ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತ ಯಾವ ಲಗ್ನದಲ್ಲಿ ಪೂಜಾ ಸಮಯ ಯಾವ ಬಣ್ಣದ ಸೀರೆ ಪೂರ್ಣ ವಿವರ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವರಮಹಾಲಕ್ಷ್ಮಿ ಹಬ್ಬದ ಶುಭಮುಹೂರ್ತ ಯಾವ ಲಗ್ನದಲ್ಲಿ ಪೂಜೆ ಸಮಯ ಯಾವ ಬಣ್ಣದ ಸೀರೆ ಪೂರ್ಣ ವಿವರವಾಗಿ ತಿಳಿಸಿಕೊಟ್ಟಿದ್ದೇನೆ ನೋಡಿ…ನನಗೆ ತುಂಬಾ ಜನ ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತ ಹೇಳಿ ಯಾವ ಬಣ್ಣದ ಸೀರೆ ಉಡಿಸಬೇಕು ಒಳ್ಳೆಯ ಲಗ್ನ ಯಾವುದು ಎಂದು ಕೇಳಿದ್ದೀರಾ ಹಾಗಾಗಿ ಇವತ್ತು ಪಂಚಾಂಗವನ್ನು ಅವಲೋಕನ ಮಾಡಿ ಯಾವ.

ಲಗ್ನದಲ್ಲಿ ಯಾವ ಸಮಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪೂಜೆಯನ್ನು ಮಾಡಿದಾಗ ಪೂರ್ಣ ಫಲ ಸಿಗುತ್ತದೆ ಎನ್ನುವುದನ್ನು ವಿವರವಾಗಿ ತಿಳಿಸಿಕೊಡುತ್ತೇನೆ ಈ ವರ್ಷ ವರಮಹಾಲಕ್ಷ್ಮಿ ಹಬ್ಬ ಬಂದಿರುವುದು ಆಗಸ್ಟ್ 25ನೇ ತಾರೀಕು ನವಮಿ ತಿಥಿ ವೈದೃತಿ ಯೋಗ ಮತ್ತು ಜೇಷ್ಠ ನಕ್ಷತ್ರದಲ್ಲಿ ಈ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುತ್ತಾ ಇದ್ದೇವೆ ಈ ಬಾರಿ ನವಮಿ.

ತಿಥಿಯಲ್ಲಿ ಜೇಷ್ಠ ನಕ್ಷತ್ರ ದಲ್ಲಿ ಮಾಡುತ್ತಿರುವುದರಿಂದ ಸ್ವಲ್ಪ ಎಚ್ಚರಿಕೆಯಿಂದ ವರಮಹಾಲಕ್ಷ್ಮಿ ಹಬ್ಬದ ಪೂಜೆಯನ್ನು ಮಾಡಬೇಕು ಅದರಲ್ಲೂ ಶುಭ ಮೂರ್ತಗಳನ್ನ 4 ಲಗ್ನಗಳನ್ನ ಕೊಡುತ್ತೇನೆ ಅದೇ ಸಮಯದಲ್ಲಿ ಪೂಜೆ ಮಾಡಬೇಕು ಏಕೆಂದರೆ ಯಾವ ಶುಭಯೋಗದಲ್ಲಿ ನಾವು ಪೂಜೆ ಮಾಡುತ್ತೇವೆಯೋ ಅವು ನಮಗೆ ಎಲ್ಲಾ ಶುಭವನ್ನು ತಂದುಕೊಡುತ್ತದೆ ಅದಕ್ಕಾಗಿ.

ಈ ನಾಲ್ಕು ಶುಭ ಮುಹೂರ್ತವನ್ನು ಮತ್ತು ಲಗ್ನವನ್ನು ಕೊಡುತ್ತಾ ಇದ್ದೇನೆ ಆ ನಾಲ್ಕನ್ನು ನೀವು ಬರೆದಿಟ್ಟುಕೊಳ್ಳಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆ ಸಮಯದಲ್ಲಿ ಪೂಜೆಯನ್ನು ಮಾಡಿ ಮೊದಲನೆಯ ಲಗ್ನ ನಾನು ಹೇಳುತ್ತಾ ಇದ್ದೇನೆ ಅದು ಸಿಂಹ ಲಗ್ನ ಸಿಂಹ ಲಗ್ನ ವಿಶೇಷವಾಗಿ ಎಲ್ಲದಕ್ಕೂ ಶುಭಯೋಗ ಎಂದು ಹೇಳುತ್ತೇವೆ ಬೆಳಗ್ಗೆ 5:50 ನಿಮಿಷದಿಂದ 7:40 ನಿಮಿಷದವರೆಗೆ.

ಸಿಂಹ ಲಗ್ನ, ಸಿಂಹ ಲಗ್ನಕ್ಕೆ ಅಧಿಪತಿ ಸೂರ್ಯ ಎಂದು ಹೇಳುತ್ತೇವೆ ಆ ಸಮಯದಲ್ಲಿ ಸಿಂಹ ಲಗ್ನದಲ್ಲಿ ನೀವು ಪೂಜೆಯನ್ನು ಮಾಡುವುದಾದರೆ ಅಂದರೆ ಐದು ಗಂಟೆ 50 ನಿಮಿಷದಿಂದ ಏಳು ಗಂಟೆ 40 ನಿಮಿಷದವರೆಗೆ ಪೂಜೆಯನ್ನು ಸಿಂಹ ಲಗ್ನದಲ್ಲಿ ಮಾಡಿದರೆ ಮೆರೂನ್ ಕಲರ್ ಸೀರೆಯನ್ನು ಉಳಿಸಿ ಏಕೆಂದರೆ ಸಿಂಹ ಲಗ್ನದ ಅಧಿಪತಿ ಸೂರ್ಯ ವಿಶೇಷ ಫಲ.

ಪ್ರಾಪ್ತಿಯಾಗುತ್ತದೆ ಎಂದು ನೀವು ಎಲ್ಲ ತಯಾರಿಯನ್ನು ಮಾಡಿಕೊಂಡು ಬೆಳಗ್ಗೆ ಐದು ಗಂಟೆ 50 ನಿಮಿಷಕ್ಕೆ ಪೂಜೆಯನ್ನು ಶುರು ಮಾಡಬೇಕು 7:00 40 ನಿಮಿಷದ ಒಳಗೆ ಅಂದರೆ ಆರ್ಥಿಯನ್ನೆಲ್ಲ ಪೂಜೆಯ ನಂತರವೂ ಕೂಡ ಮಾಡಬಹುದು ಆದರೆ ಸಂಕಲ್ಪಗಳನ್ನ ಈ ಸಮಯದ ಒಳಗೆ ಮುಗಿಸಬೇಕು. ಇನ್ನು ಎರಡನೇ ಮಹೂರ್ತವನ್ನು ಕೊಡುತ್ತಿದ್ದೇನೆ ಎರಡನೇ ಲಗ್ನ.

ವೃಶ್ಚಿಕ ಲಗ್ನದಲ್ಲಿ ಪೂಜೆಯನ್ನು ಮಾಡಿರಿ ವೃಶ್ಚಿಕ ಲಗ್ನಕ್ಕೆ ಮಂಗಳಾಧಿಪತಿ ಅಧಿದೇವತೆಯಾಗಿ ಭೂಮಿತಾಯಿ ಅದಕ್ಕೆ ಇದ್ದಾರೆ ಎಂದು ಹೇಳುತ್ತಾರೆ ಇದಕ್ಕಾಗಿ ಇದರಿಂದಾಗಿ ವಿಶೇಷ ಲಾಭ ಸಿಗುತ್ತದೆ ಹೀಗಾಗಿ ವೃಚಿಕ ಲಗ್ನದಲ್ಲಿ ಮಾಡುವಂತಹ ಪೂಜೆ ಯಶಸ್ವಿಯಾಗಿ ಸಿಗುತ್ತದೆ ಸಮಯ 12 ಗಂಟೆ 20 ನಿಮಿಷದಿಂದ ಎರಡು ಗಂಟೆ 32 ನಿಮಿಷದವರೆಗೆ 12 ಗಂಟೆ 20 ನಿಮಿಷಕ್ಕೆ.

ಮಧ್ಯಾಹ್ನ ಶುರುವಾಗಿ ಎರಡು ಗಂಟೆ 32 ನಿಮಿಷದವರೆಗೆ ವೃಶ್ಚಿಕ ಲಗ್ನ ಪ್ರಾಪ್ತಿಯಾಗುತ್ತದೆ ಈ ಸಮಯದಲ್ಲಿ ಈ ಲಗ್ನದಲ್ಲಿ ಮಾಡುವ ಪೂಜೆಗೆ ವಿಶೇಷವಾದ ಮಂಗಳ ಸೌಭಾಗ್ಯ ಪ್ರಾಪ್ತಿಯೆಂದು ಹೇಳುತ್ತಾರೆ ಅದಕ್ಕಾಗಿ ಇದು ಕೂಡ ಶುಭ ಲಗ್ನ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *