ಪ್ರಪಂಚದಲ್ಲಿ ಹೆಣ್ಣು ಅಂದ್ರೆ ತ್ಯಾಗ ಮೂರ್ತಿ ಆಗಿದ್ದಾರೆ. ಕಣ್ಣಿಗೆ ಕಾಣೋ ದೇವರು ಅಂತಾರೆ ಹೆಣ್ಣನ್ನ ಮಹಾನ್ ಶಕ್ತಿ ಅಂತಾರೆ ದಿವ್ಯರೂಪಿ ಅಂತಾನೂ ಪೂಜಿಸುತ್ತಾರೆ ಅಷ್ಟೇ ಯಾಕೆ ಹೆಣ್ಣನ್ನ ಪ್ರಕೃತಿಗೆ ಹೋಲಿಸುತ್ತಾರೆ. ಆದರೆ ಹೆಣ್ಣಿನ ಬಗ್ಗೆ ಇಷ್ಟೆಲ್ಲ ಭಾವನೆ ಇಟ್ಕೊಂಡಿರೋ ನಮ್ಮ ಜನಗಳೇ ಹೆಣ್ಣನ್ನ ಹೀನಾಯವಾಗಿಯೂ ಕಾಣ್ತಾರೆ. ಹೆಣ್ಣು ಮನೆಯ ಕಣ್ಣು ಅಂತಾರೆ ಹೆಣ್ಣುಮಕ್ಕಳು ಹುಟ್ಟಿದರೆ ಶಾಪ ಅನ್ನೋ ರೀತಿ ಮಾತನಾಡುತ್ತಾರೆ. ಗಂಡು ಎಷ್ಟೇ ಹುಟ್ಟಲಿ ಹೆಣ್ಣುಮಕ್ಕಳು ಮಾತ್ರ ಬೇಡಪ್ಪ ಎನ್ನುವವರು ಹೆಚ್ಚಿದ್ದಾರೆ.
ಆತ್ಮೀಯರೇ ಅಂದ್ರೆ ತಂದೆ ತಾಯಿಯೂ ಹೀಗೆ ಇರ್ತಾರೆ ಅಂತ ಹೇಳ್ತಿಲ್ಲ. ಹೆಣ್ಣು ಮಕ್ಕಳು ಗಂಡು ಮಕ್ಕಳು ಅನ್ನೋ ಬೇಧವಿಲ್ಲದೆ ಯಾವ ಮಕ್ಕಳು ಮಕ್ಕಳೇ ಅಲ್ವಾ ಅಂತ ಪ್ರೀತಿ ಮಾಡೋರು ಇದ್ದಾರೆ. ಹೆಣ್ಣನ್ನು ಸಹ ಮನೆಯ ಕಣ್ಣು ಅಂತ ಪ್ರೀತಿಸುತ್ತಿದ್ದಾರೆ. ಆದರೆ ಒಂದಿಷ್ಟು ಮಂದಿಯ ಮೈಂಡ್ ಇನ್ನೂ ಬದಲಾಗಿಲ್ಲ. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳಿಸಬೇಕು, ವರದಕ್ಷಿಣೆ ಕೊಡಬೇಕು, ಎಲ್ಲದಕ್ಕೂ ಖರ್ಚು ಅನ್ನೋ ಭಾವನೆಯವರು ಈಗಲೂ ಇದ್ದಾರೆ. ಆದರೆ ಹೆಣ್ಣಿನ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳ್ತಿದ್ದೀವಿ ಅಂದ್ರೆ ಡ್ರೋನ್ ಪ್ರತಾಪ್ ಅವರ ತಂದೆ ಹೀಗೆ ಇಬ್ಬರು ಮಕ್ಕಳು ಒಬ್ಬರು ಡ್ರೋನ್ ಪ್ರತಾಪ್, ಮತ್ತೊಬ್ಬರು ಅವರ ತಂಗಿ ಹೆತ್ತವರಿಗೆ ಎರಡು ಮಕ್ಕಳು, ಎರಡು ಕಣ್ಣುಗಳಿದ್ದಂತೆ.
ಪ್ರತಾಪ್ ರನ್ನ ಎಷ್ಟು ಇಷ್ಟ ಪಡ್ತಾರೋ ಮಗಳನ್ನು ಅಷ್ಟೇ ಇಷ್ಟಪಡುತ್ತಾರೆ. ಆತ್ಮೀಯರೇ ಪ್ರತಾಪ್ ತಂದೆ ತಾಯಿಗೆ ಮಗ ಅದೆಷ್ಟರ ಮಟ್ಟಿಗೆ ಕಷ್ಟಗಳಿಗೆ ಹೆಗಲಾಗಿದ್ದಾರೋ ಗೊತ್ತಿಲ್ಲ. ಆದರೆ ಡ್ರೋನ್ ಪ್ರತಾಪ್ ಅವರ ತಂದೆ ತಾಯಿಗೆ ಅವರ ಮಗಳೆ ಮಗನಾಗಿ ಮನೆಯನ್ನ ನೋಡಿಕೊಳ್ತಿದ್ದಾರೆ. ಡ್ರೋನ್ ಪ್ರತಾಪ್ ಅವರ ತಂಗಿಯ ಸಾಹಸಗಾಥೆ ಬಗ್ಗೆ ಹೇಳ್ತಾ ಹೋಗ್ತೀವಿ.ಡ್ರೋನ್ ಪ್ರತಾಪ್ ಅವರ ತಂಗಿಯ ಫೋಟೋ ಆಗಲಿ ಆಗಲಿ ಎಲ್ಲೂ ಇಲ್ಲ. ಯಾಕಂದ್ರೆ ಡ್ರೋನ್ ಪ್ರತಾಪ್ ಗಿಂತಲೂ ಅವರ ತಂಗಿ ತುಂಬಾನೇ ಸಂಕೋಚದ ಸ್ವಭಾವದವರು
ಸೋಶಿಯಲ್ ಮೀಡಿಯಾದಲ್ಲೂ ಅಷ್ಟೊಂದು ಆಕ್ಟಿವ್ ಇಲ್ಲ. ತಾನಾಯಿತು ತನ್ನ ಮನೆಯಾಯಿತು. ಅಪ್ಪ ಅಮ್ಮನ ಚೆನ್ನಾಗಿ ನೋಡ್ಕೊಳೋದೆ ನನ್ನ ಗುರಿ ಅಂದುಕೊಂಡವರು ಇವರು. ಹೀಗಾಗಿ ಇವರ ಫೋಟೋ ಯಾವುದು ಇಲ್ಲ. ಆಮೇಲೆ ಈ ಸ್ಟೋರಿ ಮುಗಿದ ಮೇಲೆ ನೀವೇನು ಡ್ರೋನ್ ಪ್ರತಾಪ್ ತಂಗಿ ಬಗ್ಗೆ ಸ್ಟೋರಿ ಮಾಡಿದ್ದೀರಾ? ಅವರದ್ದು ಒಂದೇ ಒಂದು ಫೋಟೋ ಇಲ್ಲ ಅಂತ ಹೇಳಬಾರದಲ್ವ ಇದೇ ಕಾರಣಕ್ಕೆ ಇದನ್ನ ಮೊದಲೇ ಹೇಳಿದ್ದು
ಆತ್ಮೀಯರೇ ಡ್ರೋನ್ ಪ್ರತಾಪ್ ಅವರ ತಂಗಿ ಈಗ ಮದುವೆ ವಯಸ್ಸಿಗೆ ಬಂದು ನಿಂತಿದ್ದಾರೆ. ಹೀಗಾಗಿ ಅಲ್ಲಿ ಇಲ್ಲಿ ಸಂಬಂಧ ಕೂಡ ಬರ್ತಾ ಇದೆ. ಆದರೆ ಇವರಿಗೊಂದು ದೊಡ್ಡ ಕನಸಿತ್ತು. ಅದು ಮನೆ ಕಟ್ಟ ಬೇಕು ಅನ್ನೋದು ನನ್ನ ಮದುವೆ ಆಗಿ ಹೋಗೋದಕ್ಕೂ ಮೊದಲು ಹೆತ್ತವರು ಮನೆಯಲ್ಲಿ ಹೊಸದೊಂದು ಮನೆ ನೋಡಬೇಕು. ನಾನು ಮದುವೆ ಆಗುವುದೇ ಆದರೆ ಹೊಸ ಮನೆಯಲ್ಲೇ ಆಗಬೇಕು ಅನ್ನೋದು ಆತ್ಮೀಯರೇ. ನಾವು ಮೊದಲೇ ಹೇಳಿದಂತೆ ಡ್ರೋನ್ ಪ್ರತಾಪ್ ಅವರ ತಂದೆ ಸಾಮಾನ್ಯ ರೈತ ರೇಷ್ಮೆ ಬೆಳೆಯೇ ಇವರ ಜೀವನಕ್ಕೆ ಆಧಾರ.
ಇದರಿಂದ ಬರೋ ಅಲ್ಪ ಸ್ವಲ್ಪ ಹಣ ಸಂಸಾರಕ್ಕೆ ಸರಿ ಹೋಗ್ತಾ ಇತ್ತು. ಹೀಗಾಗಿ ಇದ್ದ ಸಣ್ಣ ಮನೆಯಲ್ಲೇ ಜೀವನ ನಡೆಸುತ್ತಿದ್ದರು ಅಂದ್ರೆ ಡ್ರೋನ್ ಪ್ರತಾಪ್ ಅವರ ತಂಗಿ ದೊಡ್ಡ ಕನಸುಗಾರ್ತಿ. ನನ್ನ ಮದುವೆ ಆಗೋದೇ ಆದ್ರೆ ಮನೆ ಕಟ್ಟಿ ಮದುವೆ ಆಗೋದು ಅನ್ನೋ ಹಠಕ್ಕೆ ಬರುತ್ತಾರೆ. ಕೊನೆಗೆ ತಾವು ಅಂದುಕೊಂಡಂತೆ ಮನೆಯನ್ನು ಕಟ್ಟಿದ್ದಾರೆ. ಅದು ದೊಡ್ಡ ಮನೆಯೋ ಅಥವಾ ಚಿಕ್ಕ ಮನೆಯೂ ಅನ್ನೋದು ಬೇರೆ ವಿಷಯ. ಆದರೆ ಹೊಸ ಮನೆಯೊಂದನ್ನು ಕಟ್ಟಿಸಿದ್ದಾರೆ. ಆತ್ಮೀಯರೇ ಡ್ರೋನ್ ಪ್ರತಾಪ್ ಮನೆ ಬಿಟ್ಟು ಹೋದ ಮೇಲೆ ಮನೆಗೆ ಮಗನಾಗಿದ್ದು ಅವರ ತಂಗಿಯೇ ತಾವೇ ಕೆಲಸಕ್ಕೆ ಹೋಗುತ್ತಾರೆ. ಮನೆಯ ಎಲ್ಲ ಜವಾಬ್ದಾರಿಯನ್ನ ನೋಡಿಕೊಳ್ಳುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.