ಹೆಣ್ಣು ಮಕ್ಕಳು ಯಾಕೆ ಗಂಟೆಯನ್ನ ಬಾರಿಸಬಾರದು? ಬನ್ನಿ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ ಹೆಣ್ಣು ಮಕ್ಕಳು ಗಂಟೇನ ಬಾರಿಸಬಾರದು ಏನಾಗುತ್ತದೆ ಎನ್ನುವ ಕುತೂಹಲ ಮಾಹಿತಿ ನಿಮಗಾಗಿ. ಗಂಡನಾದ ಇಲ್ಲದೆ ಯಾರು ಪೂಜೆ ಮಾಡುತ್ತಾರೋ ಅಥವಾ ಗಂಟೆ ಬಾರಿಸದೆ ಯಾರು ಪೂಜೆ ಮಾಡುತ್ತಾರೆ ಅಂತಹ ಮನೆಯಲ್ಲಿ ಕುರುಡು ಕಿವುಡು ಮಕ್ಕಳು ಹುಟ್ಟುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.
ಗೌರಿ ಗಣೇಶ ಹಬ್ಬ ಮಾಡುವವರು ಈ 5 ತಪ್ಪುಗಳನ್ನು ಮಾಡಬಾರದು ಮುಖ್ಯವಾಗಿ ಈ 4 ಕೆಲಸ ಮಾಡಲೆಬೇಕು
ಗಂಟೆಯನ್ನು ಬಾರಿಸದೆ ಪೂಜೆ ಮಾಡಿದ ಸಂದರ್ಭ ದಲ್ಲಿ ಅದು ಸಾರ್ಥಕವಾಗುವುದಿಲ್ಲ ಹಾಗಾಗಿ ಗಂಟನಾದ ಮಾಡಲೇಬೇಕು. ಹಾಗಾದ್ರೆ ಗಂಟಾ ನಾದವನ್ನು ಯಾವಾಗ ಮಾಡಬೇಕು ದೇವರಿಗೆ ಧೂಪ ತೋರಿಸಿದಾಗ ದೀಪ ಬೆಳಗಿದಾಗ ನೈವೇದ್ಯ ಮಾಡುವಾಗ ಘಂಟಾ ನಾದವನ್ನು ಮಾಡಲೇಬೇಕು. ಗಂಟೆಯ ಎತ್ರ 5 ಇಂಚು ಇದ್ದರೆ ಸಾಕು ಇನ್ನು ಎತ್ತರ ಇದ್ದರೂ ಪರವಾಗಿಲ್ಲ.
ಆದರೆ ಗಂಟೆ ಚಿಕ್ಕದಿರ ಬಾರದು ಗಂಟೆಯಲ್ಲಿ ಆಂಜನೇಯ ಸ್ವಾಮಿ ಅಥವಾ ನಂದೀಶ್ವರ ಮೂರ್ತಿ ಇರುವಂತಹ ಗಂಟೆಯನ್ನು ಬಳಸಿದರೆ ತುಂಬಾ ಒಳ್ಳೆಯದು. ಇನ್ನು ಕೆಲವರು ಶಂಕು ಚಕ್ರ ಇರುವ ಘಂಟೆಯನ್ನು ಬಳಸುತ್ತಾರೆ ಅದು ಕೂಡ ತುಂಬಾನೇ ಒಳ್ಳೆಯದು. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಬೇಕೆಂದರೆ ಮನೆಯ ಮೂಲೆ ಮೂಲೆಯಲ್ಲಿಯೂ ಗಂಟೆಯನ್ನ ಬಾರಿಸಬೇಕು.
ಬೆಳಗ್ಗೆ ಗಂಡು ಮಕ್ಕಳು ಸಂಜೆ ವೇಳೆ ಹೆಣ್ಣುಮಕ್ಕಳು ದೀಪವನ್ನು ಹಚ್ಚಬೇಕು ಎಂದು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಧನ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ ಗಂಟೆಯ ಶಬ್ದ ಓಂಕಾರ ಕ್ಕೆ ಸಮನಾಗಿರುತ್ತದೆ ಆದ್ದರಿಂದ ನೀವು ಓಂಕಾರ ಜಪಿಸಿದಷ್ಟೇ ಫಲ ಸಿಗುತ್ತದೆ ಎನ್ನಲಾಗುತ್ತದೆ.
ಪುರಾಣಗಳ ಪ್ರಕಾರ ಪೂಜಾ ಸಮಯದಲ್ಲಿ ಗಂಟೆ ಬಾರಿಸಿದಾಗ ಅದು ದೇವರ ಎದುರು ನಿಂತಿರುವ ವ್ಯಕ್ತಿಯ ಉಪಸ್ಥಿತಿಯನ್ನು ದೇವರಿಗೆ ಖಚಿತಪಡಿಸುತ್ತದೆ ಜೊತೆಗೆ ದೇವರನ್ನು ಎಚ್ಚರಗೊಳಿಸಲು ಕೂಡ ಇದು ಸಹಾಯ ಮಾಡುತ್ತದೆ ಅಂತ ಹೇಳುತ್ತಾರೆ. ಗಂಟೆ ಬಾರಿಸುವ ಮೂಲಕ ವ್ಯಕ್ತಿಗಳ ಮನಸ್ಸಲ್ಲಿ ಧಾರ್ಮಿಕ ಭಾವನೆಗಳು ಉದ್ಭವಿಸಿದರೆ ಜೊತೆಗೆ ಗಂಟೆಯ ಸದ್ದು ಪರಿಸರವನ್ನ ಶುದ್ಧ ಮಾಡುತ್ತದೆ.
ಈ ಶಬ್ದದಿಂದ ಹೊರ ಬರುವ ಕಂಪನಗಳು ಆ ಪ್ರದೇಶದಲ್ಲಿರುವ ಹಾನಿಕಾರಕ ವೈರಸ್ ಗಳು ಬ್ಯಾಕ್ಟೀರಿಯಾ ಗಳು ಮತ್ತು ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತದೆ. ಇದರಿಂದ ದೇವಾಲಯ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಕಡಿಮೆಯಾಗಿ ಎನರ್ಜಿ ಹೆಚ್ಚಾಗುತ್ತದೆ ಯಾವ ಸಮಯದಲ್ಲಿ ಗಂಟೆ ಬಾರಿಸಬಾರದು ಅಂತ ತಿಳಿಯೋಣ.
ಕನ್ಯಾ ರಾಶಿ ಸೆಪ್ಟೆಂಬರ್ ತಿಂಗಳ ನಿಖರ ಭವಿಷ್ಯ ಸಮಸ್ಯೆಗಳು ಈ ತಿಂಗಳು ನಿಮಗೆ ತಪ್ಪಿದ್ದಲ್ಲ ಗೊತ್ತಾ ?
ದೇವರಿಗೆ ಅಲಂಕಾರ ಮಾಡುವಾಗ ಗಂಟ ನಾದ ಮಾಡಬಾರದು ರಾತ್ರಿ ಸಮಯದಲ್ಲಿ ಗಂಟೆ ಬಾರಿಸಬಾರದು ಅದು ಸಕಲ ಜೀವಿಗಳಿಗೂ ವಿಶ್ರಾಂತಿ ಸಮಯ ಈ ಸಮಯದಲ್ಲಿ ಗಂಟನಾದವನ್ನು ಮಾಡಿದರೆ ಪುಣ್ಯಫಲ ದೊರೆಯುವುದಿಲ್ಲ ಏಕೆಂದರೆ ವಿಶ್ರಾಂತಿ ಪಡೆಯುತ್ತಿರುವವರನ್ನು ಅಥವಾ ಊಟ ಮಾಡುತ್ತಿರುವವರನ್ನು ತೊಂದರೆಗೊಳಪಡಿಸಿದರೆ ದೋಷ ಉಂಟಾಗುತ್ತದೆ.
ಸೂತಕದ ಮನೆಯವರು ಗಂಟ ನಾದವನ್ನು ಮಾಡಬಾರದು ಏಕೆಂದರೆ ಸೂತಕ ಕಳೆಯುವವರೆಗೂ ಆತ್ಮಗಳು ಕುಟುಂಬಸ್ಥರ ಜೊತೆಗೆ ಇರುತ್ತದೆ ಮನೆಯಲ್ಲಿ ಗಂಟನಾದ ಮಾಡುವುದು ಕಲಹ ಶಬ್ದ ಮಾಡುವುದು ಜೋರು ಪಾತ್ರೆ ಶಬ್ದ ಮಾಡುವುದು ಇದೆಲ್ಲಾ ಆತ್ಮಕ್ಕೆ ತುಂಬಾ ನೋವಾಗುತ್ತದೆ ಆತ್ಮಗಳು ಬಹಳ ಸೂಕ್ಷ್ಮವಾಗಿರುತ್ತದೆ ಎಂದು ಹೇಳುತ್ತಾರೆ.
ಮಹಿಳೆಯರು ಗಂಟನಾದ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಇದು ಸುಮಾರು ವರ್ಷದಿಂದ ನಡೆದು ಬಂದ ಪದ್ಧತಿ. ಹಿರಿಯರು ಇದನ್ನ ಪಾಲಿಸಿದ್ದಾರೆ ಅದೇ ರೀತಿ ಸುಮಾರು ಮನೆಗಳಲ್ಲಿ ಸ್ತ್ರೀಯರು ಗಂಟನಾದ ಮಾಡುವುದಿಲ್ಲ ಸ್ತ್ರೀಯರ ಎಡಗೈ ನರವು ಗರ್ಭಕೋಶಕ್ಕೆ ಸೇರಿರುತ್ತದೆ ಎಂದು ಹೇಳುತ್ತಾರೆ ಎಡಗಯಿಂದ ಗಂಟೆ ಬಾರಿಸಿದರೆ ಅದು ಗರ್ಭಕೋಶಕ್ಕೆ ತೊಂದರೆಯಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.