ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಹಣ ಬರಲು ಈ ಮೂರು ಕೆಲಸವನ್ನು ಮಾಡಿ.ರಾಜ್ಯ ಸರ್ಕಾರ ಕಳೆದ ವಾರವಷ್ಟೇ ತನ್ನ ಮಹತ್ವಾಕಾಂಕ್ಷೆ ಯೋಜನೆ ಗೃಹಲಕ್ಷ್ಮಿಗೆ ಚಾಲನೆ ನೀಡಿದೆ. ಬಟನ್ ಒತ್ತಿದ ತಕ್ಷಣವೇ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000ರೂ ಹಣ ಜಮೆ ಆಗಿದೆ. ಆದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಕೆಲವರ ಅಕೌಂಟ್‌ಗೆ ಇನ್ನು ಕೂಡ ಹಣ ಜಮೆ ಆಗಿಲ್ಲ.
ಹೌದು, ಕರ್ನಾಟಕ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಕುಟುಂಬ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000ರೂ ಹಣ ಜಮೆ ಆಗಲಿದೆ. ಈಗಾಗಲೇ ಒಂದು ತಿಂಗಳ ಹಣ ಜಮೆ ಮಾಡಲಾಗಿದೆ. ಆದರೆ ಕೆಲವರ ಅಕೌಂಟ್‌ಗೆ ಇನ್ನು ಕೂಡ ಹಣ ಜಮೆ ಆಗಿಲ್ಲ ಎಂಬ ದೂರು ಕೇಳಿ ಬಂದಿದೆ. ಹಾಗಾದ್ರೆ ಗೃಹಲಕ್ಷ್ಮಿ ಯೋಜನೆಯ ಅಮೌಂಟ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಗೃಹಲಕ್ಷ್ಮಿ ಯೋಜನೆ ಜಾರಿಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿದೆ. ಈಗಾಗಲೇ ಗೃಹಲಕ್ಷ್ಮಿ ಹಣ ಪಡೆದುಕೊಂಡಿರುವ ಮಹಿಳೆಯರು ಫುಲ್ ಖುಷ್ ಆಗಿದ್ದರೆ. ಆದರೆ ಇದರ ನಡುವೆ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಕೆಲವರ ಅಕೌಂಟ್‌ಗೆ ಹಣ ಜಮೆ ಆಗಿಲ್ಲ ಎನ್ನಲಾಗಿದೆ. ಇದರಲ್ಲಿ ಕೆಲವರ ಅಕೌಂಟ್ ಕೆವೈಸಿ ತೊಂದರೆ ಕಂಡುಬಂದಿದ್ದರೆ ಇನ್ನು ಕೆಲವರಿಗೆ ಯಾಕೆ ಹಣ ಜಮೆ ಆಗಿಲ್ಲ ಅನ್ನೊ ಗೊಂದಲ ಕೂಡ ಇದೆ.
ರಾಜ್ಯದ ಸುಮಾರು 1.1 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಇದರಲ್ಲಿ ಬಹುತೇಕ ಮಂದಿಗೆ ಈಗಾಗಲೇ ಹಣ ಜಮೆ ಆಗಿದೆ. ಇನ್ನು ಕೆಲವರಿಗೆ ಹಣ ಜಮೆ ಆಗಿಲ್ಲ. ಅಂತಹ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯ ಹಣ ಯಾಕೆ ಬಂದಿಲ್ಲ ಅನ್ನೊದನ್ನ ಪರಿಶೀಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು ರಾಜ್ಯ ಸರ್ಕಾರ ನೀಡಿರುವ 8147500500 ಸಂಖ್ಯೆಗೆ ಸಂದೇಶವನ್ನು ಕಳುಹಿಸಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿಲ್ಲದಿದ್ದರೆ ಹೀಗೆ ಪರಿಶೀಲಿಸಿ!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಇನ್ನು ನಿಮ್ಮ ಖಾತೆಗೆ ಹಣ ಜಮೆ ಆಗದಿದ್ದರೆ 8147500500 ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಸಂದೇಶ ಕಳುಹಿಸಿರಿ. ಈ ಸಂಖ್ಯೆಗೆ ಸಂದೇಶ ಕಳುಹಿಸಿದ ತಕ್ಷಣವೇ ನಿಮ್ಮ ಗೃಹಲಕ್ಷ್ಮಿ ಅರ್ಜಿಯ ಪರಿಸ್ಥಿತಿ ಏನಾಗಿದೆ ಯಾವ ಹಂತದಲ್ಲಿದೆ ಎಂಬ ಸಂದೇಶ ಬರಲಿದೆ. ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕಾರವಾಗಿದ್ದರೆ, ಇಲ್ಲವೇ ನಿಮ್ಮ ಖಾತೆಗೆ ಹಣ ಬರುವುದಕ್ಕೆ ವಿಳಂಬವಾಗುವುದಾದರೆ, ಜೊತೆಗೆ ನೀವು ನೀಡಿರುವ ಮಾಹಿತಿಯು ಹೊಂದಾಣಿಕೆ ಆಗಿಲ್ಲದಿದ್ದರೆ ಸಂಪೂರ್ಣ ಮಾಹಿತಿ ತಿಳಿಯಲಿದೆ. ಒಂದು ವೇಳೆ ನಿಮ್ಮ ಅರ್ಜಿಯಲ್ಲಿ ಗೊಂದಲವಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಸಂದೇಶ ಬರಲಿದೆ.
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಗ್ಯಾರಂಟಿ ಯೋಜನೆ ಇದಾಗಿದೆ. ಇನ್ನು ಈ ಯೋಜನೆಯು ದೇಶದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವೊಂದು ಕೈಗೊಂಡಿರುವ ಅತಿದೊಡ್ಡ ಆರ್ಥಿಕ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2,000ರೂ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.