ಮನೆಯಲ್ಲಿ ಗೋವಿನ ವಿಗ್ರಹ ಇಡುವುದರಿಂದ ಯಾವೆಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತೆ ಗೊತ್ತಾ ? ದೊಡ್ಡ ಪರಿವರ್ತನೆ 7 ದಿ‌ನದೊಳಗೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮನೆಯಲ್ಲಿ ಗೋವಿನ ವಿಗ್ರಹ ಇಡುವುದರಿಂದ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ.ಭಾರತೀಯ ಸಂಸ್ಕೃತಿಯಲ್ಲಿ ಹಸುವನ್ನು ಕೇವಲ ಪ್ರಾಣಿ ಎಂದು ಪರಿಗಣಿಸದೆ ತಾಯಿ ಎಂದು ಪರಿಗಣಿಸಲಾಗುತ್ತದೆ. ಹಸುವಿನ ಮೂರ್ತಿಯನ್ನ ಮನೆಯಲ್ಲಿ ಇಡುವುದರಿಂದ ಬಹಳ ಲಾಭಗಳಿವೆ. ಹಸುವಿಗೆ ಗೋವು ಎಂತಲೂ ಕರೆಯುತ್ತಾರೆ. ಮನೆಯಲ್ಲಿ ಗೋವಿನ ವಿಗ್ರಹ ಇಡುವುದರಿಂದ ತುಂಬಾ ಲಾಭಗಳಿವೆ ಅವುಗಳು ಯಾವುದೆಂದು ಈ ಲೇಖನಿಯ ಮೂಲಕ ತಿಳಿದುಕೊಳ್ಳೋಣ.

ದೇವರು ನಿಮ್ಮ ಮನೆಯೊಳಗೆ ಬರುವ ಮುಂಚೆ ಕೊಡುವ ಸೂಚನೆಗಳು ಇವು..ದೇವರನ್ನು ನಿಮ್ಮ ಮನೆಯಿಂದ ಹೋಗದಂತೆ ಮಾಡುವುದು ಹೇಗೆ ನೋಡಿ

ಗೋವು ಹಸು ಕಾಮಧೇನು ಅಂತಲೂ ಕರೆಯುತ್ತಾರೆ. ಕಾಮಧೇನು ಅಂದರೆ ಇದರ ಅರ್ಥ ಪುಣ್ಯಕೋಟಿ. ದೇವರನ್ನು ಒಳಗೊಂಡ ಇನ್ನೊಬ್ಬರಿಗೆ ಸಹಾಯ ಮಾಡುವ ಒಂದು ಪ್ರಾಣಿ.ನಾವು ನ್ಮಮ ಮನೆಯಲ್ಲಿ ಅನೇಕ ರೀತಿಯ ಶೋಪೀಸ್‌ಗಳನ್ನು ಅಥವಾ ವಿಗ್ರಹಗಳನ್ನು ಇಡುತ್ತೇವೆ. ಆ ವಿಗ್ರಹಗಳಲ್ಲಿ ಗೋವಿನ ವಿಗ್ರಹ ಅಥವಾ ಕಾಮಧೇನುವಿನ ವಿಗ್ರಹವು ಒಂದು. ವಿಶೇಷವಾಗಿ ಕಾಮಧೇನು ಗೋವಿನ ವಿಗ್ರಹವನ್ನು ಹೆಚ್ಚಿನ ಮನೆಗಳಲ್ಲಿ ಇಟ್ಟಿರುವುದನ್ನು ನೀವು ನೋಡಿರಬಹುದು.

ಭಾರತೀಯ ಸಂಸ್ಕೃತಿಯಲ್ಲಿ, ಹಸುವನ್ನು ಕೇವಲ ಪ್ರಾಣಿ ಎಂದು ಪರಿಗಣಿಸದೆ ತಾಯಿ ಎಂದು ಪರಿಗಣಿಸಲಾಗುತ್ತದೆ. ಕಾಮಧೇನುವಿನ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಅನೇಕ ಲಾಭಗಳಿವೆ. ಮನೆಯಲ್ಲಿ ಕಾಮಧೇನು ವಿಗ್ರಹವನ್ನು ಇಡುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ನೋಡೋಣ ಬನ್ನಿ..

ಪ್ರಾಚೀನ ಕಾಲದಲ್ಲಿ, ಕಾಮಧೇನು ಎಂಬ ಹಸು ಇತ್ತು, ಅದು ವ್ಯಕ್ತಿಯ ಎಲ್ಲಾ ಆಸೆಗಳನ್ನು ಅಥವಾ ಈಡೇರಿಕೆಯನ್ನು ಪೂರೈಸುತ್ತದೆ. ಈ ಹಸುವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಸಾಗರದ ಮಂಥನದಿಂದ ಹೊರಹೊಮ್ಮಿದ 14 ರತ್ನಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗಿದೆ. ಅನೇಕ ಮನೆಗಳಲ್ಲಿ ಕಾಮಧೇನು ಹಸುವಿನೊಂದಿಗೆ ಕರುಯಿರುವ ಕಂಚಿನ ಪ್ರತಿಮೆಯನ್ನು ಇಡಲಾಗುತ್ತದೆ.

ಗೋವಿನ ವಿಗ್ರಹವನ್ನು ಇಡುವುದರಿಂದ ಸಂತಾನ ಪ್ರಾಪ್ತಿಯಾಗುವ ಸಂಭವಗಳು ಸೃಷ್ಟಿಯಾಗುತ್ತವೆ.ಮಾನಸಿಕ ಶಾಂತಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.ಅಧ್ಯಯನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವುದಕ್ಕಾಗಿ ಈ ವಿಗ್ರಹವನ್ನು ಮನೆಯಲ್ಲಿಯೂ ಪ್ರತಿಷ್ಠಾಪಿಸಬಹುದು.ಈ ಮೂರ್ತಿಯನ್ನು ಮನೆಯಲ್ಲಿಟ್ಟರೆ ಇಷ್ಟಾರ್ಥಗಳು ಈಡೇರುತ್ತವೆ.

ಕೋಟ್ಯಾಧೀಶ್ವರನ ಮಗ ಕೋಟಿ ಕೋಟಿ ಆಸ್ತಿ ಕುಟುಂಬ ಇವತ್ತು ಎಲ್ಲವನ್ನು ಕಳೆದುಕೊಂಡಿದ್ದು ಹೇಗೆ..ಕ್ರೇಜಿಸ್ಟಾರ್ ಸಾಮ್ರಾಜ್ಯವನ್ನೇ ಪತನ ಮಾಡಿತ್ತು ಸಿನಿಮಾ

ಅದೃಷ್ಟ, ಸಂಪತ್ತು, ಸಂತೋಷ ಮತ್ತು ಸಮೃದ್ಧಿಯು ಹೆಚ್ಚಾಗುವಂತೆ ಈ ವಿಗ್ರಹ ಮಾಡುತ್ತದೆ.ಕಾಮಧೇನುವು ತಾಯಿಯಂತೆ ಎಲ್ಲಾ ರೋಗಗಳನ್ನು ನಿಮ್ಮ ಮನೆಯಿಂದ ದೂರವಿಡುತ್ತದೆ.ಕೆಟ್ಟ ಆರೋಗ್ಯ, ಮಾನಸಿಕ ಒತ್ತಡ ಮತ್ತು ಆರ್ಥಿಕ ಸಮಸ್ಯೆಗಳನ್ನೂ ಹೋಗಲಾಡಿಸಲು ಕಾಮಧೇನು ವಿಗ್ರಹವನ್ನು ಮನೆಯಲ್ಲಿಡುವುದು ಸಹಕಾರಿ.

ಕಾಮಧೇನುವು ಆರೋಗ್ಯ, ಸಂಪತ್ತು, ಸಮೃದ್ಧಿ, ಶಾಂತಿ, ಯಶಸ್ಸು ಮತ್ತು ಸಕಾರಾತ್ಮಕತೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಹೆಚ್ಚಿನ ಮನೆಗಳಲ್ಲಿ ಕಾಮಧೇನುವಿನ ಅಥವಾ ಗೋವಿನ ವಿಗ್ರಹವನ್ನು ಇಡಲಾಗುತ್ತದೆ.

ಕಾಮಧೇನುವು ಲಕ್ಷ್ಮಿ ದೇವಿಯಂತೆ ಸಮುದ್ರ ಮಂಥನ ಸಮಯದಲ್ಲಿ ಪ್ರಕಟಗೊಂಡಿತು ಎಂದು ಅನೇಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ ಕಾಮಧೇನುವನ್ನು ಲಕ್ಷ್ಮಿ ದೇವಿಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ.

ಸಮುದ್ರ ಮಂಥನ ಸಮಯದಲ್ಲಿ ಮಥಿಸಿ ಹೊರ ಬಂದ ಪವಿತ್ರವಾದ 14 ಸಂಗತಿಗಳಲ್ಲಿ ಕಾಮಧೇನುವೂ ಒಂದು. ಇದು ಸ್ವರ್ಗದಲ್ಲಿರುವ ದೈವಿಶಕ್ತಿಯುಳ್ಳ ಹಸು. ಹಿಂದೂ ಪುರಾಣಗಳ ಪ್ರಕಾರ, ಈ ಹಸುವು ಕೇಳಿದ್ದೆಲ್ಲ ಕೊಡುವ ಶಕ್ತಿ ಹೊಂದಿದೆ. ಕಾಮಿಸಿದ್ದನ್ನೆಲ್ಲ ನೀಡುವ ಧೇನು ಅಂದರೆ ಕೇಳಿದ್ದೆಲ್ಲ  ಕೊಡುವ ಹಸು.

ಈ ಹಸುವನ್ನು ದೇವತೆಗಳ ರಾಜನಾದ ಇಂದ್ರನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯಿತು. ಈ ಕಾಮಧೇನುವಿನಲ್ಲಿ ಮುಕ್ಕೋಟಿ ದೇವರು ಇರುತ್ತಾರೆ ಮತ್ತು ಎಲ್ಲ ಹಸುಗಳಲ್ಲಿಯೂ ಕಾಮದೇನುವಿನ ಅಂಶವಿರುತ್ತದೆ ಎಂಬುದು ಹಿಂದೂಗಳ ನಂಬಿಕೆ.

ಇಂಥ ಪವಿತ್ರವಾದ ಹಸುವಿನ ವಿಗ್ರಹಕ್ಕೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಸಂತೋಷ ಮತ್ತು ಸಮೃದ್ಧಿಯ ಮಾನದಂಡವಾಗಿ ಅವುಗಳನ್ನು ಮನೆಯಲ್ಲಿ ಇರಿಸಲಾಗುತ್ತದೆ. ಅದನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸದಾ ಸಂತೋಷ ಉಳಿಯುತ್ತದೆ. ಅದೃಷ್ಟ ಮತ್ತು ಪ್ರೀತಿ ಕುಟುಂಬದಲ್ಲಿ ಉಳಿಯುತ್ತದೆ ಎಂದು ನಂಬಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *