ನೈಟಿ ಧರಿಸುವ ಮಹಿಳೆಯರಿಗೆ ಕಿವಿ ಮಾತುಗಳು.. ಮಹಿಳೆಯರು ಮಾತ್ರ ನೋಡಿ..ನೀವು ದಪ್ಪವಾಗಲು ನೈಟಿಯೇ ಕಾರಣ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೃಹಿಣಿಯರೇ ಎಚ್ಚರ ಇನ್ನು ಮುಂದೆಯಾದರೂ ಎಚ್ಚೆತ್ತುಕೊಳ್ಳಿ ನಿಮ್ಮ ಹೊಟ್ಟೆ ಜೋತುಬಿತು ನೀವು ದಿನೇ ದಿನೇ ದಪ್ಪವಾಗುತ್ತಿರುವುದಕ್ಕೆ ನೈಟಿ ಕೂಡ ಒಂದು ದೊಡ್ಡ ಕಾರಣವಾಗಿದೆ. ಹೇಗೆಂದು ಯೋಚಿಸುತ್ತಿದ್ದೀರಾ ನೈಟಿ ಎನ್ನುವುದು ಆರಾಮವಾಗಿ ರಾತ್ರಿ ಮಲಗಲು ಮಾತ್ರ ಬಳಸುವ ಉಡುಪಾಗಿತ್ತು ಆದರೆ ಈಗ ಅದು ಗೃಹಿಣಿಯರ ಬಹು ಪ್ರಿಯವಾದ ಹುಡುಪಾಗಿದೆ. ಕಾರಣ ಇಷ್ಟೇ ಗೃಹಿಣಿಯರ ದಿನದ ಬಹುಪಾಲು ಸಮಯ ಕೆಲಸ ಕೆಲಸವೇ ಆಗಿದೆ ಹೀಗಿರುವಾಗ ನೈಟಿ ಬಹಳ ಕಂಫರ್ಟ್ ಇರುತ್ತೆ ಜಾಸ್ತಿ ಬೆವರುವುದಿಲ್ಲ, ಸೆರಗು ಇರುವುದಿಲ್ಲ, ಒಟ್ಟಾರೆ ಏಕ ವಸ್ತ್ರ ಸೊಗಸಾಗಿ ಇರುತ್ತೆ ಧರಿಸಲು ಮತ್ತು ಮನೆಯಲ್ಲಿ ಆರಾಮವಾಗಿ ಕೆಲಸ ಮಾಡಲು ಅನುಕೂಲವಾಗಿದೆ.

ನೈಟಿ ಎಷ್ಟು ಅನುಕೂಲವಾಗಿರುವುದು ಆದರೆ ಇದರಿಂದ ನೈಟ್ ಎಷ್ಟು ಅಗಲವಾಗಿ ಇರುತ್ತೋ ಅಷ್ಟೇ ನಿಮ್ಮ ದೇಹದ ಆಕೃತಿ ಕೂಡ ಅಗಲವಾಗುವುದು ತಿಳಿಯುವುದೇ ಇಲ್ಲ ಕೆಲವೊಮ್ಮೆ ಊಟ ತಿಂಡಿ ಮಾಡದೆ ತೆಳುವಾದರೂ ಆಗಬಹುದು ಅದು ಕೂಡ ತಿಳಿಯುವುದಿಲ್ಲ ಕಾರಣ ನೈಟಿ ಗಾಳಿಪಟದ ಹಾಗೆ ಇರುವುದರಿಂದ..

ನಮ್ಮ ಸಂಸ್ಕೃತಿಯ ಸೀರೆಯಿಂದ ಲಾಭವೇನೆಂದರೆ ನಿಮ್ಮ ಆಕೃತಿ ಚೆನ್ನಾಗಿರುತ್ತದೆ ಹೇಗೆಂದರೆ ಸೀರೆ ಉಟ್ಟಾಗ ಬೆವರು ಜಾಸ್ತಿ ಜೊತೆಗೆ ಸೀರೆ ಉಡಲು ಸೊಂಟಕ್ಕೆ ಗಟ್ಟಿಯಾಗಿ ಕಟ್ಟುವ ಲಂಗ, ಬಿಗಿಯಾದ ಬ್ಲೌಸ್ ಎಳೆದು ಹಾಕುವ ಸೆರಗು ಇದೆಲ್ಲ ಬೊಜ್ಜು ಬರುವ ಸೂಕ್ಷ್ಮ ಜಾಗವನ್ನೆಲ್ಲ ಬಂಧಿಸುತ್ತದೆ.

ದೇಹವನ್ನು ಕರಗಿಸಲು ಅಥವಾ ಫಿಟ್ನೆಸ್ ಮೈನ್ಟೈನ್ ಮಾಡಲು ಬಯಸುವವರ ಮೊದಲ ಆದ್ಯತೆ ಬೆವರುವುದು ಅದಕ್ಕಾಗಿ ಬೆವರು ಸುರಿಸಿ ವ್ಯಾಯಾಮ ಮಾಡ್ತಾರೆ. ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟುತ್ತಾರೆ. ಇದೆಲ್ಲ ಸೀರೆಯಲ್ಲಿ ಇದೆ ಇದನ್ನು ಬಿಟ್ಟು ಬೇರೆ ಹುಡುಕುವ ನಮ್ಮ ಬುದ್ಧಿಗೆ ಏನಾಗಿದೆ ಒಮ್ಮೆ ಯೋಚಿಸಿ.

ಇನ್ನು ಪೂಜೆ ಮಾಡುವಾಗ ಅಥವಾ ಯಾವುದೇ ಶುಭ ಕಾರ್ಯ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡುವುದು ಶುಭವಲ್ಲ ಇದನ್ನು ಶಾಸ್ತ್ರ ಒಪ್ಪುವುದಿಲ್ಲ ಗೃಹಲಕ್ಷ್ಮಿ ಯಾದವಳು ಕಳೆಕಳೆಯಾಗಿ ಇರಬೇಕು.

ಎಲ್ಲೋ ಹೊರಗಡೆ ಹೋಗಲ್ಲ ಮನೆಯಲ್ಲಿ ಇರುವುದರಿಂದ ಬೆಸ್ಟ್ ಅಂತ ತಿಳಿಯಬೇಡಿ ನಿಮ್ಮ ಮಕ್ಕಳ ಮುಂದೆ ಧರಿಸುವುದು ಕೂಡ ಗೌರವವಲ್ಲ ಮರೆಯದಿರಿ ಇನ್ನು ನೈಟಿ ಧರಿಸಿ ಹೊರಗಡೆ ಹೋಗುವುದು ಗೌರವವಲ್ಲ ದೇವಸ್ಥಾನಕ್ಕೆ ಹೋಗುವುದು ಸಂಸ್ಕೃತಿಯಲ್ಲ ಮರೆಯದಿರಿ ಇನ್ನು ರಾತ್ರಿ ಮಲಗುವಾಗ ಆಗು ಮುಟ್ಟಿನ ಸಮಯದಲ್ಲಿ ಧರಿಸಿ ಬೇರೆ ಸಮಯದಲ್ಲಿ ಸಾಧ್ಯವಾದಷ್ಟು ಸೀರೆ ಧರಿಸಲು ಪ್ರಯತ್ನಿಸಿ ಇದರಿಂದ ನೀವು ನಿಮ್ಮ ಗಂಡನನ್ನು ಆಕರ್ಷಿಸುತ್ತೀರಾ ಜೊತೆಗೆ ಲಕ್ಷ್ಮಿ ಕಳೆ ಬರುತ್ತದೆ ಇನ್ನೂ ಮುಖ್ಯ ಅಂದರೆ ನಿಮ್ಮ ದೇಹದ ಆಕೃತಿ ಸುಂದರವಾಗಿರುತ್ತದೆ.

ಇಂದು ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳು ಸೀರೆಯನ್ನು ಉಟ್ಟರೆ ತುಂಬಾ ಲಕ್ಷಣವಾಗಿ ಕಾಣುತ್ತಾರೆ ಹಾಗೂ ದೇವಾಲಯಗಳಿಗೆ ಹೋದಾಗ ಸೀರೆಯನ್ನು ಹುಟ್ಟು ಹೋಗುವುದರಿಂದ ಹಲವಾರು ಜನರು ನಮಗೆ ಗೌರವವನ್ನು ಕೊಡುತ್ತಾರೆ ಭಾರತೀಯ ಹೆಣ್ಣು ಮಕ್ಕಳಿಗೆ ಸೀರೆಯು ಒಂದು ಗೌರವದ ಸಂಕೇತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನವನವೀನ ಬಟ್ಟೆಗಳ ಮುಂದೆ ಸೀರೆಯು ಗೌಪ್ಯವಾಗಿದೆ.

ಸೀರೆ ಉಟ್ಟರೆ ಹೆಣ್ಣುಮಕ್ಕಳು ತುಂಬಾ ಸುಂದರವಾಗಿ ಲಕ್ಷಣವಾಗಿ ಕಾಣುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವಿನ್ಯತೆಯಿಂದಾಗಿ ಹೆಣ್ಣು ಮಕ್ಕಳು ನಾನಾ ರೀತಿಯ ಮಾಡ್ರನ್ ಡ್ರೆಸ್ ಗಳನ್ನು ಧರಿಸುತ್ತಾರೆ ಆದರೆ ಇವೆಲ್ಲವೂ ಸೀರೆಯಿಂದ ಬಂದಷ್ಟು ಗೌರವವನ್ನು ತಂದು ಕೊಡುವುದಿಲ.

ಭಾರತೀಯರಾಗಿ ನಾವು ನಮ್ಮ ದೇಶದ ಸಂಪ್ರದಾಯ ಸಂಸ್ಕೃತಿಯನ್ನು ವಿಶ್ವದ ಎದುರು ತಲೆ ಎತ್ತುವಂತೆ ಮಾಡಬೇಕು ಆದರೆ ಇತ್ತೀಚಿನ ದಿನಗಳಲ್ಲಿ ನಾವು ವಿದೇಶಿಯರನ್ನು ಹೆಚ್ಚಾಗಿ ಅನುಕರಣೆ ಮಾಡುತ್ತಿದ್ದೇವೆ ಇದು ಸಂಪ್ರದಾಯದೃಷ್ಟಿಯಿಂದಲೂ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಸಹ ಅನಾನುಕೂಲಕರವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *