ನಮಸ್ಕಾರ ಸ್ನೇಹಿತರೆ, ನಮಗೆಲ್ಲರಿಗೂ ತಿಳಿದಿರುವಂತೆ ತುಳಸಿ ನಮ್ಮ ಹಿಂದೂ ಧರ್ಮದ ಅತ್ಯಂತ ಪವಿತ್ರವಾದಂತಹ ಸಸ್ಯ. ಪ್ರತಿಯೊಬ್ಬ ಹಿಂದುವಿನ ಮನೆ ಅಂಗಳದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವಂತಹ ಸಸ್ಯವೇ, ತುಳಸಿ ಸಸ್ಯ. ತುಳಸಿ ಗಿಡದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ವಾಸಸ್ಥಾನ ವಿದೆ. ಹಾಗಾಗಿ ಯಾರ ಮನೆಯಲ್ಲಿ ತುಳಸಿ ಗಿಡವಿದೆಯೋ ಅವರ ಮನೆಯಲ್ಲಿ ಸುಖ ಸಂತೋಷ ಹಾಗೂ ಸಮೃದ್ಧಿ ಮನೆ ಮಾಡಿರುತ್ತದೆ. ತುಳಸಿ ಕಟ್ಟೆ ಇರುವ ಸ್ಥಳ ಗಂಗಾ ನದಿಯ ತಟದಷ್ಟು ಪವಿತ್ರವಾದದ್ದು ಎಂದು ಹಿರಿಯರು ಉಲ್ಲೇಖಿಸುತ್ತಾರೆ.
ತುಳಸಿ ಗಿಡವೋ ಹೆಚ್ಚಿನ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಮನೆಯ ಸುತ್ತ ತುಳಸಿ ಗಿಡ ಇದ್ದರೆ ಶುದ್ಧ ಗಾಳಿ ನಮಗೆ ಉಸಿರಾಟಕ್ಕೆ ಸಹಜವಾಗಿ ಲಭ್ಯವಾಗುತ್ತದೆ. ಮಹಾ ವಿಷ್ಣು ಹಾಗೂ ಅವರ ಅವತಾರಗಳಾದ ಪ್ರಭು ಶ್ರೀರಾಮಚಂದ್ರರು ಹಾಗೂ ಶ್ರೀ ಕೃಷ್ಣ ಪರಮಾತ್ಮರ ಪೂಜೆಯಲ್ಲಿ ತುಳಸಿ ಎಲೆಗಳನ್ನು ಕಡ್ಡಾಯವಾಗಿ ಅರ್ಪಿಸಲಾಗುತ್ತದೆ. ಬೇರೆ ಸಸ್ಯಗಳಂತೆ ತುಳಸಿಯಲ್ಲಿಯೂ ಕೂಡ ಅನೇಕ ಪ್ರಭೇದಗಳಿವೆ. ಆದರೆ ಎಲ್ಲಾ ಪ್ರಭೇದಗಳಲ್ಲಿಯೂ ಎರಡು ಪ್ರಭೇದಗಳು ಧಾರ್ಮಿಕವಾಗಿ ಮಹತ್ವವನ್ನು ಪಡೆದುಕೊಂಡಿದೆ.
ಆ ಎರಡು ಪ್ರಭೇದಗಳೇ ರಾಮ ತುಳಸಿ ಮತ್ತು ಕೃಷ್ಣ ತುಳಸಿ . ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ನಡುವಿನ ವ್ಯತ್ಯಾಸವೇನು. ಈ ಎರಡು ತುಳಸಿಯ ಪ್ರಭೇದಗಳಲ್ಲಿ ಯಾವ ತುಳಸಿ ಶ್ರೇಷ್ಠ ಎಂಬ ಪ್ರಶ್ನೆಗಳಿಗೆ ಈ ಸಂಚಿಕೆಯ ಮೂಲಕ ಉತ್ತರವನ್ನು ತಿಳಿದುಕೊಳ್ಳೋಣ. ಮೊದಲಿಗೆ ರಾಮ ತುಳಸಿಯ ಬಗ್ಗೆ ತಿಳಿದುಕೊಳ್ಳೋಣ. ರಾಮ ತುಳಸಿಯ ಎಲೆಗಳು ಹಾಗೂ ದಂಟು ಹಾಗೂ ಹಸಿರು ಬಣ್ಣದಲ್ಲಿರುತ್ತದೆ. ಹಾಗೂ ಇದರ ಎಲೆಗಳು ಬಹಳ ಸಿಹಿಯಾಗಿರುತ್ತವೆ. ರಾಮ ತುಳಸಿ ಪ್ರತಿ ಮನೆಗಳಲ್ಲಿಯೂ ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ.
ರಾಮ ತುಳಸಿಯನ್ನು ಶ್ರೀ ತುಳಸಿ ಉಜ್ವಲ ತುಳಸಿ ಎಂದು ಸಹ ಕರೆಯಲಾಗುತ್ತದೆ. ಈ ತುಳಸಿ ಪ್ರಭು ಶ್ರೀರಾಮಚಂದ್ರನಿಗೆ ಬಹಳ ಪ್ರಿಯವಾದದ್ದು. ರಾಮ ತುಳಸಿಗೆ ಧಾರ್ಮಿಕ ಗ್ರಂಥಗಳಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ರಾಮ ತುಳಸಿಯ ಗಿಡವನ್ನು ಮನೆಯಲ್ಲಿ ನೆಡುವುದರಿಂದ. ಸುಖ ಶಾಂತಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ಹಾಗೂ ರಾಮ ತುಳಸಿ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ತುಳಸಿಯ ಎರಡನೇ ಪ್ರಭೇದವೇ, ರಾಮ ತುಳಸಿ ಅಥವಾ ಕೃಷ್ಣ ತುಳಸಿ ಈ ತುಳಸಿಯ ಎಲೆಗಳು ಹಾಗೂ ದಂಟು ಕಡು ನೇರಳೆ ಬಣ್ಣದಲ್ಲಿ ಇರುತ್ತವೆ.
ಈ ತುಳಸಿ ಪ್ರಭು ಶ್ರೀ ಕೃಷ್ಣ ಪರಮಾತ್ಮನಿಗೆ ಬಹಳ ಪ್ರಿಯವಾದದ್ದು. ಶ್ರೀ ಕೃಷ್ಣ ಪರಮಾತ್ಮರ ಮತ್ತೊಂದು ಹೆಸರೇ ಶ್ಯಾಮ ಹಾಗಾಗಿ ಈ ತುಳಸಿಗೆ ಶ್ಯಾಮ ತುಳಸಿ ಅಥವಾ ಕೃಷ್ಣ ತುಳಸಿ ಎಂದು ಕರೆಯಲಾಗುತ್ತದೆ. ಕೃಷ್ಣ ತುಳಸಿ ಹಾಗೂ ರಾಮ ತುಳಸಿಗಳು ಬೇರೆ ಬೇರೆ ಗುಣಗಳನ್ನು ಹೊಂದಿವೆ. ರಾಮ ತುಳಸಿಗೆ ಹೋಲಿಸಿದರೆ ಶ್ಯಾಮ ತುಳಸಿ ರುಚಿಯಲ್ಲಿ ಕಡಿಮೆ ಸಿಹಿಯನ್ನು ಹೊಂದಿರುತ್ತದೆ. ರಾಮ ಕೃಷ್ಣ ತುಳಸಿ ತುಳಸಿಯ ಎಲೆಯ ಪರಿಮಳವು ಕೃಷ್ಣ ತುಳಸಿ ಗಿಡಕ್ಕೆ ಹೋಲಿಸಿದಾಗ ಸ್ವಲ್ಪ ಕಡಿಮೆ ಇರುತ್ತದೆ. ಕೃಷ್ಣ ತುಳಸಿ ಎಲೆಗಳನ್ನು ತಿಂದಾಗ ನಾಲಿಗೆಗೆ ಸ್ವಲ್ಪ ಖಾರ ಆದಂತೆ ಆಗುತ್ತದೆ.
ಆದರೆ ರಾಮಕೃಷ್ಣ ತುಳಸಿ ಎಲೆಗಳಲ್ಲಿ ಅಷ್ಟೊಂದು ಕಾರವಿರುವುದಿಲ್ಲ. ಕೃಷ್ಣ ತುಳಸಿ ಎಲೆಗಳಿಗಿಂತ ರಾಮ ತುಳಸಿ ಗಿಡದ ಎಲೆಗಳು ಬಹಳ ತಂಪನ್ನು ಹೊಂದಿರುತ್ತದೆ. ಬೇಸಿಗೆಕಾಲದಲ್ಲಿ ರಾಮ ತುಳಸಿ ಎಲೆಗಳನ್ನು ಪಾನಕ ಮಾಡಲು ಉಪಯೋಗಿಸಲಾಗುತ್ತದೆ. ಕೃಷ್ಣ ತುಳಸಿ ಗಿಡ ಸ್ವಲ್ಪ ಉಷ್ಣ ಗುಣವನ್ನು ಹೊಂದಿರುತ್ತದೆ. ಕೃಷ್ಣ ತುಳಸಿ ಗಿಡವನ್ನು ನಾವು ಮಳೆಗಾಲದಲ್ಲಿ ಜ್ವರ ಶೀತ ಆದಾಗ ಔಷಧಿಯಾಗಿ ಬಳಸಬಹುದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು