ಗೌರಿ ಗಣೇಶ ಹಬ್ಬ ಯಾವ ದಿನ ಆಚರಣೆ ಮಾಡಿದರೆ ಶುಭ ಯೋಗ ಫಲ ಪ್ರಾಪ್ತಿ ಮುಹೂರ್ತ ಸಮಯ ಪೂರ್ಣ ವಿವರ. ನಾವು ಸಾಮಾನ್ಯವಾಗಿ ನೋಡುವುದಾದರೆ ಗೌರಿಹಬ್ಬ ಒಂದಿನ ಬರುತ್ತೆ ಅದರ ಮರುದಿನ ಗಣೇಶ ಹಬ್ಬ ಇರುತ್ತೆ ಈ ಗೌರಿ ಹಬ್ಬ ಭಾದ್ರುಪದ ಶುದ್ಧ ತದಿಗೆಯ ದಿನ ಗೌರಿ ಭಾದ್ರಪದ ಶುದ್ಧ ತದಿಗೆಯ ದಿನ ಅಂತಂದ್ರೆ ಶುಕ್ಲ ಪಕ್ಷದ ತದಿಗೆಯ ದಿನದಂದು ನಾವು ಗೌರಿ ಹಬ್ಬವನ್ನು ಆಚರಣೆ ಮಾಡುತ್ತೇವೆ
ಗಣಪನನ್ನು ಮನೆಗೆ ತರೋ ಮುಂಚೆ ಈ 10 ವಿಷಯಗಳು ನೆನಪಿರಲಿ..ಗಣೇಶನ ಹಬ್ಬದಲ್ಲಿ ಈ ತಪ್ಪನ್ನು ಮಾಡಬೇಡಿ
ಗೌರಿಯನ್ನು ಕೂರಿಸಿ ಕೆಲವೊಬ್ಬರು ಗೌರಿ ಮೂರ್ತಿಯನ್ನು ತಂದು ಕುರಿಸುತ್ತಾರೆ ನಾವು ಬಾಗಿನವನ್ನು ನೀಡುತ್ತೇವೆ ಈ ರೀತಿಯಾಗಿ ಶಾಸ್ತ್ರೋತ್ಸವದಿಂದ ಹಬ್ಬವನ್ನು ನಾವು ಮಾಡುತ್ತೇವೆ ಇನ್ನು ಬಾದ್ರುಪದ ಶುದ್ಧ ಚತುರ್ಥಿಯ ದಿನ ಗಣಪತಿ ಹಬ್ಬ ಬರುತ್ತೆ ನಾವು ಆವತ್ತು ಗಣಪತಿ ಹಬ್ಬವನ್ನು ಸಂಭ್ರಮದಿಂದ ಎಲ್ಲರೂ ಖುಷಿಖುಷಿಯಾಗಿ ಮಾಡುತ್ತೇವೆ ಅಂದರೆ ಏನು ಅರ್ಥ ಇದರದ್ದು ಗೌರಿಯು ಕೈಲಾಸದಿಂದ ಭೂಮಿಗೆ ಅಂದರೆ ಗೌರಿಯ ತವರು ಮನೆ ಭೂಮಿ
ಕೈಲಾಸದಿಂದ ಗೌರಿ ತನ್ನ ಮಗನಾದ ಗಣೇಶನನ್ನು ಕರೆದುಕೊಂಡು ಭೂಮಿಗೆ ತವರು ಮನೆಗೆ ಬರುತ್ತಾಳೆ ಅಂತ ನಾವು ಪರಂಪರೆಯಿಂದ ಆಚರಿಸಿಕೊಂಡು ಬಂದಿದ್ದೇವೆ ಗೌರಿಯೂ ಭೂಕೈಲಾಸದಿಂದ ಒಂದು ಭೂಮಿಗೆ ಬಂದು ತನ್ನ ತವರು ಮನೆಗೆ ಬಂದು ಬಾಗಿನವನ್ನು ಸ್ವೀಕರಿಸಿ ಭೋಜನವನ್ನು ಮಾಡಿಕೊಂಡು ಎಲ್ಲರನ್ನೂ ಹರಸಿ ಹೋಗುತ್ತಾಳೆ ಎನ್ನುವ ಒಂದು ಪ್ರತಿತಿಯಿದೆ
ನೋಡಿ ಹೆಣ್ಣು ಮಕ್ಕಳು ಹಾಗೆ ಅಲ್ವಾ ತವರ್ಮನೆಗೆ ಬಂದು ಒಂದೆರಡು ದಿನ ಇದ್ದು ಮತ್ತೆ ಮನೆಗೆ ಹೋಗುತ್ತಾರೆ ಅದೇ ರೀತಿ ಗೌರಿಯು ಗಣೇಶನನ್ನು ಕರೆದುಕೊಂಡು ಬಂದು ಎರಡು ದಿನ ಅಥವಾ ನಾಲ್ಕು ದಿನ ಈ ತರ ಇದ್ದು ಆಮೇಲೆ ಅವಳು ತನ್ನ ಗಂಡನ ಮನೆಗೆ ಅಂದರೆ ಶಿವನ ಹತ್ತಿರ ಹೋಗುತ್ತಾಳೆ ಕೈಲಾಸಕ್ಕೆ ಹೋಗುತ್ತಾಳೆ ಎನ್ನುವಂತದ್ದು ಒಂದು ಪುರಾಣದ ಹಿನ್ನೆಲೆ ಈ ಪುರಾಣವು ಅನ್ನೋದು ನಮಗೆ ಬಹಳ ಮುಖ್ಯ
ಈ ಬಾರಿ 18 ನೇ ತಾರೀಕು 2023 ಸೆಪ್ಟೆಂಬರ್ ನಲ್ಲಿ ನಾವು ಗಣೇಶ ಚತುರ್ಥಿಯನ್ನು ಆಚರಿಸುತ್ತೇವೆ. ಅಂದರೆ ಗೌರಿ ಗಣೇಶ ಹಬ್ಬವನ್ನು ನಾವು ಈ ದಿನ ಆಚರಿಸುತ್ತೇವೆ ಈ ಬಾರಿ ಏನಾಗಿದೆ ಅಂದರೆ 18ನೇ ತಾರೀಕು ಸೋಮವಾರ ಗೌರಿ ಹಬ್ಬನೂ ಅದೇ ದಿನ ಆಚರಣೆ ಮಾಡಬೇಕು ಗಣೇಶನ ಹಬ್ಬನೂ ಕೂಡ ಅದೇ ದಿನ ಆಚರಣೆ ಮಾಡಬೇಕು ಯಾವಾಗಲೂ ನಾವು ಏನು ಮಾಡುತ್ತಿದ್ದೇವೆ ಅಂದರೆ ಮೊದಲನೆಯ ದಿನ ಗೌರಿ ಹಬ್ಬ ಇರುತ್ತಿತ್ತು ಮಾರನೆಯ ದಿನ ಗಣೇಶ ಹಬ್ಬವನ್ನು ಆಚರಿಸುತ್ತಿದ್ದೆವು
ಆದರೆ ಈ ವರ್ಷ ಏನಾಗಿದೆ ಎಂದರೆ ಸೋಮವಾರವೇ 18 ನೇ ತಾರೀಖಿನ ದಿನವೇ ಗೌರಿ ಹಬ್ಬನು ಆಚರಿಸಬೇಕು ಗಣೇಶ ಹಬ್ಬನ ಕೂಡ ನಾವು ಅವತ್ತೇ ಆಚರಿಸಬೇಕಾಗುತ್ತದೆ ಕೆಲವೊಂದು ಮಿತಿಯ ಪ್ರಕಾರ ಅದೇ ಸೂಕ್ತವಾಗಿದೆ ಎಂದು ಕೂಡ ಹಾಗೆ ಆಚರಿಸಿ ಯಾಕೆಂದ್ರೆ ನೋಡಿ ಸೋಮವಾರದ ದಿನ ಬೆಳಗ್ಗೆ ಒಂಬತ್ತು ಗಂಟೆಗೆ 13 ನಿಮಿಷಕ್ಕೆ ಚತುರ್ಥಿ ಪ್ರಾರಂಭ ಆಗತ್ತೆ.
ಅದಕ್ಕೂ ಮೊದಲು ನಾವು ಅವತ್ತೆ ಗೌರಿ ಹಬ್ಬವನ್ನು ಮಾಡಬೇಕು ಇದನ್ನು ಒಂದು ಮಾಹಿತಿ ನೆನಪಿಟ್ಟುಕೊಳ್ಳಿ ರಾಹುಕಾಲ ಯಮಗಂಡಕಾಲ ಯಾವುದು ಕೂಡ ಇದಕ್ಕೆ ಅಪ್ಲೈ ಆಗಲ್ಲ ಹಬ್ಬಗಳಿಗೆ ಯಾವ ಕಾಲವು ಕೂಡ ಅಪ್ಲೈ ಆಗಲ್ಲ ಎಲ್ಲವೂ ಸಹ ಶುಭಕಾಲವೂ ಆಗಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.