ಪೂರಿ ಜಗನ್ನಾಥ ಆಲಯದಲ್ಲಿ ಶ್ರೀ ಕೃಷ್ಣನ ಹೃದಯ ಈಗಲೂ ಇದೆ… ಪೂರಿ ಜಗನ್ನಾಥ ದೇವಾಲಯ, ಈ ದೇವಸ್ಥಾನದ ಹಿಂದೆ ತುಂಬ ರಹಸ್ಯಗಳೇ ಇದೆ ಅವುಗಳಲ್ಲಿ ಅತ್ಯಂತ ಮುಖ್ಯವಾದದ್ದು ತುಂಬಾ ಜನ ನಂಬುವಂತದ್ದು ಏನು ಎಂದರೆ ಬಾಪರಯುಗದ ಶ್ರೀ ಕೃಷ್ಣನ ಹೃದಯ ಈ ದೇವಸ್ಥಾನದಲ್ಲಿ ಇದೆ ಎಂದು ಅದು ಇನ್ನು ಜೀವಂತವಾಗಿದೆ ಎಂದು ಅದು ಇನ್ನೂ ಬಡಿದುಕೊಳ್ಳುತ್ತದೆ.
ಎಂದು ಈ ಕಾರಣದಿಂದಾಗಿ ಜಗನ್ನಾಥ ಸ್ವಾಮಿ ದರ್ಶನವನ್ನು ಮಾಡಲು ಪ್ರತಿ ವರ್ಷ ಲಕ್ಷಾಂತರ ಜನ ಬರುತ್ತಾರೆ ಆದರೆ ಕೇವಲ ರಥಯಾತ್ರೆಗೆ ಮಾತ್ರವೇ ಲಕ್ಷಾಂತರ ಜನ ಸೇರುತ್ತಾರೆ ಅದೇ ರೀತಿ ಇದುವರೆಗೂ ಪ್ರತಿ ರಥಯಾತ್ರೆ ಸಮಯದಲ್ಲಿ ಅಲ್ಲಿ ಮಳೆ ಬರುತ್ತದೆ ಈ ಮಳೆ ಬರುವುದು ಮಾತ್ರ ಸತ್ಯ ಇನ್ನು ದೇವಸ್ಥಾನದ ಮೇಲೆ ವಿದೇಶಿಯರು ಸೇರಿ 18 ಬಾರಿ ದಂಡಯಾತ್ರೆಯನ್ನ.
ಮಾಡಿದ್ದಾರೆ ಆದರೆ ನಮ್ಮ ಪೂರ್ವಿಕರು ಪ್ರಾಣ ತ್ಯಾಗ ಮಾಡಿ ಆ ಗುಡಿಯಲ್ಲಿರುವ ವಿಗ್ರಹಗಳನ್ನು ಕಾಪಾಡುತ್ತಾರೆ ಅಷ್ಟಕ್ಕೂ ಈ ಗುಡಿಯಲ್ಲಿ ನಿಜವಾಗಿಯೂ ಶ್ರೀ ಕೃಷ್ಣನ ಹೃದಯ ಇದೆಯಾ ಇದ್ದರೆ ಅದು ಎಲ್ಲಿಂದ ಬಂತು ಅನ್ನುವುದರ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ. ಮೊದಲು ಈ ದೇವಾಲಯ ಹೇಗೆ ನಿರ್ಮಾಣವಾಯಿತು ಎಂದು ನೋಡೋಣ ಇದರ ಬಗ್ಗೆ.
ತುಂಬಾನೇ ಕಥೆಗಳು ಇದೆ ಅದರಲ್ಲಿ ಎಲ್ಲರೂ ನಂಬುವಂತಹ ಕಥೆಯ ಬಗ್ಗೆ ನೋಡೋಣ ಕುರುಕ್ಷೇತ್ರ ಯುದ್ಧ ಮುಗಿದ ನಂತರ ಸತ್ತು ಬಿದ್ದಿದ್ದ ತನ್ನ ಕಡೆಯವರನ್ನು ನೋಡಿದಂತಹ ಗಾಂಧಾರಿ ಆ ನೋವನ್ನು ತಾಳಲಾರದೆ ತನ್ನವರು ಹೇಗೆ ನಾಶವಾದರೂ ಅದೇ ರೀತಿ ಯದು ವಂಶದವರು ನಾಶವಾಗಲಿ ಎಂದು ಶಾಪ ಕೊಡುತ್ತಾಳೆ ಈ ರೀತಿ 36 ವರ್ಷಗಳ ನಂತರ ಯದು ವಂಶದಲ್ಲಿ.
ಇರುವವರೆಲ್ಲ ಒಬ್ಬೊಬ್ಬರು ಒಬ್ಬೊಬ್ಬರನ್ನ ಸಾಯಿಸಿ ನಾಶವಾಗುತ್ತಾರೆ ಕೇವಲ ಶ್ರೀ ಕೃಷ್ಣನ ರಥ ಸಾರಥಿಗಳು ಮತ್ತು ಬಲರಾಮ ಮಾತ್ರ ಬದುಕಿರುತ್ತಾರೆ ಆಗ ಶ್ರೀ ಕೃಷ್ಣನ ಹತ್ತಿರ ರಥಸಾರಥಿಗಳು ಬಂದು ನಡೆದ ವಿಷಯವನ್ನೆಲ್ಲ ಹೇಳುತ್ತಾರೆ ಆಗ ಕೃಷ್ಣ ಅವರಿಗೆ ಹಸ್ತಿನಾಪುರಕ್ಕೆ ಹೋಗಿ ಅರ್ಜುನನಿಗೆ ಈ ವಿಷಯ ತಿಳಿಸಿ ಎಂದು ಹೇಳುತ್ತಾರೆ ಇದರ ನಂತರ ಶ್ರೀ ಕೃಷ್ಣ.
ಬಲರಾಮರಿಗಾಗಿ ಹುಡುಕುತ್ತಾ ಇರುವಾಗ ಬಲರಾಮ ಸಮುದ್ರತೀರದಲ್ಲಿ ಧ್ಯಾನ ಮಾಡುತ್ತಾ ಕಾಣಿಸುತ್ತಾರೆ ಆಗ ಶ್ರೀ ಕೃಷ್ಣ ಬಲರಾಮ ನಾನು ನಿನ್ನ ಜೊತೆ ಧ್ಯಾನ ಮಾಡುತ್ತೇನೆ ಎಂದು ಕೇಳುತ್ತಾರೆ ಆದರೆ ಬಲರಾಮರಿಂದ ಯಾವುದೇ ಉತ್ತರ ಬರಲಿಲ್ಲ ರಾಧಾಕೃಷ್ಣನಿಗೆ ಬಲರಾಮನ ದೇಹದಿಂದ ಏಳು ತಲೆಯ ನಾಗರಹಾವಿನ ಆತ್ಮವು ದೇಹದಿಂದ ಹೊರಗೆ ಹೋಗುವುದು.
ಕಾಣಿಸುತ್ತದೆ ಆಗ ಕೃಷ್ಣನಿಗೆ ಅರ್ಥವಾಗುತ್ತದೆ ನಾನು ಮಾನವ ದೇಹವನ್ನು ತ್ಯಜಿಸುವ ಸಮಯ ಬಂದಿದೆ ಎಂದು ತಕ್ಷಣ ಶ್ರೀ ಕೃಷ್ಣ ಒಂದು ಮರದ ಕೆಳಗೆ ಕೂತು ವಿಶ್ರಾಂತಿ ಪಡೆಯುತ್ತಾ ಇರುತ್ತಾರೆ ಆಗ ಅಲ್ಲಿಗೆ ಜರ ಎನ್ನುವ ಬೇಟೆಗಾರ ಬರುತ್ತಾರೆ ಶ್ರೀ ಕೃಷ್ಣನ ಕಾಲನ್ನು ನೋಡಿ ಜಿಂಕೆ ಎಂದು ಭಾವಿಸಿ ಬಾಣ ಬಿಡುತ್ತಾನೆ ಅದು.
ಕೃಷ್ಣನ ಕಾಲಿಗೆ ತಗಲುತ್ತದೆ ನಂತರ ಅಲ್ಲಿಗೆ ಬಂದ ಜರ ಶ್ರೀ ಕೃಷ್ಣನನ್ನು ನೋಡಿ ಭಯಪಡುತ್ತಾರೆ ನಂತರ ಅವರು ಮಾಡಿದ ತಪ್ಪಿಗೆ ಪರಿಹಾರವೇ ಇಲ್ಲ ಎಂದು ಭಾವಿಸಿ ನನ್ನನ್ನು ಕ್ಷಮಿಸಿ ನನ್ನನ್ನು ಸಾಯಿಸಿ ಎಂದು ಪ್ರಾರ್ಥನೆ ಮಾಡುತ್ತಾರೆ ಆಗ ಶ್ರೀ ಕೃಷ್ಣ ಇದರಲ್ಲಿ ನಿನ್ನ ತಪ್ಪು ಏನು ಇಲ್ಲ ಎಂದು ಹೇಳಿ ಅವರನ್ನು ಕ್ಷಮಿಸಿ.
ಅಲ್ಲಿಂದ ಕಳಿಸಿಬಿಡುತ್ತಾರೆ ನಂತರ ತನ್ನ ಮಾನವ ದೇಹವನ್ನು ತ್ಯಜಿಸಿ ವೈಕುಂಠಕ್ಕೆ ಹೋಗುತ್ತಾರೆ ಸ್ವಲ್ಪ ಸಮಯದ ನಂತರ ಅರ್ಜುನ್ ಅಲ್ಲಿಗೆ ಬರುತ್ತಾನೆ ಅರ್ಜುನ ಶ್ರೀ ಕೃಷ್ಣನ ದೇಹವನ್ನು ನೋಡಿ ತುಂಬಾ ಸಂಕಟಪಡುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.