ವೈಕುಂಠ ಏಕಾದಶಿ ಎಂದರೆ ಶ್ರೀಮನ್ ನಾರಾಯಣನು ಯೋಗ ನಿದ್ರೆಯಿಂದ ಏಳುವ ದಿನ ಅಂದರೆ ದಕ್ಷಿಣಾಯನ ಪ್ರಾರಂಭವಾಗುವಾಗ ಶ್ರೀಮನ್ನಾರಾಯಣನು ಯೋಗ ನಿದ್ರೆಗೆ ಜಾರುತ್ತಾನೆ. ಮತ್ತೆ ಉತ್ತರಾಯಣ ಪ್ರಾರಂಭವಾಗುವ ಸಮಯದಲ್ಲಿ ಶುಕ್ಲ ಪಕ್ಷದ ಏಕಾದಶಿ ದಿನ ಶ್ರೀಮನ್ನಾರಾಯಣನು ಯೋಗ ನಿದ್ರೆಯಿಂದ ಏಳುತ್ತಾನೆ. ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಅಂತಲೂ ಕರೆಯುತ್ತಾರೆ. ಆ ದಿನ ವಿಷ್ಣುವಿನ ದರ್ಶನವನ್ನು ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಈ ಬಾರಿ ಡಿಸೆಂಬರ್ ಇಪ್ಪತ್ಮೂರನೇ ತಾರೀಖು ಶನಿವಾರದಂದು ವೈಕುಂಠ ಏಕಾದಶಿಯು ಬಂದಿದೆ. ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ.
ಇನ್ನು ಆ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ 3,00,00,000 ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ ಅನ್ನುವ ನಂಬಿಕೆ ಇದೆ. ಹಾಗಾಗಿ ಈ ಏಕಾದಶಿಗೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ. ಈ ಒಂದು ಏಕಾದಶಿ 3,00,00,000 ಏಕಾದಶಿಗಳಿಗೆ ಸಮವಾದ ಪವಿತ್ರತೆಯ ಹೊಂದಿರುವ ಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ ಈ ವೈಕುಂಠ ಏಕಾದಶಿಯ ದಿನ ಹಾಲಾಹಲ ಅಮೃತ ಎರಡು ಕೂಡ ಹುಟ್ಟಿದವು
ಈ ದಿನವೇ ಶಿವನು ಆ ಹಾಲಾಹಲವನ್ನು ನುಂಗಿದ ಮಹಾಭಾರತದ ಯುದ್ಧದಲ್ಲಿ ಭಗವದ್ಗೀತೆಯನ್ನು ಕೃಷ್ಣನು ಅರ್ಜುನನಿಗೆ ಇದೇ ದಿನ ಉಪದೇಶಿಸಿದ ಎಂಬ ನಂಬಿಕೆ ಇದೆ. ವರ್ಷದಲ್ಲಿ ಬರುವ ಎಲ್ಲ ಏಕಾದಶಿಗಳಿಗಿಂತ ಈ ವೈಕುಂಠ ಏಕಾದಶಿ ಅತ್ಯಂತ ವಿಶೇಷವಾದದ್ದು ವೈಕುಂಠ ಏಕಾದಶಿ 1 ದಿನ ಉಪವಾಸವಿದ್ದರೆ ಉಳಿದ 23 ಏಕಾದಶಿ ಗಳಲ್ಲಿ ಉಪವಾಸ ಮಾಡಿದ್ದಕ್ಕೆ ಸಮನಾಗಿರುತ್ತದೆ. ವೈಕುಂಠ ಏಕಾದಶಿಯ ದಿನ ವಿಷ್ಣು ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುವ ದಿನ. ಹಾಗಾಗಿ ಆ ದಿನ ಉಪವಾಸವಿದ್ದು ಶ್ರೀಮನ್ನಾರಾಯಣ ಅಥವಾ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು.
ವೈಕುಂಠ ಏಕಾದಶಿಯ ದಿನ ಎಲ್ಲ ವಿಷ್ಣು ಅಥವಾ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಗಳಲ್ಲಿ ವಿಶೇಷವಾಗಿ ಉತ್ತರ ದಿಕ್ಕಿನಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿರುತ್ತಾರೆ. ನಾವು ಆ ವೈಕುಂಠ ದ್ವಾರದ ಕೆಳಗೆ ಹೋಗಿ ಬಂದ ರೆ ಮೋಕ್ಷ ಸಿಗುವುದು ಮತ್ತೆ ಸ್ವರ್ಗ ಪ್ರಾಪ್ತಿಯಾಗುವುದು. ವೈಕುಂಠ ಏಕಾದಶಿಯ ದಿನದಂದು ಉಪವಾಸ ವಿರಬೇಕು ಮೂರ ಎಂಬ ರಾಕ್ಷಸನು ವಿಷ್ಣುವಿನಿಂದ ತಪ್ಪಿಸಿಕೊಂಡು ಅಕ್ಕಿಯಲ್ಲಿ ಅಡಗಿ ಕುಳಿತಿರುತ್ತಾನೆ. ಆದ್ದರಿಂದ ಆ ದಿನ ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನಬಾರದು. ಅನ್ನದ ನೈವೇದ್ಯ ವನ್ನು ದೇವರಿಗೆ ಇಡಬಾರದು. ಒಂದು ವೇಳೆ ಅನ್ನವನ್ನು ತಿಂದರೆ ಹುಳು ಗಳನ್ನು ತಿಂದಿದ್ದಕ್ಕೆ ಸಮ ನಕಾರಾತ್ಮಕ ಗುಣಗಳು ರಾಕ್ಷಸ ಗುಣಗಳು ನಮ್ಮಲ್ಲಿ ಹೆಚ್ಚಾಗುತ್ತವೆ. ಜಡತ್ವ ಉಂಟಾಗುತ್ತದೆ ಮೂರೆಂದರೆ ರಾಜಸಿಕ ಮತ್ತು ತಾಮಸಿಕ ಗುಣಗಳಿಗೆ ಪ್ರತೀಕ.
ಅವುಗಳನ್ನು ವೈಕುಂಠ ಏಕಾದಶಿಯ ದಿನದಂದು ಉಪವಾಸ ವಿರುವುದರ ಮೂಲಕ ಜಯಿಸುವುದರ ಮೂಲಕ ಮುಕ್ತಿಗೆ ಮಾರ್ಗ ದೊರೆಯುತ್ತ ದೆ. ಚಿಕ್ಕ ಮಕ್ಕಳು ಅಂದರೆ 5 ವರ್ಷದಿಂದ ಕೆಳಗಿರುವ ಮಕ್ಕಳು ವೈಕುಂಠ ಏಕಾದಶಿ ಆಚರಣೆ ಮಾಡಬಾರದು. 80 ರಿಂದ 85 ವರ್ಷದ ಮೇಲೆ ಇರುವವರು ಕೂಡ ಮಾಡಬಾರದು. ಗರ್ಭಿಣಿಯರು, ಬಾಣಂತಿಯರು ಕೂಡ ವೈಕುಂಠ ಏಕಾದಶಿ ಆಚರಣೆ ಮಾಡಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.