ಕರ್ನಾಟಕ ವಿಧಾನಸಭೆ ಎಲೆಕ್ಷನ್ ಸೋತಿರೋ ಬಿಜೆಪಿ 2024 ರ ಲೋಕಸಭೆ ಚುನಾವಣೆ ಗೆಲ್ಲಲೇಬೇಕು ಅನ್ನೋ ಜಿದ್ದಿಗೆ ಬಿದ್ದಿದೆ. ಇದರ ನಡುವೆ ಟಿಕೆಟ್‌ಗಾಗಿ ಪಕ್ಷದಲ್ಲಿ ಪೈಪೋಟಿ ಜೋರಾಗಿದೆ. ಹಾಗಿದ್ರೆ ಬಿಜೆಪಿ ಹಾಲಿ ಸಂಸದರಲ್ಲಿ ಯಾರಿಗೆಲ್ಲ ಟಿಕೆಟ್ ಸಿಗಬಹುದು, ಯಾರಿಗೆಲ್ಲಾ ಮಿಸ್ ಆಗೋದು 2024 ರ ಲೋಕಸಭೆ ಚುನಾವಣೆಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳು ಯಾರು ಅನ್ನೋದನ್ನ ಈ ಲೇಖನದಲ್ಲಿ ಹೇಳ್ತೀವಿ.
ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಈ ಸಲ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಸಿಗೋದಿಲ್ಲ ಎಂಬ ಅನುಮಾನ ಮೂಡಿದೆ. ಕಾರಣ ಉಡುಪಿ ಜಿಲ್ಲೆಯ ಪ್ರಮುಖ ರಾಜಕಾರಣಿ ಪ್ರಮೋದ್ ಮಧ್ವರಾಜ್ ಕ್ಷೇತ್ರದಲ್ಲಿ ಓಡಾಡಿ ಕಾರ್ಯಕರ್ತರನ್ನ ಭೇಟಿ ಆಗ್ತಿರೋದು ಇವರಿಗೆ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ. ಶಿವಮೊಗ್ಗಕ್ಕೆ ಯಡಿಯೂರಪ್ಪ ಪುತ್ರ ಹಾವೇರಿಗೆ ಕೆ ಎಸ್ ಈಶ್ವರಪ್ಪ ಪುತ್ರ ಶಿವಮೊಗ್ಗ ಕ್ಷೇತ್ರದ ಸಂಸದರಾಗಿರುವ ಬಿ. ವೈ ರಾಘವೇಂದ್ರಗೆ ಮತ್ತೊಮ್ಮೆ ಟಿಕೆಟ್ ಸಿಗಬಹುದು. ಕಳೆದ ಸಲ ದೊಡ್ಡ ಅಂತರದಿಂದ ಗೆದ್ದವರಲ್ಲಿ ಇವರು ಕೂಡ ಒಬ್ಬರು.
ಇನ್ನು ಹಾವೇರಿ ಕ್ಷೇತ್ರದ ಹಾಲಿ ಸಂಸದರಾಗಿರೋ ಶಿವಕುಮಾರ್ ಉದಾಸಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಕ್ಷೇತ್ರದ ಟಿಕೇಟ್ ಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಗೆ ಸಿಗಬಹುದು ಎನ್ನಲಾಗ್ತಿದೆ. ಬೆಂಗಳೂರು, ದಕ್ಷಿಣಕ್ಕೆ ತೇಜಸ್ವಿ ಸೂರ್ಯ ಬೆಂಗಳೂರು ಸೆಂಟ್ರಲ್ ಗೆ ಪಿ ಸಿ ಮೋಹನ್, ಬಿಜೆಪಿ ಯುವ ನಾಯಕ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಗೆ ಮತ್ತೊಮ್ಮೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಕಳೆದ ಸಲ ದೊಡ್ಡ ಅಂತರ ದಿಂದ ಗೆದ್ದವರಲ್ಲಿ ಇವರು ಕೂಡ ಒಬ್ಬರು. ಇನ್ನು ಪಿಸಿ ಮೋಹನ್‌ಗೆ ಸತತ ನಾಲ್ಕನೇ ಸಲ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಸಿಗಬಹುದು ಎನ್ನಲಾಗ್ತಿದೆ.
ಬೆಂಗಳೂರು, ಉತ್ತರಕ್ಕೆ ಡಿವಿಎಸ್ ಬಿಟ್ಟು ಬೇರಾರು ಚುನಾವಣಾ ನಿವೃತ್ತಿ ಘೋಷಿಸಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ ವಿ. ಸದಾನಂದಗೌಡ ಬಳಿಕ ಯೂಟರ್ನ್ ತಗೊಂಡು ಚುನಾವಣೆಗೆ ಸ್ಪರ್ಧಿಸುವಂತೆ ಹಿರಿಯರಿಂದ ಒತ್ತಡ ಬರುತ್ತಿದೆ ಎಂದಿದ್ದರು. ಆದರೆ ಈ ಸಲ ಎಲೆಕ್ಷನ್‌ಗೆ ನಿಲ್ಲ ಬೇಡಿ ಅಂತ ಸದಾನಂದ ಗೌಡರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಅಂತ ಯಡಿಯೂರಪ್ಪ ಹೇಳಿದ್ರು. ಹೀಗಾಗಿ ಡಿವಿಎಸ್ ಮತ್ತೊಮ್ಮೆ ಎಲೆಕ್ಷನ್ ಗೆ ನಿಲ್ತಾರೆ ಎಂಬ ಅನುಮಾನ ಒಂದು ಕಡೆಯಾದರೆ ಈ ಕ್ಷೇತ್ರಕ್ಕೆ ಸಿಟಿ ರವಿ ಅಥವಾ ಶೋಭಾ ಕರಂದ್ಲಾಜೆ ಹೆಸರು ಕೂಡ ಕೇಳಿಬರುತ್ತಿದೆ. ಮಂಡ್ಯದಲ್ಲಿ ಸುಮಲತಾಗೆ ಪ್ರತಾಪ್ ಸಿಂಹ ಕಮೈಸೂರು ಟಿಕೇಟ್ ಮಂಡ್ಯದಲ್ಲಿ ಕಳೆದ ಬಾರಿಯಂತೆ ಈ ಸಲ ವು ಸುಮಲತಾ ಅಂಬರೀಶ್ ಗೆ ಬಿಜೆಪಿ ಬೆಂಬಲ ಕೊಡೋ ಸಾಧ್ಯತೆ ಹೆಚ್ಚಿದೆ ಬಿಜೆಪಿ ಮಿತ್ರ ಪಕ್ಷವಾಗಿರುವ ಜೆಡಿಎಸ್ ಕೂಡ ಸುಮಲತಾಗೆ ಬೆಂಬಲ ಕೊಡಬೇಕಾದ ಪರಿಸ್ಥಿತಿ ಬರಬಹುದು.
ಇಂತಹ ಸಂದರ್ಭದಲ್ಲಿ ಮೈಸೂರು ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ ಇಡ ಬಹುದು. ಈ ನಿಟ್ಟಿನಲ್ಲಿ ಪ್ರತಾಪ್ ಸಿಂಹ ಗೆ ಟಿಕೆಟ್ ಕೈತಪ್ಪುವ ಆತಂಕ ಇದೆ. ಆದರೆ ಮೇಲ್ನೋಟಕ್ಕೆ ಪ್ರತಾಪ್ ಸಿಂಹ ಗೆ ಮತ್ತೊಮ್ಮೆ ಟಿಕೆಟ್ ಸಿಗೋ ಚಾನ್ಸ್ ಜಾಸ್ತಿ ಇದೆ. ಉತ್ತರ ಕನ್ನಡಕ್ಕೆ ಮತ್ತೆ ಅನಂತ್‌ಕುಮಾರ್ ಕಲಬುರಗಿಗೆ ಡಾಕ್ಟರ್ ಉಮೇಶ್ ಜಾಧವ್ ಫೆಕ್ಸ್ ಎಲ್ಲ ವರ್ಷಗಳಿಂದ ರಾಜಕಾರಣ ಮತ್ತು ಮಾಧ್ಯಮಗಳಿಂದ ದೂರವಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಈಗ ಮನಸ್ಸು ಬದಲಿಸಿ ಮತ್ತೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ