ಹಾಸನಾಂಬ ದೇಗುಲದಲ್ಲಿ ಚಲಿಸುತ್ತಿದೆ ಕಲ್ಲು..ಇದರಿಂದಾಗುತ್ತಾ ಕಲಿಯುಗದ ಅಂತ್ಯ..ವರ್ಷಕ್ಕೊಮ್ಮೆ ದೇಗುಲ ತೆರೆಯುವುದೇಕೆ ನೋಡಿ

ಹಾಸನಾಂಬೆ ದೇವಾಲಯವು ವರ್ಷಕ್ಕೊಮ್ಮೆ ತೆರೆದು ದರ್ಶನ ನೀಡುವ ದೇವಾಲಯವಾಗಿದ್ದು, ಈ ಹಾಸನಾಂಬೆಯ ಸನ್ನಿಧಿಯಲ್ಲಿ ಇರುವಂತಹ ಕಲ್ಲು ಚಲಿಸುತ್ತಿದೆ ಎನ್ನುವಂತಹ ಮಾತಿದೆ. ಹಾಗಾದರೆ ಆ ಕಲ್ಲು ಯಾವುದು? ಆ ಕಲ್ಲು ಕಲಿಯುಗದ ಅಂತ್ಯವನ್ನು ಸೂಚಿಸಿತ್ತಿದ್ಯಾ ಅನ್ನೋದನ್ನ ನೋಡೋಣ. ಅದಕ್ಕಿಂತ ಮುಂಚಿತವಾಗಿ ಹಾಸನಾಂಬೆ ದೇವಾಲಯದ ಸಂಪೂರ್ಣವಾದ ಮಾಹಿತಿಯನ್ನ ತಿಳಕೊಂಡು ಬರೋಣ.

WhatsApp Group Join Now
Telegram Group Join Now

ಕರ್ನಾಟಕದ ಹಾಸನ ಜಿಲ್ಲೆಯ ಹಾಸನ ನಗರದಲ್ಲಿದೆ ಈ ಹಾಸನಾಂಬ ದೇವಾಲಯ ಸಿಂಹಾಸನ ಪುರಿ ಎಂಬ ಪ್ರಾಚೀನ ಹೆಸರನ್ನು ಹೊಂದಿದ್ದ ಈ ಪ್ರಾಂತ್ಯವು ಹಸನ್ಮುಖಿಯಾದ ಸಪ್ತ ಮಾತೃಕಾ ದೇವತೆಗಳು ನೆಲೆಸಿದ್ದರಿಂದ ಹಾಸನ ಎಂದು ಹೆಸರಾಗಿ ಇಲ್ಲಿ ನೆಲೆಸಿದ್ದ ದೇವಿಯನ್ನ ಹಾಸನಾಂಬೆ ಹಾಸನಮ್ಮ ಎಂದು ಕರೆಯಲಾಯಿತು. ದುಷ್ಟರ ಸಂಹಾರಕ್ಕಾಗಿ ಆದಿಶಕ್ತಿಯು ಬ್ರಹ್ಮನ ಶಕ್ತಿ ರೂಪವಾಗಿ ಬ್ರಾಹ್ಮಣಿ ಈಶ್ವರನ ಶಕ್ತಿ ರೂಪವಾಗಿ ಮಾಹೇಶ್ವರಿ ಸುಬ್ರಹ್ಮಣ್ಯನ ಶಕ್ತಿಯಾಗಿ ಕೌಮಾರಿ ವಿಷ್ಣು ಶಕ್ತಿಯಾಗಿ ವೈಷ್ಣವಿ ವಾರಾಹರೂಪಿ ಶಕ್ತಿಯಾಗಿ ವಾರಾಹಿ ಇಂದ್ರ ಶಕ್ತಿಯ ಸ್ವರೂಪಳಾಗಿ ಇಂದ್ರಾಣಿ ಮತ್ತು ಸ್ವಯಂ ಆದಿಶಕ್ತಿಯೇ ಚಾಮುಂಡಿಯ ರೂಪದಲ್ಲಿ ಅವತರಿಸಿ ದುಷ್ಟರನ್ನು ಸಂಹರಿಸಿ ಉತ್ತರ ಪ್ರದೇಶದ ವಾರಣಾಸಿ ಅಂದರೆ ಕಾಶಿಯಿಂದ.

ಈ ಸಪ್ತ ಮಾತೃಕೆಯರು ಭೂಮಿಯಲ್ಲಿಯೇ ಶಾಶ್ವತವಾಗಿ ನೆಲೆಸಲು ಸೂಕ್ತವಾದ ಸ್ಥಳವನ್ನು ಹುಡುಕಲಾರಂಭಿಸಿ ಉತ್ತರ ಭಾರತವನ್ನೆಲ್ಲ ಹುಡುಕಿ ವಿಂಧ್ಯ ಪರ್ವತವನ್ನು ದಾಟಿ ದಕ್ಷಿಣದ ಕಡೆ ಬಂದರು. ಇಲ್ಲಿನ ಹಚ್ಚ ಹಸಿರಿನ ಪರಿಸರ ಪ್ರಶಾಂತವಾದ ಸ್ಥಳದಲ್ಲಿ ನೆಲೆಸಲು ನಿರ್ಧರಿಸಿ ದರು. ಪರ್ವತವಲ್ಲದ ಹೊಡೆದವಲ್ಲದ ಕಣಿವೆಯಲ್ಲದ ಮಲೆನಾಡು ಮತ್ತು ಬಯಲು ಸೀಮೆಯ ಕೂಡು ಸ್ಥಳವಾದ ಹಾಸನದಲ್ಲಿ ನೆಲೆಸಲು ನಿರ್ಧರಿಸಿ ಈ ಸಪ್ತಮಾತೃಕೆಯರು ಹಾಸನದಲ್ಲಿಯೇ ನೆಲೆ ನಿಂತರು.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಚಾಮುಂಡಿಯು ಹಾಸನದ ಕೆಲವು ಕಿಲೋಮೀಟರ್ ದೂರದಲ್ಲಿ ರುವಂತಹ ಕೆಂಚಮ್ಮನ ಹೊಸಕೋಟೆ ಎಂಬಲ್ಲಿ ನೆಲೆಸಿದ್ದರೆ ದೇವಿಗೆರೆ ಎಂಬ ಕೊಳದಲ್ಲಿ ಇಂದ್ರಾಣಿ ಕೌಮಾರಿ ಮತ್ತು ವರಾಹಿ ದೇವಿಯರು ಜಲ ವಾಸಿಗಳಾಗಿ ಕೊಳದ ತಳದಲ್ಲಿ ನೆಲೆಸಿದರು. ಇನ್ನು ಮಾಹೇಶ್ವರಿ ದೇವಿಯು ತನ್ನ ಎಡಬಲ ಭಾಗದಲ್ಲಿ ಬ್ರಾಹ್ಮಿ ಮತ್ತು ವೈಷ್ಣವಿ ದೇವಿಯರ ಒಟ್ಟಿಗೆ ಈಗಿನ ಹಾಸನಾಂಬ ದೇವಾಲಯವಿರುವ ಸ್ಥಳದಲ್ಲಿಯೇ ಹುತ್ತ ಮತ್ತು ಶಿಲಾ ರೂಪದಲ್ಲಿ ನೆಲೆನಿಂತರು ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ.

ಹಾಸನಾಂಬ ದೇವಿಗೆ ದೇವಾಲಯವನ್ನು ಕಟ್ಟಿಸಿದವರು ಯಾರು? ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬ ದೇವಿಯ ದೇವಾಲಯ ತೆರೆಯು ವುದಾದರೂ ಯಾಕೆ ಎಂಬ ಅಂಶಗಳನ್ನ ನೋಡೋಣ ಬನ್ನಿ. ಹಾಸನ ಚೋಳರ ಆಳ್ವಿಕೆ ಗೆ ಒಳಪಟ್ಟ ಪ್ರಾಂತ್ಯವಾಗಿತ್ತು. ನಂತರದಲ್ಲಿ ಗಂಗರ ಆಳ್ವಿಕೆಗೆ ಒಳಪಟ್ಟಿತ್ತು. ತದನಂತರ ಪ್ರವರ್ಧಮಾನಕ್ಕೆ ಬಂದ ಹೊಯ್ಸಳರ ಆಡಳಿತಕ್ಕೆ ಹಾಸನ ಸೇರಿಕೊಂಡಿತು. ಹೊಯ್ಸಳರ ಪ್ರಾದೇಶಿಕ ನಾಯಕನಾದ ಸಂಜೀವ ಕೃಷ್ಣಪ್ಪ ನಾಯಕ ಈ ಪ್ರಾಂತ್ಯವನ್ನ ನೋಡಿಕೊಳ್ತಿದ್ದ ಈ ಸಂಜೀವ ಕೃಷ್ಣಪ್ಪನಾಯಕ ರಾಜ ವೈಭವ ದೊಂದಿಗೆ ಮಹತ್ತರ ಕಾರ್ಯದ ನಿಮಿತ್ತ ಪ್ರಯಾಣ ಹೊರಟಿದ್ದ ವೇಳೆ ಮೊಲವೊಂದು ಅಡ್ಡ ಬಂತು. ಆ ಮೊಲವು ನಗರದ ಒಳಕ್ಕೆ ಹೋಯಿತು. ಇದನ್ನು ಅಪಶಕುನವೆಂದು ಭಾವಿಸಿದ ಕೃಷ್ಣಪ್ಪನಾಯಕ ಪ್ರಯಾಣವನ್ನು ನಿಲ್ಲಿಸಿದ ಬಹಳಷ್ಟು ಕಿನ್ನತೆಗೆ ಒಳಗಾದ ಅದನ್ನೇ ಚಿಂತಿಸುತ್ತಾ ಕೊನೆಗೆ ಹಾಸನ ನಗರವನ್ನೇ ಬಿಡುವ ನಿರ್ಧಾರವನ್ನು ಮಾಡಿದ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಆದರೆ ಆ ದಿನ ರಾತ್ರಿ ಸಂಜೀವ ಕೃಷ್ಣಪ್ಪ ನಾಯಕನ ಕನಸಿನಲ್ಲಿ ಆದಿ ಶಕ್ತಿ ಹಾಸನಾಂಬ ದೇವಿಯು ಕಾಣಿಸಿಕೊಂಡು ಮಗು ಚಿಂತಿಸದಿರು. ಈ ನಗರದಲ್ಲಿ ನಾನು ಹುತ್ತದ ರೂಪದಲ್ಲಿ ನೆಲೆಸಿದ್ದೇನೆ. ನನಗೆ ಗುಡಿಯೊಂದನ್ನು ಕಟ್ಟಿಸಿ ಆರಾಧಿಸು ನಿನಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದಳು. ತಕ್ಷಣ ಎಚ್ಚರಗೊಂಡ ಸಂಜೀವ ಕೃಷ್ಣಪ್ಪ ನಾಯಕನು ಮುಂಜಾನೆ ದೇವಿ ತಿಳಿಸಿದ ಸ್ಥಳಕ್ಕೆ ಹೋಗಿ ಅಲ್ಲಿ ನಮಸ್ಕರಿಸಿ. ಪುಟ್ಟ ಗುಡಿಯೊಂದನ್ನು ಕಟ್ಟಿಸಿ ಆರಾಧಿಸಿದನು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">