ನಮಸ್ಕಾರ ಪ್ರಿಯ ವೀಕ್ಷಕರೆ, ಲಕ್ಷ್ಮಿ ದೇವಿ ಮನೆಯಿಂದ ಹೊರಗಡೆ ಹೋಗ್ತಾಳೆ ಅಂದ್ರೆ, ಮನೆಯಿಂದ ಹೊರಗೆ ಕಾಲ್ ಹಾಕಬೇಕು ಅಂದ್ರೆ, ಆ ಮನೆಗೆ ಕಷ್ಟ ದಾರಿದ್ರಗಳು ಬರ್ತಾವೆ. ಆಕೆ ಹೋಗುವುದಕ್ಕಿಂತ ಮುಂಚೆ, ಕೆಲವು ಸೂಚನೆಗಳನ್ನು ಕೊಡುತ್ತಾಳಂತೆ. ಅಂದ್ರೆ ಈ ಮನೆಗೆ ಇನ್ನು ಕಷ್ಟಗಳು ಬರುತ್ತವೆ ದಾರಿದ್ರಗಳು ಬರುತ್ತವೆ ಅಂತ ಹೇಳಿ. ಹೇಳುವುದಕ್ಕಿಂತ ಮುಂಚೆ ಕೆಲವು ಸೂಚನೆಗಳನ್ನು ಕೊಡುತ್ತಾಳೆ. ಆ ಸೂಚನೆಗಳನ್ನು ಅರಿತುಕೊಂಡು ಎಚ್ಚೆತ್ತುಕೊಳ್ಳಬೇಕು ಅಂತ ಹೇಳಿ. ಅದಕ್ಕಾಗಿ ಇವತ್ತೊಂದು ಸುಂದರವಾದ ಕಥೆಯನ್ನು ಹೇಳುತ್ತೇವೆ.
ಕಥೆಯ ರೂಪದಲ್ಲಿ ತಿಳಿಸಿಕೊಡುತ್ತಾ ಹೋಗ್ತೇವೆ. ಒಂದು ಊರಿನಲ್ಲಿ ಒಬ್ಬ ದೊಡ್ಡ ವ್ಯಾಪಾರಿ ಇರುತ್ತಾನಂತೆ. ಅವನು ಸಣ್ಣ ವ್ಯಾಪಾರವನ್ನು ಮಾಡಿಕೊಂಡು ಇರುತ್ತಾನಂತೆ. ಅವನು ಬಹಳ ಒಳ್ಳೆಯವನಾಗಿರುತ್ತಾನೆ. ಅವನ ಒಳ್ಳೆತನವನ್ನು ಮೆಚ್ಚಿ ಆ ಲಕ್ಷ್ಮೀದೇವಿ ಅವನ ಮನೆಗೆ ಕಾಲನ್ನು ಹಾಕುತ್ತಾಳೆ. ಹೀಗಾಗಿ ಅವನು ಬೆಳೆದು ದೊಡ್ಡ ವ್ಯಾಪಾರಿ ಆಗುತ್ತಾನೆ. ವ್ಯಾಪಾರಿ ಆದ ತಕ್ಷಣ ಅವನ ಎಲ್ಲಾ ಅಣ್ಣ ತಮ್ಮಂದಿರು ಸೇರಿಕೊಂಡು, ಒಂದೇ ಮನೆಯಲ್ಲಿ ಇರುತ್ತಾರೆ.
ಹೀಗಿರಬೇಕಾದರೆ ಆ ಮನೆಗೆ ಅತಿಯಾದ ದೊಡ್ಡ ಶ್ರೀಮಂತಿಕೆ ಬರುತ್ತಾ ಬರುತ್ತಾ ಎಷ್ಟೋ ವರ್ಷಗಳ ನಂತರ, ಆ ಇಡೀ ಊರಿಗೆ ದೊಡ್ಡ ಶ್ರೀಮಂತರಾಗುತ್ತಾರಂತೆ. ಹೀಗೆ ಇರಬೇಕಾದರೆ ಮಕ್ಕಳು ಸೊಸೆಯಂದ್ರು ಹಳಿ ಅಂದರು ಈ ರೀತಿ ಅವರ ಕುಟುಂಬ ತಡೆಯುತ್ತಾ ಹೋಗುತ್ತದೆ. ಅತಿಯಾದ ಶ್ರೀಮಂತಿಕೆ ಬಂತು ಅಂದರೆ ಕೆಲವರಿಗೆ, ಬಹಳ ಸೊಕ್ಕು ಬರುವುದಕ್ಕೆ ಶುರುವಾಗುತ್ತದೆ. ಅಂದ್ರೆ ನಾವು ಹೇಳಿದ್ವಿ ಯಾವ ರೀತಿ ಕಷ್ಟ ಇತ್ತು, ಅವುಗಳೆಲ್ಲವನ್ನು ಮರೆತುಬಿಡುತ್ತಾರೆ.
ಆಗ ಈ ವ್ಯಾಪಾರಿ ಅಣ್ಣ-ತಮ್ಮಂದಿರು ಎಲ್ಲರೂ ಸೇರಿ, ಬಹಳಾನೇ ಸೊಕ್ಕಿನ ಅಹಂಕಾರದಿಂದ ಮೆರೆಯುವುದಕ್ಕೆ ಶುರು ಮಾಡುತ್ತಾರೆ. ಆ ಒಗ್ಗಟ್ಟಿನಲ್ಲಿದ್ದ ಅಣ್ಣ ತಮ್ಮಂದಿರು ಭೇದ ಭಾವ ಬರುವುದಕ್ಕೆ ಶುರುವಾಗುತ್ತದೆ. ನಾ ಹೆಚ್ಚು ನೀ ಹೆಚ್ಚು ಜಗಳಗಳು ಶುರುವಾಗುತ್ತವೆ. ಆಗ ಬಂದು ದಿವಸ ಮಹಾಲಕ್ಷ್ಮಿ ತಲೆಗೆ ತ್ರಾಸ್ ಆಗಿಬಿಡುತ್ತದೆ. ಆಗಾಕೆ ಮನೆಯ ಹಿರಿವಾಗನಾದಂತ ಅವನ ಸ್ವಪ್ನದಲ್ಲಿ ಬಂದು , ಅವನಿಗೆ ಹೇಳುತ್ತಾಳೆ . ನಿಮ್ಮ ಮನೆಯ ಪುಣ್ಯ ಇವತ್ತಿಗೆ ಮುಗೀತು. ನಾನು ನಿಮ್ಮ ಮನೆಯನ್ನು ಬಿಟ್ಟು ಹೊರಗಡೆ ಹೋಗುತ್ತಿದ್ದೇನೆ.
ನಿನಗೆ ಏನು ಬೇಕು ವರ ಕೇಳಿಕೋ ಅಂತ ಹೇಳಿ. ಆಕೆ ಅವನಿಗೆ ಕೇಳುತ್ತಾಳಂತೆ, ಆಗ ಅವನಿಗೆ ಏನು ವರ ಬೇಡಬೇಕು ಎಂದು ಗೊತ್ತಾಗುವುದಿಲ್ಲ. ಆಗ ಅವನು ಲಕ್ಷ್ಮಿ ದೇವಿಯನ್ನು ಕೇಳುತ್ತಾನೆ ನನಗೆ ಒಂದೇ ಒಂದು ದಿನ ಸಮಯ ಕೊಡು, ನನ್ನ ಕುಟುಂಬದ ಜೊತೆ ಮಾತನಾಡಿ ವರವನ್ನು ಕೇಳುತ್ತೇನೆ ಅಂತ ಹೇಳುತ್ತಾನೆ. ಆಗ ಮರುದಿನ ಮುಂಜಾನೆ ಬೆಳಿಗ್ಗೆ ಎದ್ದ ತಕ್ಷಣ ತನ್ನ ಎಲ್ಲಾ ಕುಟುಂಬದವರನ್ನು ಕರೆಯುತ್ತಾನೆ. ಆಗ ಹೇಳುತ್ತಾನೆ, ಮಹಾಲಕ್ಷ್ಮಿ ನಮ್ಮ ಮನೆಯನ್ನು ಬಿಟ್ಟು ಹೋಗುತ್ತಿದ್ದಾಳೆ. ಆಕೆ ಒಂದು ವರವನ್ನು ಮಾತ್ರ ಕೇಳೋದಕ್ಕೆ ಅನುಮತಿಯನ್ನು ನೀಡಿದ್ದಾಳೆ.
ಅದಕ್ಕೆ ಏನು ವರ ಕೇಳಿಕೊಳ್ಳೋಣ. ಆಗ ಮೊದಲನೆಯ ತಮ್ಮ ಹೇಳುತ್ತಾನೆ, ಧನ ದವಲತ್ತು ಹಣ ಐಶ್ವರ್ಯ ಕೇಳಿಕೊಳ್ಳೋಣ ಅಂತ. ಯಾಕಂದ್ರೆ ನಾವು ಜೀವನಪೂರ್ತಿ ಆ ಮಹಾಲಕ್ಷ್ಮಿ ಇಲ್ಲ ಅಂದರೂ ಕೂಡ ಆರಾಮಾಗಿ ಕುಳಿತುಕೊಂಡು ತಿನ್ನಬಹುದು ಅಂತ ಹೇಳಿ. ಆಗ ಮುಂದಿನ ತಮ್ಮ ಕೇಳುತ್ತಾನಂತೆ, ಅನ್ನವನ್ನು ಬೇಡಿಕೋ ಜೀವನಪೂರ್ತಿ ನಮಗೆ ಅನ್ನ ಕಡಿಮೆಯಾಗಬಾರದು ಅಂತ ಕೇಳಿಕೋ ಅಂತ ಹೇಳ್ತಾನೆ. ಇನ್ನೊಬ್ಬ ತಮ್ಮ ಹೇಳುತ್ತಾನಂತೆ ಜಮೀನು ಆಸ್ತಿ ಬೇಡಿಕೋ ಅಂತ ಹೇಳಿ.
ಯಾಕಂದ್ರೆ ಆಸ್ತಿ ಹೊಲ ಇದ್ದರೆ ಬೇಕಾದಷ್ಟು ನಾವು ಆರಾಮಾಗಿ ಬದುಕಬಹುದು ಅಂತ ಹೇಳಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು.