ನೋಡಿ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಯಾವುದೇ ಖರ್ಚಿಲ್ಲದೆ ಅತಿ ಕಡಿಮೆ ಖರ್ಚಿನಲ್ಲಿ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳಿಂದ ಅಥವಾ ಮನೆಯಲ್ಲಿ ಸಿಗುವ ವಸ್ತುಗಳಿಂದ ನಾವು ಒಂದು ಹೆಲ್ಪ್ ಫುಲ್ ಆದಂತಹ ಕೆಲವು ಸಲಹೆಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಅದೇನೆಂದರೆ ಈಗ ನಾವು ಕೂದಲನ್ನ ಹೇಗೆ ಸ್ವಚ್ಛ ಮಾಡ್ಕೊಳ್ತೀವೋ ಅದೇ ರೀತಿಯಲ್ಲಿ ನಮ್ಮ ಬಾಚಣಿಕೆಯೂ ಕೂಡ ಸ್ವಚ್ಛವಾಗಿರಬೇಕು ಈಗ ನೀವು ನೋಡಿರಬಹುದು ಕೆಲವೊಬ್ಬರ ಬಾಚಣಿಕೆಗಳು ತುಂಬಾ ಗಲೀಜು ಆಗಿರುತ್ತೆ ಸಾಮಾನ್ಯವಾಗಿ ನಾವು ತಲೆಯನ್ನು ಬಾಚಿದಾಗ ಎಲ್ಲರ ಬಾಚಣಿಕೆಯು ಕೂಡ ಕೊಳೆ ಆಗುತ್ತದೆ
ಆದರೆ ಈ ಕೊಳೆಯನ್ನು ತೆಗೆಯಲು ತುಂಬಾ ಒದ್ದಾಡಬೇಕಾಗುತ್ತದೆ ಏನೇನು ಹಾಕ್ತೀವಿ ಅಥವಾ ಮಾರ್ಕೆಟ್ ಇಂದ ಸಿಕ್ಕಿದೆಲ್ಲ ಲಿಕ್ವಿಡ್ ಅನ್ನ ತಂದು ತೊಳೆಯಲು ಪ್ರಯತ್ನ ಮಾಡ್ತೀವಿ ಆದರೆ ಸುಲಭವಾಗಿ ನಾವು ಮನೆಯಲ್ಲಿ ಸಿಗುವ ವಸ್ತುವನ್ನು ಉಪಯೋಗಿಸಿಕೊಂಡು ನಮ್ಮ ಬಾಚಣಿಕೆಯನ್ನು ಸ್ವಚ್ಛ ಮಾಡುವ ಬಗೆಯನ್ನು ನಾನು ನಿಮಗೆ ಹೇಳಿಕೊಡ್ತೀನಿ
ಮೊದಲು ನೀವು ಏನ್ ಮಾಡಬೇಕು ಅಂತ ಅಂದ್ರೆ ಹಣಿಗೆಯನ್ನ ಬಾಚಣಿಕೆಯನ್ನ ತೆಗೆದು ಒಂದು ಕಡೆ ಅದನ್ನು ಇಟ್ಟುಕೊಳ್ಳಿ, ಅದರ ಮೇಲೆ ನೀವು ಏನ್ ಮಾಡಬೇಕು ಅಂತ ಅಂದ್ರೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ಒಂದು ವೇಳೆ ನಿಮ್ಮ ಮನೆಯಲ್ಲಿ ಅಕ್ಕಿ ಹಿಟ್ಟು ಇಲ್ಲದಿದ್ದರೆ ಗೋಧಿ ಹಿಟ್ಟು ಆದರೂ ಆಗಿರಬಹುದು ಅಥವಾ ರಾಗಿ ಹಿಟ್ಟಾಗಿರಬಹುದು ಜೋಳದ ಹಿಟ್ಟ ಆಗಿರಬಹುದು ಯಾವ ಹಿಟ್ಟು ಕೂಡ ಇಲ್ಲ ಅಂತಂದ್ರೆ ರಂಗೋಲಿ ಪುಡಿ ಏನಾದರೂ ತಗೊಂಡು ಅದರ ಮೇಲೆ ಸ್ವಲ್ಪ ಉದುರಿಸಿ ಆಮೇಲೆ ಬಟ್ಟೆ ತೊಳೆಯುವ ಬ್ರಷ್ ಅನ್ನ ತೆಗೆದುಕೊಂಡು ಅಥವಾ ಹಲ್ಲುಜ್ಜುವ ಬ್ರಷ್ ಆದರೂ ನಡೆಯುತ್ತೆ ಅದನ್ನ ತೆಗೆದುಕೊಂಡು ಚೆನ್ನಾಗಿ ಅದರ ಮೇಲೆ ಉಜ್ಜಿ ಬಾಚಣಿಕೆ ಮೇಲೆ ಉಜ್ಜಿದ ನಂತರ ನೋಡಿ ಅದರೊಳಗಿರುವ ಕೊಳೆಯಲ್ಲ ಪೌಡರ್ ಮೂಲಕ ಹೊರಗೆ ಹೋಗುತ್ತದೆ
ಈ ರೀತಿ ಮನೆಯಲ್ಲೇ ಸಿಗುವ ವಸ್ತುಗಳಿಂದ ಯಾವುದೇ ಖರ್ಚಿಲ್ಲದೆ ಸುಲಭವಾಗಿ ಮಾಡಿಕೊಳ್ಳಬಹುದು ಇನ್ನು ನಿಮಗೆ ಮತ್ತೊಂದು ಟಿಪ್ಸ್ ಅನ್ನು ತಿಳಿಸಿಕೊಡುತ್ತೇನೆ ಅದೇನಂದ್ರೆ ನೀವು ಬಲೂನೂ ಅನ್ನು ಮಕ್ಕಳೆಲ್ಲ ಆಡ್ಕೊಂಡು ಬೀಸಾಡಿರುತ್ತಾರೆ ಅದನ್ನ ನೀವು ತೆಗೆದುಕೊಂಡು ಸರಿಯಾಗಿ ಅರ್ಧ ಪ್ರಮಾಣದಲ್ಲಿ ಕಟ್ ಮಾಡಿ ನಂತರ ಅರ್ಧ ಭಾಗವನ್ನು ಚೆನ್ನಾಗಿ ತೊಳೆದು ಇಟ್ಟುಕೊಂಡು ಒಣಗಿಸಿ ನಿಮ್ಮ ಡಬ್ಬದ ಮುಚ್ಚುಳ ಯಾವುದಾದರೂ ಕಳೆದುಹೋಗಿದ್ರೆ ಆ ಮುಚ್ಚಳನೆ ಬದಲು ಈ ಬಲುನಿನ ತುಂಡನ್ನು ಹೀಗೆ ಟೈಟ್ ಮಾಡಿ ಹಾಕಿ ಮೇಲಿನ ಮುಚ್ಚಳದ ಹಾಗೆ ಮುಚ್ಚಿ ಈ ರೀತಿ ಮಾಡೋದ್ರಿಂದ ಒಳಗಡೆ ಇರುವ ವಸ್ತು ಹಾಳಾಗುವುದಿಲ್ಲ ಹಾಗೆ ನೀವು ಹೊರಗಡೆ ಹೋಗುವಾಗ ಎಲ್ಲಾದರೂ ಟ್ರಾವೆಲಿಂಗ್ ಮಾಡುವ ಸಮಯದಲ್ಲಿ ಈ ರೀತಿಯಾಗಿ ನೀವು ದಬ್ಬಕ್ಕೆ ಹಾಕಿಕೊಂಡು ಹೋದರೆ ಡಬ್ಬದ ಒಳಗಡೆ ಇರುವ ವಸ್ತು ಕೂಡ ಹೊರಗೆ ಬರುವುದಿಲ್ಲ
ನೋಡಿ ಈ ರೀತಿಯಾಗಿ ನೀವು ಮನೆಯಲ್ಲಿ ಸಿಗುವ ವಸ್ತುವಿನಿಂದ ಅಥವಾ ನಿಮಗೆ ಬೇಡ ಎಂದು ಬದಿಗೆ ಇಟ್ಟಿರುವ ವಸ್ತುವಿನಿಂದ ಈ ರೀತಿ ಉಪಯೋಗವಾಗುವಂತಹ ಕೆಲವು ಟಿಪ್ಸ್ ಅನ್ನ ಪಾಲಿಸಿ ಬೇಡದ ವಸ್ತುವನ್ನು ಕೂಡ ಬೇಕಾದ ಹಾಗೆ ಉಪಯೋಗಿಸಿಕೊಳ್ಳಬಹುದು ಇದರಿಂದ ಯಾವ ವಸ್ತುವು ಕೂಡ ವೇಸ್ಟ್ ಆಗುವುದಿಲ್ಲ ಅದರ ಬದಲಿಗೆ ಅದರ ಸದುಪಯೋಗತೆ ಉಂಟಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.