ಸಂಗೀತಾ ಹಾಗೂ ವಿನಯ್ ಜೀವನದಲ್ಲಿ ಹಿಂದೆ ನಡೆದಿರೋ ಘಟನೆ ಏನು..ಆ ಕೆಟ್ಟ ಪದ ಬಳಸಿದ್ಯಾಕೆ ಗೊತ್ತಾ ? ಇಲ್ಲಿದೆ ನೋಡಿ ಸತ್ಯ

ಬಿಗ್ ಬಾಸ್ ಸೀಸನ್ 10 ಶುರುವಾಗಿ ಹತ್ತಿರತ್ತಿರ ಎರಡು ವಾರಗಳು ಕಳೆಯುತ್ತ ಬಂದಿದೆ. ಇನ್ನು ಎಂದಿನಂತೆ ಎಲ್ಲ ಸೀಸನ್ಗಳಲ್ಲಿಯೂ ಇರುವಂತೆ ಈ ಸೀಸನ್ನಲ್ಲಿಯೂ ಸಹ ತಮಾಷೆ ಗುಂಪುಗಾರಿಕೆ ಈ ಜೋಡಿಯ ನಡುವೆ ಪ್ರೀತಿ ಹೀಗೆ ಒಂದಷ್ಟು ವಿಚಾರಗಳು ಸಾಮಾನ್ಯ ಎನಿಸಿದರೂ ಕೂಡ ಗಲಾಟೆ ಜಗಳಗಳ ವಿಚಾರಕ್ಕೆ ಬರುವುದಾದರೆ ಈ ಸೀಸನ್‌ನಲ್ಲಿ ಅದ್ಯಾಕೋ ಪ್ರತಿದಿನವೂ ಒಂದಲ್ಲ ಒಂದು ಜಗಳಗಳು ನಡೆಯುತ್ತಲೇ ಇದೆನ್ನಬಹುದು. ಇದಕ್ಕೆ ಮುಖ್ಯ ಕಾರಣ ಸಂಗೀತ ಹಾಗೂ ವಿನಯ ಅಂದ್ರೆ ತಪ್ಪಾಗಲಾರದು.

WhatsApp Group Join Now
Telegram Group Join Now

ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನದಿಂದಲೂ ಸಹ ಸಂಗೀತ ಮತ್ತು ವಿನಯ್ ನಡುವೆ ಆಗಾಗ ಜಗಳಗಳು ಆಗುತ್ತಲೇ ಇದೆ. ಇದು ಅತಿರೇಕ ಕೂಡ ಹೋಗಿದ್ದುಂಟು. ಅದರಲ್ಲು ಈ ಹಿಂದಿನ ವಿಚಾರಗಳ ನ್ನೆಲ್ಲ ತೆಗೆದು ಅಂದ್ರೆ ಬಿಗ್ ಬಾಸ್ ಮನೆಗೆ ಬರುವ ಮುಂಚೆ ಹಿಂದೆ ಇವರಿಬ್ಬರ ನಡುವೆ ನಡೆದಂತಹ ವಿಚಾರಗಳನ್ನೆಲ್ಲ ತೆಗೆದು ಮಾತನಾಡಿ ಒಬ್ಬರನ್ನೊಬ್ಬರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ಅನಿಸುವಷ್ಟು ಈ ಇಬ್ಬರ ನಡುವೆ ವೈಮನಸ್ಸು ಇರೋದಂತೂ ಸತ್ಯ. ಇನ್ನು ಇದೆಲ್ಲವು ಎಂದುಕೊಂಡು ಶೋ ನೋಡಿದರು ಕೂಡ ನಿನ್ನೆ ಆದ ಘಟನೆ ಅದ್ಯಾಕೋ ಇಬ್ಬರ ನಡುವೆ ಏನು ಸಹ ಸರಿ ಇಲ್ಲ ಎಂದು ಪ್ರೇಕ್ಷಕರಿಗೆ ಅನಿಸಿದ್ದು ಸತ್ಯ.


ನಿನ್ನೆ ಸಂಚಿಕೆಯಲ್ಲಿ ವಿನಯ್ ಗೌಡ ಅವರು ಬೀಪ್ ಸೌಂಡ್ ಹಾಕುವ ಷ್ಟು ಸಂಗೀತಗೆ ಕೆಟ್ಟ ಪದಗಳನ್ನ ಬಳಸಿ ಬಿದ್ದಿದ್ದು, ನಿಜಕ್ಕೂ ಪ್ರೇಕ್ಷಕರಿಗೆ ಮಾತ್ರವಲ್ಲ, ಬಿಗ್ ಬಾಸ್ ಮನೆಯ ಸದಸ್ಯರಿಗೂ ಸಹ ಒಂದು ಕ್ಷಣ ಶಾಕ್ ಆದಂತಾಯಿತು.ಅಷ್ಟಕ್ಕೂ ಆ ರೀತಿ ಕೆಟ್ಟ ಪದಗಳನ್ನೆಲ್ಲಾ ಬಳಸಿ ವಿನಯ್ ಸಂಗೀತ ಬಗ್ಗೆ ಮಾತನಾಡಲು ಏನು ಕಾರಣ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೇ ಇದೆ. ಸಂಗೀತ ಹಾಗೂ ವಿನಯ್ ವಿನಯ್ ಗೌಡ ಬಿಗ್ ಬಾಸ್ ಹತ್ತರಿಂದ ಮಾತ್ರ ಪರಿಚಯವಲ್ಲ. ಈ ಇಬ್ಬರು ಈ ಮೊದಲು ಒಂದಷ್ಟು ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ತೀರಾ ಹತ್ತಿರ ದಿಂದ ನೋಡಿರುವಂತಹ ಜೋಡಿ ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದಂತಹ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಸಂಗೀತ ಹಾಗೂ ವಿನಯ್ ಗೌಡ ಜೋಡಿಯಾಗಿ ಅಭಿನಯಿಸಿದರು.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಸಂಗೀತ ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ವಿನಯ್ ಗೌಡ ಮಹಾದೇವನ ಪಾತ್ರದಲ್ಲಿ ಜೀವ ತುಂಬಿದರು. ಇಬ್ಬರು ಸಹ ಅಕ್ಷರಶಃ ನಿಜವಾದ ಮಹಾದೇವ ಹಾಗು ಸತಿಯ ಎನ್ನುವ ಷ್ಟು ಪರ ಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ್ದರು.ಈ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಂತಹ ಆಧಾರವಾಗಿ ಸುವರ್ಣವಾಹಿನಿಗೆ ಹೊಸ ಮೈಲಿಗಲ್ಲಾಗಿತ್ತು. ರೇಟ್‌ನಲ್ಲಿ ಯೂ ಸಹ ಕುಸಿತ ಕಂಡಿದ್ದ ಸುವರ್ಣ ವಾಹಿನಿ ಮಹಾದೇವ ಧಾರಾವಾಹಿ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿತು. ರೇಟ್ ವಿಚಾರದಲ್ಲಿ ಭಕ್ತಿ ಪ್ರಧಾನ ಧಾರಾವಾಹಿ ಒಂದು ಹೊಸ ದಾಖಲೆಯನ್ನೇ ಮಾಡಿತ್ತು.

ಆ ಸಮಯದಲ್ಲಿ ಇನ್ನು ಈ ಧಾರಾವಾಹಿ ನೋಡಿದ ಪ್ರೇಕ್ಷಕರು ಈ ಬರೋದು ಅಂದ್ರೆ ವಿನಯ್ ಗೌಡ ಹಾಗು ಸಂಗೀತ ನನ್ನ ನಿಜವಾದ ಮಹಾದೇವ ಸತಿ ಎಂದೆ ಬಹಳ ಗೌರವ ನೀಡಿ ಮಾತನಾಡಿಸುತ್ತಿದ್ದ ಅಂತಹ ಉದಾಹರಣೆಗಳು ಉಂಟು. ಆದರೆ ಇಂತಹ ಜೋಡಿ ಈಗ ಬಿಗ್ಬಾಸ್ ಮನೆಯಲ್ಲಿ ಹಾವು ಮುಂಗುಸಿಯಂತಾದಲು ಕಾರಣವಾದರೂ ಏನು? ಇದಕ್ಕೆ ಉತ್ತರ ವಿನಯ್ ಅವರ ಬಾಯಿಂದಲೇ ನಿನ್ನೆ ಹೊರಬಿದ್ದಿದೆ.ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">