ರಾಮನ ಮೂರು ಮೂರ್ತಿಗಳ ಪೋಟೊ ರಿಲೀಸ್…ಕರ್ನಾಟಕದ್ದೆ ಏಕೆ ಆಯ್ಕೆಯಾಯ್ತು..ಕಾರಣ ಏನು

ರಾಮನ 3 ಮೂರ್ತಿಗಳ ಫೋಟೋಸ್ ರಿಲೀಸ್

WhatsApp Group Join Now
Telegram Group Join Now

ಕರ್ನಾಟಕದ ಮತ್ತೊಬ್ಬ ಶಿಲ್ಪಿ ಕೆತ್ತಿದ ರಾಮಲಲ್ಲಾಮೂರ್ತಿಯ ಫೋಟೋ ರಿಲೀಸ್ ಆಗಿದೆ. ಬೆಂಗಳೂರು ಮೂಲದ ಶಿಲ್ಪಿ ಗಣೇಶ ಎಲ್ ಭಟ್ ಕೆತ್ತನೆ ಮಾಡಿರುವ ಮೂರ್ತಿಯ ಫೋಟೋಗಳು ಹೊರಬಿದ್ದಿದ್ದು, ಪ್ರಾಣ ಪ್ರತಿಷ್ಠಾಪನೆ ಬಳಿಕ ಮತ್ತೆರಡು ರಾಮಲಲ್ಲ ಮೂರ್ತಿಗಳ ದರ್ಶನವಾಗಿದೆ. ರಾಜ ಸ್ತಾನದ ಸತ್ಯನಾರಾಯಣ ಪಾಂಡ್ಯ, ಕೆತ್ತಿದ ರಾಮ್ ಲಲ್ಲಾ ಮೂರ್ತಿ ಕೂಡ ವಿಭಿನ್ನವಾಗಿದೆ. ಹೌದು, ಅಯೋಗ್ಯ ಮಂದಿರದ ನಿರ್ಮಾಣಕ್ಕಾಗಿ ಮೂರು ರಾಮಲಲ್ಲ ಮೂರ್ತಿಗಳ ಕೆತ್ತನೆ ಮಾಡಲಾಗಿತ್ತು.

ಮೂವರಲ್ಲಿ ಮೈಸೂರು ಶಿಲ್ಪಿ ಅರುಣ್ ಯೋಗಿ ರಾಜ್ ಅವರು ಕೆತ್ತನೆ ಮಾಡಿರುವ ಮೂರ್ತಿಯು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಮತ್ತೆರಡು ರಾಮಲಲ್ಲಾ ಮೂರ್ತಿಗಳ ದರ್ಶನವಾಗಿದೆ. ಮೈಸೂರಿನ ಶಿಲ್ಪಿ ಜೊತೆಗೆ ಮತ್ತೊಬ್ಬ ಕನ್ನಡಿಗ ರಾಮನ ಮೂರ್ತಿಯನ್ನ ಕೆತ್ತನೆ ಮಾಡಿದ್ದರು. ಬೆಂಗಳೂರು ಮೂಲದ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತನೆ ಮಾಡಿರುವ ರಾಮ್ ಲಲ್ಲಾ ಮೂರ್ತಿ ಫೋಟೋಗಳು ಲಭ್ಯವಾಗಿದ್ದು, ಕರ್ನಾಟಕದ ಮತ್ತೊಬ್ಬ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತನೆ ಮಾಡಿರುವ ರಾಮ್ ಲಲ್ಲಾ ಮೂರ್ತಿಯು ತುಂಬಾ ಆಕರ್ಷಣೀಯವಾಗಿದೆ ಇನ್ನು ಈ ಮೂರು ವಿಗ್ರಹಗಳಲ್ಲಿ ನಿಮಗೆ ಯಾವ ವಿಗ್ರಹ ಇಷ್ಟವಾಯಿತು ಎಂದು ಕಮೆಂಟ್ ಮಾಡಿ ಅಲ್ಲದೆ ಮೈಸೂರಿನ ಯೋಗಿರಾಜ್ ಅವರು ಕೆತ್ತನೆ ಮಾಡಿರುವಂತಹ ಬಾಲ ರಾಮನ ವಿಗ್ರಹ ನಿಮಗೆ ಇಷ್ಟವಾದಲ್ಲಿ ಒಂದು ಲೈಟ್ ಅನ್ನು ಕೊಡಿ.

ಇಬ್ಬರು ಕನ್ನಡಿಗರು ಕೆತ್ತಿರೋ ರಾಮ್ ಲಲ್ಲಾ ಮೂರ್ತಿ ಜೊತೆಗೆ ರಾಜಸ್ಥಾನದ ಸತ್ಯನಾರಾಯಣ ಪಾಂಡ್ಯ ಕೆತ್ತಿದ್ದ ರಾಮ್ ಲಲ್ಲಾ ಮೂರ್ತಿ ಕೂಡ ಸುಂದರವಾಗಿದೆ. ಸತ್ಯನಾರಾಯಣ ಪಾಂಡೆ ಬಿಳಿ ಮಾರ್ಬಲ್‌ನಿಂದ ರಾಮ್ ಲಲ್ಲಾ ಮೂರ್ತಿಯನ್ನು ಕೆತ್ತಿದ್ದು ಕೈಯಲ್ಲಿ ಚಿನ್ನದ ಬಿಲ್ಲು ಬಾಣದಿಂದ ಅಲಂಕರಿಸಲಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ರಾಮಲಲ್ಲ ಪ್ರತಿಮೆಯನ್ನು ತಯಾರಿಸುವ ಕಾರ್ಯವನ್ನ ಮೂವರು ಶಿಲ್ಪಿಗಳಿಗೆ ವಹಿಸಲಾಗಿತ್ತು. ಅದರಲ್ಲಿ ಒಂದು ಮೂರ್ತಿ ಆಯ್ಕೆ ಮಾಡಿ ಮೈಸೂರು. ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿರುವ ರಾಮ್ ಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪಿಸಿ ದೇವಸ್ಥಾನದಲ್ಲಿ ಸ್ಥಾಪಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಆಯ್ಕೆಯಾಗದ ಎರಡು ವಿಗ್ರಹಗಳು.

ಹೇಗಿವೆ ಅನ್ನೋದು ಎಲ್ಲರಿಗೂ ಕುತೂಹಲವಿತ್ತು. ಆದ್ದರಿಂದ ರಾಮಲಲ್ಲಾನ. ಎರಡನೇ ವಿಧ ಹಲೋ ಚಿತ್ರವು ಕೂಡ ಹೊರ ಬಿದ್ದಿದೆ. ಇದನ್ನ ರಾಜಸ್ಥಾನದ ಜೈಪುರ ನಿವಾಸಿ ಸತ್ಯನಾರಾಯಣ ಪಾಂಡವರು ಬಿಳಿ ಮರ ಅಮೃತಶಿಲೆಯಿಂದ ತಯಾರಿಸಿದ್ದಾರೆ. ಈ ವಿಗ್ರಹವು ಪ್ರಸ್ತುತ ದೇವಸ್ಥಾನದ ಟ್ರಸ್ಟ್ ನಲ್ಲಿದ್ದು, ಮೂರನೇ ವಿಗ್ರಹದ ಚಿತ್ರವನ್ನು ಸಹ ಬಹಿರಂಗಪಡಿಸಲಾಗಿದೆ. ಇದನ್ನು ಕರ್ನಾಟಕದ ಗಣೇಶ್ ಭಟ್ ಅವರು ನಿರ್ಮಿಸಿದ್ದಾರೆ. ರಾಮಲ್ಲಾ ಎರಡನೆ ಈ ಪ್ರತಿಮೆಯು ಬಿಳಿ ಬಣ್ಣವಾಗಿದ್ದು, ಇದರಲ್ಲಿ ಭಗವಾನ್ ರಾಮನ ಪಾದದ ಒಂದು ಬದಿಯಲ್ಲಿ ಹನುಮಂತ ನನ್ನ ಇನ್ನೊಂದು ಬದಿಯಲ್ಲಿ ಗರುಡನ ಕೆತ್ತನೆ ಮಾಡಲಾಗಿದೆ. ವಿಗ್ರಹದ ಸುತ್ತ ವಿಷ್ಣುವಿನ ಅವತಾರವಾದ ಕೆತ್ತನೆ ಮಾಡಲಾಗಿದ್ದು, ಇದರಲ್ಲಿ ವಿಷ್ಣುವಿನ 10 ಅವತಾರಗಳಿವೆ.

ಮತ್ಸ್ಯ ಕೂರ್ಮ ವರಾಹ ನರಸಿಂಹ ವಾಮನ ಪರಶುರಾಮ ರಾಮ ಕೃಷ್ಣ ಬುದ್ಧ ಮತ್ತು ಕಲ್ಕಿ ಅವತಾರಗಳನ್ನು ಕಾಣಬಹುದು. ಮೂರು ಶಿಲ್ಪಿಗಳಿಗೂ ಕೆಲವು ಸೂಚನೆಗಳನ್ನ ಟ್ರಸ್ಟ್ ನೀಡಿತ್ತು. ಅದೇನೆಂದರೆ ಐದು ವರ್ಷದ ಬಾಲಕನ ರಾಮನ ಜೊತೆಗೆ ವಿಷ್ಣುವಿನ ದಶಾವತಾರ ಇರಬೇಕು. ಆಯುಧ ಆಂಜನೇಯ ಗರುಡ ಇರಬೇಕು ಅಂತ ಟ್ರಸ್ಟ್ ಸೂಚನೆ ಕೊಟ್ಟಿತ್ತು. ಅದರಂತೆ ಈ ಮೂರು ಶಿಲ್ಪಿಗಳು ವಿಗ್ರಹ ಕೆತ್ತಿದರು. ಆದರೆ ಮೂವರಲ್ಲಿ, ಅರುಣ್ ಯೋಗಿ ರಾಜ್ ಅವರು ಕೆತ್ತನೆ ಮಾಡಿದ ರಾಮ ಶಿಲ್ಪ ಆಯ್ಕೆಯಾಗಿ ಪ್ರತಿಷ್ಠಾಪನೆಯಾಗಿದೆ. ಅಲ್ಲದೆ ಉಳಿದ ಎರಡು ಶಿಲ್ಪಗಳನ್ನು ಮಂದಿರದ ಆವರಣದಲ್ಲಿ ಇಡಲಾಗುತ್ತೆ. ಅದು. ಕೂಡ ಗೌರವಯುತವಾಗಿ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದೆ.

ಹಾಗಾದರೆ ಬಾಲ ರಾಮನ ವಿಗ್ರಹಕ್ಕೆ ಕೃಷ್ಣ ಶೈಲಿಯನ್ನೇ ಯಾಕೆ ಬಳಸಿದ್ದು? ಅರುಣ್ ಯೋಗಿರಾಜ್ ವಿಗ್ರಹವನ್ನೇ ಯಾಕೆ ಆಯ್ಕೆ ಮಾಡಲಾಯಿತು? ಈ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ರಾಮ್ ಲಲ್ಲಾ ವಿಗ್ರಹವು ಆಯ್ಕೆ ಮಾಡಲು ಕಾರಣ ಇದೆ. ವಿಗ್ರಹದ ಮುಖದಲ್ಲಿನ ತೇಜಸ್ಸು ಮುಖ್ಯ ಕಾರಣವಾಗಿದೆ. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದು ತೀರ್ಪುಗಾರರ ಅಭಿಪ್ರಾಯವಾಗಿದೆ. ಪ್ರಾಣ ಪ್ರತಿಷ್ಠೆಯಾಗಿರುವ ವಿಗ್ರಹವು ಬಲರಾಮನ ಆಗಿದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.

ಅದರಂತೆ ಅರುಣ್ ಅವರು ಕೆತ್ತನೆ ಮಾಡಿರುವ ವಿಗ್ರಹದಲ್ಲಿ ಮುಗ್ಧ ನಗುವಿನ ಸುಂದರ ನೋಟವಿದೆ. ಬಾಲರಾಮ ದೇವರು ಸಾಕ್ಷಾತ್ ಮುಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತನೆ ಮಾಡಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ. ಅರುಣ್ ಅವರು ಕೆತ್ತನೆ ಮಾಡಿರುವ ಐದು ವರ್ಷದ ಬಾಲ ರಾಮನ ಮೂರ್ತಿ ಕೈಯಲ್ಲಿ ಧನಸ್ಸು ಮತ್ತು ಬಾಣವಿದೆ. ರಾಮನ ಮೂರ್ತಿಯ 51 ಇಂಚು ಎತ್ತರವಿದ್ದು, ಪ್ರಭಾವಳಿ ಸೇರಿದಂತೆ ಒಟ್ಟು ಎಂಟು ಅಡಿ ಎತ್ತರ ಹಾಗೂ ಮೂರೂವರೆ ಗಳಾಗಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದ್ದು, ಒಟ್ಟಾರೆಯಾಗಿ ಕೋಟ್ಯಂತರ ರಾಮ ಭಕ್ತರು ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಇದನ್ನೇ ಆಯ್ಕೆ ಮಾಡಿದ್ದಾರೆ.

ಕೃಷ್ಣಶಿಲೆ ಬಳಸಲು ಕೂಡ ಕಾರಣ ಇದೆ. ಕೃಷ್ಣಶಿಲೆಯ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್ ಹಾಕಿದರು ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಾಗುವುದಿಲ್ಲ, ತುಕ್ಕು ಹಿಡಿಯೋದಿಲ್ಲ, ಮಳೆ ಗಾಳಿ ಬಿಸಿಲನ್ನು ತಡೆದುಕೊಳ್ಳುವ ಶಕ್ತಿಯನ್ನು ಈ ಕಲ್ಲು ಹೊಂದಿದೆ. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನ ಮಾಡಿದ ಎಚ್ ಡಿ ಕೋಟೆಯ ಕೃಷ್ಣ ಶಿಲೆಯಲ್ಲಿ ಇದನ್ನು ಕೂಡ ರಚಿಸಲಾಗಿದೆ. ಈ ಎಲ್ಲ ಕಾರಣದಿಂದಾಗಿ ರಾಮಲಲ್ಲ ವಿಗ್ರಹಕ್ಕೆ ಕೃಷ್ಣ ಶಿಲೆಯನ್ನ ಬಳಸಲಾಗಿದೆ. ಈ ಎಲ್ಲದರ ಮಧ್ಯೆ ಮತ್ತೊಂದು ಖುಷಿಯ ವಿಚಾರ. ಏನಂದ್ರೆ ರಾಮನಿಗೆ ಕರ್ನಾಟಕದಿಂದಲೇ ಪೂಜೆ ಸಲ್ಲಿಸಲಾಗುತ್ತೆ. ಹೌದು, ಅಯೋಧ್ಯಾ ರಾಮನಿಗೆ ಕರ್ನಾಟಕದ ಪೂಜೆ ಆರಾಧನೆ ನಡೆಯಲಿದೆ. ಉಡುಪಿಯ ಪೇಜಾವರ ವಿಶ್ವಪ್ರಸನ್ನ ಶ್ರೀಗಳ ಉಸ್ತುವಾರಿಯನ್ನ ವಹಿಸಿಕೊಂಡಿದ್ದು, ಪ್ರಾಣಪ್ರತಿಷ್ಠೆಲ್ಲಿಯೂ ಸಹ ಪೂಜೆ ಉಸ್ತುವಾರಿಯನ್ನು ವಹಿಸಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]