ಈ ಬಾರಿ ಚಂದ್ರಗ್ರಹಣ ಯಾವ ಸಮಯದಲ್ಲಿ ಜರುಗುತ್ತೆ..ಯಾವ ನಿಯಮ ಪಾಲಿಸಬೇಕು..ಯಾವ ತಪ್ಪು ಮಾಡಬಾರದು

ಈ ವರ್ಷದ ಕೊನೆಯ ಚಂದ್ರಗ್ರಹಣ ಯಾವಾಗ ಗ್ರಹಣದ ಸಮಯ ಯಾವಾಗ ಪ್ರಾರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ. ಗ್ರಹಣದ ಸಮಯದಲ್ಲಿ ತಪ್ಪದೇ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು ಮತ್ತು ಗ್ರಹಣದ ಆಚರಣೆ ಬಗ್ಗೆ ಇಂದು ತಿಳಿಯೋಣ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತ ದೆ. ಇದನ್ನೇ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಗ್ರಹಣ ಮತ್ತು ಸೂತಕದ ಕಾಲವನ್ನು ಅಶುಭ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ ಸೂತಕ ಅವಧಿಯ ಚಂದ್ರಗ್ರಹಣಕ್ಕೆ ಕೆಲವು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ.

WhatsApp Group Join Now
Telegram Group Join Now

ಗ್ರಹಣದ ಸೂತಕ ಅವಧಿಯು ಪ್ರಾರಂಭವಾದ ನಂತರ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳು ದೇವಾಲಯದ ಪ್ರವೇಶ ದೇವರನ್ನು ಮುಟ್ಟುವುದು, ಆಹಾರ ಸೇವನೆಯನ್ನು ನಿಷೇಧಿಸಲಾಗುತ್ತದೆ.ಈ ಸಮಯ ದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಯು ಜಾಸ್ತಿ ಇರುವುದರಿಂದ ಪ್ರಯಾಣ ಮಾಡುವುದು ಅಥವಾ ಮನೆಯಿಂದ ಹೊರಗೆ ಹೋಗಿ ಗ್ರಹಣವನ್ನು ನೋಡುವುದು ಕೂಡ ಒಳ್ಳೆಯದಲ್ಲ.

ವಿಶೇಷವಾಗಿ ಗರ್ಭಿಣಿಯರು ಗ್ರಹಣದ ಅವಧಿಯಲ್ಲಿ ತುಂಬಾ ಕಾಳಜಿ ವಹಿಸಬೇಕು. ಗರ್ಭಿಣಿಯರು ಚಂದ್ರ ಗ್ರಹಣದ ಸಮಯದಲ್ಲಿ ಮನೆ ಯಿಂದ ಹೊರಗೆ ಹೋಗುವುದಾದಲ್ಲಿ ಚಂದ್ರನ ನೋಡುವುದಾಗಲಿ ಮಾಡಬಾರದು. ಇದರಿಂದ ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಗ್ರಹಣದ ಒಂಬತ್ತು ಗಂಟೆಗಳ ಮೊದಲು ಚಂದ್ರ ಗ್ರಹಣದ ಸೂತಕ ಅವಧಿ ಪ್ರಾರಂಭವಾಗಿ ಗ್ರಹಣ ಮುಗಿದ ನಂತರ ಕೊನೆಗೊಳ್ಳುತ್ತದೆ. ವರ್ಷದ ಎರಡನೇ ಅಥವಾ ಕೊನೆಯ ಚಂದ್ರಗ್ರಹಣವನ್ನು ಭಾರತದಲ್ಲಿ ಕಾಣಬಹುದು.ಸೂತಕ ಕಾಲದ ಆರಂಭದ ನಂತರ ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಗ್ರಹಣ ಸಮಯದಲ್ಲಿ ಮಲಗಬಾರದು ಅಥವಾ ನಿದ್ದೆ ಮಾಡಬಾರದು.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಕತ್ತಿ, ಚಾಕು, ಸೂಜಿ, ಇನ್ನು ಮುಂತಾದ ಚೂಪಾದ ವಸ್ತುಗಳನ್ನು ಬಳಸಬಾರದು. ಇದರಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಆಹಾರ ಅಥವಾ ಘನ ಆಹಾರವಾಗಲಿ ಸೇವಿಸಬಾರದು.ಗ್ರಹಣ ಮೋಕ್ಷ ಕಾಲದ ನಂತರ ತಪ್ಪದೆ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಶುದ್ಧ ಜಲ ವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು. ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ ಪೂಜೆ ಸಲ್ಲಿಸಿ ಅಡುಗೆ ಮಾಡಿ ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣ ಕಾಲದಲ್ಲಿ ಮಾಡುವ ಆಹಾರವನ್ನು ತಿನ್ನಬಾರದು.

ಗ್ರಹಣ ಕಾಲದಲ್ಲಿ ಇರುವ ಊಟ ತಿಂಡಿಯೂ ವಿಷಕ್ಕೆ ಸಮಾನ ಎಂದು ಹೇಳುತ್ತಾರೆ. ಯಾರ ಮನೆಯಲ್ಲಿ ಬಾವಿಯಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆ ನೀರನ್ನು ಉಪಯೋಗಿಸಬೇಕು.ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆಯೋ ಅಂತವರು ನೀರಿನ ಪಾತ್ರೆಗಳಿಗೆ ಮತ್ತು ಹಾಲು ಮೊಸರು ತುಪ್ಪ ಎಣ್ಣೆಯಲ್ಲಿ ಕರಿದ ಪದಾರ್ಥಗಳಲ್ಲಿ ಇನ್ನು ಮುಂತಾದ ಆಹಾರ ಪದಾರ್ಥಗಳ ಮೇಲೆ ದರ್ಬೆ ತುಳಸಿ ಅಥವಾ ಗರಿಕೆಯನ್ನು ಹಾಕಿಡಬೇಕು.

ಯಾವಾಗ ಭೂಮಿಯ ನೆರಳು ಚಂದ್ರನ ಕೆಲವೇ ಭಾಗಗಳಲ್ಲಿ ಬೀಳುತ್ತ ದೆಯೋ ಆಗ ಅದಕ್ಕೆ ಭಾಗಶಃ ಚಂದ್ರಗ್ರಹಣ ಎಂದು ಕರೆಯ ಲಾಗುತ್ತದೆ. ಈಗ ಆಗುತ್ತಿರುವ ಚಂದ್ರಗ್ರಹಣದಲ್ಲಿ ಭೂಮಿಯ ನೆರಳು ಚಂದ್ರನ ಕೆಲವೇ ಕೆಲವು ಭಾಗಗಳಲ್ಲಿ ಬೀಳುತ್ತದೆ. ಹಾಗಾಗಿ ಈ ಬಾರಿ ಆಗುತ್ತಿರುವ ಚಂದ್ರಗ್ರಹಣವು ಭಾಗಶಃ ಚಂದ್ರಗ್ರಹಣ 2023 ಅಕ್ಟೋಬರ್ ಇಪ್ಪತೆಂಟು ಶನಿವಾರದಂದು ಚಂದ್ರಗ್ರಹಣ ಗೋಚರಿಸಲಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">