ತುಲಾ ರಾಶಿ ಜುಲೈ 2023 ಮಾಸ ಭವಿಷ್ಯ……||
ಮೊದಲನೆಯದಾಗಿ ಈ ತಿಂಗಳ ಗ್ರಹ ಸ್ಥಿತಿ ಯಾವ ರೀತಿ ಇರುತ್ತದೆ ಎಂದು ನೋಡೋಣ. ಸಿಂಹ ರಾಶಿಯಲ್ಲಿ ಶುಕ್ರ 8 ರಿಂದ 24 ನೇ ತಾರೀಖು ಕರ್ಕಾಟಕ ರಾಶಿಯಲ್ಲಿ ಬುಧ ಸಂಚಾರ ಮಾಡುತ್ತಿದ್ದು. ಹಾಗೂ 16ನೇ ತಾರೀಖಿನ ನಂತರ ರವಿ ಸಂಚಾರ ಮಾಡುತ್ತಿದ್ದಾನೆ. ಹಾಗೂ ಕುಜ ಗ್ರಹ ಜುಲೈ ತಿಂಗಳು ಸಂಪೂರ್ಣವಾಗಿ ಸಿಂಹ ರಾಶಿಯಲ್ಲಿಯೇ ಇರುತ್ತಾನೆ.
ಅಂದರೆ ನಿಮ್ಮ ಲಾಭ ಸ್ಥಾನದಲ್ಲಿ ಶುಕ್ರ ಹಾಗೂ ನಿಮ್ಮ ಲಾಭ ಸ್ಥಾನದಲ್ಲಿ ಕುಜ ಇವೆರಡು ಕೂಡ ನಿಮಗೆ ತುಂಬಾ ಒಳ್ಳೆಯದು. ಒಟ್ಟಾರೆಯಾಗಿ ಎರಡು ಗ್ರಹಗಳ ಫಲ ನಿಮಗೆ ಸಿಗುತ್ತದೆ. ಹಾಗಾದರೆ ಈ ಗ್ರಹಗಳ ಬದಲಾವಣೆಯಿಂದ ತುಲಾ ರಾಶಿಯವರಿಗೆ ಯಾವುದೆಲ್ಲ ಶುಭಫಲಗಳು ಸಿಗುತ್ತದೆ ಹಾಗೂ ಯಾವ ಅಶುಭ ಫಲಗಳು ಸಿಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಮೊದಲನೆಯದಾಗಿ ತುಲಾ ರಾಶಿಯವರ ಉದ್ಯೋಗದ ಬಗ್ಗೆ ನೋಡು ವುದಾದರೆ ನಿಮ್ಮ ಉದ್ಯೋಗದ ವಿಚಾರದಲ್ಲಿ ಬಹಳ ಅದೃಷ್ಟದ ಸಮಯವಾಗಿರುತ್ತದೆ ಎಂದೇ ಹೇಳಬಹುದು. ಅದರಲ್ಲೂ ತುಲಾ ರಾಶಿಯ 25ರಷ್ಟು ಜನರಿಗೆ ಇದು ಪರಿಣಾಮಕಾರಿಯಾಗಿ ಶುಭಫಲವನ್ನು ಕೊಟ್ಟರೆ ಇನ್ನೂ 75 ರಷ್ಟು ಜನರಿಗೆ ಇದು ಅಷ್ಟೇನು ಪರಿಣಾಮಕಾರಿಯಾಗಿರುವುದಿಲ್ಲ.
ಇದಕ್ಕೆ ಕಾರಣ ಏನು ಎಂದರೆ ಭಾಗ್ಯ ಸ್ಥಾನ ಅಂದರೆ 9ನೇ ಮನೆಯಲ್ಲಿ ರವಿ ಗ್ರಹ ಇರುತ್ತಾನೆ. ಹಾಗೂ 10ನೇ ಮನೆಯಲ್ಲಿ ಶುಕ್ರ ಗ್ರಹ ಇರುತ್ತಾನೆ. ಹತ್ತನೇ ಮನೆಯಲ್ಲಿ ಶುಕ್ರ ನಿಮ್ಮ ರಾಶ್ಯಾಧಿಪತಿ ಗ್ರಹ ಇದ್ದ ಎಂದರೆ ಶುಕ್ರ ಕರ್ಕಾಟಕದಲ್ಲಿ ಉತ್ತಮ ಫಲವನ್ನು ನೀಡುವುದಿಲ್ಲ. ಆದ್ದರಿಂದ 16ನೇ ತಾರೀಖಿನ ತನಕ ತುಲರಾಶಿಯ ಜನರು ಆದಷ್ಟು ಕೆಲಸದ ವಿಚಾರವಾಗಿ ಜಾಗರೂಕತೆಯಿಂದ ಇರುವುದು ಉತ್ತಮ.
ಇಲ್ಲವಾದರೆ ಆ ಸಮಯದೊಳಗೆ ನೀವು ಆ ಕೆಲಸವನ್ನು ಬಿಡುವಂತಹ ಸನ್ನಿವೇಶಗಳು ಕೂಡ ಒದಗಿ ಬರಬಹುದು. ಹಾಗೂ ತುಲಾ ರಾಶಿಯ ವ್ಯಾಪಾರ ವ್ಯವಹಾರ ಮಾಡುವಂತಹ ಜನರಿಗೆ ಈ ತಿಂಗಳು ಬಹಳ ಅದ್ಭುತವಾದಂತಹ ಒಳ್ಳೆಯ ಸಮಯವಾಗಿರುತ್ತದೆ ಎಂದೇ ಹೇಳಬಹುದು. ಪಾರ್ಟ್ನರ್ ಶಿಪ್ ವ್ಯವಹಾರ ಮಾಡುತ್ತಿದ್ದವರಿಗು ಸಹ ಲಾಭದಾಯಕ ದಿನವಾಗಿರುತ್ತದೆ. ನೀವೇನಾದರೂ ಬೇರೆಯವರಿಂದ ಸಾಲ ಪಡೆದಿದ್ದರೆ
ಅವರು ಈ ಸಮಯದಲ್ಲಿ ಹಣವನ್ನು ಕೇಳುವಂತೆ ಆದಷ್ಟು ಒತ್ತಡವನ್ನು ನಿಮ್ಮ ಮೇಲೆ ಹೇರುತ್ತಾರೆ. ಹಾಗೂ ಯಾರಿಗೆ ಇನ್ನೂ ವಿವಾಹ ಆಗಿರು ವುದಿಲ್ಲವೋ ಅಂತವರು ಆಷಾಢ ಮಾಸ ಎಂದು ಸುಮ್ಮನಿರಬೇಡಿ ಬದಲಿಗೆ ಈ ಸಮಯದಲ್ಲಿ ಪ್ರಯತ್ನ ಮಾಡಿ ಅದು ಯಶಸ್ಸಾಗುವ ಸಾಧ್ಯತೆ ಇರುತ್ತದೆ. ವೈವಾಹಿಕ ಜೀವನದಲ್ಲಿ ತೊಂದರೆ ಅನುಭವಿಸುತ್ತಿದ್ದ ವರು ಈ ಸಮಯದಲ್ಲಿ ಅವೆಲ್ಲವನ್ನು ಮರೆತು ಒಂದಾಗಿರುವುದಕ್ಕೆ ಇಷ್ಟಪಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.