ಶಕ್ತಿಶಾಲಿ ದುರ್ಗಾ ದೇವಿಯ ಅಖಂಡ ಅನುಗ್ರಹದಿಂದ ಈ ರಾಶಿಗಳಿಗೆ ಶತ್ರುಗಳಿಂದ ಮುಕ್ತಿ ಭೂ ಲಾಭ ಆಷಾಡ ಶುಕ್ರವಾರದ ದಿನಫಲ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ:- ಇಂದು ನಿಮಗೆ ಮುಖ್ಯವಾದ ದಿನವಾಗಿರಲಿದೆ. ಇಂದು ನೀವು ಹೊಸ ಆಲೋಚನೆಗಳನ್ನು ಮಾಡುತ್ತೀರಿ. ಹಿಂದಿನ ದಿನದಲ್ಲಿ ನಿಂತ ಕೆಲಸವನ್ನು ಇಂದು ಪ್ರಾರಂಭ ಮಾಡಲು ಬಹಳ ಶುಭ ದಿನವಾಗಿ ರುತ್ತದೆ. ಹಾಗೂ ಅದರಿಂದ ಸಂಪೂರ್ಣವಾದಂತಹ ಪ್ರಯೋಜನವನ್ನು ಸಹ ಪಡೆಯಲಿದ್ದೀರಿ. ಇಂದು ಯಾವುದಾದರು ದೊಡ್ಡ ವ್ಯವಹಾರವನ್ನು ಮಾಡಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 8:35 ರಿಂದ ಮಧ್ಯಾನ 2 ಗಂಟೆಯವರೆಗೆ.

ವೃಷಭ ರಾಶಿ:- ಇಂದು ನಿಮಗೆ ಸಕಾರಾತ್ಮಕ ದಿನವಾಗಿರುತ್ತದೆ. ಹಾಗೂ ಮನಸ್ಸು ಈ ದಿನ ಸಂತೋಷವಾಗಿರುತ್ತದೆ ಮತ್ತು ಮೋಜಿನ ಮನಸ್ಥಿತಿ ಯಲ್ಲಿ ಇರುತ್ತೀರಿ. ಹಾಗೂ ಇಂದು ಕುಟುಂಬದೊಂದಿಗೆ ಹೆಚ್ಚು ಸಮಯ ವನ್ನು ಸಹ ಕಳೆಯುತ್ತೀರಿ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧ ವೂ ಬಲವಾಗಿರುತ್ತದೆ. ಇಂದು ನಿಮ್ಮ ಆತಂಕವು ಕೊನೆಗೊಳ್ಳುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5 ರಿಂದ ರಾತ್ರಿ 9 ಗಂಟೆಯವರೆಗೆ

ಮಿಥುನ ರಾಶಿ:- ಇಂದು ಹೆಚ್ಚು ಹಣಕಾಸಿನ ಬಗ್ಗೆ ಚಿಂತೆ ಮಾಡುತ್ತೀರಿ. ಇಂದು ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಹಾಗೂ ಒಬ್ಬರಿಗೊಬ್ಬರು ಹೆಚ್ಚಿನ ಸಮಯ ಕಳೆಯುವ ಅವಕಾಶ ಸಿಗುತ್ತದೆ. ನೀವು ಕೆಲವು ವಿಷಯಗಳ ಬಗ್ಗೆಯೂ ಕೂಡ ಚರ್ಚಿಸಬಹುದು. ಇಂದು ಕೆಲಸದ ವಿಷಯವಾಗಿ ಹೆಚ್ಚು ಒತ್ತಡ ಇರುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ

ಕಟಕ ರಾಶಿ:- ನಿಮ್ಮ ಎಲ್ಲ ಒತ್ತಡವನ್ನು ಮರೆತು ಈ ದಿನವನ್ನು ಉತ್ತಮ ವಾಗಿ ಆನಂದಿಸಿ. ಹಾಗೂ ನಿಮಗೆ ಇಷ್ಟ ಆಗುವಂತಹ ಪುಸ್ತಕಗಳನ್ನು ಓದಿ ಅಥವಾ ಚಲನಚಿತ್ರಗಳನ್ನು ನೋಡಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಹಾಗೂ ಕುಟುಂಬದವರೊಂದಿಗಿನ ಸಂಬಂಧವು ಕೂಡ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 12:45 ರವರೆಗೆ.

ಸಿಂಹ ರಾಶಿ:- ಇಂದು ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುವುದು ಉತ್ತಮ. ಇದು ನಿಮ್ಮ ಎಲ್ಲಾ ಆಯಾಸವನ್ನು ಸರಿಪಡಿಸುತ್ತದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಾಗಿರಬಹುದು. ನಿಮ್ಮ ಕೆಲಸ ಕಾರ್ಯಗಳಲ್ಲಾಗಿರಬಹುದು ಈ ದಿನ ಉತ್ತಮವಾದ ಯಶಸ್ಸನ್ನು ಪಡೆಯುತ್ತಿರಿ. ಹಣಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಸಂಜೆ 6 ರಿಂದ 9:15 ರವರೆಗೆ

ಕನ್ಯಾ ರಾಶಿ:- ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹಣವನ್ನು ಖರ್ಚು ಮಾಡುವುದು ಉತ್ತಮ. ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂದು ಅವರು ಸುಧಾರಿಸಿಕೊಳ್ಳುತ್ತಾರೆ. ಈ ದಿನ ಕೆಲಸದ ಹೊರೆ ಹೆಚ್ಚಾಗಬಹುದು. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಬೆಳಗ್ಗೆ 10 ರಿಂದ ಮಧ್ಯಾನ 2:25ರ ವರೆಗೆ

ತುಲಾ ರಾಶಿ:- ಇಂದು ಯಾವುದಾದರು ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರಬಹುದು. ಇಂದು ಯಾವುದಾದರು ಒಂದು ವಿಷಯಕ್ಕೆ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ. ನಿಮ್ಮ ಮನಸ್ಸನ್ನು ನಿಮ್ಮ ಪ್ರೀತಿ ಪಾತ್ರರೊಡನೆ ಹಂಚಿಕೊಳ್ಳುವುದು ಉತ್ತಮ. ಹಾಗೂ ಈ ಸಮಯದಲ್ಲಿ ನೀವು ಹೆಚ್ಚು ತಾಳ್ಮೆಯನ್ನು ತೆಗೆದುಕೊಳ್ಳಬೇಕು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6:55 ರಿಂದ 11 ಗಂಟೆಯವರೆಗೆ.

ವೃಶ್ಚಿಕ ರಾಶಿ:- ಇಂದು ನಿಮಗೆ ಬಹಳ ವಿಶೇಷವಾದ ದಿನವಾಗಿರಲಿದೆ. ಮತ್ತು ಮನಸ್ಸು ಶಾಂತವಾಗಿ ಇರುತ್ತದೆ. ಹಾಗೂ ಈ ದಿನ ಹೆಚ್ಚು ಸಂತೋಷವನ್ನು ಅನುಭವಿಸುವಿರಿ. ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗಬಹುದು. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾನ 2 ರಿಂದ ಸಂಜೆ 7 ಗಂಟೆಯವರೆಗೆ.

ಧನಸ್ಸು ರಾಶಿ:- ಇಂದು ನಿಮಗೆ ರೋಮಾಂಚನಕಾರಿ ದಿನವಾಗಿರಲಿದೆ. ಇಂದು ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ. ಸಂಗಾತಿಯೊಂದಿಗೆ ಮನ ಸ್ತಾಪ ಉಂಟಾಗಬಹುದು. ಮಿತವಾಗಿ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಿ ಇಲ್ಲದಿದ್ದರೆ ಅದು ನಿಮ್ಮ ಭಾವನೆಗಳನ್ನು ನೋಯಿಸಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 1:00 ಯಿಂದ ಸಂಜೆ 4 ಗಂಟೆಯವರೆಗೆ

ಮಕರ ರಾಶಿ:- ಕಚೇರಿಯಲ್ಲಿ ಬಾಕಿ ಇರುವಂತಹ ಕೆಲಸವನ್ನು ಸಮಯ ಕ್ಕೆ ಸರಿಯಾಗಿ ಪೂರ್ಣಗೊಳಿಸುವುದರಲ್ಲಿ ಹೆಚ್ಚು ಜಾಗರೂಕತೆಯನ್ನು ವಹಿಸಬೇಕು ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು. ವ್ಯಾಪಾರಿಗಳು ಇಂದು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದು ಕೊಳ್ಳುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ

ಕುಂಭ ರಾಶಿ:-ಇಂದು ನಿಮಗಾಗಿ ನೀವು ಹೆಚ್ಚು ಸಮಯವನ್ನು ಪಡೆದು ಕೊಳ್ಳುತ್ತೀರಿ. ನಿಮ್ಮನ್ನು ವಿವಾದಗಳಿಗೆ ಸಿಲುಕಿಸುವ ಯಾವುದೇ ಕೆಲಸ ವನ್ನು ಮಾಡಬೇಡಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಒತ್ತಡವನ್ನು ಉಂಟುಮಾಡುತ್ತದೆ. ಆರ್ಥಿಕವಾಗಿ ಈ ದಿನವೂ ಸಾಮಾನ್ಯ ದಿನವಾಗಿ ರುತ್ತದೆ. ಇಂದು ನಿಮ್ಮ ಬಜೆಟ್ ನೆನಪಿಟ್ಟುಕೊಂಡು ಖರ್ಚು ಮಾಡ ಬೇಕು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 5:15 ರಿಂದ ರಾತ್ರಿ 9 ಗಂಟೆಯವರೆಗೆ.

ಮೀನ ರಾಶಿ:- ಇಂದು ಕುಟುಂಬ ಜೀವನದ ಬಗ್ಗೆ ಹೆಚ್ಚು ಆಲೋಚನೆ ಯನ್ನು ಮಾಡುತ್ತೀರಿ. ನೀವೇನಾದರೂ ಬೇರೆಯವರಿಗೆ ಸಾಲ ಕೊಟ್ಟಿ ದ್ದರೆ ಈ ದಿನ ಅದನ್ನು ಪಡೆಯಬಹುದು. ನಿಮ್ಮ ಮೇಲಾಧಿಕಾರಿಗ ಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ಇಂದು ಅವರು ನಿಮಗೆ ವಹಿಸುವ ಎಲ್ಲ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15ರವರೆಗೆ

By admin

Leave a Reply

Your email address will not be published. Required fields are marked *