ಮನಸಿಗೆ ಬಂದ ಹಾಗೆ ದೀಪ ಮನಸಿಗೆ ಬಂದ ಹಾಗೆ ದೀಪ ಹಚ್ಚಬೇಡಿ.ಮನೆಯಲ್ಲಿ ಇಷ್ಟು ದೀಪ ಹಚ್ಚಿದ್ರೆ ಮಾತ್ರ ನಿಮಗೆ ಒಳ್ಳೆದಾಗೋದು…ಮನೆಯಲ್ಲಿ ಇಷ್ಟು ದೀಪ ಹಚ್ಚಿದ್ರೆ ಮಾತ್ರ ನಿಮಗೆ ಒಳ್ಳೆದಾಗೋದು..
ಮನಸ್ಸಿಗೆ ಬಂದ ಹಾಗೆ ಮನೆಯಲ್ಲಿ ದೀಪ ಹಚ್ಚಬೇಡಿ. ಮನೆಯಲ್ಲಿ ಇಷ್ಟು ದೀಪ ಹಚ್ಚಿದರೆ ಮಾತ್ರ ನಿಮಗೆ ಒಳ್ಳೆಯದು. ತುಂಬಾ ಜನಗಳಿಗೆ ದೀಪಗಳ ಬಗ್ಗೆ ಕುತೂಹಲ ಜಾಸ್ತಿ ಇರುತ್ತ ದೆ. ದೀಪ ಪರಂ ಜ್ಯೋತಿ ಎಂದು ಹೇಳುತ್ತಾರೆ. ದೀಪದಿಂದ ಪರಮಾತ್ಮನನ್ನು ಕಾಣುವುದು ಸಾಧ್ಯ ಯಾವುದೇ ಶುಭಕಾರ್ಯ ದೀಪವಿಲ್ಲದೆ ನಡೆಯುವುದಿಲ್ಲ. ದೀಪವೇ ಮೊದಲು ಹಚ್ಚುವುದು. ಮನೆ ಒಳಗೆ ಎಷ್ಟು ದೀಪವನ್ನು ಹಚ್ಚಬೇಕು? ಮನೆ ಹೊರಗಡೆ ಎಷ್ಟು ದೀಪ ಹಚ್ಚಬೇಕು? ದೇವಸ್ಥಾನದಲ್ಲಿ ಎಷ್ಟು ದೀಪ ಹಚ್ಚಬೇಕು ಎನ್ನುವ ಅನುಮಾನ ತುಂಬಾ ಜನರಿಗೆ ಇರುತ್ತದೆ.
ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು ಎನ್ನುವ ವಿಷಯ ತುಂಬಾ ಕಾಡುತ್ತದೆ. ನಿಮ್ಮ ಮನೆಯಲ್ಲಿ ದೀಪ ಹಚ್ಚುವಾಗ ಖಂಡಿತ ಎರಡು ದೀಪಗಳನ್ನು ಹಚ್ಚಬೇಕು ಏಕೆ ಎಂದರೆ ಪ್ರತಿಯೊಬ್ಬರಿಗೂ ಗೌರಿಯ ಸಂಕೇತ ಹಾಗು ಶಿವನ ಸಂಕೇತ ಎಂದು ಹೇಳುತ್ತಾರೆ. ಮನೆಯಲ್ಲಿ ದೇವರ ಆರಾಧನೆ ಮಾಡುವಾಗ ತಪ್ಪದೇ ಮನೆಯಲ್ಲಿ ದೀಪವನ್ನು ಆರಾಧಿಸುತ್ತೇವೆ. ದೀಪವನ್ನು ಬೆಳಗುತ್ತಾರೆ. ದೀಪ ಪರಂ ಜ್ಯೋತಿ ಎಂಬ ಮಾತನ್ನು ಕೂಡ ಕೇಳಿರುತ್ತೇವೆ. ದೀಪಾರಾಧನೆಯನ್ನು ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯು ನಾಶವಾಗುತ್ತದೆ.
ಆ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ ಮತ್ತು ಮನೆಗೆ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಹಾಗಾದರೆ ಮನೆಯಲ್ಲಿ ಎಷ್ಟು ಸಂಖ್ಯೆಯ ದೀಪವನ್ನು ಹಚ್ಚಬೇಕು? ಎರಡು ದೀಪವನ್ನು ಹಚ್ಚಿ ಅದರಲ್ಲಿ ಖಂಡಿತ ಎರಡು ಬತ್ತಿಗಳು ಇರುವುದು ನಿಮ್ಮ ಧರ್ಮ. ಹೌದು, ಮನೆಯಲ್ಲಿ ಯಾವತ್ತಿಗೂ ಎರಡು ದೀಪವನ್ನು ಹಚ್ಚಬೇಕು. ಹೇಗೆ ವ್ಯಕ್ತಿಗೆ ತನ್ನ ಜೊತೆಗಾರನಾಗಿ ಒಬ್ಬರಿಗೊಬ್ಬರು ಬೇಕು ಹಾಗು ತಮ್ಮ ಕಷ್ಟ ಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಬ್ಬರಿಗೊಬ್ಬರು ಬೇಕು. ಅದೇ ರೀತಿ ಮನೆಯಲ್ಲಿ ಎರಡು ಸಂಖ್ಯೆಯಲ್ಲಿ ದೀಪವನ್ನು ಹಚ್ಚಬೇಕು.
ಎರಡು ದೀಪ ವನ್ನು ಮನೆಯಲ್ಲಿ ಬೆಳಗುವುದರಿಂದ ಅದರ ಸಮತೋಲನದಿಂದಾಗಿ ಮನೆಯಲ್ಲಿಯೂ ಸಹ ಎಲ್ಲವೂ ಸಮಾನವಾಗಿರುತ್ತದೆ. ಆರೋಗ್ಯವಿರಲಿ, ಸಿರಿ ಸಂಪತ್ತು ಇವೆಲ್ಲವೂ ವೃದ್ಧಿಸುತ್ತದೆ. ಮನೆಯಲ್ಲಿ ಎರಡು ಸಂಖ್ಯೆಯ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತದೆ. ಶ್ರೇಷ್ಠ ಎಂದು ಶಾಸ್ತ್ರಗಳು ತಿಳಿಸಿವೆ. ಕೆಲವರಂತೂ ಹೆಚ್ಚು ಜಾಗವಿದೆ ಎಂದು ದೊಡ್ಡದಾದ ದೇವರ ಕೋಣೆಯನ್ನು ಕಟ್ಟಿಸುತ್ತಾರೆ. ಇನ್ನು ಅದೇ ರೀತಿಯಲ್ಲಿ ದೊಡ್ಡ ದೊಡ್ಡ ವಿಗ್ರಹಗಳನ್ನು ಇಟ್ಟು ಪೂಜಿಸುತ್ತ ಇರುತ್ತಾರೆ. ಇರಲಿ ಎಂದು ದೊಡ್ಡ ದೀಪಾಲಯ ಕಂಬಗಳನ್ನು ಇರಿಸಿ ಪೂಜೆಯನ್ನು ಸಲ್ಲಿಸುತ್ತಾರೆ.
ಎಡಗಡೆ ಒಂದು ಬಲಗಡೆ ಒಂದು ಹಚ್ಚಿದರೆ ಅದು ಒಂದು ಅದ್ಭುತ. ಆದರೆ ಮನೆಯಲ್ಲಿರುವ ದೇವರ ಕೋಣೆಯಲ್ಲಿ. ಮೂರು ಇಂಚಿಗಿಂತ ದೊಡ್ಡದಾದ ದೀಪವನ್ನು ಹಚ್ಚುವಂತಿಲ್ಲ. ಎರಡು ಇಂಚು ಅಥವಾ ಮೂರು ಇಂಚಿನ ದೀಪವನ್ನು ಮನೆಯಲ್ಲಿ ಬೆಳಗುವುದರಿಂದ ಅದು ಶ್ರೇಷ್ಠ ಎಂದು ಹೇಳಲಾಗಿದೆ. ಅದಕ್ಕಿಂತ ದೊಡ್ಡದಾದ ದೀಪಾಲೆ ಕಂಬ ಗಳನ್ನು ಇರಿಸಿ ದೀಪವನ್ನು ಉರಿಸುವುದರಿಂದ ಅದು ಮನೆಗೆ ಶ್ರೇಷ್ಠ ವಲ್ಲ ಅಂತ ಕೂಡ ಹೇಳಲಾಗುತ್ತದೆ. ಎರಡರಿಂದ ಮೂರು ಇಂಚಿನ ದೀಪ ಇದ್ದರೂ ಸಾಕು. ಮೂರು ಇಂಚಿಗಿಂತ ಜಾಸ್ತಿ ಬೇಡ. ದಿನನಿತ್ಯ ಹಚ್ಚುವ ದೇವತಾ ಕಾರ್ಯಕ್ಕೆ ಎರಡು ಇಂಚಿನ ದೀಪ ಅತ್ಯಂತ ಶ್ರೇಷ್ಠ ಫಲವನ್ನು ತಂದುಕೊಡುತ್ತದೆ.
ಒಂದು ರೀತಿಯ ಸಮಾಧಾನ ಇದರಿಂದ ಸಿಗುತ್ತದೆ. ಒಂದು ಒಳ್ಳೆಯದು ಕೆಟ್ಟದ್ದು ಪ್ರತಿಯೊಬ್ಬರಲ್ಲೂ ಇರುತ್ತ ದೆ. ಅದು ಸಮಾನಂತರ ವಾಗಿರಬೇಕು. ತುಂಬಾ ಜಾಸ್ತಿ ಆದರೂ ಕಷ್ಟ ಆಗುತ್ತದೆ. ಅದು ಸಮಾನ ವಾಗಿದ್ದರೆ ಮಾತ್ರ ಚಂದ. ಮನೆಯಲ್ಲಿ ಪ್ರತಿದಿನ ಎರಡು ದೀಪಗಳನ್ನು ಹಚ್ಚಿ ಅತ್ಯಂತ ಶ್ರೇಷ್ಠ ಫಲ ಕಾಣುವಿರಿ. ಕಷ್ಟ ಸುಖ ಎನ್ನುವುದು ಸುಖ ದುಕ್ಕ ಸಾಮಾನ್ಯವಾಗಿ ಸಿಗುತ್ತದೆ. ಅಧಿಕಾರ ಅವಧಿಯಲ್ಲಿ ನಿಮ್ಮ ಹಿಡಿತ ಕೈಯಲ್ಲಿರುತ್ತದೆ. ಎರಡು ದೀಪ ಹಚ್ಚುವುದು ಸರ್ವಶ್ರೇಷ್ಠ ಆಗಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.