ಜ್ಯೋತಿರ್ಭಿಮೇಶ್ವರ ವ್ರತ ಈ ದಿನ ಪಾಲಿಸಬೇಕಾದ ನಿಯಮಗಳು ಅಥವಾ ಬೀಮನ ಅಮಾವಾಸ್ಯೆ ಈ ದಿನ ಪಾಲಿಸಲೇಬೇಕಾದ ಕೆಲವು ನಿಯಮಗಳು ಈ ದಿನದಂದು ಮಹಿಳೆಯರು ಬೇಗ ಎದ್ದು ಶುಚಿಯಾಗಿ ಹೊಸ ಬಟ್ಟೆಯನ್ನು ಧರಿಸಿ ಮನೆ ಮುಂದೆ ರಂಗೋಲಿಯನ್ನು ಹಾಕಬೇಕು ನಂತರ ಗೃಹಣಿಯರು ತಮ್ಮ ಕೈಗೆ ಕಂಕಣವನ್ನು ಕಟ್ಟಿಕೊಂಡು ಜ್ಯೋತಿರ್ಭಿಮೇಶ್ವರವನ್ನು ಅಥವಾ ಶಿವ ಪಾರ್ವತಿಯನ್ನು ಧ್ಯಾನಿಸುತ್ತಾ ಪೂಜಿಸುತ್ತಾ ವ್ರತವನ್ನು ಕೈಗೊಳ್ಳಬೇಕು.
ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಆ ಅಕ್ಕಿಯ ಮೇಲೆ ಎರಡು ಎಣ್ಣೆಯ ದೀಪವನ್ನು ಹಚ್ಚಬೇಕು ಈ ದೀಪದ ತಟ್ಟೆಯಲ್ಲಿ ಶಿವ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಸಲ್ಲಿಸಬೇಕು ಪೂಜೆಗೆ ಬೇಕಾದ ಸಾಮಗ್ರಿಗಳೊಂದಿಗೆ 9 ಗಂಟೆನ ಗೌರಿಧಾರವನ್ನು ಇಟ್ಟು ಪೂಜೆ ಮಾಡಿ ಬಳಿಕ ಆ ಧಾರವನ್ನು ಕೈಗೆ ಕಟ್ಟಿಕೊಳ್ಳಬೇಕು
ಶುಭಾರಂಭದ ಸಂಕೇತ ಗಣೇಶನಾಗಿರುವುದರಿಂದ ಮೊದಲು ಗಣೇಶನನ್ನು ಆರಾಧಿಸಿ ನಂತರ ಭೀಮೇಶ್ವರನನ್ನು ಪೂಜಿಸಿ 9 ಕರಿಗಳು ಬಂದು ನೈವೇದ್ಯವಾಗಿ ದೇವರಿಗೆ ಅರ್ಪಿಸಿ ನಂತರ ಗಂಡನ ಪಾದ ಪೂಜೆಯನ್ನು ಮಾಡಿ ಪತಿಯ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಳ್ಳಿ
ಪತಿ-ಪತ್ನಿ ಸಂಬಂಧಗಳು ಆದರ್ಶ ಸಂಗಾತಿ ಅಥವಾ ನಿಮ್ಮ ಆತ್ಮ ಸಂಗಾತಿಯನ್ನು ಆಕರ್ಷಿಸುವಲ್ಲಿ ಮತ್ತು ಪ್ರೀತಿ ಅಥವಾ ವೈವಾಹಿಕ ಜೀವನವನ್ನು ಹೆಚ್ಚಿಸುವಲ್ಲಿ ಪಾದಪೂಜೆಗಳು ವಿಶೇಷವಾಗಿ ಪರಿಣಾಮಕಾರಿಯಾಗಿರುತ್ತದೆ ಈ ನಿರ್ದಿಷ್ಟ ದಿನದಂದು ದೇವಾಲಯಕ್ಕೆ ಭೇಟಿ ನೀಡಬೇಕು ಮತ್ತು ಪಂಚಾಮೃತದೊಂದಿಗೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು ಶಿವ ಪಾರ್ವತಿಯನ್ನು ಪೂಜೆ ಮಾಡಿದ ನಂತರ ಪತಿಯ ಪಾದ ಪೂಜೆಯನ್ನು ಮಾಡಿ ಆತನಿಂದ ಆಶೀರ್ವಾದವನ್ನು ಪಡೆದುಕೊಳ್ಳಬೇಕು
ಈ ದಿನ ಪತಿ-ಪತ್ನಿ ಯಾವುದೇ ಕಾರಣಕ್ಕೂ ಮನಸ್ತಾಪ ಇಟ್ಟುಕೊಳ್ಳಬಾರದು ಬ್ರಾಹ್ಮಣ ಅಥವಾ ಪುರೋಹಿತರಿಗೆ ಆಹಾರ ಬಟ್ಟೆ ಮತ್ತು ಪಾದ ರಕ್ಷಗಳನ್ನು ಅರ್ಪಿಸುವುದು ಅತ್ಯಂತ ಮಂಗಳಕರವಾಗಿರುತ್ತದೆ ಶನಿ ಸಾಡೇ ಸಾತಿ ಮತ್ತು ಶನಿ ದಾಯ ವನ್ನು ಎದುರಿಸುತ್ತಿರುವ ಜನರು ಈ ವಿಶೇಷ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಬೇಕು ಮತ್ತು ಅರಳಿ ಮರದ ಕೆಳಗೆ ಸಾಸಿವೆ, ಎಣ್ಣೆಯ ದೀಪವನ್ನು ಹಚ್ಚಬೇಕು ಮತ್ತು ಆಶೀರ್ವಾದ ಪಡೆಯಬೇಕು
ಭೀಮನ ಅಮಾವಾಸ್ಯೆಯ ದಿನದಂದು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಮಂಗಳಕರ ವೆಂದು ಪರಿಗಣಿಸಲಾಗಿದೆ ನಿರ್ಗತಿಕರಿಗೆ ಮತ್ತು ಬಡವರಿಗೆ ಆಹಾರವನ್ನು ದಾನ ಮಾಡಬೇಕು ಭೀಮನ ಅಮಾವಾಸ್ಯೆ ಯಂದು ಏನು ಮಾಡಬಾರದು
ಈ ದಿನ ಬಟ್ಟೆ ಮತ್ತು ಪಾದರಕ್ಷೆಗಳನ್ನು ಖರೀದಿಸಬೇಡಿ ಹೊಸ ಉದ್ಯೋಗ ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಡಿ ಯಾವುದೇ ಶುಭ ಕಾರ್ಯವನ್ನು ಮಾಡುವುದನ್ನು ತಪ್ಪಿಸಬೇಕು ಗೃಹಪ್ರವೇಶ ಮತ್ತು ಹೊಸ ಮನೆ ಅಥವಾ ಕಾರು ಖರೀದಿಸುವುದನ್ನು ತಪ್ಪಿಸಿ ಮಧ್ಯ ಮತ್ತು ಮಾಂಸಹಾರವನ್ನು ಸೇವಿಸಬೇಡಿ ಜನರು ಯಾವುದೇ ಕೆಟ್ಟ ಅಭ್ಯಾಸದಿಂದ ದೂರವಿರಬೇಕು ಈ ದಿನ ಮನೆಯ ಮಹಿಳೆಯರನ್ನು ಅವಮಾನಿಸಬಾರದು ಭೀಮನ ಅಮಾವಾಸ್ಯೆಯು ಶಿವನಿಗೆ ಸಮರ್ಪಿತವಾಗಿದೆ ಮತ್ತು ಈ ದಿನ ಶಿವನನ್ನು ಪೂರ್ಣ ಭಕ್ತಿಯಿಂದ ಪೂಜಿಸಲಾಗುತ್ತದೆ ಈ ದಿನ ಶಿವ ಪೂಜೆಯನ್ನು ಮಾಡಿದ ನಂತರ ಪತ್ನಿಯು ತನ್ನ ಪತ್ನಿಯ ದೀರ್ಘಾಯುಷ್ಯವನ್ನು ಕೋರಿ ಪೂಜೆಯನ್ನು ಮಾಡುತ್ತಾಳೆ
ಭಗವಾನ್ ಪರಶಿವನ ಭೀಮನ ಅಮಾವಾಸ್ಯೆ ಎಂದೇ ಪಾರ್ವತಿ ದೇವಿಯನ್ನು ವಿವಾಹವಾಗುತ್ತಾನೆ ಆದ್ದರಿಂದ ಈ ದಿನವನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ ಈ ದಿನದಂದು ಮಹಿಳೆಯರು ಶಿವ ಪಾರ್ವತಿಯನ್ನು ಆರಾಧಿಸಿದರೆ ಸಮೃದ್ಧಿ ಸಂತಾನ ಪತಿವ್ರತೆ ಆಯಸ್ಸು ಆಯಸ್ಸು ಸಂತೋಷ ಸೇರಿದಂತೆ ಎಲ್ಲವನ್ನು ಶಿವ ಮತ್ತು ಪಾರ್ವತಿ ದೇವಿ ಕರುಣಿಸುತ್ತಾರೆ ಎಂಬ ನಂಬಿಕೆ ಇದೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ.