ಬೆಸ್ಕಾಂ ನಿಂದಲೇ 25000 ಹಣ ವಸೂಲಿ ಮಾಡಿದ ದಾವಣಗೆರೆ ಹುಡುಗ , ಇವನ ಧೈರ್ಯಕ್ಕೆ ಮೆಚ್ಚಲೆಬೇಕು..

ಕರೆಂಟ್ ಬಿಲ್ ಹೆಚ್ಚಳ ಮಾಡಿ ಶಾಕ್ ಕೊಟ್ಟಿದ್ದ ಬೆಸ್ಕಾಂಗೆ ಈಗ ಒಬ್ಬ ಯುವಕ ಶಾಕ್ ಕೊಟ್ಟಿದ್ದಾನೆ ಕರೆಂಟ್ ಬಿಲ್ ಕಟ್ಟಿದ್ರು ಕೂಡ ವಿದ್ಯುತ್ ಕಡಿತ ಮಾಡಿದ ಬೆಸ್ಕಾಂಗೆ ಈ ಯುವಕ ಮಾಡಿದ್ದೇನು ನೋಡೋಣ ಬನ್ನಿ ಬೆಸ್ಕಾಂನಿಂದಲೇ 25000 ದಂಡ ವಸೂಲಿ ಮಾಡಿದ ಯುವಕ.ದಾವಣಗೆರೆಯ ಎಂಸಿಸಿ ಬಿ ಬಿ ಬ್ಲಾಕ್ನ ನಿವಾಸಿ ಪವನ್ ಉಲ್ಲಾಸ್ ಅನ್ನೋರು ಮನೆಯ 2022ನೇ ಆಗಸ್ಟ್ ನಲ್ಲಿ 1454 ಕರೆಂಟ್ ಬಿಲ್ ಬಾಕಿ ಇದ್ದ ಹಿನ್ನೆಲೆ ಲೈನ್ ಮ್ಯಾನ್ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿದರು ಆದರೆ ಮುಂಜಾಗ್ರತೆ ನೋಟಿಸ್ ನೀಡದೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಕ್ಕೆ AERC ಕೋರ್ಟ್ 2004ರ ಸೆಕ್ಷನ್ ಒಂಬತ್ತನೇ ನಿಯಮದಡಿ ಆದೇಶ ಉಲ್ಲಂಘನೆ ಮಾಡಿದೆ.

ಈಗಂತ ಗ್ರಾಹಕರ ವ್ಯಾಜ್ಯ ಪರಿಹಾರ ನಿಗಮಕ್ಕೆ ದಾವೆ ಹಾಕಿದ್ರು. ಬೆಸ್ಕಾಂ ನಿಯಮ ಉಲ್ಲಂಘನೆ ಸಾಬೀತಾದ ಹಿನ್ನೆಲೆ ಆಯೋಗದಿಂದ ಬೆಸ್ಕಾಂಗೆ 20,000 ದಂಡ ಹಾಗೂ ದೂರುದಾರನಿಗೆ ಪ್ರಕರಣದ ವೆಚ್ಚ 5000 ಒಟ್ಟು 25,000 ನೀಡುವಂತೆ ಆದೇಶ ಕೊಟ್ಟಿದ್ದು ಆದೇಶವಾದ 30 ದಿನದೊಳಗೆ ಪರಿಹಾರ ನೀಡಲಿಲ್ಲ ಅಂದರೆ ಶೇಕಡ 6 ರಷ್ಟು ಬಡ್ಡಿ ಸೇರಿಸಿಕೊಡಬೇಕು ಅಂತ ತೀರ್ಪು ಕೊಟ್ಟಿದೆ..

WhatsApp Group Join Now
Telegram Group Join Now

ಯುವಕ ಹೇಳೋದೇನಂದ್ರೆ ಸೆಕ್ಷನ್ 9 ರ ಪ್ರಕಾರ ಬಿಲ್ ಕಟ್ಟೋದಿಕ್ಕೆ 15 ದಿನಗಳ ಕಾಲ ಸಮಯ ನೀಡಬೇಕು 15 ದಿನಗಳು ಕಳೆದ ನಂತರವೂ ಕರೆಂಟ್ ಬಿಲ್ ಕಟ್ಟಿಲ್ಲ ಅಂದ್ರೆ 15 ದಿನ ಆದ್ಮೇಲೆ ನೋಟಿಸ್ ಕಳಿಸಬೇಕು. ಆದರೆ ಬೆಸ್ಕಾಂ ನವರು 14ನೇ ದಿನಕ್ಕೆ ಕರೆಂಟ್ ಬಿಲ್ ಕಟ್ಟಿಲ್ಲ ಅಂತ ಫ್ಯೂಸ್ ತಗೊಂಡು ಹೋಗ್ಬಿಡ್ತಾರೆ ಹಾಗಾಗಿ ನೋಟಿಸ್ ಯಾಕೆ ಕೊಟ್ಟಿಲ್ಲ ಅನ್ನೋದು ನನ್ನ ಪ್ರಶ್ನೆ ಅಂತ ಯುವಕ ಹೇಳ್ತಾನೆ ನನ್ನ ಒಂದು ಮನವಿಯನ್ನ ಪರಿಶೀಲಿಸಿ ವಾದ ವಿವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಲಯ ನನಗೆ ನ್ಯಾಯವನ್ನ ದೊರಕಿಸಿಕೊಟ್ಟಿದೆ ಬೆಸ್ಕಾಂಗೆ 25000 ತಂಡವನ್ನ ಕಟ್ಟೋದಕ್ಕೆ ತೀರ್ಪು ನೀಡಿದೆ.

ಬೆಸ್ಕಾಂ ಸಿಬ್ಬಂದಿ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡ್ತಾ ಇದ್ದಾರೆ, ಆದರೆ ಪ್ರತಿ ತಿಂಗಳು ಎರಡನೆಯ ತಾರೀಕು ಬಿಲ್ ಬರ್ತಾ ಇತ್ತು ಆದರೆ ಈ ತಿಂಗಳ ಕರೆಂಟ್ ಬಿಲ್ ಎಂಟರಂದು ಮತ್ತು ಹತ್ತನೇ ತಾರೀಕಿನಂದು ಬಂದಿದೆ ಯಾಕೆಂದರೆ ಪ್ರತಿಯೊಬ್ಬರ ಮನೆ ವಿದ್ಯುತ್ ಬಳಕೆ ಶೇಕಡ 100 ಯೂನಿಟ್ ದಾಟಿಸಿ ಪ್ರತಿ ಯೂನಿಟ್ ಗೆ ಎರಡು ರೂಪಾಯಿ ಬಿಲ್ ಬರುವಂತೆ ಮಾಡಿದ್ದು ಇದು ಪಟ್ಟು ಹಣ ಪಡೆದಿದ್ದಾರೆ ಇದರಿಂದ ಬೆಸ್ಕಾಂ ವಿರುದ್ಧ ದಾವೆ ಹೂಡಿ ಅಂತ ಪವನ್ ಮನವಿ ಮಾಡಿದ್ದಾರೆ.( ಕೃಪೆ – ಪಬ್ಲಿಕ್ ಟಿವಿ)