ಹಾಸನಾಂಬೆ ಗರ್ಭಗುಡಿ ರಹಸ್ಯ ಒಂದು ಹನಿ ಎಣ್ಣೆಯಿಂದ ವರ್ಷವಿಡೀ ಉರಿಯುತ್ತೆ ದೇವಸ್ಥಾನದ ದೀಪ…

ನಮಸ್ಕಾರ ಸ್ನೇಹಿತರೆ ಈ ದೇವಾಲಯ ವರ್ಷಕ್ಕೊಮ್ಮೆ 12 ದಿನಗಳು ಮಾತ್ರ ತೆಗೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಹೋಗಿ ಕಳ್ಳರು ಕಲ್ಲಾಗಿದ್ದಾರೆ ಎನ್ನುವ ನಿಗೂಢ ಕಥೆ ಇದೆ. ದೇವಿಯ ಗರ್ಭಗುಡಿಯ ಬಾಗಿಲು ಹಾಕುವ ಮೊದಲು ದೇವಿಗೆ ದೀಪವನ್ನು ಉರಿಸಿ ಹೂವು ಹಾಗೂ ನೈವೇದ್ಯ ಅರ್ಪಿಸಿ ಬಾಗಿಲು ಮುಚ್ಚ ಲಾಗುತ್ತದೆ. ಮುಂದಿನ ವರ್ಷ ಮತ್ತೆ ದೀಪಾವಳಿ ಸಂದರ್ಭದಲ್ಲಿ ಗರ್ಭಗುಡಿಯ ಬಾಗಿಲು ತೆಗೆದಾಗ ಕಳೆದ ವರ್ಷ ಉರಿಸಿದ ದೀಪ ಹಾಗೆಯೇ ಉರಿಯುತ್ತಿರುತ್ತದೆ ಹಾಗೂ ಹೂಗಳು ಸಹ ಹಾಗೆ ಇರುತ್ತವೆ. ದೇವಸ್ಥಾನ ಬಾಗಿಲು ತೆರೆದ ನಂತರ ಈ ಪ್ರದೇಶದಲ್ಲಿ ಯಾರ ಮನೆಯಲ್ಲೂ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ. ಹೌದು, ಇಂತಹ ಹಲವಾರು ಸಂಶಯಗಳನ್ನು ತನ್ನ ಗರ್ಭದಲ್ಲಿ ಹೊಂದಿರುವ ದೇವಸ್ಥಾನವೇ ಹಾಸನದ ಹಾಸನಾಂಬ ದೇವಸ್ಥಾನ.

WhatsApp Group Join Now
Telegram Group Join Now

ಬನ್ನಿ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ ನಿಮಗೆ ಹಾಸನಾಂಬೆ ದೇವಸ್ಥಾನದ ಹಲವಾರು ಕುತೂಹಲಕಾರಿ ವಿಷಯಗಳನ್ನು ಹೇಳಲಿಕ್ಕೆ ಹೋಗ್ತಾ ಇದ್ದೀನಿ. ಹಾಸನ ಎಂದಾಕ್ಷಣ ನೆನಪಿಗೆ ಬರೋದೇ ಈ ಊರಿನ ದೇವತೆ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದೇವಿಯ ದರ್ಶನ ಇದೆ ಎನ್ನುವ ಕಾರಣದಿಂದ ಈ ದೇಗುಲ ಸಾಕಷ್ಟು ಪ್ರಸಿದ್ಧಿಯನ್ನು ಗಳಿಸಿದೆ. ಅಷ್ಟೇ ಅಲ್ಲದೆ ತನ್ನ ನಂಬಿ ಬಂದವರನ್ನ ಎಂದೂ ಕೈಬಿಡದ ಈ ತಾಯಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಸಪ್ತಮಾತ್ರಿಕೆ ಎಂದು ಕರೆಯಲ್ಪಡುವ ಹಾಸನಾಂಭ ದೇವಾಲಯ ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ವಿಶಿಷ್ಟ ಪದ್ಧತಿಯಿಂದ ಅತ್ಯಂತ ಪ್ರಸಿದ್ಧಿಯಾಗಿದ್ದು, ದೀಪಾವಳಿ ಸಂದರ್ಭದಲ್ಲಿ ದೇಶ ವಿದೇಶದಿಂದ ಪ್ರವಾಸಿಗರು ಭಕ್ತಾದಿಗಳು, ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ಅಪರೂಪದ ದೇವಿಯ ದರ್ಶನ ಪಡೆಯುತ್ತಾರೆ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಹಾಸನಕ್ಕೆ ಹಿಂದೆ ಸಿಂಹಾಸನ ಪುರಿ ಒಂದು ಮಹಾಭಾರತ ಕಾಲಘಟ್ಟ ಪುಟಗಳು ತೆಗೆಯುತ್ತಾ ಹೋದಾಗ ಮಹಾಭಾರತದ ಅರ್ಜುನನ ಮೊಮ್ಮಗ ಜನಮೇ ಜಯ ಶಾಪಗ್ರಸ್ತನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ . ಕಾರಣ ಈ ಸ್ಥಳಕ್ಕೆ ಸಿಂಹಾಸನ ಪುರಿ ಎಂದು ಹೆಸರು ಬಂತೆಂದು ಇತಿಹಾಸ ಸಾರುತ್ತದೆ. ನಂತರ ಸಿಂಹಾಸನ ಪುನಃ ಆಡು ಮಾತಿನಲ್ಲಿ ಹಾಸನಯಿಂದಾಗಿ ಕರೆಯಲ್ಪಡುತ್ತದೆ. ಇನ್ನು ಪುರಾಣ ಗಳಲ್ಲೂ ಸಿಂಹಾಸನ ಪುರಿ ಅಂದ್ರೆ ಹಾಸನದ ಬಗ್ಗೆ ಉಲ್ಲೇಖಗಳ ಇದು ಸಪ್ತಮಾತ್ರಿಕೆಯರಾದ ವೈಷ್ಣವಿ ಇಂದ್ರಾಣಿ, ಮಹೇಶ್ವರಿ ಕುಮಾರಿ, ಬ್ರಾಹ್ಮೀ ದೇವಿ ವರಾಹಿ ಚಾಮುಂಡಿ, ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ನೆಲೆಸಲು ನಿರ್ಧರಿಸುವ ಕ್ಷೇತ್ರವೇ ಸಿಂಹಾಸನ ಪುರಿ ಅಂದ್ರೆ ಹಾಸನ ಎಂದು ವರ್ಣಿಸಲಾಗಿದೆ.

ಈ ಅದ್ಭುತ ಶಕ್ತಿ ದೇವಿಗೆ ಸಮರ್ಪಿಸಲಾಗಿರುವ ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು ಎಂದು ಇತಿಹಾಸ ಸಾರುತ್ತದೆ. ಪುರಾಣದ ಪ್ರಕಾರ ಹಿಂದೆ ಅಂಧಕಾಸುರ ಎಂಬ ರಾಕ್ಷಸನಿದ್ದನು ಕಠಿಣ ತಪಸ್ಸಿನ ನಂತರ ವಿಜಯನಾಗಲು ಬ್ರಹ್ಮ ನಿಂದ ವರವನ್ನು ಪಡೆಯುತ್ತಾನೆ. ಹೊಸದಾಗಿ ಸ್ವಾಧೀನಪಡಿಸಿಕೊಂಡ ಶಕ್ತಿಯಿಂದ ಎಲ್ಲವನ್ನು ಎಲ್ಲೆಡೆ ಹಾನಿಯನ್ನುಂಟು ಮಾಡಲು ಪ್ರಾರಂಭಿಸುತ್ತಾನೆ. ಶಿವನು ಅವನನ್ನು ಕೊಲ್ಲಲು ಪ್ರಯತ್ನಿಸಿದಾಗಲೂ ರಾಕ್ಷಸನ ದೇಹದ ಪ್ರತಿಯೊಂದು ಹನಿ ನೆಲಕ್ಕೆ ಬೀಳುತ್ತಿದ್ದಂತೆ ಅದರಿಂದ ರಾಕ್ಷಸರು ಸೃಷ್ಟಿಸಲು ಪ್ರಾರಂಭಿಸುತ್ತಾರೆ. ಶಿವನು ತನ್ನ ಶಕ್ತಿಯಿಂದ ಸಪ್ತಮಾತ್ರಿಕೆಯರ ಜೊತೆಗೆ ಯೋಗೇಶ್ವರಿ ದೇವಿಯನ್ನು ಸೃಷ್ಟಿಸುತ್ತಾನೆ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಅವರುಗಳೆಂದರೆ ಬ್ರಾಹ್ಮಿ ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ ಇಂದ್ರಾಣಿ ಮತ್ತು ಚಾಮುಂಡಿ. ಅವುಗಳ ಮೂಲಕ ಶಿವನು ರಾಕ್ಷಸನ ಅಂತ್ಯಗೊಳಿಸುತ್ತಾನೆ. ಹಾಸನಾಂಬ ದೇವಾಲಯವನ್ನು ಪಾಳೆಗಾರರ ಕಾಲದಲ್ಲಿ ನಿರ್ಮಿಸಲಾಗಿದ್ದು, ಹಾಸನಾಂಬ ದೇವಿಯು ಹುತ್ತದ ರೂಪದಲ್ಲಿ ನೆಲೆಸಿರುವುದನ್ನು ನೀವು ಇಲ್ಲಿ ಕಾಣಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">