ದೇವಸ್ಥಾನದಿಂದ ಹಿಂತಿರುಗಿ ಬರುವಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ
ದೇವಸ್ಥಾನದಿಂದ ಹಿಂದಿರುಗಿ ಬರುವಾಗ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ. ಶಾಂತಿ ಮತ್ತು ನೆಮ್ಮದಿಗಾಗಿ ನಮ್ಮೆಲ್ಲ ಸಮಸ್ಯೆಗಳು ದೂರ ಆಗಬಹುದು ಎನ್ನುವ ನಂಬಿಕೆಯಿಂದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡಿ ಹಿಂದಿರುಗಿ ಬರುವಾಗ ನಾವು ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಆ ತಪ್ಪುಗಳು ಯಾವು ಹಿಂದೂ ಧರ್ಮದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಯಾವುದೇ ವಿಶೇಷ ದಿನಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದು ವಾಡಿಕೆಯಾಗಿರುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಮನಸ್ಸು ಶಾಂತವಾಗುತ್ತದೆ. ಅದು ಎಷ್ಟೇ ಸಮಸ್ಯೆಗಳಿದ್ದರೂ ಕ್ಷಣದಲ್ಲೇ ದೂರಿತ್ತ ಏನು ಎನ್ನುವ ಅನುಭವ ನೀಡುತ್ತದೆ. ದೇವರು ನಮ್ಮೆಲ್ಲ ಕಷ್ಟಗಳನ್ನು ದೂರಾಗಿಸುತ್ತಾನೆ ಎನ್ನುವ ನಂಬಿಕೆಯಿಂದ ಜನರು ದೇವಸ್ಥಾನಗಳಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ.
ಕೆಲವೊಮ್ಮೆ ನಾವು ದೇವಸ್ಥಾನಗಳಿಗೆ ಭೇಟಿ ನೀಡಿ ಹಿಂದಿರುಗಿ ಬರುವಾಗ ತಿಳಿದು. ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಇಂತಹ ತಪ್ಪುಗಳನ್ನು ಮಾಡುವುದು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತದೆ. ದೇವಸ್ಥಾನಗಳಿಂದ ಹಿಂದಿರುಗಿ ಬರುವಾಗ ನಾವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಗೊತ್ತೇ ಒಂದು ಪ್ರಸಾದ ಸೇವನೆ. ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ದೇವರ ಪ್ರಸಾದವನ್ನು ತಿನ್ನಲು ನೀಡುತ್ತಾರೆ.
ಕೆಲವೊಬ್ಬರು ಪ್ರಸಾದವನ್ನು ದಾರಿಯಲ್ಲೇ ಬರುವಾಗ ತಿಂದುಕೊಂಡು ಬರುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲೂ ನೀವೇ ಸ್ವತಃ ದೇವರಿಗೆ ಅರ್ಪಿಸಿದ ಪ್ರಸಾದವನ್ನು ದಾರಿಯಲ್ಲಿ ತಿನ್ನಲು ಹೋಗಬೇಡಿ. ದೇವಸ್ಥಾನದಲ್ಲಿ ನೀಡಿದ ಪ್ರಸಾದವನ್ನು ಮನೆಗೆ ತಂದು ಕುಟುಂಬದ ಸದಸ್ಯರೊಂದಿಗೆ ಕುಳಿತು ಹಂಚಿಕೊಂಡು ತಿನ್ನಬೇಕು. ದಾರಿಯಲ್ಲಿ ಹೋಗುವಾಗ ಬರುವಾಗ ದೇವರ ಪ್ರಸಾದವನ್ನು ತಿನ್ನುವುದರಿಂದ ನೀವು ಮಾಡಿದ ಪೂಜೆಯು ನಿಮಗೆ ಯಾವುದೇ ಫಲವನ್ನು ನೀಡುವುದಿಲ್ಲ. ಎರಡು ಖಾಲಿ ಪಾತ್ರೆಗಳನ್ನು ತರದಿರಿ. ದೇವಸ್ಥಾನದಲ್ಲಿ ದೇವರಿಗೆ ನೀರು, ಹಾಲು ಅಥವಾ ಜೇನು ತುಪ್ಪದಿಂದ ಅಭಿಷೇಕವನ್ನು ಮಾಡುತ್ತಾರೆ.
ದೇವರಿಗೆ ಅಭಿಷೇಕ ಮಾಡಿದ ನಂತರ ಖಾಲಿ ಪಾತ್ರೆಗಳನ್ನು ಮನೆಗೆ ಹಿಂದಿರುಗಿ ತೆಗೆದುಕೊಂಡು ಬರಬಾರದು. ಇದನ್ನು ಮಾಡುವುದರಿಂದ ಓರ್ವ ವ್ಯಕ್ತಿ ಯಾವುದೇ ಕೆಲಸವನ್ನು ಮಾಡಿದರು. ಅದರಲ್ಲಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನೀವು ಆ ಪಾತ್ರೆಗಳನ್ನು ಮನೆಗೆ ತರಬೇಕೆಂದುಕೊಂಡಿದ್ದರೆ. ಪಾತ್ರೆಯಲ್ಲಿ ನೀರು ಅಥವಾ ಹೂಗಳನ್ನು ಹಾಕಿಕೊಂಡು ಮನೆಗೆ ಪಾತ್ರೆಯನ್ನು ತೆಗೆದುಕೊಂಡು ಬರಬಹುದು. ಮೂರು ದೀಪ ಬೆಳಗುವಾಗ ಈ ತಪ್ಪನ್ನು ಮಾಡದಿರಿ. ದೇವರ ಪೂಜೆಯನ್ನು ಮಾಡುವಾಗ ದೀಪ ಬೆಳಗುವುದು ಸಂಪ್ರದಾಯ.
ಈ ದೀಪವನ್ನು ನೀವು ಬೆಳಗುವಾಗ ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಲು ಹೋಗದಿರಿ. ದೇವರಿಗೆ ಹಚ್ಚಿದ ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚುವುದು ಎಂದರೆ ದೇವರಿಗೆ ನೀವು ಅಗೌರವ ತೋರಿಸುತ್ತಿದ್ದೀರಿ ಎಂಬುದಾಗಿದೆ. ಒಂದು ದೀಪಕ್ಕಿಂತ ಹೆಚ್ಚಿನ ದೀಪಗಳನ್ನು ಬೆಳಗುವುದು, ಆದರೆ ಎಲ್ಲವನ್ನು ಪ್ರತ್ಯೇಕವಾಗಿ ಬೆಳಗಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ನಾಲ್ಕು ಪೂಜೆ ಸಾಮಗ್ರಿಗಳ ಸ್ವಚ್ಛತೆ ನೀವು ದೇವರ ಪೂಜೆಯನ್ನು ಮಾಡುವ ಸಮಯದಲ್ಲಿ ಕೈಯಲ್ಲಿರುವ ದೇವರ ದೀಪ ಅರಿಶಿನ ಕುಂಕುಮದ ಬಟ್ಟಲು ಅಥವಾ. ಇನ್ಯಾವುದೇ ಪೂಜೆ ಸಾಮಗ್ರಿಯನ್ನು ಪೂಜೆ ಮಾಡುವ ಸ್ಥಳದಲ್ಲಿ ಅಥವಾ ಪೂಜೆಯ ಸಮಯದಲ್ಲಿ ಸ್ವಚ್ಛ ಮಾಡಲು ಹೋಗದಿರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.