ದೇವರ ಮನೆಯಲ್ಲಿ ಇಡಬೇಕಾದ ಹಾಗೂ ಇಡಲೇಬಾರದ ವಸ್ತುಗಳು…. ಈ ವಿಡಿಯೋದಲ್ಲಿ ನಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಎಂತಹ ವಸ್ತುಗಳನ್ನ ಇಟ್ಟುಕೊಳ್ಳಬೇಕು ಎಂತಹ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ನಮಗೆ ಸಂಪೂರ್ಣವಾದ ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ ನಮ್ಮ ಮನೆಯಲ್ಲಿ ಎಂತಹ ಪವಿತ್ರ ವಾದ ವಸ್ತುಗಳನ್ನ ಇರಿಸಿಕೊಳ್ಳುವುದರಿಂದ.
ನಮಗೆ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಎನ್ನುವುದನ್ನು ತಿಳಿಸುತ್ತೇನೆ.ಮುಖ್ಯವಾಗಿ ಮನುಷ್ಯನ ದೇಹಕ್ಕೆ ಹೃದಯ ಎಷ್ಟು ಪ್ರಧಾನವಾದದ್ದು ನಮ್ಮ ಮನೆಯಲ್ಲಿ ದೇವರ ಕೋಣೆ ಕೂಡ ಅಷ್ಟೇ ಪ್ರಧಾನವಾದದ್ದು ಅಂತಹ ದೇವರ ಕೋಣೆಯಲ್ಲಿ ಮುಖ್ಯವಾಗಿ ಇರಲೇಬೇಕಾದ ಮೊಟ್ಟ ಮೊದಲನೆಯ ವಸ್ತು ಭಗವದ್ಗೀತೆ, ಭಗವದ್ಗೀತೆಯನ್ನು ದೇವರ ಕೋಣೆಯಲ್ಲಿ.
ನಾವೆಲ್ಲರೂ ತಪ್ಪದೆ ಇಟ್ಟುಕೊಳ್ಳಬೇಕು ಇದು ನಮಗೆ ಇಸ್ಕಾನ್ ಟೆಂಪಲ್ ಪೂರಿ ಜಗನ್ನಾಥ್ ದೇವಸ್ಥಾನ ಅಥವಾ ಪುಸ್ತಕದ ಅಂಗಡಿ ಇಲ್ಲವಾದರೆ ಆನ್ಲೈನ್ ನಲ್ಲಿಯೂ ಸಿಗುತ್ತದೆ ಇದನ್ನು ಕೇವಲ ದೇವರ ಮನೆಯೊಳಗೆ ಇಟ್ಟರೆ ಸಾಲದು ಪ್ರತಿದಿನ ಕನಿಷ್ಠಪಕ್ಷ ಒಂದು ಶ್ಲೋಕವನ್ನಾದರೂ ಓದಬೇಕು ಹಾಗೆ ಪ್ರತಿ ದಿವಸ ಭಗವದ್ಗೀತೆಯ ಪುಸ್ತಕದ ಮೇಲೆ ಒಂದು ತೊಟ್ಟು ಗಂಧ.
ಹಾಗೆ ಒಂದು ತುಳಸಿ ಎಲೆಯನ್ನು ಇಟ್ಟು ಕೃಷ್ಣನಿಗೆ ನಮಸ್ಕರಿಸಬೇಕು, ಇನ್ನು ಎರಡನೆಯ ವಸ್ತು ನವಿಲುಗಿರಿ ನವಿಲುಗಿರಿಯನ್ನು ದೇವರ ಕೋಣೆಯಲ್ಲಿ ಇಟ್ಟರೆ ನಮ್ಮ ಮನೆಯಲ್ಲಿರುವಂತಹ ನರ ದೃಷ್ಟಿ ಅಶಾಂತಿ ಹೊರಟು ಹೋಗುತ್ತದೆ ಕೃಷ್ಣ ಪರಮಾತ್ಮರಿಗೆ ವೆಂಕಟೇಶ್ವರ ರಿಗೆ ಸುಬ್ರಮಣ್ಯ ಸ್ವಾಮಿಗೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ವಸ್ತು ನವಿಲು ಗರಿ.
ಹಾಗಾಗಿ ತಪ್ಪದೆ ಕನಿಷ್ಠಪಕ್ಷ ಮೂರು ನವಿಲುಗರಿಗಳನಾದರು ದೇವರ ಮನೆಯಲ್ಲಿ ಇಟ್ಟುಕೊಂಡರೆ ದೇವರು ನಮಗೆ ಬೇಗನೆ ಒಲೆಯುತ್ತಾರೆ. ಮೂರನೇ ವಸ್ತು ಗೋಮಾತೆಯ ವಿಗ್ರಹ ಒಂದು ಚಿಕ್ಕ ಹಸು ಹಾಗೂ ಕರು ಇರುವಂತಹ ವಿಗ್ರಹವನ್ನು ತಪ್ಪದೆ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಿ ಹಸು ಸಕಲ ದೇವತೆಗಳ ಸ್ವರೂಪ ಹಸುವಿನಲ್ಲಿ ಮಹಾಲಕ್ಷ್ಮಿ ಪ್ರತಿದಿನವಾಸವಿರುತ್ತಾಳೆ.
ಗೋಮಾತೆಯನ್ನು ಪೂಜಿಸುವುದರಿಂದ ಸಕಲ ಶುಭಗಳು ನಡೆಯುತ್ತವೆ ತಪ್ಪದೆ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಗೋಮತೆಯ ವಿಗ್ರಹವನ್ನು ಶುಕ್ರವಾರ ಹಾಲಿನಿಂದ ಅಭಿಷೇಕ ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹ ಪರಿಪೂರ್ಣವಾಗಿ ಲಭಿಸುತ್ತದೆ, ನಾಲ್ಕನೆಯ ವಸ್ತು ಛತ್ರಿ,ಛತ್ರಿ ಅಥವಾ ಕೊಡೆ ಎಂದರೆ ದೇವತೆಗಳಿಗೆ ತುಂಬಾ ಇಷ್ಟ ಚಿಕ್ಕ ಛತ್ರಿ ಯನ್ನು ದೇವರ ಮನೆಯಲ್ಲಿ ಇರಿಸಿದರೆ ಲಕ್ಷ್ಮಿ.
ದೇವಿಯಲ್ಲಿ ಸ್ಥಿರ ನಿವಾಸ ಹೂಡುತ್ತಾಳೆ ಅದರ ನಂತರ ಐದನೆಯ ವಸ್ತು ಚಾಮರ ಪ್ರತಿದಿನ ದೇವಸ್ಥಾನಗಳಲ್ಲಿ ಇದನ್ನು ಬಳಸುತ್ತಾರೆ ರಾಜೋಪಾಚಾರ ಮಾಡಲು ಛತ್ರಿ ಚಾಮರ ಇರಲೇಬೇಕು ಹಾಗಾಗಿ ಪ್ರತಿದಿನ ನಾವು ದೇವರಿಗೆ ಚಾಮರದಿಂದ ಉಪಚಾರ ಮಾಡುತ್ತಾ ಒಂದು ಕೀರ್ತನೆಯನ್ನು ಹಾಡಿ ಅಥವಾ ಮಂತ್ರವನ್ನು ಹೇಳಿ ಈ ರೀತಿ ಮಾಡಿದರೆ ದೇವರಿಗೆ ತುಂಬಾ ಇಷ್ಟವಾಗುತ್ತದೆ.
ಬೇಗನೆ ನಿಮಗೆ ಬೇಕಾದಂತಹ ಎಲ್ಲಾ ವರಗಳನ್ನು ಕೊಡುತ್ತಾರೆ. ಆರನೇ ವಸ್ತು ದಕ್ಷಿಣ ಆವರ್ತ ಶಂಖ ಅಂದರೆ ನಾವು ಪೂರ್ವ ದಿಕ್ಕಿನಲ್ಲಿ ಮುಖ ಮಾಡಿ ನಿಂತುಕೊಂಡು ಶಂಖವನ್ನು ಕೈಯಲ್ಲಿ ಹಿಡಿದುಕೊಂಡಾಗ ಶಂಕುವಿನ ಮುಖ ದಕ್ಷಿಣದ ಕಡೆ ಇರುತ್ತದೆ ಅಂತಹ ದಕ್ಷಿಣಾವೃತ ಶಂಕುವಿನಲ್ಲಿ ಸ್ವಲ್ಪ ನೀರನ್ನು ತುಂಬಿಕೊಂಡು ದೇವತೆಗಳ ವಿಗ್ರಹ ಅಥವಾ ಸಾಲಿಗ್ರಾಮವನ್ನ.
ಅಭಿಷೇಕ ಮಾಡಿ ನಾವು ಉದಲು ಬಳಸುವಂತಹ ಶಂಕು ಬೇರೆ ಅಭಿಷೇಕಕ್ಕೆ ಬಳಸುವಂತಹ ಶಂಕು ಬೇರೆ ಇರಬೇಕು ನಾವು ಬಾಯಲ್ಲಿಟ್ಟು ಉದಿ ಎಂಜಲು ಮಾಡಿರುವಂತಹ ಶಂಖುವನ್ನು ದೇವರಿಗೆ ಅಭಿಷೇಕ ಮಾಡಲು ಬಳಸಬಾರದು ಶಂಕುವನ್ನು ಎಂದಿಗೂ ನೆಲದ ಮೇಲೆ ಇಡಬಾರದು ಶಂಕು ಸಾಮಾನ್ಯವಾಗಿ ನಮಗೆ ಸಮುದ್ರದಲ್ಲಿ ಸಿಗುತ್ತದೆ ಸಮುದ್ರ ಲಕ್ಷ್ಮಿದೇವಿಯ ತವರು.
ಮನೆ ಶ್ರೀಮನ್ ನಾರಾಯಣನಿಗೆ ಅತ್ತೆಯ ಮನೆ ಸಮುದ್ರದಲ್ಲಿ ಹುಟ್ಟಿದಂತಹ ಈ ಶಂಕುಗಳೆಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಹಾಗಾಗಿ ತಪ್ಪದೆ ಒಂದು ಶಂಖವನ್ನಾದರೂ ದೇವರ ಮನೆಯಲ್ಲಿ ಇರಿಸಿರಲೇಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ