ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ 5 ಕೋಟಿ ವಂಚನೆ ಚೈತ್ರ ಕುಂದಾಪುರ ಅರೆಸ್ಟ್..ಅರೆಸ್ಟ್ ಮಾಡುವಾಗ ಉಂಗುರ ನುಂಗಲು ಯತ್ನ..

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ ಅವರ ಮೇಲೆ ವಂಚನೆ ಪ್ರಕರಣ .ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಒಬ್ಬರಿಗೆ ವಂಚಿಸಿದ ಮೇರೆಗೆ ಚೈತ್ರ ಕುಂದಾಪುರ್ ಅವರನ್ನು ಬಂಧಿಸಲಾಗಿದೆ ಇವರು ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ವಂಚನೆ ಮಾಡಿದ್ದು ಆ ಉದ್ಯಮಿ ಒಬ್ಬರು ಚೈತ್ರ ಅವರ ಮೇಲೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಚೈತ್ರ ಕುಂದಾಪುರ ಸೇರದಂತೆ ಎಂಟು ಜನರ ಮೇಲೆ ಉದ್ಯಮಿ ಗೋವಿಂದ್ ಪೂಜಾರಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಸಿಸಿಬಿ ಬೆಂಗಳೂರು ವಿಭಾಗದ ಪೊಲೀಸರು ಮಂಗಳವಾರ ರಾತ್ರಿ ಉಡುಪಿ ಕೃಷ್ಣಮಠದಿಂದ ಚೈತ್ರ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

WhatsApp Group Join Now
Telegram Group Join Now

ಹಿಂದೂ ಸಂಘಟನೆಯ ನಾಯಕಿ, ಚೈತ್ರಾ ಕುಂದಾಪುರ ರನ್ನು ಸಿಸಿಬಿ ಬೆಂಗಳೂರು ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೈಂದೂರುನ ಸಮಾಜ ಸೇವಕರೊಬ್ಬರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರುಪಾಯಿ ವಂಚಿಸಿರುವ ಆರೋಪದ ಮೇರೆಗೆ ಚೈತ್ರಾರನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಅವರು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣದಲ್ಲಿ ಚೈತ್ರಾ ಜೊತೆಗೆ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ ಆರ್ ಎಸ್ ಧನರಾಜ್, ರಮೇಶ್, ಶ್ರೀಕಾಂತ್ ನನ್ನೂ ಕೂಡಾ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ…

ಚೈತ್ರ ಒಬ್ಬರೇ ಅಲ್ಲದೆ ಚೈತ್ರ ಜೊತೆಗೆ 8 ಮಂದಿಯ ವಿರುದ್ಧ ಗೋವಿನ್ ಬಾಬು ಪೂಜಾರಿ ಬೆಂಗಳೂರಿನ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚೈತ್ರ ಹಾಗೂ ಅವರ ಸಂಗಡಿಗರು ದೊಡ್ಡ ಬೇರೆ ಬೇರೆ ಮುಖಂಡರುಗಳ ಹೆಸರುಗಳಲ್ಲಿ ಮೋಸ ಮಾಡಿದ್ದಾರೆ ಚೈತ್ರ ಹಾಗೂ ನಾಲ್ಕೈದು ಜನರ ತಂಡ ಆರ್ ಎಸ್ ಎಸ್ ಪ್ರಮುಖರು ಎಂದು ನಕಲಿ ನಾಯಕರ ತಂಡವನ್ನೂ ಸೃಷ್ಟಿಮಾಡಿದ್ದರು. ಅವರ ಸಂಗಡಿಗರು ಪೊಲೀಸರ ವಶದಲ್ಲಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]