ರಾಮ ಮಂದಿರದ ನಿರ್ಮಾಣದಲ್ಲಿ ಕನ್ನಡಿಗರದ್ದೇ ಪಾರುಪತ್ಯ
ಪ್ರಭು ಶ್ರೀರಾಮಚಂದ್ರ ಗರ್ಭಗುಡಿಯಲ್ಲಿ ನೆಲೆಯಾಗಿ ಬಿಟ್ಟಿದ್ದಾರೆ. ಕನ್ನಡಿಗ ಕೆತ್ತಿದ ರಾಮಲಲ್ಲಾನ ಮೂರ್ತಿ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ಇನ್ನೇನಿದ್ದರು ಶ್ರೀರಾಮ ಭಕ್ತರಿಗೆ ದರ್ಶನ ನೀಡುವುದು ಮಾತ್ರ ಬಾಕಿ ಗರ್ಭಗುಡಿಯಲ್ಲಿರುವ ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯಾಗುವುದು ಮಾತ್ರ ಬಾಕಿ ಇದೆ. ಈ ಅಮೃತ ಗಳಿಗೆ ಇಡೀ ದೇಶವೇ ಕ್ಷಣಗಳನ್ನ ಎಣಿಸುತ್ತಿದೆ. ವಿಶೇಷ ಅಂದ್ರೆ ಕನ್ನಡಿಗರು ರಾಮಮಂದಿರದ ವಿಚಾರದಲ್ಲಿ ತುಂಬಾನೇ ಹೆಮ್ಮೆ ಪಡಬೇಕು. ಕಾರಣ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕನ್ನಡಿಗರ ಕೊಡುಗೆ ತುಂಬಾನೇ ಇದೆ. ಮೂರ್ತಿಯ ಕೆತ್ತನೆಗೆ ಬೇಕಿದ್ದ ಕಲ್ಲಿನಿಂದ ಹಿಡಿದು ಶಿಲ್ಪಿವರೆಗೆ ಎಲೆಕ್ಟ್ರಿಕಲ್ ಕೆಲಸದಿಂದ ಹಿಡಿದು ರಾಮಮಂದಿರದ ಉಸ್ತುವಾರಿಯವರೆಗೆ ಎಲ್ಲವೂ ಕನ್ನಡಿಗರೇ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಹೀಗಾಗಿ ರಾಮ ಮಂದಿರದ ನಿರ್ಮಾಣದಲ್ಲಿ ಕನ್ನಡಿಗರ ಕೊಡುಗೆ ತುಂಬಾನೇ ಇದೆ. ಮತ್ತೊಂದು ಕಡೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಮಾಡಲಿರುವ ಪ್ರಧಾನಿ ಮೋದಿ ಕಠಿಣ ವೃತ ಕೈಗೊಂಡಿದ್ದಾರೆ. ಅನ್ನ ಆಹಾರವನ್ನು ಬಿಟ್ಟು ಕೇವಲ ನೀರು ಮಾತ್ರ ಸೇವಿಸುತ್ತಿದ್ದಾರೆ. ಮಲಗುವಾಗಲೂ ನೆಲದಲ್ಲೇ ಮಲಗುತ್ತಿದ್ದಾರೆಷ್ಟು ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರು ಯಾವೆಲ್ಲ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಮ ಮಂದಿರಕ್ಕೆ ನಮ್ಮ ಕರುನಾಡಿನ ಕೊಡುಗೆಯನ್ನು ಪ್ರಧಾನಿ ಮೋದಿ ಕೈಗೊಂಡಿರುವ ವೃತ್ತಾಂತದ್ದು. ಈ ವ್ರತದಲ್ಲಿ ಅವರು ಏನೆಲ್ಲ ಮಾಡ್ತಾ ಇದ್ದಾರೆ? ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ.
ಸ್ನೇಹಿತರೆ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ಈಗಾಗಲೇ ಬಾಲ ರಾಮನ ವಿಗ್ರಹವನ್ನ ಗರ್ಭಗುಡಿಗೆ ತಂದು ಇರಿಸಲಾಗಿದೆ. ಈಗ ಗರ್ಭಗುಡಿ ಸೇರಿಕೊಂಡಿರುವ ಬಾಲ ರಾಮನ ಮೂರ್ತಿಯನ್ನು ಕೆತ್ತಿದ್ದು ಅರುಣ್ ಯೋಗಿರಾಜ್ ಅನ್ನುವ ವಿಚಾರ ನಿಮಗೆಲ್ಲ ಗೊತ್ತಿರಬಹುದು. ಇವರು ಕರ್ನಾಟಕದ ಶಿಲ್ಪಿ ಇನ್ನು ಮೂರ್ತಿಯ ಕೆತ್ತನೆಗೆ ಬಳಸಲಾದ ಕಲ್ಲು ಕೂಡ ಕರ್ನಾಟಕದ್ದು. ಅಲ್ಲಿಗೆ ಅಯೋಧ್ಯೆ ಹಾಗೂ ಕರ್ನಾಟಕಕ್ಕೆ ಒಂದು ಅವಿನಾಭಾವ ಸಂಬಂಧ ಬೆಳೆಯುತ್ತೆ. ಜನ್ಮ ಭೂಮಿಯಲ್ಲಿ ನೆಲೆ ನಿಂತಿರುವ ರಾಮ ಕರುನಾಡಿನ ಕಲ್ಲಿನಲ್ಲಿ ಕಂಗೊಳಿಸಿದ್ದಾನೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದರ ಹಿಂದಿನ ಪಾತ್ರ ಕರ್ನಾಟಕದ್ದು ಕೇವಲ ಮೂರ್ತಿ ಮತ್ತು ಕಲ್ಲು ಮಾತ್ರವಲ್ಲ, ಇನ್ನೂ ಹಲವು ಜವಾಬ್ದಾರಿಗಳನ್ನ ಕರ್ನಾಟಕ ಮೂಲದವರು ಹೊತ್ತುಕೊಂಡಿದ್ದಾರೆ. ಆ ಬಗ್ಗೆ ತೋರಿಸ್ತೀವಿ. ಅದಕ್ಕೂ ಮೊದಲು ಪ್ರಧಾನಿ ಮೋದಿ ಕೈಗೊಂಡಿರುವ ವ್ರತದ ಬಗ್ಗೆ ಹೇಳ್ತೀವಿ, ಕೇಳಿ ಬಂದಿದೆ.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಪ್ರಧಾನಿ ಮೋದಿ. ಹೀಗಾಗಿ ಮೋದಿ ಕಠಿಣ ವೃತ ಕೈಗೊಂಡಿದ್ದಾರೆ. ಅದು ಬರೋಬ್ಬರಿ 11 ದಿನಗಳ ಶಾಸ್ತ್ರೋಕ್ತ ವ್ರತಾಚರಣೆಯ ಈಗ ಮೋದಿ ಮಾಡುತ್ತಿರುವ ವೃತಾಚರಣೆಗೆ. ಯಮ ನಿಯಮ ವೃತ ಅಂತ ಕರೀತಾರೆ. ಈ ವ್ರತದ ಪ್ರಕಾರ ಕೇವಲ ನೀರನ್ನು ಮಾತ್ರ ಸೇವಿಸಬೇಕು. ಅಷ್ಟೇ ಅಲ್ಲ, ಮಲಗುವಾಗ ನೆಲದ ಮೇಲೆಯೇ ಮಲಗಬೇಕು. ಇದನ್ನ ಮೋದಿ ಪಾಲಿಸ್ತಿದ್ದಾರೆ. ಜನವರಿ 12 ರಿಂದಲೇ ವೃತ ಆರಂಭ ಮಾಡಿರುವ ಮೋದಿ ಕೇವಲ ನೀರನ್ನು ಮಾತ್ರ ಸೇವಿಸಿ ಉಪವಾಸ ಮಾಡ್ತಾ ಇದ್ದಾರೆ. ಮಲಗುವಾಗ ನೆಲದಲ್ಲೇ ಮಲಗುತ್ತಿದ್ದಾರೆ. ಇನ್ನು ಈ ಯಮ ನಿಯಮ ವ್ರತದಲ್ಲಿ ಹಲವಾರು ಕ್ರಮಗಳು ಕೂಡ ಇದೆ. ಇದನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಯೋಗ, ಧ್ಯಾನ ಹಾಗು ಬೇರೆ ಬೇರೆ ಕ್ರಿಯೆಗಳಲ್ಲಿ ಶಿಸ್ತು ಪಾಲಿಸುವುದು ಪ್ರಮುಖವಾಗಿದೆ.
ಆದರೆ ಮೋದಿಗೆ ಇದು ಕಷ್ಟವಾಗುವುದಿಲ್ಲ. ಯಾಕಂದ್ರೆ ಅವರು ದಿನ ನಿತ್ಯ ಪಾಲಿಸುವ ಬಹುತೇಕ ನಿಯಮಗಳು ಈ ವೃತದಲ್ಲಿದೆ. ಮಧ್ಯೆ ಪ್ರತಿದಿನ ಸೂರ್ಯೋದಯಕ್ಕೂ ಮೊದಲೇ ಏಳುತ್ತಾರೆ. ಧ್ಯಾನ ಮಾಡುತ್ತಾರೆ. ಸಾತ್ವಿಕ ಆಹಾರ ಮಾತ್ರ ಸೇವಿಸುತ್ತಾರೆ. ಇದು ಮೋದಿಯವರ ಡೈಯಿಂಗ್. ಹೀಗಾಗಿ ಈಗ ಮಾಡುತ್ತಿರುವ ವೃತ ಅವರಿಗೆ ಹೆಚ್ಚೇನು ಕಷ್ಟವಾಗುತ್ತಿಲ್ಲ. ಕಟ್ಟುನಿಟ್ಟಿನ ನಿಯಮವನ್ನ ಪಾಲಿಸಿ ಪ್ರತಿ ದಿನ ವೃತ ಮಾಡ್ತಿದ್ದಾರೆ. ಇನ್ನು ನಾವು ಆರಂಭದಲ್ಲೇ ಹೇಳಿದಂತೆ ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರ ಪಾಲು ತುಂಬಾನೇ ಇದೆ. ರಾಮ ಲಲ್ಲಾ ಮೂರ್ತಿಯನ್ನು ಕೆತ್ತಿದವರು. ಮೈಸೂರಿನ ಅರುಣ್ ಯೋಗಿರಾಜ್ ಇಲ್ಲಿ ಕೆತ್ತನೆಗೆ ಬಳಸಿದ ಕಲ್ಲು ಕೂಡ ಕರ್ನಾಟಕದ ಎಚ್ ಡಿ ಕೋಟೆಯ ಕಲ್ಲಿನಲ್ಲೇ ರಾಮ ವಿಗ್ರಹವನ್ನು ಕೆತ್ತಲಾಗಿದೆ.
ಅಲ್ಲಿಗೆ ರಾಮಮಂದಿರದ ಕೇಂದ್ರಬಿಂದು ರಾಮನ ವಿಗ್ರಹ ಕರ್ನಾಟಕದ ಕೈ ಮತ್ತು ಕಲ್ಲಿನಿಂದ ನಿರ್ಮಾಣವಾಗಿದೆ ಅನ್ನೋದು ಕನ್ನಡಿಗರು ಖುಷಿ ಪಡುವ ಸಂಗತಿ. ಕೇವಲ ಗರ್ಭಗುಡಿಯಲ್ಲಿರುವ ವಿಗ್ರಹ ಮಾತ್ರವಲ್ಲ ದೇವಸ್ಥಾನದ ಒಳಗಡೆ ಇನ್ನು ಹಲವಾರು ವಿಗ್ರಹವಿದೆ. ಈ ವಿಗ್ರಹಗಳಲ್ಲಿ ಹಲವು ವಿಗ್ರಹಗಳನ್ನ ಕರುನಾಡಿನ ಶಿಲ್ಪಿಗಳು ಕೆತ್ತಿದ್ದಾರೆ. ಗಣೇಶನ ವಿಗ್ರಹ ಕೆತ್ತನೆ ಮಾಡಿದ್ದು ಉತ್ತರ ಕರ್ನಾಟಕದ ವಿ ನಾಯಕ್ ಎಂಬುವರು. ಗರ್ಭಗುಡಿಯ ದ್ವಾರವನ್ನು ಕೆತ್ತನೆ ಮಾಡಿದ್ದು ಕೊಪ್ಪಳದ ನಾಗಮೂರ್ತಿ ಸ್ವಾಮಿ ಅಂದ್ರೆ ರಾಮ ಮಂದಿರದ ಕೆತ್ತನೆಯಲ್ಲಿ ಕೂಡ ಕನ್ನಡಿಗರದ್ದೇ ಪ್ರಮುಖ ಪಾತ್ರ. ಇನ್ನು ರಾಮಮಂದಿರ ಬಿರುಗಾಳಿಗೆ ಜಗ್ಗಲ್ಲ. ಭೂಕಂಪಕ್ಕೂ ಬಗ್ಗಲ್ಲ. 1000 ವರ್ಷ ಏನು ಆಗೋದಿಲ್ಲ ಅನ್ನುವ ಬಗ್ಗೆ ನಾವು ಈ ಹಿಂದೆ ಡಿಟೇಲಾಗಿ ವಿಡಿಯೋ ಮಾಡಿದ್ವಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.