ಕೋಟಿ ಭಾರತೀಯರ ಕಣ್ಣಲ್ಲಿ ಆನಂದ ಬಾಷ್ಪ ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ವಿರಾಜಮಾನನಾದ ಶ್ರೀರಾಮ.. - Karnataka's Best News Portal

ಕೋಟಿ ಭಾರತೀಯರ ಕಣ್ಣಲ್ಲಿ ಆನಂದ ಬಾಷ್ಪ ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ವಿರಾಜಮಾನನಾದ ಶ್ರೀರಾಮ..

ಸಾಕ್ಷಾತ್ ತಾನೇ ಧರೆಗಿಳಿದು ಬಂದ ರಾಮ

ಅದ್ಭುತ ಪರಮಾದ್ಭುತ ಅ ಕೋಟಿ ಭಾರತೀಯರ ಕಣ್ಣಲ್ಲಿ ಆನಂದ ಭಾಷ್ಪ ಜಿನುಗಿದ ಕ್ಷಣ ಇದು ಕತ್ತಲು ಸರಿದು ಬೆಳಕು ಹರಿದಿದೆ. ಕೊನೆ ಗೂ ಕನಸು ನನಸಾಗಿದೆ. ರಾಮನಿಗೆ ಪ್ರಾಣ ಪ್ರತಿಷ್ಠೆಯಾಗಿದೆ ಅನಾವರಣ ಕಲ್ಲಿನ ಕಟ್ಟಡದಲ್ಲಿ ಮರಳಿ ಪಡೆದ ಸ್ವಾಭಿಮಾನದ್ದು ಐದು ಶತಮಾನಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಅಂದು ರಾಮ 14 ವರ್ಷಗಳ ವನವಾಸ ಪೂರೈಸಿ ಅಯೋಧ್ಯೆಗೆ ಬಂದಾಗ ಶ್ರೀರಾಮನ ಪಟ್ಟಾಭಿಷೇಕಕ್ಕೆ ಇಡೀ ರಾಮರಾಜ್ಯ ಸಜ್ಜಾಗಿತ್ತು. ಜಗತ್ತಿಗೆ ಮಾದರಿಯಾಗಿರುವ ಶ್ರೀರಾಮನಿಗಾಗಿ ಐದು ಶತಮಾನಗಳಿಂದ ಆತನ ಕೋಟ್ಯಾನುಕೋಟಿ ಭಕ್ತರು, ಸೆರೆವಾಸ ಹೋರಾಟಗಳಂತಹ ನೂರಾ ರು ಅಗ್ನಿಪರೀಕ್ಷೆಯಲ್ಲಿ ಬಿದ್ದು ಹೊರಳಾಡಿ ಕಡೆಗೂ ಶ್ರೀ ರಾಮನ ಮರು ಪಟ್ಟಾಭಿಷೇಕ ಮಾಡಿಯೇ ಬಿಟ್ಟರು.

ಕಂಗಳಲ್ಲೂ ರಾಮ ಮನಸ್ಸು, ಹೃದಯ ಉಸಿರಲ್ಲೂ ರಾಮ ನಾಮ ಜಪಿಸುತ್ತ ತನ್ನ ಭಕ್ತಿಯ ಕಡಲಲ್ಲಿ ಸ್ನಾನ ಮಾಡಿಸಿ ಹೃದಯದ ಅರಮನೆಯಲ್ಲಿ ಗುಡಿ ಕಟ್ಟಿ ಇಂದು ಅದ್ದೂರಿಯಾಗಿ ಮರು ಪಟ್ಟಾಭಿಷೇಕ ಮಾಡುತ್ತಿರುವ ಈ ವಿಶ್ವ ನೋಡಿ ರಾಮ ಸಾರ್ಥಕ ಭಾವದಿಂದ ಮುಗುಳ್ನಗುತ್ತಿದ್ದನಿ ಆತನ ಕಂಗಳಲ್ಲಿ ಹಿಂದೆ ಇದ್ದ ವಿಷಾದ ತಿಲ್ಲ. ಅತೃಪ್ತಿ ಇಲ್ಲ ಭಕ್ತರ ನೋವಿಗಾಗಿ ಇನ್ನೆಲ್ಲ ಮರಳುತ್ತಿದ್ದ ರಾಮ ಇಂದು ಹಸನ್ಮುಖಿಯಾಗಿ ತೃಪ್ತನಾಗಿ ಅಯೋಧ್ಯೆಯ ಗರ್ಭಗುಡಿಯಲ್ಲಿ ಭಕ್ತರು ಎದುರಿಗೆ ಐದು ವರ್ಷದ ಬಾಲಕನಂತೆ ದರ್ಶನ ನೀಡಿದ್ದಾನೆ. ಕೋಟಿ ಕೋಟಿ ಜನರ ಪುಟ್ಟ ಹೃದಯವಾಗಿ ರಾಮನೆ ದರೆಗಿಳಿದು ಬಂದಿದ್ದಾನೆ.

See also  ಆಪ್ಗನಿನಲ್ಲಿದೆಯಂತೆ ಅಸಲಿ ದ್ವಾರಕೆ.ಸಮುದ್ರದಲ್ಲಿ ಮುಳುಗಿದ್ದು ಶ್ರೀ ಕೃಷ್ಣ ನ ದ್ವಾರಕೆ ಅಲ್ವಾ ? ಮೋದಿ ಹೋಗಿ ಬಂದ ನಂತರ ಇದೇನು ಹೊಸ ವಿವಾದ

ರಾಮಾ ಈ ಪ್ರೀತಿ ಭಕ್ತಿಯನ್ನ ಕಂಡು ಮೈಮರೆತು ತನ್ನವರನ್ನೆಲ್ಲ ಈ ನಿರಾಳ ನೋಟದಲ್ಲಿ ತುಂಬಿಸಿಕೊಳ್ಳುತ್ತಾ ಇದ್ದಾನೆ. ಬನ್ನಿ ರಾಮನ ಪ್ರಾಣ ಪ್ರತಿಷ್ಠಾಪನೆಯ ಆ ಸುಂದರ ಕ್ಷಣಗಳನ್ನ ಕಣ್ತುಂಬಿಕೊಂಡು ಬರೋಣ. ಭಾರತದ ಮೂಲೆ ಮೂಲೆಯಲ್ಲಿ ರಾಮ ಭಜನೆ ಕೇಳುತ್ತಿದೆ. ಐದು ಶತಮಾನಗಳಿಂದ ಬೆಳಗಲು ಕಾಯುತ್ತಿದ್ದ ದೀಪಕ್ಕೂ ಮರು ಜೀವ ಬಂದಂತಾಗಿದೆ. ಶ್ರೀರಾಮ ಬಿಲ್ಲು ಬಾಣಗಳನ್ನು ಹಿಡಿದು ಈ ಕಲಿಯುಗವನ್ನು ದುಷ್ಟರಿಂದ ರಕ್ಷಣೆ ಮಾಡಲು ತಯಾರಾಗಿ ಬಂದು ಇಂದು ಅಯೋಧ್ಯೆಯಲ್ಲಿ ವಿರಾಜಮಾನನಾಗಿದ್ದಾನೆ. ಧರ್ಮ ಸಂರಕ್ಷಣೆ ಗೆ ರಾಷ್ಟ್ರದ ಪುನರ್ವಸತಿಗೆ ಧರ್ಮವೇ ಅವತರಿಸಿದಂತೆ ಇದೆ. ಇಂದಿನ ಈ ಪುಣ್ಯ ದಿನ ಈ ಪುಣ್ಯ ಕ್ಷಣವ ರಾಮ ಸಂತಸದಿಂದ ಕಣ್ಣು ತೆರೆದು ಒಳಗೆ ಬರುತ್ತಿದ್ದಂತೆ ನಮ್ಮೆಲ್ಲರ ಕಂಗಳಲ್ಲಿ ಆನಂದ ಭಾಷ್ಪ ಜಿನುಗುತ್ತಿದೆ.

ಒಂದೆಡೆ ರಾಮನ ಭೂಮಿಯನ್ನ ಆತನಿಗೆ ಮತ್ತೆ ಒಪ್ಪಿಸಿದ ಸಡಗರ ಮತ್ತೊಂದೆಡೆ ರಾಮನ ಈ ಪುಣ್ಯ ಭಾರತಕ್ಕೆ ನಾವು ಇರುವ ಈ ಕಾಲದಲ್ಲಿ ಬಂದು ಬಿಟ್ಟೆನ್ನುವ ರೊಮಾಂಚನ ಇಂದು ನಮ್ಮದು ಬರುವ ನಾಳೆಗಳು ನಮ್ಮದು ಎನಿಸಿದೆ ಅಯೋಧ್ಯೆಯ ರಾಮಮಂದಿರ ಕಣ್ಣು ಮುಚ್ಚಿದ್ರು ಕಣ್ಣೆದುರಿಗೆ ಬಂದಂಥ ಆಗುವ ಈ ಅನುಭವ ನಮಗೆ ಮಾತ್ರವಲ್ಲ ಲೆಕ್ಕವೇ ಸಿಗದ ರಾಮ. ಭಕ್ತರ ಅನುಭವ ಸಾಗರ ಇದು ರಘುಕುಲ ರಾಮ ದಾರಿ ನಿಮ್ಮಲ್ಲಿನ ಅಯೋಧ್ಯೆಗೆ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ ಜಗದ ಭಕ್ತಿಯ ನ್ನೆಲ್ಲ ಮೆಚ್ಚುತ್ತಾ ಆಶೀರ್ವದಿಸುತ್ತ ಸಿರಿ ಗುಡುಗಿ ನಡೆದೇ ಬಿಟ್ಟನಲ್ಲ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಜಗದ ಎಲ್ಲ ತಮದ ಅಳಿವಿಗೆ ರಾಮನ ಆ ಮುದ್ದು ಮುಖದಲ್ಲಿ ಚೆಲ್ಲುತ್ತಿರುವ ನಗುವೊಂದೇ ಸಾಕು. ಆತನ ಕಂಗಳಲ್ಲಿ ಹೊಮ್ಮುತ್ತಿರುವ ಆ ತೇಜಸ್ವಿನ ಬೆಳಕಿಗೆ ಮಾಡಿದ ಪಾಪಗಳೆಲ್ಲ ಸುಟ್ಟು ಜನ್ಮ ಪಾವನ ವಾದಂತೆ ಭಾಸವಾಗುತ್ತಿದೆ. ಜನವರಿ 22, 2024 ಈ ದಿನಾಂಕವನ್ನು ಈ ಸೇವೆಯನ್ನ ಭಾರತೀಯರು ಚಿನ್ನದ ಅಕ್ಷರದಲ್ಲಿ ಬರೆದಿಡಬೇಕು. ಕಾರಣ ಇದು ರಾಮ ಮತ್ತೊಮ್ಮೆ ತನ್ನ ಗುರಿಯನ್ನ ಸೇರಿದ ದಿನ ಜಾನಕಿ ವಲ್ಲಭ 500 ವರ್ಷಗಳ ವನವಾಸ ಮುಗಿಸಿ ಮತ್ತೊಮ್ಮೆ ಪಟ್ಟಾಭಿಷೇಕ ಗೊಂಡ ಪುಣ್ಯ ದಿನ ಇದು ತನ್ನದೇ ಜನ್ಮಭೂಮಿಯಲ್ಲಿ ನೆಲೆ ಇಲ್ಲದೆ ನಿಂತಿದ್ದ ರಾಮ ಈಗ ತನ್ನ ಭವ್ಯ ಗರ್ಭಗುಡಿಯಲ್ಲಿ ಮುಗುಳ್ನಗುತ್ತ ನಿಂತಿದ್ದಾನೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">