ಧನ ತ್ರಯೋದಶಿ ದಿನದಂದು ಯಾವ ವಸ್ತುಗಳನ್ನು ಖರೀದಿ ಮಾಡಿ, ಯಾವ ವಸ್ತು ಗಳನ್ನು ದಾನ ಮಾಡುವ ಮೂಲಕ ಮನೆಯಲ್ಲಿ ಧನ ಸಂಪತ್ತನ್ನು ವೃದ್ಧಿ ಮಾಡಬಹುದು

ಧನ ತ್ರಯೋದಶಿ ದಿನದಂದು ಯಾವ ವಸ್ತುಗಳನ್ನು ಖರೀದಿ ಮಾಡಿ, ಯಾವ ವಸ್ತು ಗಳನ್ನು ದಾನ ಮಾಡುವ ಮೂಲಕ ಮನೆಯಲ್ಲಿ ಧನ ಸಂಪತ್ತನ್ನು ವೃದ್ಧಿ ಮಾಡಬಹುದು ಎಂದು ತಿಳಿಯೋಣ.ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ಅಂದರೆ ನವೆಂಬರ್ ಹತ್ತರಂದು ಧನ ತ್ರಯೋದಶಿ ಆಚರಿಸಲಾಗುತ್ತದೆ. ಧನ ತ್ರಯೋದಶಿ ಹಬ್ಬವನ್ನು ಧನ್ವಂತರಿ ವೈದ್ಯರ ಜನ್ಮದಿನ ವಾಗಿ ಆಚರಿಸಲಾಗುತ್ತದೆ. ಈ ದಿನ ಸಕ್ಕರೆ ಅಕ್ಕಿಯಿಂದ ಮಾಡುವ ಪಾಯಸ ಇದು ಸಾಧ್ಯವಿಲ್ಲವೆಂದಾದರೆ ಕೇವಲ ಅಕ್ಕಿಯನ್ನಾದರೂ ಇಟ್ಟು ದೇವರಿಗೆ ನೈವೇದ್ಯವನ್ನು ಮಾಡಬಹುದು. ಧನ ತ್ರಯೋದಶಿ ದಿನ ಸಂಪತ್ತಿನ ದೇವರಾದ ಕುಬೇರ ಲಕ್ಷ್ಮಿ ದೇವಿ ಧನ್ವಂತರಿ ದೇವರನ್ನು ಪೂಜಿಸ ಲಾಗುತ್ತದೆ.

WhatsApp Group Join Now
Telegram Group Join Now

ಈ ದಿನ ಚಿನ್ನ, ಬೆಳ್ಳಿ, ಆಭರಣ, ಆಸ್ತಿ ಗಳು ಹೀಗೆ ಕೆಲವೊಂದು ವಸ್ತು ಗಳನ್ನು ಖರೀದಿ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಖರೀದಿ ಮಾಡಿದ ವಸ್ತುಗಳಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ. ಆದರೆ ಚಿನ್ನ ಬೆಳ್ಳಿಯ ಬೆಲೆಯೂ ತುಂಬಾ ದುಬಾರಿಯಾಗಿರುವುದರಿಂದ ಪ್ರತಿಯೊಬ್ಬರು ಖರೀದಿಸಲು ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಐದು ವಸ್ತುಗಳನ್ನು ಖರೀದಿ ಮಾಡುವ ಮೂಲಕ ಸಂಪತ್ತನ್ನು ಅನೇಕ ಪಟ್ಟು ವೃದ್ಧಿಸುವುದರ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯ ಬಹುದು. ಧನ ತ್ರಯೋದಶಿ ದಿನದಂದು ಕೊತ್ತಂಬರಿ ಬೀಜ ಖರೀದಿಸುವುದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಕೊತ್ತಂಬರಿ ಸಂಪತ್ತಿನ ಹೆಚ್ಚಳವನ್ನು ಸೂಚಿಸುತ್ತದೆ ಎನ್ನುವ ನಂಬಿಕೆ ಧನ ತ್ರಯೋದಶಿ ದಿನದಂದು ಕೊತ್ತಂಬರಿ ಬೀಜಗಳನ್ನು ತಂದು ಲಕ್ಷ್ಮಿ ದೇವಿಗೆ ಅರ್ಪಿಸಿ ನಂತರ ಆ ಕೊತ್ತಂಬರಿ ಬೀಜಗಳನ್ನು ಬಿತ್ತಬೇಕು. ಕೊತ್ತಂಬರಿ ಬೀಜ ವು ಸಣ್ಣ ಸಣ್ಣ ಸಸಿಯಾಗಿ ಗಿಡವಾಗಿ ಬೆಳೆಯುತ್ತಾ ಹೋದ ಹಾಗೆ ವರ್ಷ ವಿಡೀ ಮನೆಯಲ್ಲಿ ಸಂಪತ್ತು ವೃದ್ಧಿಯಾಗಿ ಉಳಿಯುತ್ತದೆ ಎನ್ನುವ ನಂಬಿಕೆ. ಈ ದಿನದಂದು ಹಿತ್ತಾಳೆಯ ವಸ್ತು ಗಳನ್ನು ಖರೀದಿಸುವ ಮೂಲಕ ಹಬ್ಬವನ್ನು ಆಚರಿಸಬಹುದು. ಚಿನ್ನ ಮತ್ತು ಬೆಳ್ಳಿಯ ನಂತರ ಹಿತ್ತಾಳೆಯನ್ನು ಅತ್ಯಂತ ಶುಭ ವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಮನೆಗೆ ತರುವುದು ತಾಯಿ ಲಕ್ಷ್ಮಿ ಯನ್ನು ಮನೆಗೆ ಕರೆದಂತೆ ಎನ್ನುವ ಉಲ್ಲೇಖವಿದೆ.

ಧನ ತ್ರಯೋದಶಿ ದಿನದಂದು ಪೊರಕೆಯನ್ನು ಮನೆಗೆ ಕರೆ ತರುವ ಮೂಲಕ ತಾಯಿ ಲಕ್ಷ್ಮಿ ಮನೆಗೆ ಪ್ರವೇಶಿಸುತ್ತಾಳೆ ಎನ್ನುವ ನಂಬಿಕೆ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸುತ್ತೇವೆ. ಮನೆಯ ಎಲ್ಲಾ ನಕಾರಾತ್ಮಕತೆಯನ್ನು ತೆಗೆದುಹಾಕುತ್ತೇವೆ. ಆದ್ದರಿಂದ ಪೊರಕೆಯ ಪ್ರಾಮುಖ್ಯತೆಯನ್ನು ಬಹಳ ವಿಶೇಷವೆಂದು ಪರಿಗಣಿಸ ಲಾಗುತ್ತದೆ. ಧನ ತ್ರಯೋದಶಿ ದಿನದಂದು ಮನೆಗೆ ತರ ಬೇಕಾದ ನಾಲ್ಕನೆಯ ವಸ್ತು ಅಕ್ಷತೆ ಅಂದರೆ ಭತ್ತ ಮತ್ತು ಅಕ್ಕಿ ಅಕ್ಕಿ ಎಂದರೆ ಅಕ್ಷತೆ ಧರ್ಮಗ್ರಂಥ ಗಳಲ್ಲಿ ಅಕ್ಷತೆ ಯನ್ನು ಅತ್ಯಂತ ಶುಭ ವೆಂದು ಪರಿಗಣಿಸ ಲಾಗಿದೆ. ಅಕ್ಷತೆ ಎಂದರೆ ಸಂಪತ್ತಿನ ಅನಂತ ಹೆಚ್ಚಳ ಇದರಿಂದ ಸಂಪತ್ತು, ವೈಭವ ಮತ್ತು ಸಮೃದ್ಧಿಯನ್ನು ಹಂತವಾಗಿ ಹೆಚ್ಚಿಸಬಹುದು.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಪೌರಾಣಿಕ ನಂಬಿಕೆಗಳ ಪ್ರಕಾರ ಬಾರ್ಲಿಯನ್ನು ಕನಕ ಎಂದು ಪರಿಗಣಿಸಲಾಗುತ್ತದೆ. ಕನಕ ಎಂದರೆ ಚಿನ್ನ ಧನ ತ್ರಯೋದಶಿ ದಿನದಂದು ಬಾರ್ಲಿಯನ್ನು ಖರೀದಿಸುವುದರಿಂದ ಚಿನ್ನವನ್ನು ಖರೀದಿಸಿದ ಫಲ ವನ್ನೇ ಪಡೆಯ ಬಹುದು ಎಂದು ಹೇಳುತ್ತಾರೆ. ಧನ ತ್ರಯೋದಶಿಯಲ್ಲಿ ಬಾರ್ಲಿಯನ್ನು ಖರೀದಿಸುವುದು ತುಂಬಾ ಶ್ರೇಷ್ಠ. ನಾವು ಎಷ್ಟೇ ಪೂಜೆ ಪುನಸ್ಕಾರ ಮಾಡಿ ಧನಕನಕಗಳು ವೃದ್ಧಿ ಆದರೂ ನಾವು ಮಾಡುವ ದಾನದಿಂದ ಸಿಗುವ ಪುಣ್ಯ. ಅದರ ಫಲವಾಗಿ ನಮಗೆ ಸಿಗುವ ಧನ, ಸಂಪತ್ತು, ಆಶೀರ್ವಾದ ಗಳೇ ಬೇರೆ ಧನ ತ್ರಯೋದಶಿಯ ದಿನ ಕೆಲವು ವಸ್ತುಗಳನ್ನು ದಾನ ಮಾಡುವ ಸಂಪ್ರದಾಯ ಕೂಡ ಇದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">