯಾನ್ ಇಂಡಿಯಾ ಟ್ರೆಂಡ್ ಇರುವಂತಹ ಸಮಯ ಈಗ ರಿಲೀಸ್ ಆಗುವಂತಹ ಹೆಚ್ಚಿನ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳೇ. ಪ್ರಭಾಸ್ ನಮ್ಮ ಸದ್ಯದ ಅತಿ ದೊಡ್ಡ ಪ್ಯಾನ್ ಇಂಡಿಯಾ ಹೀರೋ. ಕಾರಣ ಈ ಒಂದು ಪರಂಪರೆಯನ್ನು ಹುಟ್ಟು ಹಾಕಿದ್ದು ಅವರು.

ಅವರಿಗೆ ದೇಶ ವ್ಯಾಪಿ ಹಲವಾರು ಅಭಿಮಾನಿಗಳು ಇದ್ದಾರೆ. ಇತ್ತೀಚಿಗಷ್ಟೇ ಅವರ ಬಹು ನಿರೀಕ್ಷಿತ ಹಾಗೂ 500 ಕೋಟಿ ವೆಚ್ಚದಲ್ಲಿ ತಯಾರಾದಂತಹ ಆದಿಪುರುಷ್ ತೆರೆ ಕಂಡಿದ್ದು. ಈ ಚಿತ್ರ ಬಿಡುಗಡೆಗು ಮೊದಲು ಬಹು ನಿರೀಕ್ಷೆ ಹಾಗೂ ಕೌತುಕತೆಯನ್ನು ಸೃಷ್ಟಿ ಮಾಡಿತ್ತು. ಇದರ ಟ್ರೈಲರ್ ಹಾಗೂ ಟೀಸರ್ ಬಿಡುಗಡೆಯಾದಾಗ ಇದಕ್ಕೆ ಒಳ್ಳೆಯ ಹೈಪ್ ಸೃಷ್ಟಿಯಾಗಿತ್ತು.

ಆದರೂ ಇದರ ಟೀಸರ್ ಹಾಗೂ ಟ್ರೈಲರ್ ನೋಡಿದಂತಹ ಸಾಕಷ್ಟು ಜನ ಸಂತೃಷ್ಟರಾಗಲಿಲ್ಲ ಕಾರಣ ಇದು ಕಾರ್ಟೂನ್ ಚಿತ್ರ ಹಾಗೂ PFX ಒಳ್ಳೆ ಕಾರ್ಟೂನ್ ಸಿನಿಮಾಗಳ ರೀತಿ ಇದೆ ಎಂದು ಆರೋಪಿಸಿದ್ದರು. ಇದೀಗ ಚಿತ್ರ ತೆರೆಕಂಡರು ಕೂಡ ಅದು ಜನರ ಬೇಸರವನ್ನು ಇನ್ನಷ್ಟು ಜಾಸ್ತಿ ಮಾಡಿದೆ ಕಾರಣ ಈ ಚಿತ್ರದಲ್ಲಿ ರಾಮಾಯಣ ಕಥೆ ಹಾಗೂ ಪಾತ್ರಗಳನ್ನು.

ಹಾಸ್ಯಾಸ್ಪದವಾಗಿ ತೋರಿಸಲಾಗಿದೆ ಅಂತ. ಈ ಚಿತ್ರ ಎಲ್ಲಾ ಕಡೆ ಭರ್ಜರಿ ಓಪನಿಂಗ್ ಅನ್ನು ಸಾಧಿಸಿದ್ದರೂ ಕೂಡ ಅನೇಕರಿಂದ ಕಳಪೆ ರಿವ್ಯೂ ಅನ್ನು ಪಡೆಯುತ್ತಿದೆ. ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾ ದಂತಹ ಈ ಚಿತ್ರ ಹೆಚ್ಚು ಯಾರಿಗೂ ಖುಷಿಯನ್ನು ತರಲಿಲ್ಲ. ಈಗ ಪ್ರಭಾಸ್ ಫ್ಯಾನ್ಸ್ ಕೂಡ ಅಸಂತೋಷವನ್ನು ಹೊಂದಿದ್ದಾರೆ. ಕೆಲವರಂತೂ ಚಿತ್ರವನ್ನು ನೋಡಿ ಹೊರಬಂದು ಚಿತ್ರತಂಡದವರನ್ನು ಸಾಕಷ್ಟು ನಿಂದಿಸಿದ್ದು ಕೂಡ ಉಂಟು.

ಇಷ್ಟಾದರೂ ಕೂಡ ಈ ಚಿತ್ರದ ನಿರ್ದೇಶಕರು ಕಥೆಗಾರರು ತಮ್ಮ ಚಿತ್ರವನ್ನು ಹಾಗೂ ಪ್ರಯತ್ನವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ನಟಿಯಾದ ಕೃತಿ ಸಾನೂನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯಾರ ಮಾತಿಗೂ ಕಿವಿ ಕೊಡಬೇಡಿ ಚಿತ್ರ ಸೊಗಸಾಗಿದೆ ನೀವೆಲ್ಲರೂ ಈ ಚಿತ್ರವನ್ನು ಚಿತ್ರಮಂದಿರಗಳಿಗೆ ಬಂದು ನೋಡಿ ಎಂದು ಪ್ರಮೋಟ್ ಕೂಡ ಮಾಡುತ್ತಿದ್ದಾರೆ. ಹಾಗಾದರೆ ಈ ಚಿತ್ರ ಎಡವಿದ್ದು ಎಲ್ಲಿ.

ಯಾಕೆ ಇದು ಎಲ್ಲಾ ಕಡೆ ತೀವ್ರ ಆಕ್ರೋಶಕ್ಕೆ ಹಾಗೂ ಅಸಮಾಧಾನಕ್ಕೆ ಕಾರಣವಾಯಿತು ಎಂಬುದರ ಬಗ್ಗೆ ವಿವರಿಸಬಹುದಾದಂತಹ ಈ ಒಂದು ಚಿತ್ರದ ಹತ್ತು ಮಿಸ್ಟೇಕ್ ಗಳು ಯಾವುವು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಮೊದಲನೆಯದಾಗಿ ಈ ಚಿತ್ರದಲ್ಲಿ ತೋರಿಸಲಾದಂತಹ ಲಂಕಾ ದೇಶದ ಚಿತ್ರಣ ನಾವು ಅಸಲಿ ರಾಮಾಯಣದಲ್ಲಿ ಕೇಳಿದಂತೆ ರಾವಣನ ಲಂಕೆ ಚಿನ್ನದಿಂದ ನಿರ್ಮಿಸಿದ್ದು ಎಂದಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *