ಜನವರಿ 22 ಕ್ಕೆ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಸಲು ಕಾರಣವೇನು ? ವಿಗ್ರಹದೊಳಗೆ ಶ್ರೀರಾಮನು ಈ ಸಮಯದಲ್ಲಿ..

ಅಯೋಧ್ಯ ಶ್ರೀ ರಾಮನ ಪ್ರತಿಷ್ಠಾಪಿಸಲು ಅತಿ ಮುಖ್ಯವಾದ ಕಾರಣ…. ಶ್ರೀರಾಮ ಜನ್ಮ ಭೂಮಿ ಮಂದಿರದ ವಿವರಣೆ, ಕಿರು ಪರಿಚಯ ಹಾಗೂ ಜನವರಿ 22ರಂದು ಏಕೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎನ್ನುವುದರ ಬಗ್ಗೆ ನಮಗೆ ತಿಳಿದಿರುವ ಒಂದಿಷ್ಟು ಮಾಹಿತಿ ನಿಮಗಾಗಿ,,

WhatsApp Group Join Now
Telegram Group Join Now

ಪರಂಪರಾನು ಗತ ಶೈಲಿಯಲ್ಲಿ ಮಂದಿರ ನಿರ್ಮಾಣ, ಪೂರ್ವ ಪಶ್ಚಿಮವಾಗಿ ಉದ್ದ 380 ಅಡಿ ಅಗಲ 250 ಅಡಿ ಮತ್ತು ಎತ್ತರ 161 ಅಡಿ ಅಳತೆಯಲ್ಲಿ ಮಂದಿರ ನಿರ್ಮಾಣವಾಗಿದೆ, ಮೂರು ಮಹಡಿಗಳ ಮಂದಿರ ಪ್ರತಿ ಮಹಡಿಯ ಎತ್ತರ 20 ಅಡಿ ಒಟ್ಟು 392 ಸ್ತಂಭಗಳು ಮತ್ತು 44 ಬಾಗಿಲುಗಳು, ನೆಲಮಹಡಿಯ ಗರ್ಭಗೃಹದಲ್ಲಿ ಶ್ರೀರಾಮಲಲ್ಲ ಅಂದರೆ ಬಾಲರಾಮನ ವಿಗ್ರಹ.

ಮತ್ತು ಮೊದಲನೇ ಮಹಡಿಯ ಗರ್ಭಗುಡಿಯಲ್ಲಿ ಶ್ರೀರಾಮ ದರ್ಬಾರ್, ಒಟ್ಟು ಐದು ಮಂಟಪಗಳು ನೃತ್ಯ ಮಂಟಪ ರಂಗಮಂಟಪ ಸಭಾಮಂಟಪ ಪ್ರಾರ್ಥನಾ ಮಂಟಪ ಮತ್ತು ಕೀರ್ತನ ಮಂಟಪ, ಸ್ತಂಭಗಳು ಮತ್ತು ಬಾಗಿಲುಗಳ ಮೇಲೆ ದೇವಾದಿ ದೇವತೆಗಳ ಮತ್ತು ದೇವಾಂಗನೆಯರ ಮೂರ್ತಿಗಳ ಸುಂದರ ಕೆತ್ತನೆ, 16.5 ಅಡಿ ಎತ್ತರವನ್ನು 32 ಮೆಟ್ಟಲುಗಳಲ್ಲಿ.

ಕ್ರಮಿಸಿ ಸಿಂಹದ್ವಾರದ ಮೂಲಕ ಪೂರ್ವ ದಿಕ್ಕಿನಿಂದ ಮಂದಿರಕ್ಕೆ ಪ್ರವೇಶ, ದಿವ್ಯಾಂಗರು ಮತ್ತು ವೃದ್ಧರಿಗಾಗಿ ಇಳಿಜಾರು ಮೆಟ್ಟಿಲು ಮತ್ತು ಲಿಫ್ಟ್ ವ್ಯವಸ್ಥೆ, ಆಯತಾಕಾರವಾಗಿ ಮಂದಿರದ ಸುತ್ತಲೂ ಪರಿಕ್ರಮ ಉದ್ದ 732 ಮೀಟರ್ ಅಗಲ 4.25, ಮಂದಿರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳು ಭಗವಾನ್ ಸೂರ್ಯ ಶಂಕರ ಗಣಪತಿ ದೇವಿ ಭಗವತಿ ದಕ್ಷಿಣ ದಿಕ್ಕಿನಲ್ಲಿ ಹನುಮಂತ.

ಮತ್ತು ಉತ್ತರ ದಿಕ್ಕಿನಲ್ಲಿ ಮಾತ ಅನ್ನಪೂರ್ಣೇಶ್ವರಿ ಯ ಮಂದಿರ, ಮಂದಿರದ ಸಮೀಪದಲ್ಲಿ ಪೌರಾಣಿಕ ಕಾಲದ ಸೀತಾ ಕೊಳ, ಶ್ರೀರಾಮ ಜನ್ಮಭೂಮಿ ಮಂದಿರದ ಪರಿಸರದಲ್ಲಿ ಮಹರ್ಷಿಗಳಾದ ವಾಲ್ಮೀಕಿ ವಿಶ್ವಮಿತ್ರ ಅಗಸ್ತ್ಯ ನಿಶಾದರಾಜ ಗುಹಾರ್ ಮಾತಾ ಶಬರಿ ಮತ್ತು ದೇವಿ ಅಹಲ್ಯ ಇವೆಲ್ಲ ಪ್ರಸ್ತಾವಿತ ಅನ್ಯ ಮಂದಿರಗಳಿವೆ, ನೈರುತ್ಯ ಭಾಗದಲ್ಲಿ ನವರತ್ನ ಕುಬೇರ.

ಪೀಠದಲ್ಲಿ ಸ್ತಿತನಾದ ಶಿವಮಂದಿರದ ಜೀರ್ಣೋದ್ಧಾರ ಮತ್ತು ರಾಮಭಕ್ತ ಜಟಾಯು ರಾಜನ ಪ್ರತಿಮೆಯು ಸ್ಥಾಪನೆಯಾಗಿದೆ, ಸನಾತನ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಪಂಚಾಂಗದ ಪ್ರಕಾರ ಮಾಡಲಾಗುತ್ತದೆ ಶುಭ ಮುಹೂರ್ತವನ್ನು ನೋಡಿದ ನಂತರವೇ ಮಾಡಲಾಗುತ್ತದೆ ಜನವರಿ 22 ಅತ್ಯಂತ ಮಂಗಳಕರ ದಿನ ಈ ದಿನ ನಮಗೆಲ್ಲ ತಿಳಿದಿರುವ ಹಾಗೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಶುಭದಿನ ಅಂದು ಸರ್ವಾರ್ಥ ಸಿದ್ದಿ ಯೋಗ ಅಮೃತಸಿದ್ಧಿಯೋಗ ರವಿ ಯೋಗ ಇನ್ನು ಮುಂತಾದ ಹಲವು ಶುಭಯೋಗಗಳು ರೂಪಗೊಳ್ಳುತ್ತಿವೆ ಹಾಗೂ ಮೃಗಶಿರ ನಕ್ಷತ್ರವಿದೆ ಈ ದಿನ ಹರಿ ಅಂದರೆ ವಿಷ್ಣು ಮುಹೂರ್ತ ಕೂಡ 41 ವರ್ಷಗಳ ನಂತರ ಬಂದಿದೆ, ಈ ದಿನ ಅಭಿಜಿತ್ ಮುಹೂರ್ತ ಮಧ್ಯಾಹ್ನ 12 17.

ನಿಮಿಷಕ್ಕೆ ಪ್ರಾರಂಭವಾಗಿ 12:59 ವರೆಗೆ ನಡೆಯಲಿದೆ ಈ ಅವಧಿಯಲ್ಲಿ ಪ್ರಾಣ ಪ್ರತಿಷ್ಠೆಯ ಶುಭ ಮುಹೂರ್ತವು ಮಧ್ಯಾಹ್ನ 12 29 ನಿಮಿಷ 8 ಸೆಕೆಂಡ್ ಗಳಿಂದ ಹನ್ನೆರಡು ಮೂವತ್ತು ನಿಮಿಷ 32 ಸೆಕೆಂಡು ಆ ಅವಧಿಯಲ್ಲಿ ಮೃಗಶಿರ ನಕ್ಷತ್ರ ಇರುತ್ತದೆ ಹಿಂದೂ ಧರ್ಮದಲ್ಲಿ ಅಭಿಜಿತ್ ಮುಹೂರ್ತವನ್ನು ಶುಭ ಕಾರ್ಯಗಳಿಗೆ ಅತ್ಯುತ್ತಮವೆಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]