ಮಹಾಶಿವರಾತ್ರಿಯ ದಿನ ಶಿವನಿಗೆ 15 ವಸ್ತುಗಳಿಂದ ಅಭಿಷೇಕ ಮಾಡಿದರೆ ಶಿವ ಪ್ರಸನ್ನನಾಗುತ್ತಾನೆ.Maha shivaratri 2024

ಶಿವರಾತ್ರಿ ದಿನ ಶಿವನನ್ನು ವಿಶಿಷ್ಟವಾಗಿ ಪೂಜಿಸುವುದರಿಂದ ಬಹಳ ಪ್ರಯೋಜನ ಪಡೆಯಬಹುದೆಂದು ಧರ್ಮ ಗ್ರಂಥಗಳು ಹೇಳುತ್ತವೆ, ಮಾರ್ಚ್ 8 ಶುಕ್ರವಾರ ಮಹಾ ಶಿವರಾತ್ರಿ ಬಂದಿದೆ. ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲ್ಪಡುವ ಮಹಾಶಿವರಾತ್ರಿಯು ಲಯಕಾರಕ ಪರಮೇಶ್ವರನ ಆರಾಧನೆಗೆ ಅತ್ಯಂತ ವಿಶೇಷ, ಪವಿತ್ರ ದಿನ. ಕೈಲಾಸ ವಾಸಿ ಶಿವನನ್ನ ಮಹಾ ಶಿವರಾತ್ರಿಯಂದು ಶ್ರದ್ದಾ ಭಕ್ತಿಯಿಂದ ಪೂಜಿಸಿದರೆ, ಭಜಿಸಿದರೆ ಜನ್ಮಜನ್ಮಾಂತರದ ದೋಷಗಳು ನಿವಾರಣೆಯಾಗುತ್ತವೆ. ಮನೋಸಂಕಲ್ಪಗಳು ಈಡೇರುತ್ತವೆಂದು ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಶಿವರಾತ್ರಿಯ ದಿನವು ಸನಾತನ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನವನ್ನು ಶಿವ ಮತ್ತು ಶಕ್ತಿಗಳಿಗೆ ಸಮರ್ಪಿಸಲಾಗಿದೆ. ಈ ದಿನ, ಬೆಳಗ್ಗೆ ಶಿವಲಿಂಗಕ್ಕೆ ವಿಶೇಷ ಅಭಿಷೇಕವನ್ನು ಮಾಡಲಾಗುತ್ತದೆ ಮತ್ತು ರಾತ್ರಿಯಲ್ಲಿ ಶಿವ ಜಾಗರಣೆಯನ್ನು ಮಾಡಲಾಗುತ್ತದೆ.ಈ ದಿನ ವಿಶೇಷವಾಗಿ ಶಿವನಿಗೆ ಯಾವ ವಸ್ತುಗಳಿಂದ ಅಭಿಷೇಕ ಮಾಡಿದರೆ ಯಾವ ಫಲ ಸಿಗುತ್ತದೆ ಎಂದು ತಿಳಿಯೋಣ.

WhatsApp Group Join Now
Telegram Group Join Now

ಗರಿಕೆಯ ನೀರಿನಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ಬದುಕಿನ ತೊಂದರೆಗಳೆಲ್ಲವೂ ನಿವಾರಣೆಯಾಗಿ ಕಳೆದುಹೋದ ಹಣವನ್ನು ಮರಳಿ ಪಡೆಯಬಹುದು.ಎಳ್ಳಿನ ಎಣ್ಣೆಯ ಅಭಿಷೇಕದಿಂದ ಅಪಮೃತ್ಯು ನಿವಾರಣೆ ಶುದ್ಧ ಹಸುವಿನ ಹಾಲಿನ ಅಭಿಷೇಕದಿಂದ ಸಕಲವು ಪ್ರಾಪ್ತಿಯಾಗುತ್ತದೆ, ಅಂದರೆ ಅಭಿಷೇಕ ಮಾಡುವ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವ ವಿಷಯದ ಬಗ್ಗೆ ಸಂಕಲ್ಪ ಮಾಡಿ ಅಭಿಷೇಕವನ್ನು ಮಾಡಿರುತ್ತೀರೋ ಸಂಕಲ್ಪವು ಈಡೇರುತ್ತದೆ, ಸಂತಾನ ಇಲ್ಲದವರಿಗೆ ಹಸುವಿನ ಹಾಲಿನ ಅಭಿಷೇಕದಿಂದ ಸಂತಾನ ಪ್ರಾಪ್ತಿ ಮೊಸರಿನಿಂದ ಮಾಡಿದ ಅಭಿಷೇಕವು ಚೈತನ್ಯ, ಆರೋಗ್ಯ ವೃದ್ಧಿ, ಸುಖ ಸಮೃದ್ಧಿಯನ್ನು ನೀಡುತ್ತದೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಹಸುವಿನ ತುಪ್ಪದಿಂದ ಅಭಿಷೇಕ ಮಾಡಿದರೆ ಅಡೆತಡೆಗಳು ನಿವಾರಣೆಯಾಗಿ ಸಂಪತ್ತು ಸಿಗುತ್ತದೆ.ಕಬ್ಬಿನ ರಸದಿಂದ ಅಭಿಷೇಕ ಮಾಡಿದರೆ ಇಷ್ಟಾರ್ಥಸಿದ್ಧಿ, ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯ ಫಲ, ಇರುವ ಸಂಪತ್ತು ವೃದ್ಧಿಯಾಗುತ್ತದೆ.ಸಕ್ಕರೆಯ ಅಭಿಷೇಕದಿಂದ ಮನಸ್ಸಿನಲ್ಲಿರುವ ದುಃಖ ದುಗುಡ, ಸಂಕಷ್ಟಗಳು ನಿವಾರಣೆ ಆಗುತ್ತದೆ ಬಿಲ್ವದಳದ ನೀರಿನಿಂದ ಅಭಿಷೇಕ ಮಾಡಿದರೆ ಶಿವನ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ.ಜೇನುತುಪ್ಪದ ಅಭಿಷೇಕವು ಒಳ್ಳೆಯ ಸದ್ಗುಣವೆಂದು ಹೇಳುತ್ತಾರೆ ಇದರಿಂದ ಸಮಾಜದಲ್ಲಿ ಗೌರವ ಕೀರ್ತಿಯನ್ನು ಪಡೆಯಬಹುದು.ಪುಷ್ಪೋದಕದಿಂದ ಅಭಿಷೇಕ ಮಾಡಿದವರಿಗೆ ಭೂಮಿ ದೊರೆಯುವುದು.ವಿಭೂತಿಯಿಂದ ಅಭಿಷೇಕ ಮಾಡಿದರೆ ಸರ್ವ ಪಾಪಗಳು ನಾಶವಾಗುತ್ತವೆ.ಗಂದೋಧಕದಿಂದ ಅಭಿಷೇಕಿಸಲ್ಪಟ್ಟವನು ಸತ್ಪುತ್ರವನ್ನು ಪಡೆಯುತ್ತಾನೆ.ನೀರಿನಿಂದ ಅಭಿಷೇಕ ಮಾಡುವುದರಿಂದ ಕಳೆದುಕೊಂಡಿದ್ದನ್ನು ತಿರುಗಿ ಪಡೆಯಬಹುದು ಗಂಗಾಜಲದಿಂದ ಅಭಿಷೇಕ ಮಾಡಿದರೆ ಹಿಂದಿನ ಜನ್ಮ ಈ ಜನ್ಮದ ಪಾಪಗಳೆಲ್ಲ ಕಳೆಯುತ್ತದೆ.ಅನ್ನದಿಂದ ಅಭಿಷೇಕ ಮಾಡಿದವನು ದೀರ್ಘಾಯುಷ್ಯವನ್ನು ಪಡೆದು ಸಾವಿನ ನಂತರ ಮೋಕ್ಷವನ್ನು ಪಡೆಯುತ್ತಾನೆ.

ಪೂಜೆ ಮಾಡಲು ಪೂಜೆಗೆ ಮೀಸಲಾದ ಪಾತ್ರೆಗಳನ್ನು ಮಾತ್ರಾ ಬಳಸಬೇಕು. ಅಭಿಷೇಕ ಮಾಡುವ ತಟ್ಟೆಯ ಮಧ್ಯಭಾಗದಲ್ಲಿ ಶಿವ, ಈಶಾನ್ಯದಲ್ಲಿ ವಿಷ್ಣು, ಆಗ್ನೇಯದಲ್ಲಿ ರವಿ, ನೈರುತ್ಯದಲ್ಲಿ ಗಣಪತಿ ಮತ್ತು ವಾಯುವ್ಯದಲ್ಲಿ ದುರ್ಗಾಮಾತೆಯ ವಿಗ್ರಹಗಳನ್ನು ಇರಿಸಬೇಕು. ಸಾಲಿಗ್ರಾಮವನ್ನು ಪೂಜಿಸುತ್ತಿದ್ದರೆ ವಿಶೇಷ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಲಿಗ್ರಾಮಕ್ಕೆ ಪೂಜೆ ಮಾಡಿದಷ್ಟು, ಅಭಿಷೇಕ ಮಾಡಿದಷ್ಟು ಅದರಲ್ಲಿರುವ ಶಕ್ತಿಯು ಇಮ್ಮಡಿ ಆಗುತ್ತದೆ.ಶಿವನಿಗೆ ಅತಿ ಮುಖ್ಯವಾದಂತಹ ಮತ್ತು ಪವಿತ್ರವಾದಂತಹ ಬಿಲ್ವಪತ್ರೆ ಎಂದರೆ ಮೂರು ದಳಗಳ ಬಿಲ್ವಪತ್ರೆ. ಇದು ತ್ರಿಮೂರ್ತಿಗಳನ್ನು ಸೂಚಿಸುತ್ತದೆ. ಬಿಲ್ವಪತ್ರೆಯಿಂದ ಶಿವಪೂಜೆ ಮಾಡಲು ನಿಯಮಗಳನ್ನು ತಪ್ಪದೇ ಪಾಲಿಸಲೇಬೇಕು ಇಲ್ಲವಾದರೆ ಮಾಡಿದ ಪೂಜೆಗೆ ತಕ್ಕ ಪ್ರತಿಫಲ ಸಿಗುವುದಿಲ್ಲ ಅಲ್ಲದೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ನೆಲದ ಮೇಲೆ ಬಿದ್ದಿರುವ ಬಿಲ್ವಪತ್ರೆಗಳನ್ನು ಆರಿಸಿ ಪೂಜೆ ಮಾಡಬಾರದು.ಸೀಳಿದಂತಿರುವ, ಹುಳುವಿನಿಂದ ರಂಧ್ರಗಳಿರುವ ಬಿಲ್ವಪತ್ರೆಗಳನ್ನು ಪೂಜೆ ಮಾಡಬಾರದು.ಮೂರಕ್ಕಿಂತಲೂ ಕಡಿಮೆ ದಳಗಳಿರುವ ಬಿಲ್ವಪತ್ರೆಯನ್ನು ಪೂಜಿಸಬಾರದು.ಬಾಡಿಹೋದ ಅಥವಾ ಕೊಳೆತು ಹೋದ ಬಿಲ್ವಪತ್ರೆಗಳು ಪೂಜೆಗೆ ನಿಷಿದ್ಧ.ಒಣಗಿಹೋದ ಬಿಲ್ವಪತ್ರೆಗಳಿಂದ ಪೂಜೆ ಮಾಡಿದರೆ ಪ್ರಾಣಿ ಹತ್ಯಾ ದೋಷ.ಬಿಲ್ವಪತ್ರೆಯ ದಳಗಳು ಒಂದೇ ಮೂಲದಿಂದ ಬಂದಿರಬೇಕು. ಕಡ್ಡಿಯ ಬೇರೆ ಬೇರೆ ಭಾಗದಲ್ಲಿ ಅಂಟಿಕೊಂಡಂತಿರಬಾರದು.ದೇವರಿಗೆ ಬಿಲ್ವಪತ್ರೆಯನ್ನು ಪೂಜಿಸಿದಾಗ ಬಿಲ್ವಪತ್ರೆಯ ಮೂಲವೂ ನೆಲವನ್ನು ನೋಡುವಂತೆ ಇರಬೇಕು.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಪೂಜೆ ಮಾಡುವ ವೇಳೆ ಬಿಲ್ವಪತ್ರೆಯ ದಳಗಳ ಹಸಿರು ಬಣ್ಣವು ನಮ್ಮ ಕಡೆ ತಿರುಗಿರಬೇಕು.ಶಿವನಿಗೆ ಪೂಜೆ ಮಾಡುವ ವೇಳೆ ನಮ್ಮ ಮುಖವು ಉತ್ತರ ಅಥವಾ ಪೂರ್ವ ದಿಕ್ಕನ್ನು ನೋಡುವಂತಿರಬೇಕು.ಕೆಲವರು ಪೂಜೆ ಮಾಡಿ, ಒಣಗಿದ ಬಿಲ್ವಪತ್ರೆಯನ್ನು ಪುಡಿ ಮಾಡಿಸುತ್ತಾರೆ ಉಪಯೋಗಿಸುತ್ತಾರೆ . ಆದರೆ ಯಾವುದೇ ಕಾರಣಕ್ಕೂ ಇದನ್ನು ನಾಭಿಗಿಂತ ಕೆಳಗೆ ಬಳಸಲೇಬಾರದು.ಅಷ್ಟೋತ್ತರದ ಮೂಲಕ ಬಿಲ್ವಪತ್ರೆಯ ಪೂಜೆಯನ್ನು ಮಾಡಬಹುದು. ಮುಖ್ಯವಾಗಿ ಅಮಾವಾಸ್ಯೆಯ ದಿನ ಶಿವನಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ದೃಷ್ಠಿ ದೋಷದಿಂದ ಪಾರಾಗಬಹುದು. ಇದರೊಂದಿಗೆ ಬೆಲ್ಲವನ್ನು ದಾನ ನೀಡಿದರೆ ಅಪಮೃತ್ಯುವನ್ನು ಗೆಲ್ಲಬಹುದು. ಈ ಪೂಜೆಯಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳನ್ನು ದೂರಗೊಳಿಸಬಹುದು.ಪ್ರತಿಯೊಬ್ಬರಿಗೂ ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಬಳಸಿ ಅಭಿಷೇಕ ಮಾಡಲು ಸಾಧ್ಯವಿರುವುದಿಲ್ಲ, ಹಾಗಾಗಿ ಹಸುವಿನ ಹಾಲು ಜೇನುತುಪ್ಪ ಹಸುವಿನ ತುಪ್ಪ ಮೊಸರು, ಬಿಲ್ವಪತ್ರೆ, ಗರಿಕೆ, ಎಕ್ಕದ ಹೂವು ಇವುಗಳಿಂದ ಕೂಡ ಅಭಿಷೇಕ ಮಾಡಬಹುದು. ಆಡಂಬರದ ಪೂಜೆ ಗಿಂತ, ಭಕ್ತಿಯಿಂದ ನೀರು ಅಥವಾ ಗಂಗಾಜಲದ ಅಭಿಷೇಕ ಮಾಡಿದರು ಶಿವ ಪ್ರಸನ್ನನಾಗುತ್ತಾನೆ.

[irp]


crossorigin="anonymous">