ಮನೆಯ ಮುಖ್ಯ ದ್ವಾರ ಈ ರೀತಿ ಇರಲೆಬಾರದು ಕಷ್ಟ ಹಾಗೂ ಕಣ್ಣೀರು ತಪ್ಪೋದಿಲ್ಲ..ಹುಷಾರ್..!

ಮನೆಯ ಮುಖ್ಯದ್ವಾರ ಈ ರೀತಿ ಇದ್ರೆ ಮನೆ ಯಾವ ಕಾರಣಕ್ಕೂ ಉದ್ದಾರ ಆಗೋದಿಲ್ಲ ಅನ್ನೊ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡತೀನಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮನೆಯಲ್ಲಿ ವಾಸಿಸುವ ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿಯಲ್ಲಿ ಮುಖ್ಯ ಬಾಗಿಲಿನ ಸ್ಥಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮನೆಯ ಮುಖ್ಯದ್ವಾರವು ತಪ್ಪಾದ ದಿಕ್ಕಿನಲ್ಲಿದ್ರೆ ಅಥವಾ ತಪ್ಪು ಸ್ಥಾನದಲ್ಲಿದ್ರೆ ಮನೆಯ ಮಾಲೀಕರು ಮತ್ತು ಮನೆಯ ಇತರೆ ಸದಸ್ಯರು ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

WhatsApp Group Join Now
Telegram Group Join Now

ಅಂತಹ ಪರಿಸ್ಥಿತಿಯಲ್ಲಿ ಮುಖ್ಯದ್ವಾರ ಮತ್ತು ಇತರೆ ಪ್ರವೇಶ ದ್ವಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವುದು ಅಗತ್ಯವಾಗಿರುತ್ತೆ. ಮುಖ್ಯ ದ್ವಾರವನ್ನ ಸರಿಯಾಗಿ ಇರಿಸಿದರೆ ಮನೆಯ ಮಾಲೀಕರು ಪ್ರತಿ ಯೊಂದು ಕ್ಷೇತ್ರದಲ್ಲೂ ಯಶಸ್ಸನ್ನ ಪಡೀತಾರೆ. ಇದಕ್ಕೆ ತದ್ವಿರುದ್ಧವಾಗಿ, ತಪ್ಪಾದ ಸ್ಥಾನದಲ್ಲಿ ಪ್ರವೇಶ ದ್ವಾರವು ಇದ್ದಲ್ಲಿ ಗಂಭೀರ ಅಪಘಾತ ಗಳು ಇದ್ದಕ್ಕಿದ್ದಂತೆ ಸಂಭವಿಸುವುದಕ್ಕೆ ಪ್ರಾರಂಭವಾಗುತ್ತವೆ. ಕಟ್ಟಡ ನಿರ್ಮಾಣದ ಯೋಜನೆಯಲ್ಲಿ ಮೊದಲ ವಿಷಯ ಅಂತ ಅಂದ್ರೆ ಮುಖ್ಯದ್ವಾರದ ಸರಿಯಾದ ನಿರ್ಣಯವನ್ನ ತಗೊಳ್ಳೋದು ಮನೆಯ ಮುಖ್ಯದ್ವಾರವು ಇತರೆ ಪ್ರವೇಶದ್ವಾರಗಳಿಗಿಂತ ದೊಡ್ಡದಾಗಿರಬೇಕು.

ಮುಖ್ಯದ್ವಾರವು ಸುಂದರ ಮತ್ತು ಬಲವಾಗಿರಬೇಕು. ಆದರೆ ಅದು ಎಂದಿಗೂ ತುಂಬಾ ಮಿಂಚುವ ತರಹ ಅಥವಾ ವಿಚಿತ್ರ ಆಕಾರದಲ್ಲಿ ರಬಾರದು. ಮುಖ್ಯ ಬಾಗಿಲನ್ನು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ದ ಬರಬಾರದು. ಮರದಿಂದ ಮಾಡಿದ ಮುಖ್ಯ ದ್ವಾರವು ಹೆಚ್ಚು ಆಕರ್ಷಕವಾಗಿರುತ್ತೆ. ನೀವು ಬಯಸಿದರೆ ನೀವು ಮರದ ಬಾಗಿಲಿನ ಮೇಲೆ ಕಬ್ಬಿಣ ಅಥವಾ ಗಾಜಿನ ಬಳಸಬಹುದು. ಆದರೆ ಸಂಪೂರ್ಣ ಬಾಗಿಲು ಗಾಜು ಅಥವಾ ಇತರೆ ಲೋಹದಿಂದ ಮಾಡಬಾರದು. ಇಂದಿನ ದಿನಗಳಲ್ಲಿ ಮುಖ್ಯದ್ವಾರದಲ್ಲಿ ಹೊಸ್ತಿಲು ಇರೋದೇ ಇಲ್ಲ. ಇದು ಸರಿಯಲ್ಲ. ಮುಖ್ಯ ದ್ವಾರವು ಹೊಸ್ತಿಲ ಹೊಂದಿರಬೇಕು. ಇದರ ಎತ್ತರವು ಮನೆಯಿಂದ ಹೊರಬರುವ ಪ್ರತಿಯೊಬ್ಬ ವ್ಯಕ್ತಿಯು ಮನೆಯ ಗೌರವ ಮತ್ತು ಘನತೆಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನ ಮಾಡದಂತೆ ಮತ್ತು ಮಿತಿಯನ್ನು ಮೀರದಂತೆ ಎಚ್ಚರಿಸುತ್ತೆ.

ಈ ಹೊಸ ಇದು ಅನೇಕ ವಾಸ್ತು ಗ್ರಂಥ ಗಳಲ್ಲಿ ಇದನ್ನು ಉಲ್ಲೇಖಿಸ ಲಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ರೀತಿಯ ಆಕೃತಿಗಳಿಂದ ಮುಖ್ಯದ್ವಾರವನ್ನು ಅಲಂಕರಿಸಿದ್ದಾರೆ. ಅದು ಸರಿಯಲ್ಲ, ಮುಖ್ಯದ್ವಾರ ದಲ್ಲಿ ಯಾವುದೇ ರೀತಿಯ ಆಕಾರವನ್ನು ಇರಬೇಕಾದ್ರೆ ಅದು ಆಯತಾಕಾರದ ಆಕಾರದಲ್ಲಿ ಇರಬೇಕು, ಮುಖ್ಯದ್ವಾರವನ್ನು ಸಂಪೂರ್ಣವಾಗಿ ಮುಚ್ಚ ಬೇಕು. ಅದರಲ್ಲಿ ಯಾವುದೇ ರೀತಿಯ ರಂಧ್ರ ಗಳು, ಬಿರುಕುಗಳು ಇತ್ಯಾದಿ ಇರಬಾರದು. ಮುಖ್ಯದ್ವಾರದ ಹೊರಗಿನ ಮೇಲಿನ ಭಾಗವನ್ನು ತೋರಣ ಮತ್ತು ಇತರೆ ಮಂಗಳಕರ ಚಿನ್ಹೆಗಳನ್ನು ಹಾಕಿ ಅಲಂಕರಿಸಬೇಕು.

ಇದು ಸಂತೋಷ ಮತ್ತು ಅದೃಷ್ಟದ ಸೂಚಕವಾಗಿದೆ. ಮುಖ್ಯ ದ್ವಾರದ ಹೊರ ಭಾಗದಲ್ಲಿ ಗಣಪತಿಯ ವಿಗ್ರಹವನ್ನ ಮೇಲಕ್ಕೆ ಇಡುವವರು ಬಹಳ ಮಂದಿ ಇದ್ದಾರೆ. ಆದರೆ ಹೀಗೆ ಮಾಡುವುದು ಸರಿಯಲ್ಲ. ಯಾಕಂದ್ರೆ ಹಿಂದೂ ಧರ್ಮದಲ್ಲಿ ಗಣೇಶನ ಹಿಂದಿನ ಭಾಗದಲ್ಲಿ ಬಡತನ ಮತ್ತು ಮುಂದೆ ರಿದ್ಧಿ ಸಿದ್ಧಿಯರ ವಾಸಸ್ಥಾನ ಅಂತ ಪರಿಗಣಿಸ ಲಾಗಿದೆ. ಆದ್ದರಿಂದ ಮುಖ್ಯದ್ವಾರದ ಹೊರಗೆ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸುತ್ತಾರೆ. ಗಣೇಶನ ಬೆನ್ನು ಭಾಗ ಮನೆಯ ಒಳಭಾಗದ ಕಡೆಗೆ ಇರುತ್ತೆ. ಇದರಿಂದ ಬಡತನ ಮನೆಗೆ ಬರುತ್ತೆ ಮತ್ತು ರಿದ್ದಿ ಸಿದ್ದಿ ಹೊರಗಡೆ ಹೋಗ್ತಿದ್ದಾರೆ ಅಂತ ಅರ್ಥ. ಗಣೇಶನ ವಿಗ್ರಹಗಳನ್ನ ಪ್ರವೇಶ ದ್ವಾರದಲ್ಲಿ ಒಳ ಭಾಗದಲ್ಲಿಡಬೇಕು. ಮುಖ್ಯ ದ್ವಾರದ ಮುಂದೆ ಹೊರಗೆ ಯಾವುದೇ ಮರ, ದೇವಸ್ಥಾನ, ಕಂಬ ಇತ್ಯಾದಿ ಇರಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]