ಸಿನಿಮಾ ಗಾಗಿ ಎಲ್ಲವನ್ನೂ ಮಾಡಿದರು ಕೊನೆಗೆ ಮನೆಯನ್ನು ಮಾರಿ ದಿವಾಳಿಯಾದರೂ… ಸಿನಿಮಾ ಕಲಾವಿದರು ಯಾವಾಗಲು ಸ್ಟಾರ್ಗಳಾಗಿರುವುದಿಲ್ಲ ಎಲ್ಲರ ಬೇಡಿಕೆಯು ಒಂದಲ್ಲ ಒಂದು ದಿನ ಕುಸಿದೆ ಕುಸಿಯುತ್ತದೆ ಕೆಲವೊಮ್ಮೆ ಅವಕಾಶಗಳ ಕೊರತೆಯು ಎದುರಾಗುತ್ತದೆ ಮತ್ತೊಮ್ಮೆ ಸಿನಿಮಾ ನಿರ್ಮಾಣದಿಂದ ಕೂಡ ಸಾಕಷ್ಟು ನಷ್ಟ ಉಂಟಾಗುತ್ತದೆ.
ಇವತ್ತು ನಾವು ಹೀಗೆ ಕಷ್ಟದಿಂದ ಹೊರಬರಲು ಮನೆ ಆಸ್ತಿ ಮಾರಿಕೊಂಡ ಕನ್ನಡದ ನಟರ ಪಟ್ಟಿಯನ್ನು ನೋಡೋಣ. ಕನ್ನಡ ಚಿತ್ರರಂಗದ ಹಿರಿಯ ನಟ ಜೆ ಕೆ ಶ್ರೀನಿವಾಸ್ ಮೂರ್ತಿ ಅವರು ಎರಡು ಜೊತೆ ಬಟ್ಟೆ ಹಾಗೂ ಒಂದು ಸೂಟ್ಕೇಸಿಡಿದು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಂದರು ಮೊದಲು ಸರ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಆನಂತರ ನಾಟಕದ ಗೀಳು ಅಂಟಿಸಿಕೊಂಡರು ಆಬಳಿಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾದ ಇವರು ನಟ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡರು.
ತಮಿಳಿನ ಕಲೆತ್ತಿನಲ್ ಎಂಬ ಚಿತ್ರದಲ್ಲಿ ನಾಯಕನಗಿಯೂ ನಟಿಸಿದ್ದರು ಸಿನಿಮಾದಿಂದ ಬಂದಂತಹ ಹಣದಲ್ಲಿ ಅವರು ಕತ್ರಿಗುಪ್ಪೆಯಲ್ಲಿ ದೊಡ್ಡ ಮನೆಯನ್ನು ಕಟ್ಟಿಸಿದರು ನಂತರ ವಿವಿಧಡೆ ಏಳು ಸೈಟ್ಗಳನ್ನು ಕೂಡ ತೆಗೆದುಕೊಂಡರು ಎಂಟು ಸಿನಿಮಾಗಳನ್ನು ನಿರ್ಮಾಣ ಮಾಡಿ ಮನೆ ಆಸ್ತಿ ಎಲ್ಲವನ್ನ ಕಳೆದುಕೊಂಡರು ಸದ್ಯ ಅವರು ಮಗ ಸೊಸೆ ಮಕ್ಕಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಇದ್ದಾರೆ.
ಆದರೆ ಇದಕ್ಕೆಲ್ಲ ಅವರಿಗೆ ಕೊಂಚವೂ ಬೇಸರವಿಲ್ಲಂತೆ ಈಗ ಅವರು ಜೀ ಕನ್ನಡದ ಸತ್ಯಧಾರವಾಹಿಯ ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಇದ್ದಾರೆ. ದ್ವಾರಕೇಶ್ ಇತ್ತೀಚಿಗೆ ನಿದ್ದಾನರಾದ ಕನ್ನಡದ ಹಿರಿಯ ನಟ ದ್ವಾರಕೇಶ್ ಅವರು ನಿರ್ಮಾಪಕರಾಗಿ ದೊಡ್ಡ ಹೆಸರನ್ನು ಗಳಿಸಿದ್ದರು 27ನೇ ವಯಸ್ಸಿನಲ್ಲಿಯೇ ನಿರ್ಮಾಪಕರಾಗಿದ್ದ ಅವರು ಎಷ್ಟು ಹಿಟ್ಟನ್ನು ಕಂಡರೂ ಅಷ್ಟೇ ಸೋಲನ್ನು ಕೂಡ ಕಂಡರು.
ಆ ಸೋಲು ದ್ವಾರಕೇಶ್ ಅವರನ್ನ ಹೇಳಲು ಬಿಡಲೇ ಇಲ್ಲ ಅದರಿಂದ ಏಳು ಬಂಗಳೆಗಳನ್ನ ಕಟ್ಟಿಸಿದ್ದ ದ್ವಾರಕೇಶ್ ಎಲ್ಲವನ್ನು ಮಾರಿಕೊಂಡರು ಸಿನಿಮಾದ ನಷ್ಟದಿಂದ ಅವರ ಬಳಿ ಇದ್ದಂತಹ ಎಲ್ಲಾ ಕಾರುಗಳು ಕೂಡ ಹೋದವು. ಚಿದಾನಂದ ನಟ ಚಿದಾನಂದ ಪಾಪ ಪಾಂಡು ಧಾರಾವಾಹಿಯ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿದವರು ಸದ್ಯ ಅವರು ಮನೆ ಮಾರಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತ ಇದ್ದಾರೆ.
ಅವಕಾಶಗಳ ಕೊರತೆಯವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತು ಹೀಗಾಗಿ ಅವರು ಸ್ವಂತ ಮನೆಯನ್ನು ಮಾರಿಕೊಂಡು ಬಾಡಿಗೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂತು ಈ ಬಗ್ಗೆ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದ್ದರು. ರವಿಚಂದ್ರನ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಕ್ರೇಜ್ ಹುಟ್ಟು ಹಾಕಿದವರು ಸಿನಿಮಾನೇ ಉಸಿರು ಎಂದು ನಂಬಿರುವವರು ಕ್ರೇಜಿಸ್ಟಾರ್ ರವಿಚಂದ್ರನ್.
ಇವರು ನಟನಾಗಿ ಮಾತ್ರವಲ್ಲದೆ ನಿರ್ಮಾಪಕ ನಿರ್ದೇಶಕ ಸಂಗೀತಗಾರರಾಗಿ ಇದ್ದಾರೆ ಇವರ ತಂದೆ ವೀರಸ್ವಾಮಿ ಖ್ಯಾತ ನಿರ್ಮಾಪಕ ಹಾಗೂ ಫೈನಾನ್ಸ್ ಮಾಡುತ್ತಾ ಇದ್ದರು ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ರವಿಚಂದ್ರನ್ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ ಜೊತೆಗೆ ಸಿನಿಮಾ ನಿರ್ಮಾಣದಿಂದ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ ಈ ಹಿಂದೆ ರವಿಚಂದ್ರನ್ ಅವರು ಬೆಂಗಳೂರಿನ ರಾಜಾಜಿನಗರ ದಲ್ಲಿರುವ ಮನೆಮಾರಿ ಹೊಸಕೆರೆ ಹಳ್ಳಿಯಲ್ಲಿ ಇರುವ ಮನೆಗೆ ಶಿಫ್ಟ್ ಆಗಿದ್ದಾರೆ ನಿಮ್ಮ ಮಾತು ಕೇಳಿ ಬಂದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕ್ರೇಜಿ ಸ್ಟಾರ್ ನಾನು ಸಾಲ ಮಾಡಿದೆ ದುಡ್ಡು ಕಳೆದುಕೊಂಡೆ ಎಂದು ಹೇಳುತ್ತಾರೆ ನಾನು ಹಣ ಕಳೆದುಕೊಂಡಿದ್ದು ನನ್ನನ್ನು ಪ್ರೀತಿಸುವ ಜನರಿಗಾಗಿ ಮತ್ತೆ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದರು ಮಗಳ ಮದುವೆಗೂ ರವಿಚಂದ್ರನ್ ಸಾಲ ಮಾಡಿದ್ದರು ಇದನ್ನು ಅವರೇ ಹೇಳಿಕೊಂಡಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.