ಈ ರೀತಿ ಮಾಡಿದರೆ ಸೊಳ್ಳೆ ಯಾವತ್ತು ಮನೆ ಒಳಗೆ ಬರೋದಿಲ್ಲ..ಇದು ಒಂದು ಸಾರಿ ಮಾಡಿದರೆ ತಿಂಗಳುಗಟ್ಟಲೆ ಉಪಯೋಗಿಸಬಹುದು

ಸೊಳ್ಳೆಯ ಕಾಟವೇ? ಹಾಗಾದರೆ ಮನೆಯಲ್ಲಿರುವ ಈ ವಸ್ತುಗಳಿಂದ ಹೀಗೆ ಮಾಡಿ ನೋಡಿ. ನಮ್ಮ ಮನೆಯಲ್ಲಿರುವ ವಸ್ತುಗಳಿಂದ ಸಿಂಪಲ್ಲಾಗಿ ಮಾಡಬಹುದಾದಂತ ನ್ಯಾಚುರಲ್ ಆದ ಸೊಳ್ಳೆ ಬತ್ತಿಯನ್ನ ಹೇಗೆ ಮಾಡೋದು ಅಂತ ತೋರಿಸ್ತೀನಿ.ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

WhatsApp Group Join Now
Telegram Group Join Now

ನೋಡಿ ನಾನು ಈ ತರ ಲವಂಗವನ್ನು ತಗೊಂಡಿದೀನಿ. ನೋಡಿ ನಾನು ಈ ಲವಂಗವನ್ನು ಒಂದು ಐದು ಆರು ತಗೊಂಡಿದೀನಿ. ನಿಮಗೆ ಎಷ್ಟು ಬೇಕೋ ಅಷ್ಟನ್ನ ನೀವು ತೆಗೆದುಕೊಳ್ಳಿ. ನಾನು ಇಲ್ಲಿ ತೋರಿಸುವುದಕ್ಕೆ ಅಂತ ಸ್ವಲ್ಪನೆ ತಗೊಂಡಿದೀನಿ. ನೋಡಿ ಲವಂಗವನ್ನು ನಾವು ಒಂದು ಕಲ್ಲಿಗ್ ಹಾಕಿ ಚೆನ್ನಾಗಿ ಗುದ್ದಬೇಕು. ಸ್ವಲ್ಪ ಕ್ರಶ್ ಆಗ್ಬೇಕು ನೋಡಿ ಜಾಸ್ತಿ ಪೌಡರ್ ತರ ಆಗೋದು ಬೇಡ.

ಬೇಕಂದ್ರೆ ನೀವು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಕ್ರಷ್ಯನ್ನ ಮಾಡ್ಕೊಂಬೋದು. ನಾನು ಇದನ್ನ ಕಲ್ಲಿನಲ್ಲೇ ಹಾಕಿ ಕುಟ್ಟಿದೀನಿ. ನೋಡಿ ನಾನು ಈ ತರ ಲವಂಗವನ್ನು ಹಾಕಿ ಜಜ್ಜಿದಿನಿ. ಒಂದು ಬೌಲ್ ತಗೋಬೇಕು ಅಥವಾ ಒಂದು ಬಾಟಲ್ ಜಾರ ಆದರೂ ಆಗುತ್ತೆ. ಅದಕ್ಕೆ ನಾವು ಜಜ್ಜಿ ಇಟ್ಟಿರುವ ಲವಂಗವನ್ನು ಹಾಕಬೇಕು. ಆಮೇಲೆ ಇದಕ್ಕೆ ಸ್ವಲ್ಪ ಎಳ್ಳೆಣ್ಣೆಯನ್ನ ಹಾಕಬೇಕು ಎರಡು ಚಮಚ ಎಳ್ಳೆಣ್ಣೆಯನ್ನು ಹಾಕಬೇಕು. ಇದಕ್ಕೆ ಎಳ್ಳೆಣ್ಣೆಯನ್ನೇ ಹಾಕಬೇಕು ಎಳ್ಳೆಣ್ಣೆಯೇ ಮತ್ತು ಲವಂಗದ ಇವೆರಡು ಒಳ್ಳೆ ಕಾಂಬಿನೇಷನ್ ಸೊಳ್ಳೆಗೆ. ಚೆನ್ನಾಗಿ ಇದನ್ನ ಮಿಕ್ಸ್ ಮಾಡಬೇಕು.

ಇದನ್ನು ನಾವು ಒಂದು ಗಂಟೆಗಳ ಕಾಲ ಇದನ್ನ ಸೈಡಲ್ಲಿ ಇಟ್ಕೋಬೇಕು. ಈಗ ನಾವು ಸಾಮಾನ್ಯವಾಗಿ ಸೊಳ್ಳೆ ಬತ್ತಿಯನ್ನ ಹೊತ್ತಿಸೋದು ಸಂಜೆ ಹೊತ್ತಿಗೆ. ನಿಮಗೆ ಸಂಜೆ ಹೊತ್ತಿಗೆ ಇದು ಬೇಕಾದರೆ ನಾವು ಬೆಳಿಗ್ಗೆ ಅಥವಾ ಮಧ್ಯಾಹ್ನ ಇದನ್ನು ಮಾಡಿ ಇಟ್ಟುಕೊಳ್ಳಬೇಕು.

ಈಗ ನಾವು ಸೊಳ್ಳೆ ಬತ್ತಿಯನ್ನು ಹೇಗೆ ಮಾಡೋದು ಅಂತ ತಿಳಿದುಕೊಳ್ಳೋಣ. ಈ ದೀಪವನ್ನು ನೀರುಳ್ಳಿಯಲ್ಲಿ ಮಾಡಬೇಕು. ನೀರುಳ್ಳಿಯ ಮೇಲ್ಗಡೆ ಸಾಫ್ಟ್ ಆಗಿರೋ ಸಿಪ್ಪೆಯನ್ನು ನಾವು ಮೊದಲು ತೆಗೆದುಕೊಳ್ಳೋಣ. ಈ ನೀರುಳ್ಳಿ ಮೇಲಿರುವ ಸಾಫ್ಟ್ ಸಿಪ್ಪೇನಾ ಮೊದಲು ತೆಗಿಬೇಕು. ಸಾಫ್ಟ್ ಆಗಿರೋ ಸಿಪ್ಪೆ ಇರಬಾರದು. ಸ್ವಲ್ಪ ಹಾರ್ಡ್ ಆಗಿದ್ದರೂ ಪರವಾಗಿಲ್ಲ.ಆದರೆ ಈ ತರ ಸಾಫ್ಟ್ ಆಗಿರೋ ಸಿಪ್ಪೆ ಇರಬಾರದು.

ಈ ಸೊಳ್ಳೆ ಬತ್ತಿ ತುಂಬ ಒಳ್ಳೆಯದು ಯಾವುದೇ ತರ ಅಪಾಯವಿಲ್ಲ ದೇಹಕ್ಕೆ. ಹೆಲ್ತ್ ಪ್ರಾಬ್ಲೆಮ್ಸ್ ಯಾವುದು ಬರೋದಿಲ್ಲ. ಎಲ್ಲರೂ ಒಂದು ಬಾರಿ ಟ್ರೈ ಮಾಡಿ ನೋಡಿ ಇದನ್ನು. ಇತರ ಮಾಡಿ ಒಂದು ಲೋಟದಲ್ಲಿ ಇದನ್ನ ಇಟ್ಕೊಳ್ಬೇಕು. ಈರುಳ್ಳಿಯ ಒಳಗಿನ ಭಾಗವನ್ನು ತೆಗೆದುಕೊಳ್ಳಬೇಕು. ಸ್ವಲ್ಪ ಒಂದು ಸಣ್ಣ ಹೋಲ್ ತರ ಮಾಡಿಕೊಳ್ಳಬೇಕು. ಆಮೇಲೆ ಅದರ ಒಳಗಡೆ ಒಂದು ಸ್ವಲ್ಪ ಎಣ್ಣೆಯನ್ನು ಹಾಕಬೇಕು.

ನೋಡಿ ದೊಡ್ಡ ಈರುಳ್ಳಿ ಆದರೆ ಇದನ್ನ ಲೋಟದಲ್ಲಿ ಇಟ್ಟುಕೊಳ್ಳಬಹುದು. ಇಲ್ಲಿ ನಾನು ತಗೊಂಡಿದ್ದು ಸ್ವಲ್ಪ ಸಣ್ಣ ಈರುಳ್ಳಿ. ಅದಕ್ಕೆ ನಾನು ಈ ದೀಪವನ್ನು ತಗೊಂಡಿದೀನಿ. ಅದರ ಮೇಲೆ ಈ ಈರುಳ್ಳಿಯನ್ನು ಈ ತರ ಇಟ್ಕೊಳ್ಬೇಕು. ಏಕೆಂದರೆ ಎಣ್ಣೆ ಸ್ವಲ್ಪ ಕೆಳಗಡೆ ಬೀಳುತ್ತದೆ ಅದಕ್ಕಾಗಿ ಈರುಳ್ಳಿಯನ್ನು ಈ ತರ ಇಟ್ಟುಕೊಳ್ಳಬೇಕು. ಈಗ ಈ ಈರುಳ್ಳಿಯನ್ನ ಈ ತರ ದೀಪದ ಮೇಲೆ ಇಟ್ಟುಕೊಂಡು ಅದರಲ್ಲಿ ಎಣ್ಣೆಯನ್ನು ಹಾಕಬೇಕು ನಾವು ಎಳ್ಳೆಣ್ಣೆ ಮಾಡಿಟ್ಕೊಂಡಿದೀವಲ್ಲ ಅದರಲ್ಲಿ ಲವಂಗವನ್ನು ಜಜ್ಜಿ ಹಾಕಿ ಎಳ್ಳೆಣ್ಣೆಯಲ್ಲಿ ಇಟ್ಟುಕೊಂಡಿದ್ದೇನೆ. ಕನಿಷ್ಠ ಒಂದು ಗಂಟೆಯಾದರೂ ಈ ರೀತಿ ಇಟ್ಟುಕೊಳ್ಳಬೇಕು.

[irp]