ಭೂದೇವಿಯ ಈ ಕಥೆ ಕೇಳಿದರೆ ಭೂಮಿಗೆ ಒಡೆಯ ಆಗುತ್ತೀರಿ..ಸ್ವಂತ ಮನೆ ಭೂಮಿ ಯೋಗ ಕೂಡಿ ಬರುತ್ತೆ…

ಭೂದೇವಿ ಚರಿತ್ರೆ… ಇವತ್ತಿನ ವಿಡಿಯೋದಲ್ಲಿ ಭೂದೇವಿಗೆ ಸಂಬಂಧಪಟ್ಟಂತಹ ಒಂದು ಕಥೆಯನ್ನು ಕೇಳೋಣ ಈ ಕಥೆಯನ್ನು ಕೇಳಿದವರು ಭೂಮಿಗೆ ಒಡೆಯರಾಗುತ್ತಾರೆ ಅಂದರೆ ಹೊಸ ಜಾಗವನ್ನು ಕೊಂಡುಕೊಳ್ಳುತ್ತಾರೆ ಇನ್ನೊಂದು ಏನು ಎಂದರೆ ಅವಿವಾಹಿತರು ಅಂದರೆ ಮದುವೆಯಾಗದೇ ಇರುವವರು ಅವರಿಗೆ ಮದುವೆ ಯೋಗ ಕೂಡಿಬರುತ್ತದೆ.

WhatsApp Group Join Now
Telegram Group Join Now

ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುತ್ತದೆ ಅಂತಹ ಒಂದು ಅದ್ಭುತವಾದ ಕಥೆಯನ್ನು ಈ ವಿಡಿಯೋದಲ್ಲಿ ತಿಳಿಸುತ್ತೇನೆ. ಒಂದು ಬಾರಿ ಭೂದೇವಿ ಮಹಾ ವಿಷ್ಣುವಿನ ಬಳಿ ಹೋಗಿ ಪ್ರಭು ಭೂಲೋಕದಲ್ಲಿ ಅಧರ್ಮಿಗಳು ದುಷ್ಟರು ಬೆಳೆದು ಹೋಗಿದ್ದಾರೆ ಎಂದಿನಂತೆ ಅಧರ್ಮಿಗಳು ದುಷ್ಟರು ಬೆಳೆದಾಗ ನೀವು ಅವರನ್ನು ಸಂಹರಿಸಿ ಭೂಲೋಕದ ಭಾರವನ್ನು.

ಕಡಿಮೆಯಾಗಿಸಲು ಒಂದು ಅವತಾರವನ್ನು ಪಡೆಯುತ್ತೀರಿ ಈ ಬಾರಿಯೂ ನೀವು ಅವತಾರ ಪಡೆಯಬೇಕಿದೆ ಎಂದು ಕೇಳುತ್ತಾರೆ ಆಗ ಮಹಾವಿಷ್ಣು ನಾನು ಕಲ್ಕಿ ರೂಪದಲ್ಲಿ ಕಲಿಯುಗದಲ್ಲಿ ಅವತರಿಸುತ್ತೇನೆ ಆದರೆ ಅದಕ್ಕೆ ಇನ್ನೂ ಸಮಯ ಬಂದಿಲ್ಲ ಹಾಗಾಗಿ ಈಗ ನೀನೆ ನನ್ನ ಬದಲಾಗಿ ಭೂಲೋಕದಲ್ಲಿ ಅವತಾರ ಪಡೆಯುವಂತೆ ಎಂದು ಹೇಳುತ್ತಾರೆ ಭೂದೇವಿ ಸರಿ ಎಂದು ಹೇಳಿ.

ಭೂಲೋಕಕ್ಕೆ ಹಿಂತಿರುಗುತ್ತಾಳೆ ಇದಾದ ಸ್ವಲ್ಪ ಸಮಯದ ಬಳಿಕ ಮಹಾಲಕ್ಷ್ಮಿಗೆ ಒಂದು ಅನುಮಾನ ಶುರುವಾಗುತ್ತದೆ ಆಗ ಆಕೆ ಮಹಾವಿಷ್ಣುವಿನ ಬಳಿ ಹೀಗೆ ಕೇಳುತ್ತಾಳೆ ಸ್ವಾಮಿ ನೀವು ಎಷ್ಟೋ ಜನ ಭಕ್ತರನ್ನು ಕರುಣಿಸಿದ್ದೀರಿ ಎಷ್ಟೋ ಜನ ಭಕ್ತರಿಗೆ ವರವನ್ನು ಕೊಟ್ಟಿದ್ದೀರಿ ಆದರೆ ನಮ್ಮ ಗರುಡ ಎಂದಿನಿಂದಲೂ ನಿಮ್ಮ ಸೇವಕನಾಗಿದ್ದಾನೆ ನೀವು ಎಲ್ಲಿಗೆ ಹೋದರು ನಿಮ್ಮ ಜೊತೆಯೇ.

ಇರುತ್ತಾನೆ, ಅನು ಕ್ಷಣ ನಿಮ್ಮ ಬಗ್ಗೆ ಯೋಚಿಸುತ್ತಾನೆ ನಂಬಿಕಸ್ತ ಕೂಡ ಅಂತಹ ಗರುಡನಿಗೆ ಇಂದಿಗೂ ಕೂಡ ನೀವು ಏಕೆ ವರ ಕೊಟ್ಟಿಲ್ಲ ಎಂದು ಕೇಳುತ್ತಾರೆ ಆಗ ಮಹಾವಿಷ್ಣು ಏನು ತಿಳಿಯದೆ ಇರುವ ರೀತಿಯಲ್ಲಿ ದೇವಿ ನೀನು ಹೇಳುವವರೆಗೂ ನನಗೆ ಏಕೆ ಈ ಆಲೋಚನೆ ತಟ್ಟಲಿಲ್ಲ ಆದರು ದೇವಿ ಹೇಳಿದ ಮೇಲೆ ನಾನು ಕೇಳದೆ ಇರುತ್ತಿನ ಎಂದು ಹೇಳಿ ಗರುಡನನ್ನು ಆ ಕೂಡಲೇ ಅಲ್ಲಿಗೆ.

ಕರೆಯಿಸುತ್ತಾರೆ ಗರುಡ ಸಂತೋಷದಿಂದ ಓಡಿಬಂದು ಪ್ರಭುವಿನ ಪಾದದ ಬಳಿ ಕುಳಿತುಕೊಂಡು ಪ್ರಭು ಎಷ್ಟೋ ದಿನಗಳಾಯ್ತು ನಿಮ್ಮನ್ನು ನನ್ನ ಮೇಲೆ ಹೊತ್ತುಕೊಂಡು ನಾನು ಕ್ಷಣ ನಿಮ್ಮ ಸೇವೆಗೆ ಸಿದ್ದನಾಗಿದ್ದೇನೆ ಎಲ್ಲಿಗೆ ಹೋಗೋಣ ಪ್ರಭು ಎಂದು ಕೇಳುತ್ತಾನೆ ಆಗ ಮಹಾವಿಷ್ಣು ಗರುಡ ಇಂದು ನಾವು ಎಲ್ಲಿಗೂ ಪ್ರಯಾಣ ಬೆಳೆಸುವುದಕ್ಕೆ ನಿನ್ನನ್ನು ಕರೆದಿಲ್ಲ ಬದಲಾಗಿ ನಿನ್ನ.

ತಾಯಿ ಮಹಾಲಕ್ಷ್ಮಿ ಹೇಳಿದಂತೆ ನಿನಗೊಂದು ವರ ಕೊಡಲು ನಿನ್ನನ್ನು ಕರೆದಿದ್ದೇನೆ ಎಂದು ಹೇಳುತ್ತಾರೆ ನಿನಗೆ ಏನು ವರ ಬೇಕು ಕೇಳಿಕೋ ಎಂದು ಹೇಳುತ್ತಾರೆ ಅದಕ್ಕೆ ಗರುಡ ಪ್ರಭು ಎಂತಹ ಋಷಿ ಮುನಿಗಳಿಗೂ ಸಾಧುಸಂತರಿಗೂ ದೇವತೆಗಳಿಗೂ ನನ್ನಂತಹ ಅದೃಷ್ಟವಿಲ್ಲ ಏಕೆಂದರೆ ಅವರು ಕೂಡ ನಿಮ್ಮನ್ನು ಭೇಟಿಯಾಗಲು ಎಷ್ಟೋ ವರ್ಷಗಳ ಕಾಲ ತಪಸ್ಸು ಮಾಡಬೇಕು.

ಆದರೆ ನಾನು ನೀವು ಎಲ್ಲೇ ಹೋದರು ನಿಮ್ಮನ್ನು ಹೊತ್ತು ಕೊಂಡು ಹೋಗುತ್ತೇನೆ ಯಾವಾಗ ನಿಮ್ಮನ್ನು ನೋಡಬೇಕು ಅನಿಸಿದರೂ ನಿಮ್ಮ ಎದುರು ಬಂದು ನಿಲ್ಲುತ್ತೇನೆ ಇಂತಹ ಅದೃಷ್ಟ ನನ್ನ ಕೈ ತಪ್ಪದಿದ್ದರೆ ಸಾಕು ಎನ್ನುತ್ತಾ ನೆ ಗರುಡ ಮತ್ತೊಂದು ವರ ಬೇಡ ನನಗೆ ಎಂದು ಹೇಳುತ್ತಾನೆ ಆಗ ಮಹಾವಿಷ್ಣು ಹಾಗಾದರೆ.

ಸರಿ ಎಂತವರಿಗಾದರೂ ಮನಸ್ಸಿನಲ್ಲಿ ಒಂದು ಆಸೆ ಇರುತ್ತದೆ ನಿನಗೂ ವಂತಹ ಆಸೆ ಏನಾದರೂ ಇದ್ದರೆ ಈಗ ನನಗೆ ಹೇಳು ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ ಎಂದು ಹೇಳುತ್ತಾರೆ ಮಹಾವಿಷ್ಣು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.