ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು.ಅಮವಾಸ್ಯೆ ಹುಣ್ಣಿಮೆ ಎನ್ನುವುದು ಬಹಳ ಶಕ್ತಿಯುತವಾದ ದಿನಗಳು ಅದರಲ್ಲೂ ಮಾಘ ಮಾಸದಲ್ಲಿ ಬರುವ ಹುಣ್ಣಿಮೆಗೆ ಅತ್ಯಂತ ಮಹತ್ವವಿದೆ.ಈ ಮಾಘ ಹುಣ್ಣಿಮೆಯಂದು ಮಾಡುವ ಸ್ನಾನ,ದಾನ,ಹವನ,ತೀರ್ಥ ಯಾತ್ರೆ,ವಿಷ್ಣು ಲಕ್ಷ್ಮಿ ಪೂಜೆಗಳು ಬಹಳ ಶ್ರೇಷ್ಠ ಫಲಗಳನ್ನು ನೀಡುತ್ತದೆ.ನಮ್ಮ ಹಿಂದೂ ಗ್ರಂಥಗಳ ಪ್ರಕಾರ ಈ ಮಾಘ ಹುಣ್ಣಿಮೆ ದಿನದಂದು ಸಾಕ್ಷಾತ್ ವಿಷ್ಣು ದೇವನು ಗಂಗಾ ನದಿಯಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ.ಸ್ವತಃ ದೇವಾನು ದೇವತೆಗಳೆ ಮಾಘ ಹುಣ್ಣಿಮೆ ದಿನದಂದು ಭೂಮಿಗೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ಪುಣ್ಯನದಿಗಳಲ್ಲಿ ಸ್ನಾನ ಅಥವಾ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಗೊತ್ತಿದ್ದು ಗೊತ್ತಿಲ್ಲದೆ ಮಾಡಿದ ಪಾಪಗಳು ಕಳೆದು ಹೋಗುತ್ತದೆ. ಈ ದಿನ ಗಂಗಾ ನದಿಯ ನೀರು ಅಮೃತಕ್ಕೆ ಸಮ ಎಂದು ಹೇಳಲಾಗುತ್ತದೆ.ನದಿಗಳಲ್ಲಿ ಅಥವಾ ಗಂಗಾ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಬೆರೆಸಿ ಸ್ನಾನ ಮಾಡಿದರು ಗಂಗಾ ನದಿಯಲ್ಲಿ ಸ್ನಾನ ಮಾಡಿದ ಪುಣ್ಯ ಫಲ ಲಭಿಸುತ್ತದೆ.ಸ್ನಾನ ಮಾಡುವಾಗ “ಓಂ ನಮೋ ನಾರಯಣಾಯ” ಎಂದು ವಿಷ್ಣು ದೇವರ ಸ್ಮರಣೆ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ನೀವೆನಾದರೂ ಈ ಮಾಘ ಹುಣ್ಣಿಮೆಯ ದಿನ ಮೂರು ನದಿಗಳು ಸೇರುವ ಜಾಗದಲ್ಲಿ ಸ್ನಾನ ಮಾಡಿದರೆ 10 ಸಾವಿರ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ಬರುತ್ತದೆ.
ಈ ದಿನ ನೀವು ನೀಡುವ ಸಣ್ಣ ದಾನಕ್ಕೂ ಕೋಟಿ ಪಟ್ಟು ಹೆಚ್ಚು ಫಲ ಸಿಗುತ್ತದೆ.ಈ ದಿನ ಅವಶ್ಯಕತೆ ಇರುವವರಿಗೆ,ಬ್ರಾಹ್ಮಣರಿಗೆ ಎಳ್ಳನ್ನು ದಾನವಾಗಿ ನೀಡಬೇಕು.ಹಸಿದವರಿಗೆ ಆಹಾರ ಅಂದರೆ ಅನ್ನದಾನವನ್ನು ಮಾಡಬೇಕು.ದೇವತಾ ವೃಕ್ಷಗಳಿಗೆ ಜಲವನ್ನು ಅರ್ಪಿಸಿ ಕೈ ಮುಗಿದು ಬರಬೇಕು.ಅಂದರೆ ಅರಳಿ ವೃಕ್ಷ ಅಥವಾ ತೆಂಗಿನ ಮರಕ್ಕೆ ಸ್ವಲ್ಪ ಹಾಲನ್ನು ಅರ್ಪಿಸಿ ಆ ಮರದ ಮುಂದೆ ತುಪ್ಪದಿಂದ ದೀಪ ಬೆಳಗಿಸಿ ಪ್ರದಕ್ಷಿಣೆ ಹಾಕಿ ಬರಬೇಕು.ಇದರಿಂದ ಮಾನಸಿಕ ಅಶಾಂತಿ ದೂರವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಹಾಗೂ ಅದೃಷ್ಟ ಮುಂದಿನ ಹುಣ್ಣಿಮೆ ತನಕವೂ ನಿಮ್ಮ ಜೊತೆ ಇರುತ್ತದೆ.ಇನ್ನು ಕೆಲವರು ಜೀವನದಲ್ಲಿ ಇದ್ದಕ್ಕಿದ್ದಂತೆ ವಿಪರೀತ ನಷ್ಟ, ರಾಜರಂತೆ ಬದುಕಿದ್ದವರು ಇಂದು ಒಂದೊಂದು ರೂಪಾಯಿಗೂ ನಾನಾ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಅಂತವರು ಈ ಮಾಘ ಹುಣ್ಣಿಮೆಯಂದು ತೀರ್ಥ ಕ್ಷೇತ್ರ ದರ್ಶನದಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ತೀರ್ಥ ಕ್ಷೇತ್ರದ ನದಿಗಳಲ್ಲಿ ಸ್ನಾನ ಮಾಡಿದರೆ ಅಪಮೃತ್ಯು ದೋಷಗಳು ಕೂಡ ಕಳೆದು ಹೋಗುತ್ತದೆ.ಈ ಮಾಘ ಹುಣ್ಣಿಮೆ ದಿನದಂದು ಯಾರು ಅವಶ್ಯಕತೆ ಇದ್ದವರಿಗೆ ಮಂಚ ದಾನ ಮಾಡುತ್ತಾರೋ ಅವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆಂದು ಶಾಸ್ತ್ರ ಹೇಳುತ್ತದ

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಅಂದರೆ ಮದುವೆ ಆಗಲು ಬಯಸಿದ್ದರೆ ಮದುವೆಗೆ ನಾನಾ ಅಡೆತಡೆಗಳನ್ನು ಎದುರಿಸುತ್ತಿದ್ದರೆ‌,ಅಥವಾ ವಯಸ್ಸು ಮೀರಿದರೂ ಮದುವೆ ಆಗಲು ನಾನಾ ರೀತಿಯ ಗೊಂದಲಗಳು,ಮದುವೆ ಮಾತಿಗೆ ಯಶಸ್ಸು ಸಿಗುತ್ತಿಲ್ಲ ಎಂದರೆ ಈ ಹುಣ್ಣಿಮೆ ದಿನ ತಪ್ಪದೆ ಮಂಚದಾನವನ್ನು ಮಾಡಬೇಕು. ಇದರಿಂದ ಮದುವೆಗೆ ಇರುವ ದೋಷ ಹಾಗೂ ಅಡೆತಡೆ ದೂರವಾಗುತ್ತದೆ.ಇನ್ನು ಮನೆಯಲ್ಲಿ ಮರೆಯದೆ ವಿಷ್ಣು ಹಾಗೂ ಲಕ್ಷ್ಮಿ ದೇವಿಯ ಕೃಪೆಗೋಸ್ಕರ ವಿಷ್ಣು ಸಹಸ್ರನಾಮ ಹಾಗೂ ಲಕ್ಷ್ಮಿ ಅಷ್ಟೋತ್ತರ ನಾಮಾವಳಿಗಳನ್ನು ಹೇಳುತ್ತಾ ತುಪ್ಪದ ದೀಪ ಬೆಳಗಿಸಿ ಸಿಹಿ ಪಾಯಸವನ್ನು ನೈವೇದ್ಯವಾಗಿಟ್ಟು ಕೈ ಮಗಿದು ಕುಳಿತು ನಿಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಳ್ಳಿ.ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ದೇವರೊಂದಿಗೆ ಸ್ನೇಹದಿಂದ ಮಾತನಾಡಿದ ಖುಷಿ ನಿಮಗೆ ಸಿಗುತ್ತದೆ.ಹೀಗೆ ಮಾಘ ಹುಣ್ಣಿಮೆ ದಿನ ಎಳ್ಳು,ಆಹಾರ ದಾನವಾಗಿ ನೀಡಬೇಕು.ನದಿ ಸ್ನಾನ ಮಾಡಬೇಕು ಸಾಧ್ಯವಾಗದಿದ್ದರೆ ಗಂಗಾ ಜಲ ಬೆರೆಸಿ ಸ್ನಾನ ಮಾಡಬೇಕು.ತೀರ್ಥ ಕ್ಷೇತ್ರ ದರ್ಶನ ಮಾಡಬೇಕು,ವಿಷ್ಣು ಲಕ್ಷ್ಮಿ ದೇವಿಯ ಕೃಪೆಗೋಸ್ಕರ ಮನೆಯಲ್ಲಿ ತುಪ್ಪದ ದೀಪ ಹಚ್ಚಿ ಸಿಹಿ ಪಾಯಸ ನೈವೇದ್ಯವಾಗಿಡಬೇಕು.

[irp]


crossorigin="anonymous">