ನಾವು ಒಂದು ಅದ್ಭುತವಾಗಿರುವಂತಹ ವಿಷಯವನ್ನು ತಿಳಿದುಕೊಳ್ಳೋಣ. ಅದೇನಪ್ಪಾ ಅಂದ್ರೆ ನಾವು ಮಲಗುವಾಗ ನಿದ್ದೆಯಲ್ಲಿ ಕೆಲವು ಕನಸುಗಳು ಬರುತ್ತೆ. ಕೆಲವು ರೀತಿಯ ಆಗಿರುವಂತಹ ಕನಸುಗಳು ಬರೋದರಿಂದ ವಿಶೇಷವಾಗಿರುವಂತ ಧನ ಯೋಗ ವಿಶೇಷವಾಗಿರುವಂತ ಅದೃಷ್ಟ ರಾಜಯೋಗ ಹಿಡಿಯುತ್ತೆ. ಕೆಲವು ಕನಸುಗಳು ಬಂದರೆ ಜೀವನದಲ್ಲಿ ಕಷ್ಟಗಳನ್ನು ಅನುಭವಿಸ ಬೇಕಾಗುತ್ತೆ. ಬೃಹಸ್ಪತಾಚಾರ್ಯರು ಸ್ವಪ್ನ ಅಧ್ಯಾಯ ಎನ್ನುವಂತಹ ಗ್ರಂಥದಲ್ಲಿ ಈ ಕನಸುಗಳ ಬಗ್ಗೆ ವಿವರಣೆ ಕೊಟ್ಟಿದ್ದಾರೆ.
ಬೃಹಸ್ಪತಾಚಾರ್ಯರು ಅಂದ್ರೆ ಗೊತ್ತಲ್ವಾ? ದೇವತೆಗಳಿಗೆ ಗುರು ಅವರು ರಚನೆ ಮಾಡಿರುವಂತ ಗ್ರಂಥವೇ ಈ ಸ್ವಪ್ನ ಅಧ್ಯಾಯ. ಈ ಗ್ರಂಥದಲ್ಲಿ ಕನಸುಗಳು ಅದರ ವಿಶೇಷವಾಗಿರುವಂತಹ ಫಲಿತಗಳು ಕನಸಿನಲ್ಲಿ ಬರುವಂತಹ ದೋಷಗಳಿಗೆ ಪರಿಹಾರಗಳನ್ನ ತಿಳಿಸಿಕೊಟ್ಟಿದ್ದಾರೆ. ಮುಖ್ಯವಾಗಿ ರಾಮಾಯಣದಲ್ಲಿ ರಾವಣ ಸೀತಾ ಮಾತೆಯನ್ನು ತಗೊಂಡು ಹೋಗಿ ಲಂಕಾ ಪಟ್ಟಣದಲ್ಲಿ ಕೊಡುತ್ತಾನೆ. ಅಶೋಕ ವನದಲ್ಲಿ ಈ ಸೀತೆಯನ್ನು ಬಂಧಿಸಿದಾಗ ಕೆಲವು ರಾಕ್ಷಸರನ್ನ ಸೀತಾ ದೇವಿಗೆ ಉಪಚಾರಗಳು ಮಾಡೊದಕ್ಕೆ ನೇಮಿಸುತ್ತಾನೆ.
ಹಾಗಾಗಿ ರಾಕ್ಷಸರಲ್ಲಿ ತ್ರಿಜಟ ಎನ್ನುವಂತಹ ಒಬ್ಬ ರಾಕ್ಷಸಿ ಸೀತೆ ಕಣ್ಣೀರು ಸುರಿಸುತ್ತಿದ್ದರೆ ಕಣ್ಣೀರನ್ನು ಒರೆಸುತ್ತಾಳೆ. ಸೀತೆ ಮಾತನಾಡ್ತಾ ಇದ್ರೆ ಧೈರ್ಯ ಹೇಳುತ್ತಾಳೆ. ಸೀತೆ ನೀನು ಯೋಚನೆ ಮಾಡಬೇಡ ಹತ್ತಿರದಲ್ಲೇ ರಾಮ ಬಂದು ನಿಮ್ಮ ಕೈ ಹಿಡಿತಾನೆ ಈ ರಾವಣ ಕುಂಭಕರ್ಣ ಈ ರಾಕ್ಷಸರೆಲ್ಲ ಸಾಯಿತಾರೆ ನೀನು ಧೈರ್ಯವಾಗಿರು ನನ್ನ ಕನಸಿನಲ್ಲಿ ಶ್ರೀರಾಮ ಬಿಳಿ ಕುದುರೆ ಮೇಲೆ ಬಿಳೀ ಛತ್ರಿ ಹಿಡ್ಕೊಂಡು ಬಂದು ನಿನ್ನ ಕೈ ಹಿಡಿದಂತೆ ನನ್ನ ಕನಸು ಬಂದಿತ್ತು.
ರಾವಣ ಕುಂಭಕರ್ಣ ಕೋಣದ ಮೇಲೆ ಕುತ್ಕೊಂಡು ರಕ್ತಪಾನ ಮಾಡಿಕೊಂಡು ದಕ್ಷಿಣಕ್ಕೆ ಹೋಗುವಂತೆ ನನಗೆ ಕನಸು ಬಂದಿತ್ತು. ಅಂದ್ರೆ ಅವರು ಹತ್ತಿರದಲ್ಲೇ ಸಾಯುತ್ತಾರೆ ಎಂದು ಈ ತ್ರಿಜಟೆ ಸೀತಾಮಾತೆಗೆ ಹೇಳ್ತಾ ಇರ್ತಾಳೆ. ಇದೇ ಸಂಘಟನೆ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲೂ ಸಹ ಬರುತ್ತೆ. ಅಭಿಮನ್ಯು ಚಕ್ರವ್ಯೂಹದಲ್ಲಿ ಯುದ್ಧ ಮಾಡುವಾಗ ಉತ್ತರ ಹೇಳ್ತಾಳೆ ಸ್ವಾಮಿ ಇವತ್ತು ನೀವು ಯುದ್ಧಕ್ಕೆ ಹೋಗಬೇಡಿ, ನನಗೇನೂ ಕೆಟ್ಟ ಕನಸು ಬರ್ತಾ ಇದೆ ಅಂದರೆ ಅಭಿಮನ್ಯು ಹೇಳುತ್ತಾನೆ. ಕನಸಲ್ಲಿ ಬರೋದು ನಡೆಯುತ್ತಿದ್ದರೆ ಖಂಡಿತವಾಗಲೂ ಇದೆ ಸ್ವಾಮಿ
ನಮ್ಮ ಗುರುಗಳು ನನಗೆ ಹೇಳಿದ್ದಾರೆ ಎಂದು ಈ ಕನಸಿನ ಬಗ್ಗೆ ವಿವರಣೆ ಕೊಡ್ತಾರೆ. ಅದ ಕಾರಣ ಕನಸಲ್ಲಿ ಬರೋದು ಖಂಡಿತವಾಗ್ಲೂ ನಡೆಯುತ್ತೆ. ಯಾರಿಗಾದರೆ ಈ ಸನಾತನ ಧರ್ಮದ ಮೇಲೆ ನಮ್ಮ ಪ್ರಾಚೀನ ಗ್ರಂಥಗಳ ಮೇಲೆ ನಂಬಿಕೆ ಇದೆಯೋ ಅವರು ಮಾತ್ರ ಈ ವಿಡಿಯೋ ನೋಡಿ. ನಂಬಿಕೆ ಇರುವವರು ಈ ವಿಡಿಯೋ ಕ್ಲಿಕ್ ಮಾಡಿ ನೀವು ಬೇರೆ ಮಾಡೋದು ತುಂಬಾ ಒಳ್ಳೆಯದು. ಒಂದನೇ ಜ್ಯಾವದಲ್ಲಿ ಬಂದಿರುವಂತಹ ಕನಸು 1 ವರ್ಷ ದಲ್ಲಿ ಫಲಿಸುತ್ತೆ ಅಂದರೆ ಪೂರ್ವ ಕಾಲದಲ್ಲಿ ಈ ವಾಚ್‌ಗಳು ತಿಳಿದಿರಲಿಲ್ಲ. ಹಾಗಾಗಿ ಜಾವ ಅಂತ ಲೆಕ್ಕ ಮಾಡುತ್ತಿದ್ದರು.
ಇದು ಒಂದನೇ ಜಾವ ಅಂದರೆ ರಾತ್ರಿ 8:00 ಗಂಟೆಯಿಂದ 10 ಗಂಟೆ ಒಳಗಡೆ ಇರೋದನ್ನ ಒಂದನೇ ಜಾವ ಅಂತಾರೆ 10 ಗಂಟೆಯಿಂದ 12 ಗಂಟೆವರೆಗೂ ಬರೋ ಸಮಯವನ್ನು ಎರಡನೇ ಜಾವ ಅಂತಾರೆ 12 ಗಂಟೆಯಿಂದ 3 ಗಂಟೆವರೆಗೂ ಬರುವಂತಹ ಸಮಯವನ್ನು ಮೂರನೇ ಜಾವ ಅಂತಾರೆ ಮೂರು ಗಂಟೆಯಿಂದ ಬೆಳಗ್ಗೆ 6 ಗಂಟೆ ಸಮಯಕ್ಕೆ ಬರುವಂತಹ ಸಮಯವನ್ನು ನಾಲ್ಕನೇ ಜಾವ ಎಂದು ಕರೀತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..