ಯಾವ ಋಣಾನು ಸಂಬಂಧದಿಂದ ನಮಗೆ ಮಕ್ಕಳು ಜನಿಸುತ್ತಾರೆ… ಅಕ್ಕ ಅಣ್ಣ ತಮ್ಮ ತಂಗಿ ಎಲ್ಲರು ಕೂಡ ಒಂದು ಋಣಾನು ಸಂಬಂಧದಿಂದಲೇ ನಮ್ಮ ಜೊತೆ ಹುಟ್ಟಿರುತ್ತಾರೆ ಇದೇ ಕಾರಣದಿಂದಲೇ ನಮ್ಮ ಮಧ್ಯ ಎಷ್ಟೇ ಗಲಾಟೆಗಳು ಮನಸ್ತಾಪಗಳು ಬಂದರೂ ಕೂಡ ಒಂದಲ್ಲ ಒಂದು ಕ್ಷಣ ರಕ್ತ ಸಂಬಂಧ ನಮಗೆ ನೆನಪಾಗುತ್ತದೆ ಅವರ ಮೇಲೆ ಮಮಕಾರ.
ಹುಟ್ಟಿಬರುತ್ತದೆ ನನ್ನ ಅಕ್ಕ ಅಣ್ಣನೇ ತಾನೇ ಎಂದು ಸುಮ್ಮನೆ ಆಗುತ್ತೇವೆ ಅದೇ ರೀತಿ ನಮಗೆ ಹುಟ್ಟುವ ಮಕ್ಕಳಿಗೂ ನಮಗೂ ಯಾವುದಾದರೂ ಋಣಾನು ಸಂಬಂಧ ಇರುತ್ತದೆಯ ಅವರಿಗೆ ಕೆ ನಮ್ಮ ಮೇಲೆ ಎಲ್ಲಿಲ್ಲದ ಪ್ರೀತಿ ಮಮಕಾರ ಹುಕ್ಕಿ ಹರಿಯುತ್ತದೆ ಅವರೆಷ್ಟೇ ನೋವು ಕೊಟ್ಟರು ಪ್ರೀತಿಯಿಂದ ಒಂದು ಬಾರಿ ಅಪ್ಪ ಅಮ್ಮ ಎಂದು ಕರೆದಾಗ ಎಲ್ಲವನ್ನು ಮರೆತು ಮತ್ತೆ ಅವರನ್ನು.
ಪ್ರೀತಿಸುತ್ತೇವೆ ಯಾವ ಕಾರಣದಿಂದ ನಮಗೆ ಮಕ್ಕಳು ಜನಿಸುತ್ತಾರೆ ಎಂದು ಈ ವಿಡಿಯೋದಲ್ಲಿ ತಿಳಿಸುತ್ತೇನೆ. ಈಗ ನಿಮಗೆ ಒಂದು ಚಿಕ್ಕ ಕಥೆಯ ಮೂಲಕ ನಿಮ್ಮ ಸಂದೇಹಗಳನ್ನೆಲ್ಲ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಪೂರ್ವದಲ್ಲಿ ಒಬ್ಬ ವ್ಯಕ್ತಿ ಹೆಂಡತಿಯೊಂದಿಗೆ ಸಂತೋಷದ ಜೀವನವನ್ನು ಕಳೆಯುತ್ತಾ ಇರುತ್ತಾನೆ ಆತ ಜನ್ಮತ ಒಬ್ಬ ಬ್ರಾಹ್ಮಣರಾಗಿದ್ದರು ಅವನಿಗೆ.
ಯಾವ ಪೂಜೆ ವ್ರತ ಮಂತ್ರ ಏನು ಬರುತ್ತಿರಲಿಲ್ಲ ಸಮಯಕ್ಕೆ ಸಿಗುತ್ತಿದ್ದ ಯಾವುದೋ ಒಂದು ಕೆಲಸವನ್ನು ಮಾಡುತ್ತಾ ಬಂದ ಸಂಪಾದನೆಯಲ್ಲಿ ಹೇಗೋ ಕಾಲ ತಳ್ಳುತ್ತಿದ್ದ ಇದೇ ರೀತಿ ನಡೆಯುತ್ತಾ ಇರುವಾಗ ಒಂದು ದಿನ ಆತನ ಹೆಂಡತಿ ಗರ್ಭವತಿ ಆಗುತ್ತಾಳೆ ಹಾಗಾಗಿ ಸಂಸಾರ ದೊಡ್ಡದಾಗುತ್ತಿದೆ ಇನ್ನೂ ಹೆಚ್ಚಿನ ಹಣವನ್ನು ಸಂಪಾದಿಸಬೇಕು ಎಂದು ಕೆಲಸ ಹುಡುಕಿಕೊಂಡು.
ಪಕ್ಕದ ಊರಿಗೆ ಹೋದ ಅಲ್ಲಿ ಕೆಲಸ ಮಾಡಿಕೊಂಡು ಹಿಂದೂರಿಗೆ ಮನೆಗೆ ಬರುವಾಗ ಅವನಿಗೆ ದಾರಿಯಲ್ಲಿ ಒಂದು ಸುಂದರವಾದ ಆಶ್ರಮ ಕಾಣಿಸಿತು ಅಲ್ಲಿ ವಿದ್ಯೆ ಕಲಿಯುತ್ತಿದ್ದನ್ನು ನೋಡಿ ಅವನಿಗೂ ಕೂಡ ಏನಾದರೂ ಕಲಿತುಕೊಳ್ಳಬೇಕು ಎನ್ನುವ ಆಸೆ ಶುರುವಾಯಿತು ಕೂಡಲೇ ಗುರುಗಳ ಬಳಿ ಹೋಗಿ ನನಗೂ ಯಾವುದಾದರೂ ಮಂತ್ರೋಪದೇಶ ಮಾಡಿ ಜ್ಞಾನ ಪ್ರಸಾದಿಸಿ.
ಎಂದು ಕೇಳಿದ ಆ ಗುರುಗಳು ಕೂಡ ಸಾಮಾನ್ಯವಾದವರಲ್ಲ್ ತಪಸ್ಸು ಶಕ್ತಿ ಸಂಪನ್ನರು ತ್ರಿಕಾಲ ಜ್ಞಾನ ಹೊಂದಿರುವವರು ಗುರುಗಳು ಅವನೊಂದಿಗೆ ಕುಮಾರ ನಿನಗೆ ಮಂತ್ರೋಪದೇಶ ಮಾಡುತ್ತೇನೆ ಆದರೆ ನೀನು ಮಾತ್ರ ನಾನು ಹೇಳಿದ ಹಾಗೆಯೇ ಕೇಳಬೇಕು ನನ್ನ ಮಾತು ಎಂದಿಗೂ ಮೀರಬಾರದು ಎಂದು ಹೇಳಿದರು ಸರಿ ಗುರುಗಳೇ ನೀವು ಹೇಳಿದ ಮಾತನ್ನು ಚಾಚು.
ತಪ್ಪದೆ ಪಾಲಿಸುತ್ತೇನೆ ಎಂದು ನಿಮ್ಮ ಮಾತನ್ನು ಮೀರುವುದಿಲ್ಲ ಎಂದ ಆ ವ್ಯಕ್ತಿ ಕುಮಾರ ನಿನಗೆ ಇನ್ನು ಕೆಲವೇ ದಿನಗಳಲ್ಲಿ ಒಬ್ಬ ಮಗ ಜನಿಸಲಿದ್ದಾನೆ ಆ ರೀತಿ ಅವನು ಹುಟ್ಟಿದ ಕೂಡಲೇ ಆ ಮಗುವನ್ನು ನನಗೆ ತಂದುಕೊಡಬೇಕು ಎಂದರು ಗುರುಗಳು ಆ ಮಾತನ್ನು ಕೇಳಿ ಆಶ್ಚರ್ಯಗೊಂಡರು ಗುರುಗಳೇ ಅಲ್ಲವೇ ನಮ್ಮ ಮಗನನ್ನು ಆಶೀರ್ವದಿಸಿ ಎಲ್ಲಾ ವಿದ್ಯೆಗಳನ್ನು ಕಲಿಸಿಕೊಡುತ್ತಾರೆ.
ಎಂದುಕೊಂಡು ಸರಿ ಗುರುಗಳೇ ಹಾಗೆ ಆಗಲಿ ಎಂದು ಹೇಳಿ ಆ ವ್ಯಕ್ತಿ ಮನೆಗೆ ಹಿಂದಿರುಗಿದ ಮನೆಗೆ ಹೋಗಿ ಅದೇ ವಿಷಯವನ್ನು ಹೆಂಡತಿಗೆ ಹೇಳಿದ ಮೊದಮೊದಲು ಮಗುವನ್ನು ಕೊಡಲು ಯೋಚಿಸಿದಳು, ಅಳುತ್ತಾ ಕುಣಿತಳು ಅದರ ನಂತರ ಇರಲಿ ಬಿಡು ಗುರುಗಳ ಬಳಿ ನನ್ನ ಮಗ ಬೆಳೆದರೆ ಉತ್ತಮನಾಗುತ್ತಾನೆ ಅದಕ್ಕಿಂತ ನನಗೆ ಏನು ಬೇಕು ಎಂದು ಗುರುಗಳಿಗೆ ಕೊಡಲು.
ಒಪ್ಪಿಕೊಂಡಳು ದಿನಗಳು ಕಳೆದವು ಒಂದು ದಿನ ಸುಂದರವಾದ ಗಂಡು ಮಗುವಿಗೆ ಜನ್ಮ ಕೊಟ್ಟಳು ಅದರ ನಂತರ ಗುರುಗಳಿಗೆ ಕೊಟ್ಟ ಮಾತಿನ ಪ್ರಕಾರ ಇಬ್ಬರು ಆಶ್ರಮಕ್ಕೆ ಬಂದು ಮಗುವನ್ನು ಗುರುಗಳಿಗೆ ಒಪ್ಪಿಸಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ