ಹಿಂದೂ ಸಮಾಜ ಬಹು ವರ್ಷಗಳಿಂದ ನಿರೀಕ್ಷೆ ಮಾಡಿದ್ದ ಅಯೋಧ್ಯೆಯ ಭವ್ಯ ಮಂದಿರದಲ್ಲೂ ಕಲ್ಪನೆಗೆ ಮುಹೂರ್ತ ನಿಗದಿಯಾಗಿದೆ. ಜನವರಿ 22 ನೇ ತಾರೀಖು ಅಯೋಧ್ಯೆ ಮಂದಿರ ಉದ್ಘಾಟನೆಗೊಳ್ಳುತ್ತಿದೆ. ಅದಕ್ಕಾಗಿ ಅಯೋಧ್ಯೆಯಲ್ಲಿ ಸಂಭ್ರಮದ ಸಿದ್ಧತೆಗಳು ನಡೀತಾ ಇದೆ. ದೇವಾಲಯದ ಅರ್ಚಕರ ನೇಮಕ ಪೂರ್ಣಗೊಳ್ಳಲಿದೆ. ಅವರಿಗೆ ತರಬೇತಿ ಕೂಡ ಆರಂಭವಾಗ್ತಿದೆ. ಹಾಗೆ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಮತ್ತು ಪಟ್ಟಾಭಿಷೇಕ ಮಹೋತ್ಸವ ಸಂಪನ್ನಗೊಳಿಸುವುದಕ್ಕೆ ಸುಮಾರು 121 ಮಂದಿ ವೇದ ಪಂಡಿತರು ಅಯೋಧ್ಯೆಗೆ ಬರ್ತಾ ಇದ್ದಾರೆ. ಆ ಪಂಡಿತೋತ್ತಮರ ನೇತೃತ್ವವನ್ನ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಪೌರೋಹಿತ್ಯವನ್ನು ವಹಿಸಿದ ಕಾಶಿಯ ಗಂಗಾ ಭಟ್ಟರ ವಂಶದ ಕುಡಿ ಪಂಡಿತ್ ಲಕ್ಷ್ಮಿಕಾಂತ್ ಮಥುರ ನಾಥ ದೀಕ್ಷಿತ್ ವಹಿಸಿಕೊಳ್ಳುತ್ತಿದ್ದಾರೆ.
ಹಾಗೆ ಅಯೋಧ್ಯ ಪಟ್ಟಣವನ್ನು ಕೂಡ ಸರ್ವ ರೀತಿಯಲ್ಲೂ ಸಿಂಗರಿಸಿ ಅದನ್ನ ಭಾರತದ ಅತ್ಯಂತ ವೈಭವದ ನಗರವನ್ನಾಗಿ ನಿರ್ಮಾಣ ಮಾಡೋದಕ್ಕೆ ಉತ್ತರ ಪ್ರದೇಶ, ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಹಾಗಾದ್ರೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರದ ಕಾಮಗಾರಿ ಎಲ್ಲಿಗೆ ಬಂದಿದೆ? ಅದರ ವಿಸ್ತೀರ್ಣ ವಾಸ್ತು ಶಾಸ್ತ್ರ ಹೇಗಿದೆ ಮತ್ತು ಪ್ರಾಣ ಪ್ರತಿಷ್ಠಾಪನೆಯ ಉಸ್ತುವಾರಿಯನ್ನು ವಹಿಸಿಕೊಂಡ ದೀಕ್ಷಿತರ ಹಿನ್ನೆಲೆಯನ್ನು ಅಯೋಧ್ಯೆಗೆ ಏನೆಲ್ಲ ಬರ‌್ತಾ ಇದೆ ಅನ್ನೋ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ. ಗೆಳೆಯರೇ ರಾಮ ಅನ್ನೋದು ನಮಗೆ ಬರೀ ನಾಮ ಅಷ್ಟೇ ಅಲ್ಲ, ರಾಮ ನಮಗೆ ಬರಿ ದೇವರಷ್ಟೆ ಅಲ್ಲ, ರಾಮ ಅನ್ನೋದು ಸಮಸ್ತ ಭಾರತದ ಆತ್ಮ ಶಕ್ತಿ ರಾಮ ಅನ್ನೋದು ನಮ್ಮ ಸಂಸ್ಕೃತಿಯ ಕೇಂದ್ರ ಬಿಂದು ರಾಮ ಅನ್ನೋದು ಆದರ್ಶಕ್ಕೆ ಮತ್ತೊಂದು ಹೆಸರು ರಾಮ ಭಾರತದ ಗ್ರಾಮ ಗ್ರಾಮದ ಜೊತೆ ನಂಟನ್ನು ಹೊಂದಿದ್ದಾರೆ.
ರಾಮಾಯಣ ಅಂದ್ರೆ ರಾಮ ನಡೆದ ದಾರಿ ಅದು ಭಾರತ ಮಾತ್ರ ಅಲ್ಲ ಇಡೀ ಜಗತ್ತು ಕೊಂಡಾಡಿದೆ ಜಗತ್ತಿನ ನಾನಾ ಭಾಷೆಗಳಲ್ಲಿ ಅಲ್ಲಿನ ಸಂಸ್ಕೃತಿ ಪರಂಪರೆಗಳಿಗೆ ತಕ್ಕ ಹಾಗೆ ನೂರಾರು ರಾಮಾಯಣಗಳ ರಚನೆ ಕೂಡ ಆಗಿದೆ. ಇಂತಹ ರಾಮ ಮಂದಿರವನ್ನೇ ಕೆಡವಿದರೆ ರಾಮನ ಮೇಲಿನ ಭಕ್ತಿಯನ್ನು ಅಳಿಸಿ ಹಾಕಿದ್ದಾರೆ ಈ ದೇಶದ ಅಂತ ಶಕ್ತಿಯನ್ನ ಆದರ್ಶವನ್ನ ಈ ನೆಲದ ಧರ್ಮವನ್ನ ಬದಲಿಸಿ ಬಿಡಬಹುದು ಅಂತ ಅವತ್ತು ಅವನು ಆಕ್ರಮಣಕಾರ ಅಂದುಕೊಂಡು ಅಯೋಧ್ಯೆಯ ಮಾಡಿ ರವಿ ಅಲ್ಲಿ ಒಂದು ಮಸೀದಿಯನ್ನು ಕಟ್ಟಿದ್ದ. ಆದ್ರೆ ಆ ಮೂರ್ಖರಿಗೆ ಗೊತ್ತಿಲ್ಲ. ಅದೇನು ಅಂದ್ರೆ ರಾಮ ಕೇವಲ ಅಲ್ಲಿನ ಮಂದಿರದಲ್ಲಿ ಮಾತ್ರ ಇರಲಿಲ್ಲ. ಅವರು ನಮ್ಮ ಸಮುದಾಯ ಗಳಲ್ಲಿ ನಮ್ಮ ನರನಾಡಿಗಳಲ್ಲಿ ಬೆರೆತು ಹೋಗಿದ್ದ ನಮ್ಮ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದ.
ಹೀಗಾಗಿಯೇ ರಾಮನ ಆದರ್ಶವನ್ನು ಅಳಿಸುವಿಕೆ ಸಾಧ್ಯವಾಗಲಿಲ್ಲ. ಅವರ ಮೇಲಿನ ಭಕ್ತಿಯನ್ನ ಕಿಂಚಿತ್ತು ಅಲುಗಾಡಿಸಿದ್ದಕ್ಕೆ ಯಾರಿಂದಲೂ ಆಗಲಿಲ್ಲ. ರಾಮನ ಜನ್ಮಭೂಮಿಗಾಗಿ ಶತಮಾನಗಳ ಹೋರಾಟ ನಡೆಯಿತು. ಲಕ್ಷಾಂತರ ಮಂದಿ ಬಲಿದಾನ ಮಾಡಿದರು, ಅಯೋಧ್ಯೆಯ ಸುತ್ತಮುತ್ತಲಿನ ಹೆಣ್ಣು ಮಕ್ಕಳು ಕೂಡ ರಾಮನ ಜನ್ಮ ಸ್ಥಾನವನ್ನ ಬಿಡುಗಡೆಗೊಳಿಸುವುದಕ್ಕಾಗಿ ಲೇಖಕರ ವಿರುದ್ಧ ಕಾದಾಡಿ ಪ್ರಾಣಾರ್ಪಣೆ ಮಾಡಿದರು. ಹೊರಗಿನವರು ಒಳಗಿನ ದ್ರೋಹಿಗಳು, ಸ್ವಾರ್ಥಿಗಳು ಎಲ್ಲರ ವಿರುದ್ಧವೂ ಹೋರಾಟ ನಡೆಯುತ್ತಲೇ ಬಂತು. ಹದಿನಾರನೇ ಶತಮಾನದಲ್ಲಿ ಶುರುವಾದ ಈ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿದ್ದು 2019 ರಲ್ಲಿ ಸುಪ್ರೀಂಕೋರ್ಟ್ ಅಯೋಧ್ಯೆಯ ಜನ್ಮಭೂಮಿ ರಾಮನಿಗೆ ಸೇರಬೇಕು ಅಂತಹ ತೀರ್ಪು ಕೊಟ್ಟ ಮೇಲೆ ಗೆರೆ ಅಯೋಧ್ಯೆಯಲ್ಲಿ ಬಾಬರ್ ನ ದುರಾಕ್ರಮಣ ಅವನ ಸೇನಾಧಿಪತಿ ಮೀರ್ ಬಾಕಿ ಏನು ಮಾಡಿದ? ಅಲ್ಲಿನ ಜನ್ಮಭೂಮಿ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಿದ ನಂತರ ಆ ಬಾಕಿ ಏನಾದ ಆನಂತರ ಅಲ್ಲಿ ಹೇಗೆಲ್ಲ ಹೋರಾಟಗಳು ನಡೀತಾ ಬಂದು ಬ್ರಿಟಿಷರ ಕಾಲದಲ್ಲಿ ಏನಾಯ್ತು ಸ್ವಾತಂತ್ರ್ಯ ಬಂದ ನಂತರ ನಮ್ಮವರ ನಂಬಿಕೆಗಳ ಜೊತೆಗೆ ಆಟ ಆಡಿದ್ರು ಬಗ್ಗೆ ಸವಿಸ್ತಾರವಾಗಿ ಒಂದು ಸಂಚಿಕೆಯನ್ನು ನಿಮ್ಮ ಮುಂದಿಡತಾಇದ್ದೀನಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.