ಮಧ್ಯರಾತ್ರಿಯ ಸಮಯದಲ್ಲಿ ಸ್ಮಶಾನದಲ್ಲಿ ಈ ಬುಡುಬುಡುಕೆಯವರು ಏನ್ಮಾಡ್ತಾರೆ ಗೊತ್ತಾ? ಏನಿದು ಹಾಲಕ್ಕಿ ಶಕುನ

ಹಾಲಕ್ಕಿ ಶಕುನ ನುಡಿಯುವ ಈ ಬುಡುಬುಡಿಕೆಯವರ ಇತಿಹಾಸ ಗೊತ್ತಾ?? ಯಾರು ಅಂತ ತಿಳಿಯೋಣ…. ನಾವು ಸಣ್ಣವರಿರುವಾಗ ಎಲ್ಲ ಮನೆ ಮನೆಗಳಿಗೆಲ್ಲ ಓಡಾಡುತ್ತಿದ್ದ ಬುಡುಬುಡಿಕೆ ಅವರು, ಅವರನ್ನ ನರಸಣ್ಣ ಅಂತ ಕರೆಯಲಾಗುತ್ತಿತ್ತು. ಹಾಗಾದರೆ ಬನ್ನಿ ಸ್ನೇಹಿತರೆ ಬುಡಬುಡಕೆಯವರ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ… ಬುಡಬುಡಿಕೆಯವರನ್ನ ಈ ಬೀದಿ ನೆಂಟ ಅಂತ ಕರೆಯುತ್ತಾರೆ. ಶಕುನ ಹೇಳುತ್ತಾ ಓಡಾಡುವ ಇವರಿಗೆ ದಕ್ಷಿಣ ಕನ್ನಡದಲ್ಲಿ ನರಸಣ್ಣ ಅಂತನು ಕರೆಯುತ್ತಾರೆ.

WhatsApp Group Join Now
Telegram Group Join Now

ದಿನ ದುಡಿಮೆಗೆ ಸಾಕಾಗದೆ ಹೇಳಿಕೊಂಡು ಜೀವನ ಮಾಡುವವರಲ್ಲಿ ಈ ಬುಡುಬುಡಿಕೆ ಅವರು ಒಂದು. ಸಾಕ್ಷಾತ್ ಶಿವನ ಅನುಗ್ರಹ ಎಂದು ಹೇಳಿಕೊಳ್ಳುವ ಬುಡುಬುಡಿಕೆ ಜನಾಂಗ ಇಂದು ನಶಿಸಿ ಹೋಗ್ತಾ ಇದೆ ಬುಡುಬುಡಿಕೆ ಇಲ್ಲದೆ ಮನೆ ಮನೆಗೆ ತಿರುಗಾದೆ ಈ ಜನಾಂಗವು ಶಕುನವನ್ನು ಹೇಳದೆ ಕಮ್ಮಿ ಆಗುತ್ತಿದೆ. ಹಲವಾರು ಜಾತಿ ಧರ್ಮ ನೀತಿಯನ್ನ ಒಳಗೊಂಡಂತ ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತೆ. ಸ್ನೇಹಿತರೆ ಈ ಬುಡಬುಡಿಕೆ ಜನಾಂಗ ಅಲೆಮಾರಿ ಜೀವನವನ್ನು ಸಾಗಿಸುವವರು. ಆದರೆ ಇತ್ತೀಚೆಗಷ್ಟೇ ಒಂದೇ ಕಡೆಯಲ್ಲಿ ನೆಲೆಯೂರಿ ಬದುಕುವಂತ ಜೀವನ ಶೈಲಿಯನ್ನು ಇವರು ಬೆಳೆಸಿಕೊಂಡಿದ್ದಾರೆ.

ಮುಂದೆ ನಡೆಯುವ ಭವಿಷ್ಯವಾಣಿಯನ್ನು ಹೇಳುತ್ತಾ ಗಂಟೇನು ಬಾರಿಸುತ್ತಾ ಮನೆ ಮನೆಗೆ ಅಲೆಯುವ ಇವರು ಮುಂದಿನ ಭವಿಷ್ಯವಾಣಿಯನ್ನು ಹೇಳುತ್ತಾರೆ. ಇವರು ನುಡಿಸುವಂತ ಬುಡುಬುಡಿಕೆಯನ್ನ ಕಿರು ಡಮರುಗ ಎಂದರೆ ಕರೆಯುತ್ತಾರೆ. ಈ ಬುಡುಬುಡಿಕಿಯವರು ಒಂದು ಊರಿಗೆ ಭಿಕ್ಷೆ ಬೇಡಲು ಹೋಗುವುದಕ್ಕೆ ಮುಂಚೆ ನಸುಕಿನಲ್ಲಿ ಆ ಊರನ್ನ ಮೂರು ಬಾರಿ ತಿರುಗುತ್ತಾರೆ. ಇದರಿಂದ ಅವರಿಗೆ ಆ ಊರಿನಲ್ಲಿ ನಡೆಯುವ ಮುಂದಿನ ಅನಾಹುತದ ಬಗ್ಗೆ ತಿಳಿಯುತ್ತದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಹಲವಾರು ವರ್ಷಗಳ ಹಿಂದೆ ಈ ಬುಡುಬುಡಿಕೆಯವರು ಒಂದು ಊರಿಗೆ ಬಂದರೆಂದರೆ ಆ ಊರಿನವರೆಲ್ಲ ಕಂಗಾಲಾಗುತ್ತಿದ್ದರು. ಏಕೆಂದರೆ ಏನು ಅನಾಹುತ ಕಾದಿದೆಯೋ ಯಾವ ರೀತಿ ಸುದ್ದಿಯನ್ನು ಹೇಳುತ್ತಾರೋ ಎಂದು ಊರವರೆಲ್ಲ ಕಂಗಾಲಾಗುತ್ತಿದ್ದರು. ಮಳೆ ಬೆಳೆಯ ಬಗ್ಗೆ ಕಾಯಿಲೆ ಬಗ್ಗೆ ಅಥವಾ ಊರಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ಅವರು ಮುನ್ನೆಚ್ಚರಿಕೆಯನ್ನು ಕೊಡುತ್ತಾ ಇದ್ರು. ಒಂದು ಊರನ್ನ ಪ್ರವೇಶ ಮಾಡೋಕೆ ಮುಂಚೆ ಮೂರು ದಿನ ಊರಿನ ಸುತ್ತ ಸುತ್ತುತ್ತಾ ಊರಿನಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ ಆಮೇಲೆ ಊರೊಳಗೆ ಪ್ರವೇಶಿಸುತ್ತಾರೆ.

ಸರಸ್ವತಿ ದೇವಿಯ ಅನುಗ್ರಹದಿಂದ ಬುಡುಬುಡಿಕೆಯನ್ನು ಹೇಳುತ್ತೇನೆ ಅಂತ ಹೇಳುವ ಇವರಿಗೆ ಊರಿನ ಜನರು ಸಂತೋಷದಿಂದ ಇವರಟ್ಟಿಗೆ ಬೆರೆಯುತ್ತಾರೆ. ಈ ಬುಡುಬುಡಿಕ್ಕಿಯವರು ಶಿವ ಹಾಗೂ ಶಕ್ತಿ ದೇವತೆ ದುರ್ಗಿಯ ಆರಾಧಕರಾಗಿದ್ದು ತಮ್ಮ ಇಷ್ಟ ದೇವತೆಯ ಮಂದಿರಗಳಿಗೆದ್ದರೆ ಪೂಜೆಯನ್ನು ಸಲ್ಲಿಸುತ್ತಾರೆ. ದಸರಾ ದೀಪಾವಳಿ ಮತ್ತು ಯುಗಾದಿ ಇವರು ಆಚರಿಸುವಂತಹ ಪ್ರಮುಖ ಹಬ್ಬಗಳು.

ಇವರು ತಮ್ಮ ಆತ್ಮೀಯರೊಂದಿಗೆ ಮರಾಠಿ ಹಾಗೂ ಸ್ನೇಹಿತರ ಬಳಿ ತೆಲುಗು ಮತ್ತು ಕನ್ನಡದಲ್ಲಿ ಮಾತನಾಡುತ್ತಾರೆ. ಬುದ್ಧಿ ಬಂದಾಗಿನಿಂದ ಇದನ್ನೇ ಕರಗತ ಮಾಡಿಕೊಂಡು ಬರುತ್ತಿದ್ದೇವೆ. ಕೂಲಿ ನಾಲಿ ಹೋಗ್ತೀವಿ ಅಂತ ಅಂತಾರೆ. ಇವರು ಹಿರಿಯರು ಮಾಡಿದಂತಹ ಪದ್ಧತಿ ಮತ್ತು ಆಧುನಿಕ ಶೈಲಿಗೆ ಇವರನ್ನ ಅಳವಡಿಸಿಕೊಂಡು ಕಾಲ ಎಷ್ಟು ಬದಲಾಗಿದೆ ಅಂತ ನೆಟ್ಟುಸ್ರು ಬಿಡುತ್ತಾರೆ. ಕಾಲಕಾಲಕ್ಕೆ ಮಳೆಯಾಗುತ್ತಿದ್ದಂತಹ ಕಾಲ ಅದು ನಮ್ಮ ಬುಡುಬುಡಿಕೆ ಅವರ ಮನೆಯಲ್ಲಿ ಧನ ಧಾನ್ಯಗಳು ತುಂಬಿ ತುಳುಕುತ್ತಿದ್ದವು. ಪ್ರಮುಖರು ಕುರಿ ಮೇಕಿಗಳನ್ನು ದಾನವಾಗಿ ಕೊಡುತ್ತಿದ್ದರು.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಆಗ ಹಾಲು ಮತ್ತು ಮಜ್ಜಿಗೆಯನ್ನು ಯಾರು ಕೂಡ ಮಾರಾಟ ಮಾಡುತ್ತಿರಲಿಲ್ಲ. ಅಕ್ಕ ಪಕ್ಕದ ಮನೆಯವರಿಗೆ ಹಾಗೂ ಈ ಬುಡುಬುಡಿಕೆಯವರಿಗೆ ಹಾಲು ಮಜ್ಜಿಗೆ ಮೊಸರನ್ನ ಕೊಡ್ತಾ ಇದ್ರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ……

[irp]


crossorigin="anonymous">