ತಾಂಬೂಲ ಕೊಡುವಾಗ ಈ ತಪ್ಪು ಮಾಡಿದರೆ ಲಕ್ಷ್ಮಿ ಅನುಗ್ರಹ ಕಳೆದುಹೋಗುತ್ತೆ.ವಿಳ್ಳೆದೆಲೆ ವಿಚಾರದಲ್ಲಿ ಈ ತಪ್ಪು ಮಾಡಬೇಡಿ.

ವಿಳ್ಳೆದೆಲೆ ಅಥವಾ ತಾಂಬೂಲದ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿಗಳು. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರು ತಂದು ದೇವರ ಮುಂದಿಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸಬೇಕು.ತಾಂಬೂಲ ಕೊಡುವಾಗ ದಂಟು ಅಂದರೆ ಮೂಲ ನಮ್ಮ ಕಡೆಗೆ ಇರಬೇಕು ತುದಿ ತೆಗೆದುಕೊಳ್ಳುವವರ ಕಡೆ ಇರುವಂತೆ ಇರಿಸಿ ತಾಂಬೂಲ ಕೊಡಬೇಕು ಇದೇ ರೀತಿ ಬಾಳೆಹಣ್ಣಿಗೂ ಅನ್ವಯಿಸುತ್ತದೆ. ತಾಂಬೂಲದಲ್ಲಿರುವ ವಿಳ್ಳೆದೆಲೆಯು ಸೂರ್ಯಗ್ರಹನನ್ನು ಪ್ರತಿನಿಧಿಸುತ್ತದೆ ಮತ್ತು ಅಡಿಕೆ ಕುಜ ಗ್ರಹವನ್ನು ಪ್ರತಿನಿಧಿಸುತ್ತದೆ ಹೀಗಾಗಿ ಸರಿಯಾದ ಪದ್ದತಿ ಅನುಸರಿಸಿದರೆ ಮಾತ್ರವೇ ತಾಂಬೂಲ ಪೂರ್ಣ ಫಲ ಒದಗಿ ಬರುತ್ತದೆ.ಕೆಲವರಿಗೆ ಒಬ್ಬರ ಮನೆಯಲ್ಲಿ ಕೊಟ್ಟ ತಾಂಬೂಲ ಅಥವಾ ಬ್ಲೌಸ್ ಪೀಸನ್ನು ಇಟ್ಟು ಬೇರೆಯವರಿಗೆ ಕೊಡುವ ಅಭ್ಯಾಸವಿರುತ್ತದೆ ಇದು ಬಹಳ ತಪ್ಪು ನಿಮಗೆ ಸಿಕ್ಕ ಅದೃಷ್ಟವನ್ನು ನೀವಾಗಿಯೇ ಬೇರೆ ಅವರಿಗೆ ದಾರೆ ಎರೆದಂತೆ ಆಗುವುದು ಎಚ್ಚರ.

ಕಪ್ಪು ಬಣ್ಣದ ಬ್ಲೌಸ್ ಪೀಸ್ ಇಟ್ಟು ತಾಂಬೂಲ ಕೊಡಬೇಡಿ.ಪೂರ್ವ ಅಥವಾ ಉತ್ತರ ದಿಕ್ಕಿಗೆ ವಿಳ್ಳೆದೆಲೆಯ ತುದಿ ಬರುವ ಹಾಗೆ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು.ಹಸಿರಾಗಿರುವ ಮತ್ತು ಅಂದವಾಗಿ ತೂತಿಲ್ಲದ ಹರಿದಿರದ ವಿಳ್ಳೆದೆಲೆಯನ್ನು ದೇವರಿಗೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು.ಕಳಶಕ್ಕೆ ಬಿಳಿ ವಿಳ್ಳೆದೆಲೆಯನ್ನು ಇಡಬಾರದು.ಇಟ್ಟರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ. ದೇವರ ಪೂಜೆಗೆ ಮತ್ತು ಕಳಶಕ್ಕೆ ಇಟ್ಟಿರುವ ವಿಳ್ಳೆದೆಲೆಯನ್ನು ಎಲ್ಲೆಂದರಲ್ಲಿ ಬಿಸಾಕಬಾರದು ಮತ್ತು ತುಳಿಯಬಾರದು ಅದನ್ನು ನಾವು ಊಟದ ನಂತರ ಅಡಿಕೆ ಮತ್ತು ಸುಣ್ಣದ ಜೊತೆ ತಿನ್ನಬೇಕು.ಇದರಿಂದ ಪಚನದ ಶಕ್ತಿ ಚೆನ್ನಾಗಿ ಆಗುವುದು.

WhatsApp Group Join Now
Telegram Group Join Now

ಮಂಗಳವಾರ ಮತ್ತು ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ವಿಳ್ಳೆದೆಲೆಯನ್ನು ಮನೆಯಿಂದ ಹೊರಗೆ ಹಾಕಬಾರದು ಹಾಗೂ ಎಸೆಯಬಾರದು.ವಿಳ್ಳೆದೆಲೆಯ ಪ್ರತಿಯೊಂದು ಭಾಗದಲ್ಲಿಯೂ ಬೇರೆ ಬೇರೆ ದೇವತೆಗಳು ನೆಲೆಸಿರುತ್ತಾರೆ.ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.ವಿಳ್ಳೆದೆಲೆಯ ತುಂಬಿನಲ್ಲಿ ಅಹಂಕಾರ ದೇವತೆ ಮತ್ತು ದಾರಿದ್ರ್ಯ ಲಕ್ಷ್ಮಿ ವಾಸವಾಗಿರುತ್ತಾರೆ ಆದ್ದರಿಂದಲೇ ವಿಳ್ಳೆದೆಲೆ ಹಾಕಿಕೊಳ್ಳುವಾಗ ತುಂಬು ಮುರಿದು ಹಾಕಿಕೊಳ್ಳುತ್ತಾರೆ.

ವಿಳ್ಳೆದೆಲೆಯ ಬುಡದಲ್ಲಿ ಮೃತ್ಯು ದೇವತೆಯ ವಾಸ ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿಯ ಭಾಗ ತೆಗೆದು ಹಾಕಿಕೊಳ್ಳುವುದು ಉತ್ತಮ.ಎಲ್ಲಾದರು ತಾಂಬೂಲ ಕೊಟ್ಟರೆ ಅದನ್ನು ಬೇಡ ಎನ್ನಬೇಡಿ ಮತ್ತಿ ಎಲ್ಲೆಂದರಲ್ಲಿ ಬಿಸಾಡಬೇಡಿ.ಪೂಜೆಯ ನಂತರ ಕಳಶದ ವಿಳ್ಳೆದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮತ್ತು ಮಗಳು ಅಳಿಯ ಇದ್ದರೆ ಮಾತ್ರ ಹಾಕಿಕೊಳ್ಳಬೇಕು ಬೇರೆಯವರು ಹಾಕಿಕೊಳ್ಳಬಾರದು.ಉಳಿದ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ ತಪ್ಪದೇ ಶೇರ್ ಮಾಡಿ.

[irp]