ನವರಾತ್ರಿಯ ಮೊದಲನೇ ದಿನ ನಾವು ಯಾವ ರೀತಿ ಪೂಜೆ ಮಾಡಬೇಕು, ಯಾವ ದೇವಿಯನ್ನ ಪೂಜೆ ಮಾಡಬೇಕು, ಆ ದೇವರಿಗೆ ಪ್ರಿಯವಾಗಿರುವಂತಹ ಹೂ ಯಾವುದು? ನೈವೇದ್ಯ ಯಾವುದು, ಹಾಗೆ ಯಾವ ಬಣ್ಣದ ಬಟ್ಟೆಯನ್ನು ಧರಿಸಿ ಪೂಜೆಯನ್ನು ಮಾಡಬೇಕಾಗುತ್ತೆ ಅಂತ ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣ ವಾಗಿ ನಿಮಗೆ ತಿಳಿಸಿಕೊಡುತ್ತಾ ಇದೀನಿ. ಹಾಗಾದ್ರೆ ಬನ್ನಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ನವರಾತ್ರಿಯ ಒಂಭತ್ತು ದಿನಗಳಲ್ಲಿ ಮೊದಲನೇ ದಿನ ಪೂಜಿಸುವಂತಹ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ ದೇವಿ.
ಪರ್ವತರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ಈ ದೇವಿ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಮಕ್ಕಳ ನ್ನ ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾಗಿರುವಂತಹ ದಕ್ಷನ ಮಗಳು ದಾಕ್ಷಾಯಿಣಿ ಶಿವನ ಮದುವೆ ಆಗ್ತಾಳೆ. ಆದ್ರೆ ಈ ದಕ್ಷನಿಗೆ ಶಿವನ ಮದುವೆ ಆಗಿರು ವಂತದ್ದು ದಾಕ್ಷಾಯಿಣಿ ಒಂದು ಸ್ವಲ್ಪನೂ ಇಷ್ಟ ಇರೋದಿಲ್ಲ ಈ ದಕ್ಷ ಮಹಾರಾಜ ಶಿವ ದ್ವೇಷಿ ಯಾಗಿರುತ್ತಾನೆ ಶಿವ ಯಾವಾಗಲೂ ಸ್ಮಶಾನದಲ್ಲಿ ಇರ್ತಾನೆ ಕೊರಳಲ್ಲಿ ನಾಗರ ಹಾವನ್ನ ಧರಿಸುತ್ತಾನೆ ಇವನು ತುಂಬಾ ಒರಟಾದ ಸ್ವಭಾವ ಇರುವಂಥ ಈ ಶಿವ ನನ್ನ ಮಗಳನ್ನ ಮದುವೆ ಆದಳಲ್ಲ ಅಂತ ತುಂಬಾನೇ ಕೋಪಗೊಂಡಿದ್ದಾನೆ.
ಈ ಮದುವೆ ಸ್ವಲ್ಪನೂ ದಕ್ಷ ಮಹಾರಾಜನಿಗೆ ಇಷ್ಟ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಯಜ್ಞವನ್ನು ಕೈಗೊಳ್ಳುತ್ತಾನೆ. ಪ್ರಜಾಪತಿ ದಕ್ಷನ ಆ ಒಂದು ಯಜ್ಞಕ್ಕೆ ಎಲ್ಲ ಮಕ್ಕಳನ್ನು ಅಳಿಯಂದಿರನ್ನ ಕುಟುಂಬಸ್ಥರನ್ನ ಎಲ್ಲರನ್ನು ಕರೆಯುತ್ತಾನೆ. ಆದರೆ ಶಿವ ಮತ್ತೆ ದಾಕ್ಷಾಯಿಣಿನ ಆಹ್ವಾನ ಮಾಡುವುದಿಲ್ಲ. ಆದರೆ ದಾಕ್ಷಾಯಿಣಿಗೆ ಈ ಯಜ್ಞಕ್ಕೆ ಹೋಗ್ಬೇಕು ಅನ್ನೋದು ಇರುತ್ತೆ. ಶಿವನಲ್ಲಿ ಕೇಳಿದಾಗ ಆಹ್ವಾನ ಇಲ್ಲದೆ ಯಾರ ಮನೆಗೂ ಕೂಡ,ತವರು ಮನೆಗೆ ಆದರೂನು ಕೂಡ ಹೋಗಬಾರದು ಅಂತ ಹೇಳ್ತಾನೆ ಆದ್ರೆ ದಾಕ್ಷಾಯಿಣಿ ಹಠ ಮಾಡಿ ಅದಕ್ಕೆ ಬಂದು ಅಲ್ಲಿ ದಕ್ಷ ಮಹಾರಾಜ ಶಿವನನ್ನ ಬಾಯಿಗೆ ಬಂದಂತೆ ಬೈದಾಗ ಅವಮಾನ ತಾಳಲಾರದೆ ಅದೇ ಯಜ್ಞಕುಂಡಕ್ಕೆ ಬಿದ್ದು ಸತ್ತುಹೋಗ್ತಾಳೆ.
ಮತ್ತೆ ಮುಂದಿನ ಜನ್ಮದಲ್ಲಿ ನಾನು ಶಿವನನ್ನೇ ಮದುವೆಯಾಗಬೇಕು ಅನ್ನೋ ಕಾರಣಕೋಸ್ಕರ ಜನ್ಮ ತಾಳುವ ಒಂದು ರೂಪವನ್ನೇ ನಾವು ಶೈಲಪುತ್ರಿ ಅಂತ ಕರೀತೀವಿ. ಈ ಶೈಲಪುತ್ರಿ ದೇವಿ ಬಿಳಿ ಬಣ್ಣದ ಅಂದ್ರೆ ಶ್ವೇತವರ್ಣದ ಬಟ್ಟೆಯನ್ನ ತೊಟ್ಟಿರುತ್ತಾಳೆ. ಹಾಗೆ ವೃಷಭದ ಮೇಲೆ ಕೂತಿದ್ದಾಳೆ. ಹಾಗೆ ಒಂದು ಕೈಯಲ್ಲಿ ಕಮಲ ಮತ್ತೊಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡಿರುತ್ತಾಳೆ. ಹಾಗಾದ್ರೆ ಈ ವರ್ಷ ನವರಾತ್ರಿಯಲ್ಲಿ ಮೊದಲನೇ ದಿನ ಶೈಲಪುತ್ರಿ ಪೂಜೆಯನ್ನು ಮಾಡುವಾಗ ಯಾವ ಬಣ್ಣದ ಬಟ್ಟೆಯನ್ನು ತೊಟ್ಟು ಪೂಜೆ ಮಾಡಬೇಕು. ಯಾವ ಹೂವನ್ನು ಅರ್ಪಿಸಿ ಪೂಜೆ ಮಾಡಬೇಕು.
ಹಾಗೆ ಯಾವ ನೈವೇದ್ಯವನ್ನು ಇಟ್ಟು ಪೂಜೆ ಮಾಡಬೇಕು ಅಂತ ಇವಾಗ ತಿಳ್ಕೊಳ್ಳೋಣ ಬನ್ನಿ. ಈ ವರ್ಷ ನವರಾತ್ರಿಯ ಮೊದಲನೇ ದಿನ ಕಿತ್ತಳೆ ಬಣ್ಣ ಅಥವಾ ಆರೇಂಜ್ ಕಲರ್ ಬಟ್ಟೆಯನ್ನ ತೊಟ್ಟು ನೀವು ಪೂಜೆಯನ್ನು ಮಾಡಬೇಕಾಗುತ್ತೆ. ಇನ್ನು ಈ ಬಣ್ಣಗಳು ಏನಿದೆ, ಅದು ವರ್ಷ ವರ್ಷವೂ ಕೂಡ ಬೇರೆ ಬೇರೆ ಆಗ್ತಾ ಇರುತ್ತೆ. ಹಾಗಾಗಿ ಈ ವರ್ಷ ಆರೆಂಜ್ ಕಲರ್ ಇದೆ. ಅರೆಂಜ್ ಕಲರ್ ಬಟ್ಟೆಯನ್ನು ತೊಟ್ಟು ನೀವು ಪೂಜೆ ಮಾಡಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.