ಪಾತ್ರೆ ತೊಳೆಯುವ ಕೆಲಸ ಮಹಿಳೆಯರಿಗೆ ತುಂಬಾ ದೊಡ್ಡ ಕೆಲಸವೇ ಎಂದು ಹೇಳಬಹುದು. ಪಾತ್ರೆ ತೊಳೆಯಲು ಲಿಕ್ವಿಡ್ ಸೋಪು ಎಷ್ಟು ಮುಖ್ಯವೋ ಅದೇ ತರಹ ಸ್ಕ್ರಬ್ಬರ್ ಕೂಡ ಮುಖ್ಯ. ಅಂದರೆ ಪಾತ್ರೆ ತೊಳೆಯುವ ಜುಂಗು ಪಾತ್ರೆ ತೊಳೆಯುವಾಗ ನಾವು ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತೇವೆ.
ಕೆಲವರಿಗೆ ಈ ಜುಂಗು ತರಚಿ ಗಾಯವಾಗುತ್ತದೆ. ಅದೇ ರೀತಿ ಈ ಸ್ಕ್ರಬ್ಬರ್ ಗಳನ್ನು ತಂದ ಸ್ವಲ್ಪ ದಿನಕ್ಕೆ ಇವು ಹಾಳಾಗುತ್ತದೆ. ಇಂತಹ ಎಲ್ಲಾ ತೊಂದರೆಗಳಿಗೆ ಕೆಲವೊಂದು ಟಿಪ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ. ಈ ಎಲ್ಲಾ ಟಿಪ್ಸ್ಗಳನ್ನು ಉಪಯೋಗಿಸಿ ನೋಡಿ ನಿಮ್ಮ ಎಲ್ಲಾ ಪಾತ್ರೆ ತೊಳೆಯುವ ಸಮಸ್ಯೆಗಳು ಬಗೆಹರಿಯುತ್ತದೆ.
ಜೊತೆಗೆ ಆರೋಗ್ಯಕ್ಕೂ ಕೂಡ ಒಳ್ಳೆಯದು. ಈಗ ನಾವು ಆ ಟಿಪ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ. ನಾವೆಲ್ಲ ಸಾಮಾನ್ಯವಾಗಿ ಈ ಜುಂಬು ಅಥವಾ ಸ್ಕ್ರಬ್ಬರನ್ನು ಸೊಪ್ಪಿನ ಮೇಲೆಯೇ ಇಟ್ಟಿರುತ್ತೇವೆ. ಇದರಿಂದ ಸೋಪು ಬೇಗ ಕರಗುತ್ತದೆ ಮತ್ತು ಅದರಲ್ಲಿ ಕೆಟ್ಟ ವಾಸನೆ ಬರುತ್ತದೆ. ಇದರಿಂದ ಪಾತ್ರೆ ತೊಳೆದರೂ ಸಹ ಪಾತ್ರೆಗಳು ಅಷ್ಟು ಕ್ಲೀನ್ ಆಗಿರುವುದಿಲ್ಲ.
ಇದಕ್ಕೆ ಒಂದು ದೊಡ್ಡ ವಾಟರ್ ಬಾಟಲ್ ಅನ್ನು ತೆಗೆದುಕೊಳ್ಳಬೇಕು. ಅದನ್ನು ಮೇಲ್ಭಾಗದಿಂದ ಸ್ವಲ್ಪ ಕೆಳಗೆ ಕಾಲು ಭಾಗವನ್ನು ಕಟ್ ಮಾಡಿಕೊಳ್ಳಬೇಕು. ಒಳ್ಳೆ ಶೇಪ್ ಇರುವಾಗಲೇ ಅದನ್ನು ಕಟ್ ಮಾಡಿಕೊಳ್ಳಿ. ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿಕೊಳ್ಳಿ ಏಕೆಂದರೆ ಇದರ ಒಳಗೆ ಜುಂಗು ಅಥವಾ ಸ್ತ್ರಬ್ಬರನ್ನು ಹಾಕಬೇಕು.
ನಿಮಗೆ ಯಾವ ಆಕಾರದಲ್ಲಿ ಎಷ್ಟು ಅಗಲ ಬೇಕೋ ಅಷ್ಟು ಅಗಲವಾಗಿ ಒಳ್ಳೆ ಶೇಪ್ ಬರುವ ಹಾಗೆ ಕಟ್ ಮಾಡಿಕೊಳ್ಳಿ. ಈಗ ಮೇಲ್ಭಾಗ ರೆಡಿಯಾಗಿರುತ್ತದೆ ಕೆಳಬಾಗಕ್ಕೆ ಏನು ಮಾಡಬೇಕು ಎಂದರೆ ಅರ್ಧ ಭಾಗಕ್ಕೆ ಬಾಟಲನ್ನು ಕಟ್ ಮಾಡಿಕೊಳ್ಳಬೇಕು. ಮೇಲ್ಭಾಗದ ಬಾಟಲನ್ನು ಕೆಳಭಾಗದ ಬಾಟಲ್ ಒಳಗಡೆ ಹಾಕಿದಾಗ ಅದಕ್ಕೆ ಜಂಗು ಅಥವಾ ಸ್ತ್ರಬ್ಬರನ್ನು ಇಟ್ಟಾಗ ಅದರಲ್ಲಿ ನೀರು ಸೋರುತ್ತದೆ.
ಈ ರೀತಿ ಮಾಡುವುದರಿಂದ ಜುಂಬು ಬಹಳ ದಿನದವರೆಗೆ ಬಾಳಿಕೆ ಬರುತ್ತದೆ. ನಾವೆಲ್ಲರೂ ಸ್ಟೀಲ್ ಸ್ಕ್ರಬ್ಬರನ್ನು ಹೆಚ್ಚಾಗಿ ಬಳಸುತ್ತೇವೆ. ಅದು ಬಳಸುತ್ತಾ ಬಳಸುತ್ತಾ ಜುಂಗು ಜುಂಗಾಗಿ ಬಿಟ್ಟುಕೊಳ್ಳುತ್ತದೆ ಇದರಿಂದ ನಂತರ ಬಳಸಲು ಕಷ್ಟವಾಗುತ್ತದೆ. ಸ್ಟೀಲ್ ಸ್ಕ್ರಬ್ಬರ್ಗಳು ಕೈಗೆ ತಾಗಿ ಗಾಯವಾಗುವಂತಹ ಸಂದರ್ಭ ಬರುತ್ತದೆ.
ಪದೇ ಪದೇ ಇದರಿಂದ ತರಚಿದ ಗಾಯ ಆಗುತ್ತದೆ ಕೆಲವರಿಗಂತು ಇದು ಸಾಮಾನ್ಯವಾಗಿರುತ್ತದೆ. ಇದಕ್ಕೆ ಒಂದು ಹಳೆಯ ಬಾಟಲನ್ನು ತೆಗೆದುಕೊಂಡು ಕಾಲ್ ಭಾಗಕ್ಕೆ ಕಟ್ ಮಾಡಿಕೊಳ್ಳಿ. ಮುಚ್ಚುಳ ಇರುವ ಭಾಗವನ್ನು ಮಧ್ಯದಲ್ಲಿ ತೂತು ಮಾಡಬೇಕು. ಸ್ಕ್ರಬ್ಬರ್ ಮಧ್ಯ ಭಾಗಕ್ಕೆ ಒಂದು ದಾರವನ್ನು ಹಾಕಿ ಬಾಟಲ್ ಮುಚ್ಚಳವನ್ನು ತೂತ್ ಮಾಡಿ.
ಆ ಜಾಗಕ್ಕೆ ಆ ಎರಡು ದಾರವನ್ನು ಹಾಕಬೇಕು ನಂತರ ಅದನ್ನು ಸರಿಯಾದ ರೀತಿಯಲ್ಲಿ ಜೋಡಣೆ ಮಾಡಿಕೊಳ್ಳಿ. ಇಂತಹ ಸ್ಕ್ರಬ್ಬರ್ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ನಾವೇ ಮನೆಯಲ್ಲಿ ಕಸಕ್ಕೆ ಎಸೆಯುವ ಬದಲು ತಯಾರಿ ಮಾಡಿಕೊಳ್ಳಬಹುದು. ಕೆಲವರಿಗೆ ಸೊಪಿನಿಂದ ಕೈ ಅಲರ್ಜಿ ಆಗುತ್ತದೆ.
ಅಂತವರು ಈ ರೀತಿ ಬಳಸಿದರೆ ಉತ್ತಮ ಇದರಿಂದ ಜಂಗು ಅಥವಾ ಸ್ಕ್ರಬ್ಬರ್ ತುಂಬಾ ದಿನ ಬಾಳಿಕೆ ಬರುತ್ತದೆ. ಮತ್ತು ಕೈಗಳು ಸಹ ಹಾಳಾಗುವುದಿಲ ಈ ರೀತಿ ನಾವು ಕ್ಲೀನ್ ಮಾಡದೇ ಇಟ್ಟರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಗಳು ಹೆಚ್ಚುತ್ತವೆ. ಇದರಿಂದ ಪಾತ್ರೆ ತೊಳೆದರೂ ಸಹ ಅವು ಕ್ಲೀನ್ ಆಗುವುದಿಲ್ಲ ಇದಕ್ಕೆ ಏನು ಮಾಡಬೇಕು ಎಂದರೆ.
ರಾತ್ರಿ ಮಲಗುವ ಮೊದಲು ಒಂದು ಬಟ್ಟಲಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಸ್ಪೂನ್ ಉಪ್ಪನ್ನು ಹಾಕಿ ಅದರೊಳಗೆ ಈ ಜುಂಗನ್ನು ನೆನೆಸಲು ಬಿಡಿ. ರಾತ್ರಿ ನೆನೆಸಿಟ್ಟು ಬೆಳಗ್ಗೆ ತೊಳೆದರೆ ಸಾಕು ಅದನ್ನು ನೀವೇ ನೋಡಬಹುದು ಅದರಲ್ಲಿ ಎಷ್ಟು ಕೊಳೆ ಬಿಟ್ಟುಕೊಳ್ಳುತ್ತದೆ ಎಂದು. ಈ ರೀತಿಯಾಗಿ ಸ್ಕ್ರಬ್ಬರನ್ನು ಕ್ಲೀನ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.