ಈ ಐದು ವಸ್ತುಗಳನ್ನ ಯಾರಿಗೂ ಕೊಡಬೇಡಿ ಕಷ್ಟಗಳು ಬೆನ್ನಟ್ಟುತ್ತವೆ. ಕೊಟ್ಟರೆ ಲಕ್ಷ್ಮಿಯು ಮನೆಯಲ್ಲಿ ನಿಲ್ಲೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಚ್ಚರಿಕೆಯಿಂದ ಯೋಚಿಸಿದ ನಂತರ ದಾನ ಮಾಡಬೇಕು. ಕೆಲ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯು ವಿಶೇಷವಾದ ಫಲವನ್ನು ಪಡೆಯುತ್ತಾನೆ. ಕೆಲವು ವಸ್ತುಗಳ ದಾನವು ನಮಗೆ ಪುಣ್ಯದ ಬದಲಾಗಿ ಪಾಪವನ್ನು ತರುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ದಾನ ಮಾಡಬಾರದು ಎಂಬುದನ್ನು ತಿಳಿಯೋಣ. ಜ್ಯೋತಿಷ್ಯದಲ್ಲಿ ಕಬ್ಬಿಣವನ್ನು ದಾನ ಮಾಡುವುದರ ಮೂಲಕ ವ್ಯಕ್ತಿ ಆರ್ಥಿಕ ಮುಗ್ಗಟ್ಟನ್ನ ಎದುರಿಸಬೇಕಾಗುತ್ತದೆ. ಕಬ್ಬಿಣ ಮತ್ತು ದಾನ ಮಾಡುವುದರ ಮೂಲಕ ವ್ಯಕ್ತಿಯು ದೈಹಿಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಕಬ್ಬಿಣದ ಸಂಬಂಧವನ್ನು ಶನಿದೇವನೊಂದಿಗೆ ಹೋಲಿಸಲಾಗುತ್ತದೆ. ಶನಿದೇವರು ಕಬ್ಬಿಣದಲ್ಲಿ ನೆಲೆಸಿದ್ದಾನೆ ಹಾಗಾಗಿ ಕಬ್ಬಿಣದ ವಸ್ತುವನ್ನು ಯಾರಿಗಾದರೂ ದಾನ ಮಾಡಿದರೆ ಶನಿದೇವನಿಗೆ ಕೋಪ ಬರುತ್ತೆ ಅಂತ ಹೇಳಲಾಗುತ್ತದೆ.
ವೈದಿಕ ಶಾಸ್ತ್ರದ ಪ್ರಕಾರ ಕಪ್ಪುಎಳ್ಳು ರಾಹು ಮತ್ತು ಕೇತುವಿಗೆ ಸಂಬಂಧಿಸಿದೆ. ಶನಿ ದೇವನೊಂದಿಗೆ ಕಪ್ಪು ಎಳ್ಳಿನ ಸಂಬಂಧವನ್ನು ಹೇಳಲಾಗುತ್ತದೆ. ಎಳ್ಳಿನ ದಾನದ ವಿಶೇಷ ಮಹತ್ವವನ್ನ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಆದರೆ ಕಪ್ಪು ಎಳ್ಳನ್ನು ದಾನ ಮಾಡೋದನ್ನ ನಿಷೇಧಿಸಲಾಗಿದೆ. ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ವ್ಯಕ್ತಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ. ಜೊತೆಗೆ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಕೂಡ ಎದುರಿಸಬೇಕಾಗುತ್ತದೆ.
ಉಪ್ಪನ್ನು ದಾನ ಮಾಡುವುದರಿಂದ ವ್ಯಕ್ತಿಯು ಋಣಿ ಆಗುತ್ತಾನೆ. ಯಾವುದೇ ನಿರ್ಗತಿಕರಿಗೆ ಉಪ್ಪನ್ನು ದಾನ ಮಾಡಬೇಡಿ ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಉಪ್ಪನ್ನ ದಾನ ಮಾಡುವುದರಿಂದ ಏಳುವರೆ ವರ್ಷದ ಶನಿಯ ನೇದುರಿಸಬೇಕಾಗುತ್ತದೆ ಅಲ್ಲದೆ ವ್ಯಕ್ತಿ ಕ್ರಮೇಣ ಸಾಲದಲ್ಲಿ ಮುಳುಗುತ್ತಾನೆ. ಕೆಲವು ವಸ್ತುಗಳನ್ನ ದಾನ ಮಾಡುವುದರಿಂದ ವ್ಯಕ್ತಿಯು ವಿಶೇಷ ಫಲಗಳನ್ನು ಪಡೆಯುತ್ತಾನೆ ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ರೀತಿ ಕೆಲವು ವಸ್ತುಗಳ ದಾನವು ವ್ಯಕ್ತಿಯನ್ನ ತೊಂದರೆಗಳಿಗೆ ಕರೆದುಕೊಂಡು ಹೋಗುತ್ತದೆ.
ಬೆಂಕಿ ಕಡ್ಡಿಗಳನ್ನು ದಾನ ಮಾಡಿದ್ರೆ ಸಂಸಾರದ ನೆಮ್ಮದಿ ಕೆಡುತ್ತದೆ ಅನ್ನೋ ಮಾತು ಜ್ಯೋತಿಷ್ಯದಲ್ಲಿದೆ. ಯಾವುದೇ ಕಾರಣಕ್ಕೂ ಇಲ್ಲದೆ ಕುಟುಂಬದಲ್ಲಿ ಜಗಳಗಳು ನಡೆಯುತ್ತವೆ. ದಾನವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಆದರೆ ದಾನ ಮಾಡುವಾಗ ಕೆಲವ ನಿಯಮಗಳನ್ನು ಪಾಲಿಸಬೇಕು. ಹಾಗೆ ಕೆಲವು ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ. ಹಾಗಾದ್ರೆ ದಾನ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು?? ಅನ್ನೋದು ಗೊತ್ತಿದ್ಯಾ? ದಾನಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳಿದ್ದು ದಾನ ಮಾಡು ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳಲು ಬಹಳ ಮುಖ್ಯ.
ಧರ್ಮ ಗ್ರಂಥಗಳ ಪ್ರಕಾರ ಕೆಲವು ವಸ್ತುಗಳನ್ನ ದಾನ ಮಾಡಬಾರದು. ಈ ವಸ್ತುಗಳನ್ನು ದಾನ ಮಾಡುವುದರಿಂದ ನಿಮಗೆ ದರಿದ್ರ ಅಂಟುಕೊಳ್ಳುತ್ತದೆ ದಾನ ಮಾಡುವಾಗ ನೀವು ಅಗತ್ಯವಿರುವವರಿಗೆ ಮಾತ್ರ ದಾನ ಮಾಡುವುದು ಅತ್ಯಂತ ಮುಖ್ಯ. ಪ್ರಮುಖ ಮಹತ್ವ ಸಿಗುತ್ತೆ. ಕಷ್ಟಪಟ್ಟು ಸಂಪಾದಿಸಿದ ಹತ್ತನೇ ಒಂದು ಭಾಗವನ್ನು ನೀವು ದಾನ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಪುಣ್ಯ ಬರುತ್ತೆ. ದಾನ ಯಾವಾಗಲೂ ನಿಸ್ವಾರ್ಥವಾಗಿರಬೇಕು. ದುರಾಸೆ ಮತ್ತು ಬೇಸರದಿಂದ ಮಾಡಿದ ದಾನದಿಂದ ಯಾವುದೇ ಪ್ರಯೋಜನವಿಲ್ಲ. ದಾನವನ್ನು ಯಾವಾಗಲೂ ಗೌರವ ಮತ್ತು ವಿಶ್ವಾಸದಿಂದ ಮಾಡಬೇಕು ವಸ್ತುಗಳನ್ನು ಕೈಯಿಂದ ದಾನ ಮಾಡಿ ಎಂದಿಗೂ ಕೂಡ ಎಸೆಯಬೇಡಿ. ಈ ರೀತಿ ಮಾಡೋದು ಅಶುಭ ಎಂದು ಹೇಳಲಾಗುತ್ತದೆ. ಏನನ್ನಾದರೂ ದಾನ ಮಾಡುವುದಾದರೆ ನೀವು ಧರ್ಮದ ನಿಯಮಗಳನ್ನು ಪಾಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.