ಅರಮನೆ ಮಾಲೀಕ ಯದುವೀರ್ ಅಲ್ಲ…. ಮೈಸೂರು ಮಹಾರಾಜ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯ ಆಸ್ತಿ ಬರೀ 9 ಕೋಟಿನ ಹಾಗಾದರೆ ರಾಜ ಪರಿವಾರದ ಬಳಿ ಇದ್ದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಎಲ್ಲಿ ಹೋಯಿತು ಈ ಹಿಂದೆ ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಎಲೆಕ್ಷನ್ ಗೆ ನಿಂತಾಗ ಎಷ್ಟು ಕೋಟಿ ಆಸ್ತಿಯನ್ನು.
ಘೋಷಿಸಿಕೊಂಡಿದ್ದರು ಗೊತ್ತಾ ಎಲ್ಲವನ್ನು ಈ ವಿಡಿಯೋದಲ್ಲಿ ತೋರಿಸುತ್ತೇವೆ. ಯದುವೀರ್ ಒಡೆಯರ್ ಆಸ್ತಿ ಇಷ್ಟೇನಾ, ಮೈಸೂರು ಮಹಾರಾಜ ಯದುವೀರ್ ತಮ್ಮ ಕುಟುಂಬದ ಒಟ್ಟು ಆಸ್ತಿ 9.66 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ ಇದರಲ್ಲಿ 4.99 ಕೋಟಿ ಆಸ್ತಿ ಯದುವೀರ್ ಹೆಸರಿನಲ್ಲಿ ಇದ್ದರೆ ಪತ್ನಿ ಕಮ್ ಮಹಾರಾಣಿ ತ್ರಿಷಿಕ ಕುಮಾರಿ ದೇವಿ ಹೆಸರಿನಲ್ಲಿ 1.04 ಕೋಟಿ.
ಆಸ್ತಿ ಇದೆ ಉಳಿದ 3.63 ಕೋಟಿ ಆಸ್ತಿ ಮಗ ಕಮ್ ಯುವರಾಜ ಆದ್ಯವೀರ್ ನರಸಿಂಹರಾಜ ಒಡೆಯರ್ ಹೆಸರಿನಲ್ಲಿ ಇದೆ ಆಸಕ್ತಿಕರ ಎಂದರೆ 9.66 ಕೋಟಿ ಆಸ್ತಿ ಎಲ್ಲಿ 4.65 ಕೋಟಿ ಮೌಲ್ಯದ ಚಿನ್ನಾಭರಣ ಗಳಿವೆ 6 ಕೆಜಿ ಚಿನ್ನ 40 ಕೆಜಿ ಬೆಳ್ಳಿ ಒಂದಷ್ಟು ಹಣಗಳನ್ನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ ಅದನ್ನು ಬಿಟ್ಟರೆ ಮೂವರ ಬಳಿಯೂ ಕೃಷಿ.
ಜಮೀನಾಗಲಿ ಕೃಷಿಯೇತರ ಜಮೀನ್ ಆಗಲಿ ವಾಣಿಜ್ಯ ಕಟ್ಟಡಗಳಾಗಲಿ ಮನೆಗಳಾಗಲಿ ಏನು ಇಲ್ಲ, ಶ್ರೀಕಂಠದತ್ತ ಒಡೆಯರ್ ಆಸ್ತಿ ಎಷ್ಟಿತ್ತು ಈ ಹಿಂದೆ ಮೈಸೂರು ಮಹಾರಾಜರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2004ರಲ್ಲಿ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು ಈ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ.
ಅಫಿಡವಿಟ್ ನಲ್ಲಿ ತಮ್ಮ ಮತ್ತು ಪತ್ನಿ ಪ್ರಮೋದ ದೇವಿಯ ಒಟ್ಟು ಆಸ್ತಿ ಬರೋಬ್ಬರಿ 1,522 ಕೋಟಿ ಎಂದು ಘೋಷಿಸಿಕೊಂಡಿದ್ದರು ಇವರ ಆಸ್ತಿಯಲ್ಲಿ ದೊಡ್ಡ ಪಾಲು ಇದ್ದಿದ್ದು ಮೈಸೂರು ಅರಮನೆ ಮತ್ತು ಬೆಂಗಳೂರು ಅರಮನೆಗಳದ್ದು 2004ರಲ್ಲಿ ಇವೆರಡರ ಒಟ್ಟು ಮೌಲ್ಯ ಬರೋಬ್ಬರಿ 1500 ಕೋಟಿ ಎಂದು ಘೋಷಿಸಿಕೊಂಡಿದ್ದರು ಈಗ ಎಷ್ಟು ಕೋಟಿ ಸಾವಿರ.
ಆಗಿರಬಹುದು ಎಂದು ಯೋಚನೆ ಮಾಡಿ, ಅರಮನೆಗಳು ಈಗ ಯಾರ ಹೆಸರಲ್ಲಿದೆ ಮೈಸೂರು ರಾಜವಂಶಸ್ಥರ ಆಸ್ತಿ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಪರಿವಾರದ ನಡುವೆ ಈ ಹಿಂದೆ ಸುಧೀರ್ಘ ಕಾನೂನು ಹೋರಾಟ ನಡೆದಿದೆ ಕೆಲವೊಂದು ಆಸ್ತಿಯನ್ನ ಸ್ವಾಧೀನ ಪಡೆಸಿಕೊಳ್ಳಲು ರಾಜ್ಯ ಸರ್ಕಾರ ಭಾರಿ ಕಸರತ್ತು ನಡೆಸಿತ್ತು ಆದರೆ ಇದುವರೆಗೂ ಅದು.
ಸಾಧ್ಯವಾಗಿಲ್ಲ ಆದರೆ ಕೋರ್ಟ್ ನಲ್ಲಿಯೂ ರಾಜ ಪರಿವಾರದ ಸಲುವಾಗಿಯೇ ತೀರ್ಪುಗಳು ಬಂದಿವೆ ಅಂದಹಾಗೆ ಎರಡು ಸಾವಿರದ ನಾಲಕ್ಕರ ಲೋಕಸಭಾ ಚುನಾವಣಾ ಸಮಯದಲ್ಲಿ ಮೈಸೂರು ಅರಮನೆ ಮತ್ತು ಬೆಂಗಳೂರು ಅರಮನೆಗಳು ಶ್ರೀಕಂಠದತ್ತ ನರಸಿಂಹರಾಜ ಒಡೆಯ ಹೆಸರಿನಲ್ಲಿ ಇದ್ದವು 2013ರಲ್ಲಿ ಇವರು ನಿಧನರಾದ ಬಳಿಕ ಎಲ್ಲಾ ಆಸ್ತಿ ಪ್ರಮೋದ.
ದೇವಿ ಸುಪತ್ತಿಗೆ ಬಂದವು ಇವರು ಎರಡು ಸಾವಿರದ ಹದಿನೈದರಲ್ಲಿ ಯದುವೀರ್ ಒಡೆಯರನ್ನ ದತ್ತುಪುತ್ರರಾಗಿ ಸ್ವೀಕರಿಸಿದ್ದರು ಇದರ ಬೆನ್ನಲ್ಲಿಯೇ ರಾಜ್ಯ ಪರಿವಾರದ ಎಲ್ಲಾ ಅಸ್ತಿ ಯದುವೀರ್ ಹೆಸರಿನಲ್ಲಿ ಇದೆ ಎಂದು ಬಹುತೇಕರು ಅಂದುಕೊಂಡಿದ್ದರು ಆದರೆ ಇದೀಗ ಲೋಕಸಭಾ ಚುನಾವಣೆಗೆ ನಿಂತಿರುವ ಯದುವೇರ್ ಮೈಸೂರು ಅರಮನೆಯಾಗಲಿ.
ಬೆಂಗಳೂರು ಅರಮನೆಯಾಗಲಿ ಅಥವಾ ಬೇರೆ ಯಾವುದೇ ಜಾಗ ಆಗಲಿ ತಮ್ಮ ಹೆಸರಿನಲ್ಲಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ ಇದರ ಅರ್ಥ ರಾಜ ಪರಿವಾರದ ಎಲ್ಲಾ ಅಸ್ತಿಯೂ ಈಗಲೂ ಪ್ರಮೋದ ದೇವಿಯ ಹೆಸರಿನಲ್ಲಿಯೇ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.