ಧನ ಕನಕ ಸಂಪತ್ತು ಎಷ್ಟೇ ಗಳಿಸಿದ್ದರೂ
ಪೂರ್ವಜರ ಆಶೀರ್ವಾದ ಇಲ್ಲವೆಂದಾದರೆ ಒಂದು ತುತ್ತು ಅನ್ನವನ್ನೂ ಸಂತೋಷದಿಂದ ಊಟ ಮಾಡಲು ಸಾಧ್ಯವಿಲ್ಲ ಅಂದರೆ,ಮನೆ ಮತ್ತುಕುಟುಂಬದ ಸದಸ್ಯರ ಮನಸ್ಸಿಗೆ ನೆಮ್ಮದಿ ಸಂತೋಷ ಇರುವುದಿಲ್ಲ ಎಂದರ್ಥ.ಹಾಗಾಗಿ ಪೂರ್ವಜರ ಆಶೀರ್ವಾದ ಸಿಗಲು ಮತ್ತು ತಾಯಿ ಲಕ್ಷ್ಮಿಯ
ಆರಾಧನೆ ಮಾಡಲು 2023 ಡಿಸೆಂಬರ್ 12 ಅಂದರೆ
ನಾಳೆ ಮಂಗಳವಾರ,ಮಾರ್ಗಶಿರ ಅಮಾವಾಸ್ಯೆ ಬಂದಿರುವುದರಿಂದ ಇದು ತುಂಬಾ ಶ್ರೇಷ್ಠವಾದ ದಿನಸನಾತನ ಹಿಂದೂ ಧರ್ಮದಲ್ಲಿ ಅಮಾವಾಸ್ಯೆಗಳಿಗೆ ಸಾಕಷ್ಟು ಮಹತ್ವವಿದೆ.ಅಂತಹ ಪ್ರಮುಖ ಅಮಾವಾಸ್ಯೆಗಳಲ್ಲಿ ಮಾರ್ಗಶಿರ ಕೂಡಾ ಒಂದು.ಎಳ್ಳ ಅಮಾವಾಸ್ಯೆ
ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುವುದು,ಈ ಅಮಾವಾಸ್ಯೆಯನ್ನು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ.
ಈ ದಿನ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ ಭಕ್ತರು ಪವಿತ್ರ ಸ್ನಾನವನ್ನೂ ಮಾಡುತ್ತಾರೆ.ಈ ದಿನ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು ಈ ದಿನದಂದು ಪಿತೃ ತರ್ಪಣ, ಶ್ರಾದ್ಧ ಕರ್ಮ,ದೇವತಾರಾಧನೆ,ಪವಿತ್ರ ಸ್ನಾನ ಸೇರಿದಂತೆ
ಸಾಕಷ್ಟು ಕಾರ್ಯಗಳನ್ನು ನಡೆಸಲಾಗುತ್ತದೆ. ಈ
ಧಾರ್ಮಿಕ ಕಾರ್ಯಗಳು ಸಂತೋಷ ನೀಡುವ ಜೊತೆಗೆ ಜಾತಕದ ಅಶುಭ ದೋಷಗಳಿಗೂ ಪರಿಹಾರ ನೀಡಲಿದೆ ಎನ್ನುವ ವಾಡಿಕೆ. ಮಾರ್ಗಶಿರ ಅಮವಾಸ್ಯೆಯನ್ನು ಪವಿತ್ರ ಸ್ನಾನಕ್ಕೆ
ವಿಶೇಷವೆಂದು ಪರಿಗಣಿಸಲಾಗಿದೆ.ಈ ದಿನ ಕೆಲವು ವಿಶೇಷ ವಸ್ತುಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ
ಅದೃಷ್ಟವು ಪ್ರಾಪ್ತಿ ಆಗುತ್ತದೆ ಎಂದು ಹೇಳುತ್ತಾರೆ,ಮಹಾಲಕ್ಷ್ಮಿಯ ಆಶೀರ್ವಾದದ ಜೊತೆಗೆ ಜೀವನದಲ್ಲಿ ಸಂಪತ್ತು, ಸಂತೋಷ ನೆಲೆಸುತ್ತದೆ.
ಈ ಅಮಾವಾಸ್ಯೆ ದಿನ ನದಿ ಅಥವಾ ಕೊಳದಲ್ಲಿ ಸ್ನಾನ ಮಾಡುವುದು ತುಂಬಾ ಶ್ರೇಷ್ಠ ಆದರೆ ಎಲ್ಲರಿಗೂ ಇದು ಸಾಧ್ಯವಿಲ್ಲದ ಕಾರಣ,ಸ್ನಾನ ಮಾಡುವ ನೀರಿಗೆ ಶುದ್ಧ
ಗಂಗಾಜಲವನ್ನು ಸೇರಿಸಿ,ಇದರ ಜೊತೆಯಲ್ಲಿ ಏಲಕ್ಕಿ,
ಕೇಸರಿ ಸೇರಿಸಿ ಮನೆಯಲ್ಲೇ ಸ್ನಾನ ಮಾಡಬಹುದು. ಇದರಿಂದ ಕೆಟ್ಟ ಸಮಯಗಳು ಬೇಗನೆ ಹಾದುಹೋಗುತ್ತವೆ.ಸಂಕಟಗಳಿಂದ ಮುಕ್ತಿ ದೊರೆಯುತ್ತದೆ. ಅರ್ಧಕ್ಕೆ ನಿಂತುಹೋದ ಕೆಲಸಗಳು ಮತ್ತೆ ಆರಂಭವಾಗುತ್ತದೆ
ಎಳ್ಳು:ಹಣ ಏಳಿಗೆಯಾಗಲು, ಈ ವರ್ಷದ ಕೊನೆಯ
ಅಮಾವಾಸ್ಯೆಯಂದು ನೀರಿನಲ್ಲಿ ಸ್ವಲ್ಪ ಎಳ್ಳು ಸೇರಿಸಿ ಸ್ನಾನ ಮಾಡಿ.ಇದರಿಂದ ಮಹಾಲಕ್ಷ್ಮಿಯು ಪ್ರಸನ್ನಳಾಗಿ, ಮನೆಯಲ್ಲಿ ಹಣ, ಆಹಾರದ ಕೊರತೆಬಾರದಂತೆ ರಕ್ಷಣೆ ನೀಡುತ್ತಾಳೆ. ಆರ್ಥಿಕ ಸ್ಥಿತಿ ಸುಧಾರಿಸಿ, ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಹಾಲು ಅಥವಾ ಬಿಳಿ ಶ್ರೀಗಂಧ:ಜಾತಕದಲ್ಲಿ ಚಂದ್ರ ದೋಷ ಇರುವವರು ಮಾರ್ಗಶಿರ ಅಮವಾಸ್ಯೆಯ ದಿನದಂದು
ನೀರಿನಲ್ಲಿ ಹಾಲು ಅಥವಾ ಬಿಳಿಚಂದನವನ್ನು ಬೆರೆಸಿ ಸ್ನಾನ ಮಾಡಬೇಕು. ಇದರಿಂದ ಮಾನಸಿಕ ನೆಮ್ಮದಿ, ದೈಹಿಕ ಶಕ್ತಿಯ ಜೊತೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ ಹಳದಿ ಸಾಸಿವೆ:ಈ ದಿನ ಸ್ವಲ್ಪ ಹಳದಿ ಸಾಸಿವೆಯನ್ನು ನೀರಿನಲ್ಲಿ ಬೆರೆಸಿಸ್ನಾನ ಮಾಡಿ. ಇದರಿಂದ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ,ಇದರೊಂದಿಗೆ ದಾಂಪತ್ಯದಲ್ಲಿನ
ಅಡೆತಡೆಗಳು ನಿವಾರಣೆಯಾಗುತ್ತದೆ.ಈ ಪರಿಹಾರವು
ನಿಮ್ಮ ಜಾತಕದಲ್ಲಿ ಗುರುವನ್ನು ಬಲಪಡಿಸುತ್ತದೆ.
ಮುಂಜಾನೆ ಬೇಗ ಎದ್ದು ಸ್ನಾನದ ನಂತರ, ಎಳ್ಳನ್ನು ಅರ್ಪಿಸುವುದರಿಂದ ಪಿತೃ ದೋಷದಿಂದ ಮುಕ್ತಿ ಪಡೆಯಬಹುದು ಸ್ನಾನದ ಬಳಿಕ ತಾಮ್ರದ ಪಾತ್ರೆಯಲ್ಲಿ ನೀರಿನ ಜೊತೆ ,
ಕೆಂಪು ಹೂವುಗಳು, ಕೆಂಪು ಚಂದನವನ್ನು ಸೇರಿಸಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದು ಕೂಡಾ ಒಳ್ಳೆಯದು ಈ ದಿನ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಿ,ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಿ ಅಮಾವಾಸ್ಯೆಯ ದಿನದಂದು ದಾನ ನೀಡುವುದನ್ನೂ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ.
ಶುದ್ಧ ಮನಸ್ಸಿನಿಂದ ದಾನ ನೀಡಿದರೆ ಪೂರ್ವಜರಿಗೆ
ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆ.ಹೀಗಾಗಿ, ಅಮಾವಾಸ್ಯೆಯ ದಿನದಂದು ನಿಮ್ಮ ಶಕ್ತಿಯಾನುಸಾರ ಬಡವರಿಗೆ
ಮತ್ತು ಅಸಹಾಯಕರಿಗೆ ದಾನ ಮಾಡಬಹುದು.ಅಮಾವಾಸ್ಯೆಯ ದಿನ ಪೂರ್ವಜರ ಶಾಂತಿಗಾಗಿ ತರ್ಪಣ, ಶ್ರಾದ್ಧವನ್ನು ಮಾಡುವುದಕ್ಕೂ ವಿಶೇಷ ಮಹತ್ವವಿದೆ.
ಕುಟುಂಬದ ಹಿರಿಯ ಪುರುಷ ಸದಸ್ಯರು ಪಿತೃ
ತರ್ಪಣವನ್ನು ಮಾಡುತ್ತಾರೆ.ನಂಬಿಕೆಯ ಪ್ರಕಾರ ಪಿತೃ ದೋಷದ ಪರಿಹಾರಕ್ಕಾಗಿ ಮಾರ್ಗಶೀರ್ಷ ಅಮಾವಾಸ್ಯೆಯಂದು
ಉಪವಾಸ ವ್ರತಾಚರಣೆ ಮಾಡುವುದು ಕೂಡಾ ಒಳ್ಳೆಯದು ಶ್ರೀವಿಷ್ಣುವಿನ ಕೃಪೆಗೆ ಪಾತ್ರರಾಗಲು ಈ ದಿನ ಅರಳಿ
ಮರವನ್ನು ಪೂಜಿಸುವುದು.ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕುವುದು ತುಂಬಾ ಒಳ್ಳೆಯದು ಕಾಳಸರ್ಪ ದೋಷ ನಿವಾರಣೆಗೂ ಅಮಾವಾಸ್ಯೆಯ ದಿನ ಉಪವಾಸ ಮಾಡಲಾಗುತ್ತದೆಅಮಾವಾಸ್ಯೆಯ ದಿನ ಧಾರ್ಮಿಕ ಕಾರ್ಯಗಳು,ಪೂಜೆಯನ್ನು ಮಾಡುವುದು ಅತ್ಯಂತ
ಮಂಗಳಕರವೆಂದು ಪರಿಗಣಿಸಲಾಗುತ್ತದೆ
ಈ ದಿನದಂದು ಸತ್ಯನಾರಾಯಣ ದೇವರ ಪೂಜೆಯನ್ನು
ಮಾಡುವುದು ಅತ್ಯಂತ ಮಂಗಳಕರ ಮೇಲೆ ಹೇಳಿರುವ ಪರಿಹಾರಗಳಲ್ಲಿ ನಿಮ್ಮ ಶಕ್ತಿಗೆ ಅನುಸಾರವಾಗಿ ಯಾವುದಾದರೂ
ಒಂದನ್ನಾದರೂ ಮಾಡಿ, ಇದರಿಂದ ಪೂರ್ವಜರ
ಆತ್ಮಕ್ಕೆ ಶಾಂತಿ ಸಿಗುವುದರ ಜೊತೆಗೆ ತಾಯಿ ಲಕ್ಷ್ಮಿಯ ಆಶೀರ್ವಾದದಿಂದ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ನೆಲೆಸುತ್ತದೆ.