ಬೆಂಗಳೂರಿನ 10 ಪ್ರಸಿದ್ದ ದೇವಿ ದೇವಸ್ಥಾನಗಳು ಬಗ್ಗೆ ನೀವು ಅರಿಯದ ದೇವಿ ದೇಗುಲಗಳ ಶಕ್ತಿ ಇಲ್ಲಿದೆ ನೋಡಿ..

ನವರಾತ್ರಿ ಹಿಂದುಗಳಾದ ನಮಗೆ ಪವಿತ್ರವಾದ ಹಬ್ಬ, ಹೆಸರೇ ಸೂಚಿಸುವಂತೆ ನವರಾತ್ರಿಯ 9 ದಿನವೂ ಸಹ ದುರ್ಗಾದೇವಿಯ ವಿವಿಧ ಒಂಬತ್ತು ರೂಪಗಳನ್ನು ಪೂಜೆ ಮಾಡಲಾಗುತ್ತದೆ. ಯುದ್ಧದಲ್ಲಿ ರಾಕ್ಷಸನ ಮಹಿಷಾಸುರನನ್ನು ಸೋಲಿಸಿದ ದುರ್ಗಾದೇವಿಯನ್ನು ಗೌರವಿಸಲು ನವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.ಈ ಒಂಭತ್ತು ದಿನ ಗಳು ದೇವಿಯ ಆರಾಧನೆ ಗೆ ಅತ್ಯಂತ ಪ್ರಬಲ ಹಾಗು ಮಂಗಳಕರವಾಗಿರುವುದರಿಂದಲೇ ಪ್ರಪಂಚದಾದ್ಯಂತ ಜನರು ದೇವಿಯ ದೇಗುಲಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದವನ್ನು ಪಡೆದು ಪುನೀತರಾಗುತ್ತಾರೆ. ನಮ್ಮ ರಾಜಧಾನಿ ಬೆಂಗಳೂರು ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಯನ್ನು ಹೊಂದಿದ್ದು, ಇಲ್ಲಿ ಅನೇಕ ಅನೇಕ ದೇವಿ ದೇಗುಲಗಳಿವೆ. ನವರಾತ್ರಿ ಹಬ್ಬದ ಈ ಸುಸಂದರ್ಭ ದಲ್ಲಿ ನಮ್ಮ ರಾಜಧಾನಿಯಾದ ಬೆಂಗಳೂರು ನಗರದಲ್ಲಿ ಪ್ರಸಿದ್ಧ ವಾದ 10 ದೇವಿ ದೇಗುಲ ಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಸಾಧ್ಯವಾದ ರೆ ಈ ನವರಾತ್ರಿಯ ಲ್ಲಿ ಈ ಎಲ್ಲಾ ದೇಗುಲ ಗಳಿಗೂ ನಾವು ಭೇಟಿ ನೀಡಿ ಪುನೀತರಾಗೋಣ. ಮೊದಲನೆಯದಾಗಿ ಅಣ್ಣಮ್ಮ ದೇವಾಲಯ.

WhatsApp Group Join Now
Telegram Group Join Now

ನಮಗೆ ತಿಳಿದಿರುವಂತೆ ಅಣ್ಣಮ್ಮ ತಾಯಿ ಬೆಂಗಳೂರು, ನಗರದ ಅಧಿದೇವತೆ ಬೆಂಗಳೂರಿನ ಕಾವಲು ದೇವತೆ, ಗ್ರಾಮ ದೇವತೆ ಹಾಗು ನವ ಶಕ್ತಿ ಅಣ್ಣ ಮ್ಮ ಇಂದು ಈ ದೇವಿಯನ್ನು ಕರೆದು ಪೂಜಿಸಲಾಗುತ್ತದೆ. ಇತಿಹಾಸ ಪ್ರಸಿದ್ಧವಾದ ಅಣ್ಣಮ್ಮ ದೇವಸ್ಥಾನವು ಬೆಂಗಳೂರು ನಗರದ ಹೃದಯಭಾಗದಲ್ಲಿ ಇರುವಂತಹ ಗಾಂಧಿನಗರದಲ್ಲಿದ್ದು ಮೆಜೆಸ್ಟಿಕ್ ನಿಂದ ಕೇವಲ 200 ಮೀಟರ್ ದೂರದಲ್ಲಿದೆ. ಈ ದೇವಾಲಯ ಬೆಂಗಳೂರಿನ ಅತ್ಯಂತ ಪುರಾತನ ದೇಗುಲಗಳಲ್ಲಿ ಮುಂಚೂಣಿಯಲ್ಲಿ ಬರುತ್ತದೆ. ಈ ದೇಗುಲವನ್ನು ಸುಮಾರು 10 ನೇ ಶತಮಾನ ದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಮುಖ್ಯ ದೇವತೆ ಅಣ್ಣಮ್ಮನವರಾಗಿದ್ದು ಸಪ್ತಮಾತ್ರಿಕೆಯರ ರೂಪದಲ್ಲಿ ಈ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಬೆಂಗಳೂರು ಸಣ್ಣ ಗ್ರಾಮವಾಗಿದ್ದಾಗ ಗ್ರಾಮ ದೇವತೆ ಎಂದೇ ಕರೆಸಿ ಕೊಳ್ಳುತ್ತಿದ್ದ ಅಂತ ಅಣ್ಣಮ್ಮ ದೇವಿ ನಗರ ಬೆಳೆದಂತೆ ಈಗ ನಗರ ದೇವತೆಯಾಗಿದ್ದಾರೆ. ಬೆಂಗಳೂರು ನಗರ ನಿರ್ಮಾತೃ ಶ್ರೀ ಕೆಂಪೇಗೌಡರವರು ಅಣ್ಣಮ್ಮ ದೇವಿಯ ಪ್ರಮುಖ ಭಕ್ತರಾಗಿದ್ದರಂತೆ. ಹಲವು ಶತಮಾನಗಳ ಕೆಳಗೆ ಮುನಿ ಸ್ವಾಮಿ, ಅಣ್ಣ ಹಾಗು ಅಣ್ಣಪ್ಪ ಎಂಬ ಸಹೋದರರ ಕನಸಿನಲ್ಲಿ ಅಣ್ಣಮ್ಮ ದೇವಿಯು ಕಾಣಿಸಿಕೊಂಡು ನಾವು ಏಳು ಮಂದಿ ಅಕ್ಕ ತಂಗಿಯರು ಇದ್ದೇವೆ. ನಿಮ್ಮ ಜಮೀನಿನಲ್ಲಿ ನಾವು ಒಡಮೂಡಿದ್ದೇವೆ. ನನ್ನನ್ನು ಆರಾಧನೆ ಮಾಡಿದರೆ ನಿಮ್ಮ ಕುಟುಂಬಕ್ಕೆ ಒಳಿತಾಗುತ್ತದೆ ಎಂದು ಆದೇಶ ನೀಡಿದ್ದರಂತೆ.

ಅದರಂತೆ ಮುನಿ ಸ್ವಾಮಿ, ಅಣ್ಣಾ ಮತ್ತು ಅಣ್ಣ ಪ್ಪನವರ ಜಮೀನಿನಲ್ಲಿ ಅಣ್ಣ ಮತ್ತು ಏಳು ಸಣ್ಣ ಕಲ್ಲುಗಳ ಮೂಲಕ ಸಪ್ತ ಮಾತೃಕೆ ರೂಪದಲ್ಲಿ
ಒಡಮೂಡಿದರಂತೆ.ಅಂದಿನಿಂದಲೂ ಈ ಕಾಲದವರೆಗೂ ಅಣ್ಣಮ್ಮ ದೇವಿ ಬೆಂಗಳೂರು ನಗರವನ್ನು ಮತ್ತು ಬೆಂಗಳೂರು ನಗರ ವಾಸಿಗರನ್ನು ದುಷ್ಟ ಶಕ್ತಿಗಳಿಂದ ಹಾಗು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತಾ ಬಂದಿದ್ದಾರೆ. ತಮ್ಮ ಮಕ್ಕಳಿಗೆ ಅಮ್ಮ ಬಂದಾಗ ವಾಸಿಯಾಗಲಿ ಎಂದು ಮತ್ತು ಸಂತಾನಕ್ಕಾಗಿಯೇ ಜನರು ಈ ದೇವಿ ಯಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮೆಲ್ಲರ ಕಷ್ಟ ಪರಿಹಾರವಾದರೆ ದೇವಿಗೆ ಕೋಳಿ ಕುರಿ ಹಾಗೂ ಮೇಕೆಯನ್ನು ಬಿಡುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ.

ಕಷ್ಟ ಪರಿಹಾರವಾದರೆ ಅವುಗಳನ್ನು ಜೀವಂತವಾಗಿ ದೇವಾಲಯಕ್ಕೆ ತಂದು ಬಿಡುವ ಸಂಪ್ರದಾಯ ನೂರಾರು ವರ್ಷಗಳಿಂದಲೂ ಸಹ ಇಲ್ಲಿ ನಡೆದುಕೊಂಡು ಬಂದಿದೆ. ಅಣ್ಣಮ್ಮ ದೇವಿಗೆ ಮಂಗಳವಾರ ಹಾಗೂ ಶುಕ್ರವಾರಗಳಂದು ವಿಶೇಷವಾದ ಪೂಜೆಯನ್ನು ನಡೆಸಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿcrossorigin="anonymous">