ಅಂಗಡಿಗಳಲ್ಲಿ ವ್ಯಾಪಾರ ಸರಿಯಾಗಿ ಆಗ್ತಾ ಇಲ್ವಾ ಹಾಗಾದರೆ ಇದೊಂದು ಕೆಲಸವನ್ನು ಮಾಡಿ
ಹೊಸದಾಗಿ ಅಂಗಡಿಗಳನ್ನ ಶುರು ಮಾಡಿದ್ದೀವಿ. ಆದ್ರೆ ಬಿಸಿನೆಸ್ ಆಗ್ತಿಲ್ಲ ಅಂತ ಕಮೆಂಟ್ ಮಾಡ್ತಾ ಇದ್ರಿ. ಇನ್ನು ಕೆಲವರು ಶುರುಮಾಡಿ ಸುಮಾರು ವರ್ಷವಾಗಿದೆ. ಆದರೂ ಕೂಡ ತುಂಬಾ ಲಾಸಲ್ಲಿ ನಡೀತಾ ಇದೆ ಕೆಲಸ ಮಾಡೋಕೆ ಆಗ್ತಾ ಇಲ್ಲ, ಅಂಗಡಿ ಕ್ಲೋಸ್ ಮಾಡೋಕೆ ಆಗ್ತಾ ಇಲ್ಲ ಅಂತಹ ಪರಿಸ್ಥಿತಿಯಲ್ಲಿ ಇದೀವಿ ಏನು ಮಾಡೋದು ಅಂತ ಕೂಡ ಪ್ರಶ್ನೆ ಕೇಳ್ತಾ ಇದ್ದೀನಿ ನಾನು ಈ ಹಿಂದೆ ಕೂಡ ಇದರ ಬಗ್ಗೆ ಒಂದಷ್ಟು ವಿಡಿಯೋ ಶೇರ್ ಮಾಡಿಕೊಂಡಿದೆ ಆ ರೀತಿ ಪ್ರಯತ್ನಗಳೆಲ್ಲ ಮಾಡಿದ್ರು ಕೂಡ ಅಂದುಕೊಂಡಂತ ಲಾಭ ನಮಗೆ ಸಿಕ್ತಾ ಇಲ್ಲ. ಏನು ಮಾಡೋದು ಅಂತ ಕೇಳ್ತಾ ಇದ್ರಿ ಅಲ್ವ
ಇವತ್ತಿನ ಲೇಖನದಲ್ಲಿ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಸಿಕೊಡ್ತಿವಿ ದಿನ ಪೂರ್ತಿಯಾಗಿ ನೋಡಿ ಕೆಲವು ಸಲ ಏನಾಗುತ್ತೆ ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದೇ ಇಲ್ಲ ಏನು ಕಾರಣ ಅಂತ ತಿಳ್ಕೊಳೋದು ಕೂಡ ಆಗೋದಿಲ್ಲ. ಕೆಲವು ಸಲ ಜನರ ಒಂದು ದೃಷ್ಟಿ ದೋಷ ಇರಬಹುದು ಅಥವಾ ನಮ್ಮ ಬ್ಯಾಡ್ ಲಕ್ ಕೂಡ ಆಗಿರಬಹುದು ಅಥವಾ ನಾವು ಅಂಗಡಿ ಇಟ್ಟಿರುವಂತಹ ಜಾಗ ಸರಿ ಇರಬಹುದು. ಅಂಗಡಿಯ ಬಾಗಿಲು ನಮಗೆ ಆಗ ಬರದೇ ಇರಬಹುದು ಕೆಲವು ಸಲ ಇದೆಲ್ಲ ಕೂಡ ನಮಗೆ ಅರ್ಥ ಆಗೋದೇ ಇಲ್ಲ. ಯಾವಾಗಲು ಅಷ್ಟೇ ಅಂಗಡಿಯಲ್ಲಿ ವ್ಯಾಪಾರ ಯಾರು ಮಾಡುತ್ತಾರೋ ಅವರ ಹೆಸರಿಗೆ ಅಂಗಡಿಯ ಬಾಗಿಲು ಆಗಿ ಬರುತ್ತಾ ಯಾವ ದಿಕ್ಕಿನ ಬಾಗಿಲು ಮಾಡ್ಕೊಂಡ್ರೆ ಒಳ್ಳೇದು ಅನೋದನ್ನ ತಿಳ ಕೊಂಡು ಅದರ ಪ್ರಕಾರ ಮಾಡಬೇಕು. ನೀವು ಏನು ವ್ಯಾಪಾರ ಮಾಡಬೇಕು ಅಂದುಕೊಂಡಿದ್ದೀರಾ? ಅದರ ಬಗ್ಗೆ ನಿಮಗೆ ಅನುಭವ ಇರಬೇಕು. ತಿಳುವಳಿಕೆಯನ್ನು ಇರಬೇಕು. ಇನ್ನೊಬ್ಬರಿಗೆ ವ್ಯಾಪಾರ ಆಗ್ತಾ ಇದೆ. ಅವರಿಂದ ಅಂಗಡಿ ಮಾಡಿ ವ್ಯಾಪಾರ ಚೆನ್ನಾಗಿದೆ ನಾವು ಮಾಡೋಣ ಅಂತ ಹೇಳಿ ಮಾಡೋಕೆ ಹೋಗಬೇಡಿ ಈ ರೀತಿ ಸ್ವಂತ ಬಿಸ್ನೆಸ್ಗಳು ಕೂಡ ತುಂಬ ಜನರಿಗೆ ಆಗೋದಿಲ್ಲ.
ಕೆಲವು ಜಾತಕದಲ್ಲಿ ಸ್ವಂತ ಬ್ಯುಸಿನೆಸ್ ಮಾಡಬೇಕು ಅಂತ ಇರುತ್ತೆ. ಕೆಲವರು ಜಾತಕದಲ್ಲಿ ಬೇರೆಯವರ ಕೈ ಕೆಳಗೆ ಕೆಲಸ ಮಾಡಬೇಕು ಅಂತಾನೆ ಇರುತ್ತೆ. ನೀವು ಮೊದಲು ಅದನ್ನು ಕೂಡ ತಿಳ್ಕೋಬೇಕು. ನಿಮಗೆ ಬಿಸಿನೆಸ್ ಆಗಿ ಬರುತ್ತಾ ಇಲ್ವಾ ಅನ್ನೋದನ್ನ ನೋಡ್ಕೊಂಡು ನೀವು ಅಂಗಡಿಗಳನ್ನ ಶುರು ಮಾಡಬೇಕು. ಸಾಮಾನ್ಯವಾಗಿ ಅಂಗಡಿ ಬಾಗಿಲು ಯಾವಾಗಲೂ ಅಷ್ಟೇ ಒಂದು ದಕ್ಷಿಣ ದಿಕ್ಕಿಗೆ ಇರಬೇಕು ಅಥವಾ ಪಶ್ಚಿಮ ದಿಕ್ಕಿಗೆ ಇರಬೇಕು. ಕೆಲವರಿಗೆ ಏನಂದ್ರೆ ಪೂರ್ವ ದಿಕ್ಕಿನ ಬಾಗಿಲು ಎಲ್ಲದಕ್ಕೂ ಒಳ್ಳೇದು, ಎಲ್ಲರಿಗೂ ಕೂಡ ಆಗಿ ಬರುತ್ತೆ ಅನ್ನೋ ಒಂದು ಭಾವನೆ ಇರುತ್ತೆ. ಅದು ಖಂಡಿತವಾಗಲೂ ನಿಜ. ಆದರೆ ಈ ರೀತಿ ವ್ಯಾಪಾರಕ್ಕೆ ಅಂತ ಅಂದಾಗ ದಕ್ಷಿಣ ದಿಕ್ಕು ಅಥವಾ ಪಶ್ಚಿಮ ದಿಕ್ಕು ತುಂಬಾನೇ ಒಳ್ಳೆಯದು. ನೀವು ಬೇಕಿದ್ದರೆ ಗಮನಿಸಿ.
ಅಂಗಡಿ ಸಾಲುಗಳನ್ನ ಗಮನಿಸಿ. ಅಲ್ಲಿ ಪಶ್ಚಿಮ ದಿಕ್ಕು ಮತ್ತೆ ದಕ್ಷಿಣ ದಿಕ್ಕಿಗೆ ಇರುವಂತ ಅಂಗಡಿಗಳು ಚೆನ್ನಾಗಿ ನಡೀತಾ ಇರುತ್ತೆ. ಅಲ್ಲಿ ಯಾವಾಗಲೂ ಜನ ತುಂಬಿರ್ತಾರೆ. ಹಾಗಂತ ಹೇಳಿ ಈಗಾಗಲೇ ಮಾಡಿರುವಂತಹ ಅಂಗಡಿಯನ್ನ ಖಾಲಿ ಮಾಡಬೇಕು ಅಂತ ಯೋಚನೆ ಮಾಡೋಕೆ ಹೋಗಬೇಡಿ. ನೀವು ಯಾವ ಏರಿಯಾದಲ್ಲಿ ಅಂಗಡಿ ಇಟ್ಟುಕೊಂಡಿದ್ದೀರಾ? ನೀವು ಇರುವಂತಹ ಜಾಗ ಹೇಗಿದೆ? ಜನ ಯಾವಾಗಲೂ ಓಡಾಡುವ ಜಾಗದಲ್ಲಿ ಅಂಗಡಿ ಇಟ್ಟುಕೊಂಡಿದ್ದೀರಾ ಅದನ್ನು ಮೊದಲು ಗಮನಿಸಿಕೊಳ್ಳಿ. ಯಾಕಂದ್ರೆ ಜನರ ಸಂಚಾರ ಚೆನ್ನಾಗಿದ್ರೆ ಅಂತ ಕಡೆ ವ್ಯಾಪಾರ ಕೂಡ ಚೆನ್ನಾಗಿರುತ್ತೆ. ಇನ್ನೊಂದ ಏನಂದ್ರೆ ಕೆಲವರು ಕಾರ್ನರಲ್ಲಿ ಅಂಗಡಿಗಳು ಇದ್ದರೆ ತುಂಬಾ ಒಳ್ಳೆಯದು ಅಂತ ಹೇಳಿ ಮೂರು ರಸ್ತೆ ಕೂಡುವ ಅಂತ ಜಾಗಗಳಲ್ಲಿ ಕೂಡ ಅಂಗಡಿಯನ್ನು ಮಾಡಿಕೊಂಡಿರುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.